Author: UllalaVani

Kannada News From Coastal Karnataka

ಕೊಣಾಜೆ ಜಂಕ್ಷನ್‌ನಲ್ಲಿರುವ ಮನಸ್ವೀ ಬ್ಯೂಟಿ ಪಾರ್ಲರ್ ಮಹಿಳೆಯರಿಗಾಗಿ ಆಕರ್ಷಕ ಪ್ಯಾಕೇಜ್ ಮತ್ತು ಆಫರ್‌ಗಳನ್ನು ಪ್ರಕಟಿಸಿದೆ. ಸುಂದರ ಮತ್ತು ಆರೋಗ್ಯಕರ ಚರ್ಮಕ್ಕಾಗಿ ಇಲ್ಲಿ ವೃತ್ತಿಪರ ಸೇವೆಗಳನ್ನು ಲಭ್ಯವಾಗಿಸಬಹುದು. ಆಕರ್ಷಕ ಪ್ಯಾಕೇಜ್‌ಗಳು: ವಿಶೇಷ ಆಫರ್‌ಗಳು: ನಿಯಮಿತ ಆಫರ್‌ಗಳ ಸೌಲಭ್ಯ ಲಭ್ಯವಿದೆ. ಸಂಪರ್ಕಿಸಲು: 7022949247 ಸುಂದರತೆಗಾಗಿ ಮನಸ್ವೀ ಬ್ಯೂಟಿ ಪಾರ್ಲರ್‌ ನಿಮ್ಮ ಅಪೇಕ್ಷಿತ ತಾಣವಾಗಿದೆ. ಪ್ರಯೋಜನ ಪಡೆಯಿರಿ!

Read More

ಸೋಮೇಶ್ವರ: ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಯಿಂದಾಗಿ ರಸ್ತೆಯಿಡೀ ಅವ್ಯವಸ್ಥೆಯಿಂದ ಕೂಡಿದೆ. ಪುರಸಭೆಯ ವ್ಯಾಪ್ತಿಯುದ್ದಕ್ಕೂ ಜನಸಾಮಾನ್ಯರು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ದುರಸ್ತಿ ನಡೆಸಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ತಿಳಿಸಿದ್ದಾರೆ.ಸೋಮೇಶ್ವರ ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ್ 2.0 ಪೈಪ್ ಲೈನ್ ಕಾಮಗಾರಿಯು ಸಮರ್ಪಕ ನಿರ್ವಹಣೆಯಿಲ್ಲದೆ ಅವ್ಯವಸ್ಥೆಗಳಿಂದ ಕೂಡಿದ್ದು,ಕಾಮಗಾರಿಯಿಂದ ಈಗಾಗಲೇ ರಸ್ತೆ ,ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿ,ದಿನ ನಿತ್ಯಲೂ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದ್ದು ಮಳೆಗಾಲ ಆರಂಭದ ಮೊದಲು ಅವ್ಯವಸ್ಥೆಗಳನ್ನ ಸರಿಪಡಿಸಿ,ಕಾಮಗಾರಿಯನ್ನ ಸಮರ್ಪಕವಾಗಿ ನಿರ್ವಹಣೆ ನಡೆಸುವಂತೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು ಕಾಮಗಾರಿ ಮೇಲ್ವಿಚಾರಕರಿಗೆ ತಾಕೀತು ಮಾಡಿದ್ದಾರೆ.ಪುರಸಭಾ ವ್ಯಾಪ್ತಿಯ ಕುಂಪಲ ಸೇರಿದಂತೆ ಹಲವೆಡೆ ಅಮೃತ್ 2.0 ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಾ ಕಡೆಯಲ್ಲೂ ಅರೆಬರೆ ,ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ಕೆಲಸ…

Read More

ಉಳ್ಳಾಲ: ಶ್ರೀ ಮಲರಾಯ ದೈವಸ್ಥಾನ ಉಳ್ಳಾಲ ಬಂಡಿಕೊಟ್ಯ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಉಳ್ಳಾಲ್ ಸುಂದರ್ ಆಯ್ಕೆಯಾಗಿದ್ದಾರೆ,ಸಮಿತಿ ಸದಸ್ಯರಾಗಿ ಲತೀಶ್ ಯಾನೆ ಮುಂಡ ಪೂಜಾರಿ, ಯು.ಕೆ.ಗೋಪಾಲ, ಹರ್ಷವರ್ಧನ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು, ನಿತಿನ್ ರಾಜ್ ಬಂಡಿಕೊಟ್ಯ, ಮಾದಪ್ಪ ಮಾಸ್ಟರ್ ಬಂಡಿಕೊಟ್ಯ, ದೇವಕಿ ರಾಘವ ಉಳ್ಳಾಲ, ಹರಿಣಾಕ್ಷಿ ಬಂಡಿಕೊಟ್ಯ ಆಯ್ಕೆಯಾಗಿದ್ದಾರೆ.

