
ಉಳ್ಳಾಲ: ಮಹಿಳಾ ಪ್ರಾತಿನಿಧ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. “ಪ್ರಾತಿನಿಧ್ಯ” ಎಂಬ ಹೆಸರಿನಲ್ಲಿ ಕೆಲವೊಮ್ಮೆ ಮಹಿಳೆಯರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತನ್ನ ಖುಷಿಯನ್ನು ಮುಚ್ಚಿಟ್ಟುಕೊಂಡು ಕುಟುಂಬದ ಖುಷಿಗೆ ವ್ಯಯವಾಗುವವಳು ಮಹಿಳೆ. ಮನೆಯ ಹೆಣ್ಣು ಸಂತೋಷ ಮತ್ತು ಆರೋಗ್ಯಯುತವಾಗಿದ್ದಲ್ಲಿ ಮನೆಯಲ್ಲಿನ ಪ್ರತಿಯೊಂದು ಹಬ್ಬವೂ ಪರಿಪೂರ್ಣವಾಗುತ್ತದೆ ಎಂದು ಅಖಿಲ ಭಾರತ ಬ್ಯಾರಿ ಮಹಿಳಾ ಪರಿಷತ್ ಅಧ್ಯಕ್ಷೆ , ಸಾಹಿತಿ ಶಮೀಮಾ ಕುತ್ತಾರ್ ಅಭಿಪ್ರಾಯಪಟ್ಟರು,
ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸೌಹಾರ್ದ ದೀಪಾವಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹೆಣ್ಣಿನ ಸಂವೇದನೆಗಳು, ಕಷ್ಟಗಳು ಮತ್ತು ಕನಸುಗಳು ಇವುಗಳನ್ನು ಕವಿತೆ, ಕಾದಂಬರಿ ಅಥವಾ ಬೇರೆ ಯಾವ ಕಲಾ ರೂಪದಲ್ಲಾದರೂ ಹೇಳಬಹುದು. ಮಹಿಳೆಯರು ಸಾಮಾಜಿಕ ವೇದಿಕೆಗಳಲ್ಲಿ ಚಲನಶೀಲರಾಗಿರಬೇಕಾಗಿದೆ, ಆದರೆ ಇನ್ನೂ ಕೆಲವು ಸಂಕೋಲೆಗಳು ಅವರನ್ನು ಬಂಧಿಸುತ್ತಿವೆ. ಮಹಿಳೆಯರು ಆರಾಮದಾಯಕ ಜೀವನದಿಂದ ಹೊರಬಂದು ತಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಸ್ತ್ರೀ ಗೌರವಿಸಲ್ಪಡುವ ಜಾಗದಲ್ಲೇ ದೇವರು ಇರುತ್ತಾನೆ. “ಪ್ರಾತಿನಿಧ್ಯ” ಎಂಬ ಹೆಸರಿನ ಅಡಿಯಲ್ಲಿ ಬಂಧಿಸದೆ, ಅವಕಾಶ ನೀಡುವುದು ಆಕೆಯ ಹಕ್ಕು ಎಂದು ಸಮಾಜ ಒಪ್ಪಿಕೊಳ್ಳಬೇಕು. ಪಿತೃಪ್ರಧಾನ ವ್ಯವಸ್ಥೆಯಡಿ ಮಹಿಳೆಯರು ಒಮ್ಮೆಲೇ ಹೊರಬರುವುದು ಅಸಾಧ್ಯವಾದರೂ, ಪ್ರಗತಿಯ ಹೆಜ್ಜೆ ಇಡುವುದು ಅತ್ಯಗತ್ಯ ಎಂದರು.
