ತೊಕ್ಕೊಟ್ಟು: ಇಲ್ಲಿನ ಸನ್ ಸಿಟಿ ಬಿಲ್ಡಿಂಗ್‌ನಲ್ಲಿ ಹೊಸತಾಗಿ ಅಲೂಫ್ ಫ್ಯಾನ್ಸಿ ಶೋರೂಂ ಪ್ರಾರಂಭಗೊಂಡಿದ್ದು, ವಿವಿಧ ಶ್ರೇಣಿಯ ರೆಂಟಲ್ ಜ್ಯುವೆಲ್ಲರಿ (ಬಾಡಿಗೆ ಆಭರಣ) ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ವಿಶೇಷವಾಗಿ, ಒನ್ ಗ್ರಾಂ ಮತ್ತು ಆಂಟಿಕ್ ಜ್ಯುವೆಲ್ಲರಿಗಳ ಜೊತೆಗೆ ಕಾಸ್ಮೆಟಿಕ್ಸ್, ಗಿಫ್ಟ್ ಐಟಂಗಳು, ಹ್ಯಾಂಡ್ ಬ್ಯಾಗ್‌ಗಳು ಇತ್ಯಾದಿ ವಸ್ತುಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡುತ್ತಿದೆ. ಶೋರೂಮ್‌ನ ವೈಶಿಷ್ಟ್ಯಗಳು:✔ ರೆಂಟಲ್ ಜ್ಯುವೆಲ್ಲರಿ – ವೈವಿಧ್ಯಮಯ ಸಂಗ್ರಹ, ಸಮಾರಂಭಗಳಿಗಾಗಿ ಆಭರಣ ಬಾಡಿಗೆ.✔ ಒನ್ ಗ್ರಾಂ & ಆಂಟಿಕ್ ಜ್ಯುವೆಲ್ಲರಿ – ನೂತನ ವಿನ್ಯಾಸಗಳೊಂದಿಗೆ ಶ್ರೇಷ್ಟ ಗುಣಮಟ್ಟ.✔ ಕಾಸ್ಮೆಟಿಕ್ಸ್ & ಗಿಫ್ಟ್ ಐಟಂಗಳು – ಪ್ರಸಾದ್ ಕೊಡುಗೆಗಳಿಗೆ ಮತ್ತು ವೈಯಕ್ತಿಕ ಬಳಕೆಗಾಗಿ.✔ ಹ್ಯಾಂಡ್ ಬ್ಯಾಗ್‌ಗಳು – ಸ್ಟೈಲಿಷ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯ. ಅಲೂಫ್ ಫ್ಯಾನ್ಸಿ ಈಗಾಗಲೇ ಮಂಜೇಶ್ವರ ಉದ್ಯಾವರದ ಡಿವೈನ್ ಪ್ಲಾಝಾ ಕಟ್ಟಡದಲ್ಲಿ ಮೊದಲ ಶಾಖೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಇದೀಗ ತೊಕ್ಕೊಟ್ಟುವಿನ ಗ್ರಾಹಕರಿಗೂ ತನ್ನ ಸೇವೆಗಳನ್ನು ವಿಸ್ತರಿಸಿದೆ. ಷೋರೂಮ್‌ಗೆ ಭೇಟಿ ನೀಡಿ ಹೊಸ ಸಂಗ್ರಹಗಳನ್ನು ವೀಕ್ಷಿಸಿ ಹಾಗೂ…
Author: UllalaVani
ತೊಕ್ಕೊಟ್ಟು: ಜಂಕ್ಷನ್ ಸಮೀಪದ ಗ್ರಾಂಡ್ ಸಿಟಿ ಕಟ್ಟಡದ ನೆಲಮಹಡಿಯಲ್ಲಿ, ಲಿಕ್ವಿಡ್ ಲಷ್ ಜ್ಯೂಸ್ ಶಾಪ್ ಹಿಂಭಾಗದಲ್ಲಿ ಸ್ವಾಟ್ಚ್ ಕಲೆಕ್ಷನ್ ಎಂಬ ಹೊಸ ಮಳಿಗೆ ತೆರೆದುಕೊಂಡಿದ್ದು, ಗ್ರಾಹಕರಿಗೆ ಆಕರ್ಷಕ ಮತ್ತು ಶ್ರೇಷ್ಟ ಗುಣಮಟ್ಟದ ವಾಚ್, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಸ್ಕೂಲ್ ಬ್ಯಾಗ್ ಹಾಗೂ ಇನ್ನಷ್ಟು ವಸ್ತುಗಳ ಮಾರಾಟವನ್ನು ವಿಶೇಷ ದರದಲ್ಲಿ ನೀಡುತ್ತಿದೆ. ಮಳಿಗೆಯ ವಿಶೇಷತೆಗಳು:✔ ಸ್ಮಾರ್ಟ್ ವಾಚ್ & ಕ್ವಾರ್ಟ್ಸ್ ವಾಚ್ – ಆಧುನಿಕ ತಂತ್ರಜ್ಞಾನ ಮತ್ತು ಕ್ಲಾಸಿಕ್ ವಿನ್ಯಾಸದಲ್ಲಿ ಲಭ್ಯ.