Read More

ಉಳ್ಳಾಲ : ಪ್ರಸ್ತುತ ದಿನಗಳಲ್ಲಿ ಬೆಳ್ಳಿಯ ಅಣಿ, ಚಿನ್ನದ ಮೊಗದ ಮೂಲಕ ದೈವದ ಚೆಂದ ನೋಡುವ ಅಭಿಲಾಷೆ ಎಲ್ಲರದ್ದಾಗಿದೆ. ಆದರೆ ಅಂದು ಗುಡ್ಡೆಯ ಹೂ, ತೋಟದ ಗಿಡಗಳಿಂದ ಸಿರಿಸಿಂಗಾರವಾಗುತ್ತಿದ್ದ ಕಾಲವಿತ್ತು, ಅಂದು ಆರಾಧಿಸುವವರ ಮನಸ್ಸು ಚಿನ್ನದಂತಿತ್ತು. ಕ್ಷಣಮಾತ್ರದಲ್ಲಿ ಪ್ರಾರ್ಥಿಸಿದಾಗಲೇ ಫಲಗಳು ದೊರೆಯುತಿತ್ತು ಎಂದು ಧರ್ಮದರ್ಶಿ ಶ್ರೀ ಉಳ್ಳಾಲ್ತಿ ಧರ್ಮರಸು ಕ್ಷೇತ್ರ ಉಳಿಯದ ದೇವು ಮೂಲ್ಯಣ್ಣ ಹೇಳಿದರು. ಅವರು ಚೆಂಬುಗುಡ್ಡೆಯ ಶ್ರೀ ಕೊರಗ ತನಿಯ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 48ನೇ ವಾರ್ಷಿಕ ಕೋಲ ಹಾಗೂ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಖಂಡಭಾರತವಾಗಿ ಮೆರೆಯಲು ಯುವಜನರಿಂದ ಸಾಧ್ಯ. ಜಿಲ್ಲೆ ಪವಿತ್ರವಾದ ಕ್ಷೇತ್ರ. ದೈವ-ದೇವರುಗಳ ತವರೂರು, ತುಳುನಾಡಿನಲ್ಲಿ ಹೆಚ್ಚಾಗಿ ದೈವ ಕಾರಣಿಕ ತೋರಿಸಿದೆ. ಕೊರಗ ತನಿಯನೂ ಹಾಗೆ. ನಾಲ್ಕು ದಿಕ್ಕಿನಲ್ಲಿ ದೈವ ದೇವರುಗಳು ಕಾಪಾಡುತ್ತಿದ್ದಾರೆ ಪ್ರಕೃತಿ ವಿಕೋಪಗಳು ಖಂಡಿತವಾಗಿಯೂ ಬಂದಿಲ್ಲ. ಮಳೆ, ಕೃಷಿ ಸರಿಯಾದ ಸಮಯದಲ್ಲಿ ಆಗಲು ದೈವ ದೇವರುಗಳೇ…

Read More

ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ pierre fauchard academy ನೀಡಲ್ಪಡುವ ಪ್ರತಿಷ್ಠಿತ ಪ್ರಶಸ್ತಿ “ಅಂತರಾಷ್ಟ್ರೀಯ ಉತ್ತಮ ದಂತ ಕಾಲೇಜು ಸಂಸ್ಥೆ ” ಯನ್ನು ಏಷ್ಯಾ ವಿಭಾಗದಿಂದ ಪಡೆದುಕೊಂಡಿದೆ.ದಂತ ವೈದ್ಯಕೀಯ ಕ್ಷೇತ್ರದಲ್ಲಿ ಯೆನೆಪೋಯ ದಂತ ಕಾಲೇಜು ನಡೆಸಿರುವ ದಂತ ವೈದ್ಯಕೀಯ ಶಿಕ್ಷಣ, ಸಂಶೋಧನೆ, ಸಮುದಾಯ ದಂತ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ನೀಡಲಾಗಿದೆ.ಇದೆ ಸಂದರ್ಭದಲ್ಲಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಯೆನೆಪೋಯ ದಂತ ಕಾಲೇಜು ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ್ ಛಾತ್ರ ಹಾಗೂ ಅತ್ಯುನ್ನತ ದಂತ ಶಿಕ್ಷಕ ಪ್ರಶಸ್ತಿಯನ್ನು ಫ್ಯಾಕಲ್ಟಿ ಆಫ್ ಡೆಂಟಿಸ್ಟ್ರೀ ಇಲ್ಲಿನ ಡೀನ್ ಡಾ. ಶಾಮ್ ಎಸ್ ಭಟ್ ಪಡೆದುಕೊಂಡಿರುತ್ತಾರೆ. ಈ ಅತ್ಯುನ್ನತ ಪ್ರಶಸ್ತಿಯನ್ನು ಏ. 6 ರಂದು ರಾಡಿಸನ್ ಹೋಟೆಲ್, ಕೊಲಂಬೊ, ಶ್ರೀಲಂಕಾ ದಲ್ಲಿ ನಡೆಯುವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಪುರಸ್ಕೃತ ಸಂಸ್ಥೆ ಹಾಗೂ ವೈದ್ಯರನ್ನು ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಅಭಿನಂದಿಸಿದ್ದಾರೆ.

