Author: UllalaVani

Kannada News From Coastal Karnataka

ದೇರಳಕಟ್ಟೆ, .ನ.1:ಇಂದು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಸ್ಥೆಯ ಸಾಹಿತ್ಯ ವೇದಿಕೆ ವತಿಯಿಂದ ಆಚರಿಸಲಾಯಿತು. ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ದೀಪ ಬೆಳಗಿಸಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪರ್ಚಾಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡ ನಾಡಿನ ನೆಲ ಜಲದ ರಕ್ಷಣೆ ಮತ್ತು ನಮ್ಮ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು ವ್ಯವಹಾರಿಕಾವಾಗಿ ಇತರ ಭಾಷೆಗಳನ್ನು ಬಳಸಿದರೂ ಕನ್ನಡ ಭಾಷೆಯನ್ನು ನಾವು ಯಾವತ್ತೂ ಮರೆಯಬಾರದು ಎಂದರು. ಈ ಸಂಧರ್ಭ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ, ಶಾಲಾ ಮುಖ್ಯ್ಯೊ ಪಾಧ್ಯಯರಾದ ನಯೀಮ್ ಹಮೀದ್, ಸಹ ಶಿಕ್ಷಕರಾದ ರವಿಕುಮಾರ್ ಕೊಡಿ, ಶಾಲಾ ವಿದ್ಯಾರ್ಥಿ ನಾಯಕ ಭವಿತ್ ಸುವರ್ಣ ಶಾಲಾ ಸಹ ಶಿಕ್ಷಕರು, ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳಿಳು ಉಪಸ್ಥಿತರಿದ್ದರು ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ವಿದ್ಯಾರ್ಥಿನಿ ಯುಕ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅನುಶ್ರೀ…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಶಾಖೆಯ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವು ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ , ಗ್ರಾಮ ಸಮಿತಿ ಮರೋಳಿ, ಶ್ರೀ ರಾಮ ಭಜನಾ ಮಂದಿರ, ಮರೋಳಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರುಗಳ ಜಂಟಿ ಸಹಯೋಗದೊಂದಿಗೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕೆ. ಪಿ ಶೆಟ್ಟಿ ರವರು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ತನ್ನ ಎಲ್ಲಾ ಶಾಖೆಗಳ ವಾರ್ಷಿಕೋತ್ಸವದ ಪ್ರಯುಕ್ತ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ, ಸಂಘದ ಈ ಕಾರ್ಯವು ಶ್ಲಾಘನೀಯ. ಈ ಶಿಬಿರದಲ್ಲಿ ಅನೇಕ…

Read More

ಉಳ್ಳಾಲ.ನ.1: ಕರ್ನಾಟಕ ರಾಜ್ಯೋತ್ಸವ ನಮ್ಮ ರಾಜ್ಯದ ಗೌರವ, ಸಂಸ್ಕೃತಿ ಮತ್ತು ಸೇವಾ ಮನೋಭಾವದ ಪ್ರತೀಕ. ಪ್ರತೀ ವರ್ಷ ಈ ದಿನದಲ್ಲಿ ಸರ್ಕಾರ ರಾಜ್ಯದ ಹಿತಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಗೌರವ ನೀಡುತ್ತದೆ. ಆದರೆ ದುಃಖಕರ ಸಂಗತಿಯೆಂದರೆ, ಕಳೆದ ಕೆಲವು ವರ್ಷಗಳಿಂದ ಈ ಪ್ರಶಸ್ತಿಗಳು ನೈಜ ಸೇವೆಗೆ ತಕ್ಕಂತೆ ನೀಡಲಾಗದೆ, ರಾಜಕೀಯ ಪ್ರಭಾವ, ಸಂಬಂಧ ಮತ್ತು ವ್ಯಾಪಾರಮೂಲಕವಾದ ಪ್ರಚಾರದ ಹಾದಿಗೆ ತಿರುಗಿವೆ. ಇಂದು ರಾಜ್ಯೋತ್ಸವ ವೇದಿಕೆಯಲ್ಲಿ ಕಾಣುವ ಬಹುತೇಕ ಮುಖಗಳು ಕೇವಲ ಹತ್ತು ವರ್ಷಕ್ಕಿಂತ ಕಡಿಮೆ “ಬದುವ್ಯಾಪಾರ–ರಾಜಕೀಯ” ನಡೆಸಿದ ವ್ಯಕ್ತಿಗಳೇ. ನೈಜವಾಗಿ ಜನರ ಕಷ್ಟದ ಸಮಯದಲ್ಲಿ ಅವರ ಜೊತೆ ನಿಂತು ಸಮಾಜ ನಿರ್ಮಾಣದ ಹಾದಿಯಲ್ಲಿ ದುಡಿದ ಸಂಘಟನೆಗಳು ಮೌನವಾಗಿ ಅಣಕಕ್ಕೊಳಗಾಗುತ್ತಿವೆ. ಇಂತಹ ನಿಸ್ವಾರ್ಥ ಕಾರ್ಯಕರ್ತರನ್ನು ಗುರುತಿಸಲು ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ಕಳವಳಕಾರಿ ಸಂಗತಿ. ನಾರಾಯಣ ಗುರುವಿನ ತತ್ವದ ಜೀವಂತ ರೂಪ ತುಳುನಾಡಿನ ಮಣ್ಣು ಸತ್ಯ ಮತ್ತು ಧರ್ಮದ ಮಣ್ಣು — “ಧರ್ಮ ದೈವ ಸತ್ಯೊಲು” ಎನ್ನುವ ನಂಬಿಕೆ…