✔ ಎಲೆಕ್ಟ್ರಾನಿಕ್ಸ್ ಉಪಕರಣಗಳು – ದಿನನಿತ್ಯದ ಬಳಕೆಗೆ ಅಗ್ಗದ ಮತ್ತು ಮೌಲ್ಯಯುತ ಗ್ಯಾಜೆಟ್‌ಗಳು.✔ ಸನ್ ಗ್ಲಾಸ್ & ಪರ್ಫ್ಯೂಮ್‌ಗಳು – ಸ್ಟೈಲಿಷ್ ವಿನ್ಯಾಸ ಮತ್ತು ಉತ್ತಮ ಗುಣಮಟ್ಟ.✔ ಸ್ಕೂಲ್ ಬ್ಯಾಗ್ & ವಾಲ್ ಕ್ಲಾಕ್‌ಗಳು – ವಿದ್ಯಾರ್ಥಿಗಳಿಗೆ ಮತ್ತು ಮನೆಗೆ ಉಪಯುಕ್ತ ವಸ್ತುಗಳು.✔ ಲೋಷನ್ & ಇನ್ನಷ್ಟು – ವೈವಿಧ್ಯಮಯ ಆಯ್ಕೆಗಳು. ಗ್ರಾಹಕರ ಅವಶ್ಯಕತೆ ಮತ್ತು ಟ್ರೆಂಡ್ಸ್‌ಗಳನ್ನು ಗಮನದಲ್ಲಿಟ್ಟು ಉತ್ತಮ ದರದಲ್ಲಿ ವಸ್ತುಗಳನ್ನು ಒದಗಿಸುವ ಸ್ವಾಟ್ಚ್ ಕಲೆಕ್ಷನ್, ತೊಕ್ಕೊಟ್ಟು ಮತ್ತು ಸುತ್ತಮುತ್ತಲಿನ ಜನತೆಗೆ…
ತೊಕ್ಕೊಟ್ಟು: ಪ್ರಿಂಟಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿರುವ ಲಿಟ್ಲ್ ಬರ್ಡ್ ಗ್ರಾಫಿಕ್ಸ್, ತೊಕ್ಕೊಟ್ಟುವಿನ ಟಿವಿಎಸ್ ಶೋರೂಮ್ ಕಟ್ಟಡದ ಮೊದಲ ಮಹಡಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ವಿವಿಧ ಉದ್ಯಮಗಳು, ಅಂಗಡಿಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗಾಗಿ ಆಕರ್ಷಕ ಹಾಗೂ ಮನ ಸೆಳೆಯುವ ವಿನ್ಯಾಸ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತಿದೆ. ಸೇವೆಗಳ ವ್ಯಾಪ್ತಿ: ಉನ್ನತ ಗುಣಮಟ್ಟದ ಮುದ್ರಣ, ಕಸ್ಟಮೈಸ್‌ಡ್ ವಿನ್ಯಾಸ, ತಕ್ಷಣದ ಸೇವೆ ಮತ್ತು ಗ್ರಾಹಕ ಸ್ನೇಹಿ ಬೆಲೆಗಳೊಂದಿಗೆ ಲಿಟ್ಲ್ ಬರ್ಡ್ ಗ್ರಾಫಿಕ್ಸ್ ತೊಕ್ಕೊಟ್ಟಿನಲ್ಲಿ ತನ್ನದೇ ಆದ ಪ್ರಭಾವ ಬೀರುತ್ತಿದೆ. ತೊಕ್ಕೊಟ್ಟು ಹಾಗೂ ಸುತ್ತಮುತ್ತಲಿನ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ಪ್ರಿಂಟಿಂಗ್ ಮತ್ತು ಡಿಸೈನಿಂಗ್ ಅಗತ್ಯಗಳಿಗಾಗಿ ಈ ಸಂಸ್ಥೆಯನ್ನು ಸಂಪರ್ಕಿಸಬಹುದು.