Read More

ಉಳ್ಳಾಲ: ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ಆರೋಗ್ಯಕರ ಅಡುಗೆ ಸ್ಪರ್ಧೆ, ಹಾಸ್ಯ ಕಾರ್ಯಕ್ರಮ, ಪ್ರೇರಣಾದಾಯಕ ಭಾಷಣಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.ಮಹಿಳಾ ಸಿಬ್ಬಂದಿಯ ಆರೋಗ್ಯಕರ ಅಡುಗೆ ಸಾಮರ್ಥ್ಯವನ್ನು ಉತ್ತೇಜಿಸುವ “ಸ್ವಸ್ಥ ಆಹಾರ” ಸ್ಪರ್ಧೆಯಲ್ಲಿ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು. ವಿಜೇತರನ್ನು ಪ್ರಮಾಣಪತ್ರ ಮತ್ತು ನಗದು ಬಹುಮಾನಗಳೊಂದಿಗೆ ಗೌರವಿಸಲಾಯಿತು.ನಿಟ್ಟೆ ಸಂವಹನ ಸಂಸ್ಥೆಯ ಉಪನ್ಯಾಸಕ, ಹಾಸ್ಯಪ್ರದರ್ಶಕ ಅರ್ಪಿತ್ ಇಂದ್ರವರ್ಧನ್ ಅವರು “ಕ್ಷೇಮ ಹಾಸ್ಯಂ” ಎಂಬ ಹಾಸ್ಯಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ನಗೆಭರಿತ ಕ್ಷಣಗಳನ್ನು ಒದಗಿಸಿದರು.ಕಾರ್ಯಕ್ರಮದ ವಿಶೇಷ ಆಕರ್ಷಣೆ “ಗ್ಲೋಬ್ ಆಫ್ ವುಮನ್‌ಹುಡ್” ದೀಪಾರಾಧನೆಯ ಮೂಲಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಸೀಮಾ ಪಾವ್ಮನ್ ಅವರು ಮಹಿಳಾ ಸಬಲೀಕರಣದ ಮಹತ್ವದ ಬಗ್ಗೆ ಪ್ರೇರಣಾದಾಯಕ ಭಾಷಣ ನೀಡಿದರು.ಡಾ. ನವ್ಯ ಡಿ ಹರಿಕಾಂತ್ ಪ್ರಾರ್ಥಿಸಿದರು. ಮಾನಸಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.…

Read More

ಉಳ್ಳಾಲ: ನಿಟ್ಟೆ ಅಲೈಡ್ ಹೆಲ್ತ್ ಸೈನ್ಸಸ್ ಇನ್‌ಸ್ಟಿಟ್ಯೂಟ್‌ನ ಸಾರ್ವಜನಿಕ ಆರೋಗ್ಯ ವಿಭಾಗದ ನಾಲ್ಕು ವಿದ್ಯಾರ್ಥಿಗಳು ಸ್ವೀಡನ್‌ನ ಗೋತೆನ್‌ಬರ್ಗ್ ವಿಶ್ವವಿದ್ಯಾಲಯದ ಸಾಹ್ಲ್‌ ಗ್ರೆನ್ಸ್ಕಾ ಅಕಾಡೆಮಿಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.ಶೈಕ್ಷಣಿಕ ಸಾಧನೆ, ಪಾಠ್ಯೇತರ ಚಟುವಟಿಕೆಗಳು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ತೋರಿದ ಆಸಕ್ತಿಯನ್ನು ಪರಿಗಣಿಸಿ ಈ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭಿಸಿದೆ.ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಡಾ. ಮಾಲ್ವಿಕಾ ನಾಯಕ್ ಮತ್ತು ಡಾ. ಅನುಲೇಕ ಎನ್. ಅವರು ಆರೋಗ್ಯ ಅರ್ಥಶಾಸ್ತ್ರ (Health Economics) ಅಧ್ಯಯನ ಮಾಡಲಿದ್ದಾರೆ. ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಡಾ. ನಿಕಿತಾ ನಿಕೋಬಾ ಮತ್ತು ಮಿಸ್ ಬಿಫಿನಾ ಎಸ್ತರ್ ವಿಲ್ಸನ್ ಅವರು ಸಾಮಾಜಿಕ ಮಹಾಮಾರಿ ವಿಜ್ಞಾನ (Social Epidemiology) ಕ್ಷೇತ್ರದಲ್ಲಿ ಅಧ್ಯಯನ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಮಾರ್ಚ್ 20, 2025 ರಂದು ಸ್ವೀಡನ್‌ಗೆ ಪ್ರಯಾಣಿಸುತ್ತಿದ್ದು, ಮಾರ್ಚ್ 25 ರಿಂದ ಜೂನ್ 12, 2025ವರೆಗೆ ಕೋರ್ಸ್ ಅನ್ನು ಅನುಸರಿಸಲಿದ್ದಾರೆ.ವಿದ್ಯಾರ್ಥಿಗಳ ಸಂಪೂರ್ಣ ಖರ್ಚು ಇರಾಸ್ಮಸ್+ ಶಿಷ್ಯವೃತ್ತಿ (Erasmus+ Scholarship) ಮೂಲಕ ಭರಿಸಲಾಗುತ್ತದೆ. ಇದರಲ್ಲಿ ಪ್ರಯಾಣ, ವಾಸ್ತವ್ಯ,…