ಕೃಷಿ ಮತ್ತು ಹಬ್ಬಗಳ ನಂಟು
ಮಂಗಳೂರು ವಿ.ವಿ.ಯ ವಿಶ್ರಾಂತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ ಮಾತನಾಡಿ, “ದೇಶವು ಪ್ರಾಚೀನ ಕಾಲದಿಂದಲೇ ಕೃಷಿಕೇಂದ್ರೀಕೃತ ರಾಷ್ಟ್ರ. ಕೃಷಿಯ ಸುತ್ತ ರೂಪುಗೊಂಡ ಹಬ್ಬಗಳನ್ನು ಇಂದಿಗೂ ವಿವಿಧ ಹೆಸರಿನಲ್ಲಿ ಆಚರಿಸುತ್ತಿದ್ದೇವೆ. ಇವು ಕೃಷಿಯ ಸಂಪತ್ತುಗಳನ್ನು ಸಂರಕ್ಷಿಸುವುದರ ಜೊತೆಗೆ ಎಲ್ಲರೂ ಸೇರಿ ಹರ್ಷದಿಂದ ಆಚರಿಸುವ ಹಬ್ಬಗಳಾಗಿವೆ. ಹಬ್ಬಗಳ ನಿಜವಾದ ಅರ್ಥವನ್ನು ಅರಿತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಮಹಿಳೆಯ ಶಕ್ತಿ
ಶಾಲಾ ಮುಖ್ಯೋಪಾಧ್ಯಾಯಿನಿ ಜಯವಂತಿ ಸೋನ್ಸ್ ಮಾತನಾಡಿ, ಮಹಿಳೆಯರು ಅಡುಗೆಮನೆಗೆ ಮಾತ್ರ ಸೀಮಿತರಲ್ಲ. ಅಡುಗೆಮನೆಯಿಂದ ಹಿಡಿದು ವಿಮಾನ ಹಾರಿಸುವ ತನಕ ಎಲ್ಲ ಕ್ಷೇತ್ರಗಳಲ್ಲಿಯೂ ಅವರು ಮುಂದಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲೂ ಮಹಿಳೆಯರಿಗೆ ಉತ್ತಮ ಅವಕಾಶಗಳು ದೊರಕಿದರೂ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರಕ್ಕೆ ಪೂರಕವಾದ ಪಟಾಕಿಗಳನ್ನು ಬಳಸುವಂತೆ ಕರೆ ನೀಡಿದರು, .
ಜನಸಹಭಾಗಿತ್ವದ ಹಬ್ಬ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಎಲ್ಲರ ಸಹಕಾರದಿಂದ ಅತ್ಯುತ್ತಮ ಕಾರ್ಯಕ್ರಮ ನಡೆಯಿತು. ಬೋಳಾರ–ಕೋಟೆಪುರ ಸೇತುವೆ ನಿರ್ಮಾಣಕ್ಕೆ ರೂ.೨೦೦ ಕೋಟಿ, ಅದೇ ಪ್ರದೇಶದಲ್ಲಿ ಶನಿವಾರ, ಭಾನುವಾರ ಪ್ರವಾಸೋದ್ಯಮ ಯೋಜನೆಗೆ “ಕಾಂಡ್ಲಾ ವನ ವೀಕ್ಷಣೆಗೆ ರಸ್ತೆ ನಿರ್ಮಾಣಕ್ಕೆ ₹೬ ಕೋಟಿ ರೂ. ಮಂಜೂರಾಗಿದೆ. ಉಳ್ಳಾಲ ನಗರದ ಭೂಗತ ಕೇಬಲ್ ಯೋಜನೆಗೆ ₹೨೦೦ ಕೋಟಿ ರೂ. ಮೀಸಲಾಗಿದ್ದು, ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ನಗರದ ಜನರು ಯು.ಟಿ. ಖಾದರ್ ಅವರನ್ನು ಮರೆಯುವುದು ಅಸಾಧ್ಯ. ೪೦ ಮಹಿಳೆಯರನ್ನು ವಿಧಾನಸಭೆಯ ಕಲಾಪ ವೀಕ್ಷಣೆಗೆ ಕರೆದೊಯ್ದಿದ್ದಾರೆ. ಶೀಘ್ರದಲ್ಲೇ ಮಹಿಳಾ ಸಮಾವೇಶವೂ ನಡೆಯಲಿದೆ ಎಂದರು,
ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ ಮಾತನಾಡಿ, ನಗರ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಶಕ್ತಿಮೀರಿ ದುಡಿದಿದ್ದು, ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. “ಬರುವ ಬಾಲ್ ಅನ್ನು ಫೇಸ್ ಮಾಡಬೇಕು, ಬಾಲ್ ಹಾಕುವವನನ್ನು ನೋಡುವುದಲ್ಲ” ಅದುವೇ ರಾಜಕೀಯ ಎಂದರು,.