ತೊಕ್ಕೊಟ್ಟು: ಮಕ್ಕಳಿಗಾಗಿ ಉನ್ನತ ಮಟ್ಟದ ಶಿಕ್ಷಣ ನೀಡಲು ಯೋಜಿಸಿರುವ ಲಿಟ್ಲ್ ಬನ್ನೀಸ್ ಪ್ರೀ ಪ್ರೈಮರಿ ಸ್ಕೂಲ್ ತೊಕ್ಕೊಟ್ಟು ಕಾಪಿಕಾಡುವಿನಲ್ಲಿ ಶೀಘ್ರವೇ ಶುಭಾರಂಭಗೊಳ್ಳಲಿದೆ. ಈ ಸಂಸ್ಥೆ ಡೆ ಕೇರ್, ನರ್ಸರಿ, ಎಲ್ ಕೆಜಿ ಮತ್ತು ಯು ಕೆಜಿ ತರಗತಿಗಳನ್ನು ಒಳಗೊಂಡಿದ್ದು, ಮಕ್ಕಳ ಸಂಪೂರ್ಣ ಬೌದ್ಧಿಕ ಹಾಗೂ ಸೃಜನಾತ್ಮಕ ಬೆಳವಣಿಗೆಗೆ ಸೂಕ್ತ ವಾತಾವರಣ ಒದಗಿಸಲಿದೆ. ಮಾತೃಭಾಷೆ ಹಾಗೂ ಇಂಗ್ಲೀಷ್ ಪ್ರಾಧಾನ್ಯತೆ, ಆಟ-ಪಾಠದ ಸಮನ್ವಯ, ನವೀನ ಶೈಕ್ಷಣಿಕ ವಿಧಾನಗಳು, ಅನುಭವೀ ಶಿಕ್ಷಕ ವೃಂದ ಮತ್ತು ಮಕ್ಕಳ ಮನೋವಿಜ್ಞಾನಕ್ಕೆ ತಕ್ಕ ಶೈಕ್ಷಣಿಕ ಮಾದರಿಗಳನ್ನು ಈ ಸಂಸ್ಥೆ ಅನುಸರಿಸಲಿದೆ. ವಿಶೇಷವಾಗಿ, ಮೊಂಟೆಸ್ಸರಿ ಟೀಚರ್ ಟ್ರೈನಿಂಗ್ ನೀಡುವ ವ್ಯವಸ್ಥೆಯೂ ಇಲ್ಲಿ ದೊರೆಯಲಿದೆ, ಇದು ಶಿಕ್ಷಕತ್ವದಲ್ಲಿ ಆಸಕ್ತಿ ಹೊಂದಿರುವವರಿಗೆ ಅವಕಾಶ ಒದಗಿಸುವ ನವೀನ ಪ್ರಯತ್ನವಾಗಿದೆ. ಮಕ್ಕಳ ಒಟ್ಟಾರೆ ಬೆಳವಣಿಗೆಯತ್ತ ಗಮನ ಹರಿಸುವ ಉದ್ದೇಶದೊಂದಿಗೆ ಪ್ರಾರಂಭವಾಗುತ್ತಿರುವ ಈ ಶಾಲೆ, ಪೋಷಕರೂ ಹಾಗೂ ಮಕ್ಕಳೂ ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆಯನ್ನು ಅನುಭವಿಸಬಹುದಾದ ಪ್ಲಾಟ್‌ಫಾರ್ಮ್ ಆಗಿ ರೂಪುಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ಶಾಲಾ ನಿರ್ವಾಹಕರನ್ನು ಸಂಪರ್ಕಿಸಬಹುದು.