Read More

ಉಳ್ಳಾಲ: ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಶನ್ (ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವಿಸಸ್) ವಿದ್ಯಾರ್ಥಿಗಳು 2024ರ ಜುಲೈನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ ಬಿಎಚ್‌ಎಂ ಪದವಿಯ ಅಂತಿಮ ಪರೀಕ್ಷೆಯಲ್ಲಿ ಮೊದಲ ಮೂರು ಶ್ರೇಯಾಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ದೇವ ಎಲ್ವಿನ್ ಪಿಂಟೋ ಸರಾಸರಿ 89.02% ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರೆ, ಗ್ರೇಶಲ್ ಇನೆಶ್ ರಾಡ್ರಿಗಸ್ 86..83% ಪಡೆದು ಎರಡನೆಯ ಸ್ಥಾನ ಪಡೆದಿದ್ದಾರೆ. ಶ್ರೇಯಾ ಜುವಿಟ ಲೋಬೊ 80.94% ಅಂಕಗಳನ್ನು ಪಡೆದು ಮೂರನೆಯ ಸ್ಥಾನದಲ್ಲಿದ್ದಾರೆ.

Read More

ಉಳ್ಳಾಲ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ-ತುಳು ವಿದ್ವಾಂಸರಾದ ಡಾ. ವಾಮನ ನಂದಾವರ ನಿಧನಕ್ಕೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಂತಾಪ ವ್ಯಕ್ತಪಡಿಸಿದೆ.ಡಾ.ವಾಮನ ನಂದಾವರ ಹಲವು ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಸಲೆಹಾಗಾರರೂ ಆಗಿದ್ದರು. ಅಬ್ಬಕ್ಕ ಸಂಕಥನ ಪುಸ್ತಕದ ಸಂಪಾದಕರೂ ಆಗಿದ್ದ ಇವರ ನಿಧನದಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ: ಕಣಚೂರ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕಣಚೂರು ಇಸ್ಲಾಮಿಕ್ ಎಡ್ಯೂಕೇಶನ್ ಟ್ರಸ್ಟ್ ಅಡಿಯಲ್ಲಿ ಮತ್ತು ಸೈಂಟ್ ಅಲೋಯಿಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ಫರ್ಮೇಷನ್ ಟೆಕ್ನೋಲಜಿ ಇವರ ನಡುವೆ ಸೋಮವಾರದಂದು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಸಂಶೋಧನೆ, ಶಿಕ್ಷಣ ಮತ್ತು ಸೃಜನಶೀಲತೆಯ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಹಾಗೂ ವೈದ್ಯಕೀಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎಐ ಚಾಲಿತ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಾಮೂಹಿಕ ಪ್ರಯತ್ನವನ್ನು ಆರಂಭಿಸಲು ನಿರ್ಧರಿಸಿದೆ‌ ಸೈಂಟ್ ಅಲೋಯಿಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ಫರ್ಮೇಷನ್ ಟೆಕ್ನೋಲಜಿಪ್ರತಿನಿಧಿಯಾಗಿ ನಿರ್ದೇಶಕ ಡಾ. ಕಿರಣ್ ಕೊಠಾ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ರೂಪನ್ಮತ್ತು ಸಾಫ್ಟ್‌ವೇರ್ ಟೆಕ್ನೋಲಜಿ ವಿಭಾಗದ ಮುಖ್ಯಸ್ಥರು ಕನಚೂರ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರತಿನಿಧಿಯಾಗಿ ಡಾ. ಶಹ್ನವಾಜ್ ಮಣಿಪಡಿ ಮತ್ತು ಆಡಳಿತಾಧಿಕಾರಿ ಡಾ. ರೋಹನ್ ಮೊನಿಸ್ ಉಪಸ್ಥಿತರಿದ್ದರು.

Read More