ಉದ್ಯಮಿ ಪ್ರಕಾಶ್ ಕುಂಪಲ ಮಾತನಾಡಿ, ಹಿಂದೂ–ಮುಸ್ಲಿಂ–ಕ್ರೈಸ್ತರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹಿಳೆಯರು ಖಾದರ್ ಅವರ ಬಲವಾದ ಶಕ್ತಿ ಎಂದು ಹೇಳಲಾಯಿತು. ಮಹಿಳೆಯರು ಮನೆ ಕೆಲಸದಿಂದ ಹೊರಬಂದು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು ಶ್ಲಾಘನೀಯ. “ಮಡದಿ ಮಾತ್ರ ನೆಮ್ಮದಿಯನ್ನು ನೀಡುತ್ತಾಳೆ; ಮಗನೊಬ್ಬ ಮುಂದೆ ಹೋಗಬೇಕಾದರೆ ಬೆಂಬಲಿಸುವುದು ತಾಯಿ ಮಾತ್ರ,” ಎಂದು ಹೇಳಿದರು. ವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸಿ, ಮಹಿಳಾ ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದು ಸಲಹೆ ನೀಡಿದರು.
ಯು.ಟಿ. ಖಾದರ್ ಗುರುಸ್ವರೂಪರಾಗಿದ್ದು, ಅವರ ಆಶೀರ್ವಾದದಿಂದ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಶಾಂತಿ ಮತ್ತು ಒಗ್ಗಟ್ಟು
ದೇಶದ ಸಂವಿಧಾನ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ ಕಾರ್ಯಕ್ರಮವಾಗಿದೆ. ಪಕ್ಷವನ್ನು ಒಗ್ಗಟ್ಟಿನಿಂದ ಬಲಪಡಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಲಾಯಿತು. “ಯು.ಟಿ. ಖಾದರ್ ಅವರ ಮಾತುಗಳೇ ಮಾರ್ಗದರ್ಶನ. ಸಮಾಜದಲ್ಲಿ ಶಾಂತಿ ನೆಲೆಸುವುದು ನಮ್ಮ ಉದ್ದೇಶ. ಏನು ಮಾಡಿದರೂ ಆರೋಪಗಳು ಸಹಜ. ಪಕ್ಷ ಯಾರೊಬ್ಬರ ಆಸ್ತಿಯಲ್ಲ ಎಂದು ಅವರು ಹೇಳಿದರು.