ಕೊಣಾಜೆ: ಪಿ.ಎ ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಒಡಂಬಡಿಕೆಯ ಅನ್ವಯ ಮಾರ್ಚ್ 15 ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಬ್ದುಲ್ಲಾ ಇಬ್ರಾಹಿಂ ,ಮ್ಯಾನೇಜಿಂಗ್ ಟ್ರಸ್ಟೀ (ಪಿ.ಎ.ಇ.ಟಿ) ಇವರ ಶುಭಹಾರೈಕೆಯೊಂದಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ,ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿ ,ದಕ್ಷಿಣ ಕನ್ನಡ ಡಾ.ಜಿ.ಸಂತೋಷ್ ಕುಮಾರ್ ಭಾಗವಹಿಸಲಿದ್ದು ,ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ, ಡಾ.ಸರ್ಫ್ರಾಜ್ ಜೆ.ಹಾಶಿಂ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ,ಅಡ್ವಕೇಟ್ ಕೆ .ಪೃಥ್ವಿರಾಜ್ ರೈ ,ಮಾಜಿ ಅಧ್ಯಕ್ಷರು ,ವಕೀಲರ ಸಂಘ ಮಂಗಳೂರು , .ಕಾರ್ಯಕ್ರಮದ ಅತಿಥಿಗಳಾಗಿ ಪ್ರೊಫೆಸರ್ ಗಣಪತಿ ಗೌಡ .ಎಸ್ ಪ್ರಾಂಶುಪಾಲರು ,ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಡಾ.ಜಯವಂತ ನಾಯಕ್ ಪ್ರಾಧ್ಯಾಪಕರು ಅರ್ಥಶಾಸ್ತ್ರವಿಭಾಗ , ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು,ಡಾ.ಅಬೂಬಕ್ಕರ್ ಸಿದ್ಧಿಕ್ ,ಒಡಂಬಡಿಕೆಯ ಸಂಚಾಲಕರು ,ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು,ಶ್ರೀ ಶರಫುದ್ದೀನ್ ಪಿ.ಕೆ (ಎ .ಜಿ .ಎಮ್ ಕ್ಯಾಂಪಸ್ ಪಿ.ಎ.ಇ.ಟಿ ), ಪಿ.ಎ…
ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ಇಫ್ತಿಕಾರ್ ಉಳ್ಳಾಲ್ ಅವರು ಆಯ್ಕೆಯಾಗಿದ್ದಾರೆ.ಅವರು ಕಳೆದ ಏಳು ವರ್ಷಗಳ ಕಾಲ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ತಮ್ಮ ಶ್ರದ್ದಾ ಮತ್ತು ಪರಿಶ್ರಮದಿಂದ ಸಂಘಟನೆಯನ್ನು ಬಲಪಡಿಸಿದ್ದಾರೆ. ಈಗ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ನಿರಂತರ ಪರಿಶ್ರಮ ಮತ್ತು ಸಂಘಟನಾ ನಿಷ್ಠೆಗೆ ಪ್ರತಿಫಲವಾಗಿದೆ. ಈ ಮಹತ್ವದ ಘಟ್ಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ತಾಲೂಕು ಘಟಕದಿಂದ ಅವರಿಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದೆ.
ಉಳ್ಳಾಲ: ಭವಿಷ್ಯದ ಬೆಳಕು ತಿಳಿದುಕೊಳ್ಳಲು ಮತ್ತು ಜೀವನದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ತೊಕ್ಕೊಟ್ಟು ಒಳಪೇಟೆಯಲ್ಲಿ ಕೇರಳ ಶ್ರೀ ಕುಟ್ಟಿಚಾತ್ತನ್ ಜ್ಯೋತಿಷ್ಯರು ಸೇವೆಗೆ ಲಭ್ಯರಿದ್ದಾರೆ.ಪಂ| ಯೆಸ್. ಗುರುನಂದನ್ (ತಂತ್ರಿ) ವಿಶಿಷ್ಟ ಜ್ಯೋತಿಷ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಹಿರಿಯರಾಗಿರುವ ಅವರು ಹಲವು ವರ್ಷಗಳ ಅನುಭವದೊಂದಿಗೆ, ಕುಂಡಲಿ ವಿಶ್ಲೇಷಣೆ, ವಿವಾಹ ಜೋಡಣೆ, ದೋಷ ಪರಿಹಾರ, ಮತ್ತು ವಾಸ್ತು ಸಲಹೆ ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತಿದ್ದಾರೆ.ಈ ಕೇಂದ್ರವು ಪ್ರಾಮಾಣಿಕ ಭವಿಷ್ಯವಾಣಿ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಶೀಘ್ರ ಫಲಿತಾಂಶಗಳನ್ನು ನೀಡುವುದರಲ್ಲಿ ಪ್ರಸಿದ್ಧವಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಸೇವೆಗಳಿಗಾಗಿ 8277160404 ಸಂಪರ್ಕಿಸಬಹುದಾಗಿದೆ.