ಧಾರ್ಮಿಕ ಪರಿಷತ್ ಸದಸ್ಯ ಸುರೇಶ ಭಟ್ನಗರ ಮಾತನಾಡಿ, ಬ್ಲಾಕ್ ಸಭೆಗಳಲ್ಲಿ ಖಾಲಿ ಕುರ್ಚಿಗಳಿದ್ದ ದಿನಗಳಿಂದ ಇಂದಿನಂತಹ ಯಶಸ್ವಿ ಮಹಿಳಾ–ಸಮಾವೇಶದ ವಾತಾವರಣ ನಿರ್ಮಾಣವಾಗಿರುವುದು ಸಾರ್ಥಕ ಸಾಧನೆ. ಅಲ್ಪಸಂಖ್ಯಾತರು ಸಹಭಾಗಿಯಾಗಿರುವ ಈ ಕಾರ್ಯಕ್ರಮದಿಂದ ನಗರಸಭೆ ಚುನಾವಣೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. “ಅಸೂಯೆ ರೋಗದಂತೆ; ಬ್ಯಾಲೆನ್ಸ್ ಮಾಡಿಕೊಂಡು ಮುಂದುವರಿಯಿರಿ,” ಎಂದು ಸಲಹೆ ನೀಡಲಾಯಿತು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ ಮಹಿಳಾ ಕಾಂಗ್ರೆಸ್‌ನಿಂದ ಅನೇಕರು ನಾಯಕರಾಗಿದ್ದಾರೆ. ಮಹಿಳೆಯರು ಒಗ್ಗಟ್ಟಿನಿಂದ ಮುಂದುವರಿದು ಜಾತ್ಯಾತೀತ ಪಕ್ಷದ ಸಿದ್ಧಾಂತವನ್ನು ಉಳಿಸಿ ಬೆಳೆಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ಮಾತನಾಡಿ ಮಹಿಳೆಯರು ಕೈಗೊಂಡ ಯಾವುದೇ ಕಾರ್ಯಕ್ರಮ ಯಶಸ್ವಿಯೇ ಆಗುತ್ತದೆ. ಉಳ್ಳಾಲ ಭಾಗದಲ್ಲಿ ಇಂತಹ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ. ಬಾಂಧವ್ಯ ಭತ್ತದ ಪೈರಿನಂತೆ ಬೆಳೆದು ಮುಂದುವರಿಯಲಿ. ಸೇವೆ ನಿಂತ ನೀರಾಗದೇ ಹರಿಯುವ ನೀರಾಗಲಿ. ಉತ್ತಮ ನಗರಸಭೆ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು.
ಸಂಘಟಕಿ ನಗರ ಕಾಂಗ್ರೆಸ್ ಅಧ್ಯಕ್ಷ ಅಮಿತಾ ಉಳ್ಳಾಲ ಮಾತನಾಡಿ, ಶಿಸ್ತು ಮನುಷ್ಯನನ್ನು ಪರ್ಫೆಕ್ಟ್ ಆಗಿರಿಸುತ್ತದೆ. ಅದನ್ನು ಪಾಲನೆ ಮಾಡಿದರೆ ಜೀವನವೂ ಉತ್ತಮವಾಗುತ್ತದೆ. ಮಹಿಳೆಯ ಪ್ರಾತಿನಿಧ್ಯವು ಕೇವಲ ಹಕ್ಕು ಅಲ್ಲ . ಅದು ಸಮಾಜದ ಶಕ್ತಿಯ ಪ್ರತೀಕ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ, ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ನೆಲೆಸಲಿ ಎಂಬುದು ಈ ಕಾರ್ಯಕ್ರಮದ ಸಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಝಿಯಾ ಇಬ್ರಾಹಿಂ ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ ಸನಿಲ್, ಉಷಾ ಶೆಟ್ಟಿ, ಯುವ ನಾಯಕ ಯು.ಟಿ. ಫರೀದ್, ಮನ್ಸೂರ್ ಮಂಚಿಲ, ಶಾಕೀರ್, ಉಳ್ಳಾಲ ಬ್ಲಾಕ್ ಉಪಾಧ್ಯಕ್ಷರಾದ ದಿನೇಶ್ ರೈ ಉಳ್ಳಾಲಗುತ್ತು ಉಪಸ್ಥಿತರಿದ್ದರು.
ಅಮಿತಾ ಅಶ್ವಿನ್ ಸ್ವಾಗತಿಸಿದರು. ಮುಸ್ತಾಫ ಅಬ್ದುಲ್ಲಾ ವಂದಿಸಿದರು. ಸನ್ನಿಧೀ ನಿರೂಪಿಸಿದರು.” ಎಂದರು.