ಕೊಲ್ಯ : 2024 -25 ನೇ ಸಾಲಿನ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟ ಮತ್ತು ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿಗಳನ್ನು ಪಡೆದ ಕೊಲ್ಯ – ಸೋಮೇಶ್ವರದ ಸೈಂಟ್ ಜೋಸೆಫ್ಸ್ ಜೋಯ್ ಲ್ಯಾಂಡ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳನ್ನು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಧಾನ್ವಿ ಯು. ಸುವರ್ಣ, ಕೀರ್ತನಾ, ಮಿಥಾಲಿ ಯು., ಫಾತಿಮ ಅಮೀರಾ, , ಫಾತಿಮಾ ಅಫ್ರಾ, ಖುಷಿ, ಭೂಮಿಕಾ ಯೆಸ್, ಸಮೀಕ್ಷಾ ಎಂ.ಕೆ, ಫಾತಿಮಾ ರಿಧಾ, ಮೇಘನಾ, ಹಲೀಮತ್ ಅಫ್ನಾ ಇವರುಗಳನ್ನು ಸನ್ಮಾನಿಸಲಾಯಿತು. ಇವರಲ್ಲಿ 6 ಮಂದಿ ರಾಷ್ಟ್ರಮಟ್ಟದಲ್ಲಿ ಹಾಗೂ 5 ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷೆ ಲಿಲ್ಲಿ ಪಾಯ್ಸ್, ಪದಾಧಿಕಾರಿಗಳಾದ ಶೇಖರ ಕಡ್ತಾಲ, ಮೋಹನ್ ಶಿರ್ಲಾಲ್, ತಂಡದ ತರಬೇತುದಾರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು…
ಉಳ್ಳಾಲ: ದಿಗಂತ್ ನಾಪತ್ತೆ ಪ್ರಕರಣದಲ್ಲಿ ಜಿಲ್ಲೆಯ ವಾತಾವರಣವನ್ನು ಕೆಡಿಸಲು ಯತ್ನಿಸಿದ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಂಟ್ವಾಳ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದೂರು ದಾಖಲಿಸುತ್ತಿದ್ದು, ರಾಜ್ಯ ಸರಕಾರವೂ ಕಠಿಣ ಕಾಯಿದೆಗಳಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಎಸ್ ಡಿಪಿಐ ಫರಂಗಿಪೇಟೆ ಬ್ಲಾಕ್ ಕಾರ್ಯದರ್ಶಿ, ಪುದು ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಶಾಫಿ ಹೇಳಿದರು. ಅಮ್ಮೆಮ್ಮಾರ್ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು , ಶಾಸಕರ ವಿರುದ್ಧ ರಾಜ್ಯ ಸರಕಾರ ಹಾಗೂ ಕೊರಗಜ್ಜನ ಕಡೆ ನಮ್ಮ ನಡೆ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿರುವ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನಡೆಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪುದು ಗ್ರಾಮ ವ್ಯಾಪ್ತಿಯ ಅಮ್ಮೆಮ್ಮಾರ್ ಎಂಬಲ್ಲಿ ಬಾಲಕ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಸಂಘಪರಿವಾರ ಪ್ರೇರಿತ ಮುಸ್ಲಿಂ ವರ್ಗದ ಮೇಲೆ ಪ್ರಚೋದನಾಕಾರಿ…
ಉಳ್ಳಾಲ: ಕೆ.ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಕಾಲೇಜು ಉಳ್ಳಾಲ ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮವು ಮಂಗಳವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ಬೊಳಿಯಾರ್ ನ ವೈದ್ಯಾಧಿಕಾರಿ ಡಾ. ಸುನೀತಾ ಮಾತನಾಡಿ, ಮಹಿಳೆಯರು ಶಕ್ತಿಶಾಲಿಗಳಾಗಬೇಕು. ಈ ಮೂಲಕ ಎಲ್ಲವನ್ನು ಮೆಟ್ಟಿ ನಿಂತು ಸ್ವತಂತ್ರರಾಗಿ ಬದುಕಬೇಕು. ಪ್ರತಿಯೊಂದು ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜದ ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ವಿದ್ಯೆಯ ಮಹತ್ವವನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಬೇಕು ಈ ಮೂಲಕ ಮುಂದಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು ಎಂದರು.ಕಾರ್ಯಕ್ರಮ ಪ್ರಯುಕ್ತ ಸಮಾಜಸೇವಕಿ ಸುವಾಸಿನಿ ದಾಮೋದರ್ ಬಬ್ಬುಕಟ್ಟೆ , ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಧನ್ಯಶ್ರೀ , ಕೃಷಿ ಮತ್ತು ಹೈನುಗಾರಿಕೆ ಯ ರೇವತಿ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರು ಇದರ ವೈದ್ಯಾಧಿಕಾರಿ ಡಾ. ಮದನ್ ಕುಮಾರ್ ಜಿ, ಕೆ.ಪಿ.ಬಿ.ಎನ್.ಐ ನರ್ಸಿಂಗ್…