Read More

ಮಂಗಳೂರು: ನ.1, ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನವೆಂಬರ್ 1 ರಂದು ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೌರವ ವಂದನೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು 80 ಮಂದಿ ಸಾಧಕರು ಮತ್ತು ವಿಶಿಷ್ಟ ಸಂಸ್ಥೆಗಳಿಗೆ 2025ರ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂದು ನಾವು ಕರ್ನಾಟಕ ರಚನೆಯ 69ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಏಕೀಕೃತ ಕನ್ನಡ ರಾಜ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ಲೇಖಕರು ಮತ್ತು ದೂರದೃಷ್ಟಿಯ ವ್ಯಕ್ತಿಗಳನ್ನು ನಾವು ಸ್ಮರಿಸಬೇಕು. ನಮ್ಮದು ಸಂಸ್ಕೃತಿ, ಭಾಷೆ, ಕಲೆ ಮತ್ತು ಪರಂಪರೆಯಲ್ಲಿ ಸಮೃದ್ಧವಾಗಿರುವ ನಾಡು. ಈ ಪರಂಪರೆಯ ಭಾಗವಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕು” ಎಂದರು.”ಕರ್ನಾಟಕವು ಸದಾ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಇಲ್ಲಿ ಎಲ್ಲಾ ಧರ್ಮ ಮತ್ತು ಸಮುದಾಯದ ಜನರು ಪರಸ್ಪರ ಗೌರವದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಹೇಳಿದಂತೆ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಾಯ್ನುಡಿಯನ್ನು ಪ್ರೀತಿಸಬೇಕು. ನಾವು ನಮ್ಮ ದೈನಂದಿನ…

Read More

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ರವರ ವಿರುದ್ಧ ಶಾಸಕರಾದ ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಅಖಿಲ ಭಾರತೀಯ ಕ್ರೈಸ್ತ ಒಕ್ಕೂಟ ಇದರ ಕರ್ನಾಟಕ ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಅವರು ನೀಡಿದ ಹೇಳಿಕೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ನಿಷ್ಕಳಂಕ ಹಾಗೂ ಜನಪರ ನಾಯಕರಲ್ಲಿ ಒಬ್ಬರಾಗಿರುವ ಸನ್ಮಾನ್ಯ ಯು.ಟಿ. ಖಾದರ್ ರವರು ಎಂದಿಗೂ ಲಂಚ ಸ್ವೀಕರಿಸಿದವರು ಅಲ್ಲ ಎಂದು ಹೇಳಿದರು. ಭರತ್ ಶೆಟ್ಟಿಯವರು ಮಾಡಿದ ಆರೋಪಗಳು ಅಸತ್ಯ ಹಾಗೂ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಎಂದು ಅವರು ಆರೋಪಿಸಿದರು. ಖಾದರ್ ರವರ ವಿರುದ್ಧದ ಅಪವಾದವನ್ನು ಖಂಡಿಸುತ್ತಾ, ರಾಜಕೀಯ ಲಾಭಕ್ಕಾಗಿ ವ್ಯಕ್ತಿತ್ವ ಹಾನಿಗೆ ಯತ್ನಿಸುವಂತ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಲ್ವಿನ್ ಡಿಸೋಜರವರು ಒತ್ತಾಯಿಸಿದ್ದಾರೆ. ಸ್ಪೀಕರ್ ಖಾದರ್ ರವರ ಬಗ್ಗೆ ಕಾಂಗ್ರೆಸ್‌ ಪಕ್ಷದ ವಿಶ್ವಾಸ: ಕರ್ನಾಟಕ ರಾಜ್ಯದ ರಾಜಕೀಯ ವಲಯದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರ ನಿಷ್ಠೆ ಮತ್ತು…

Read More

ಪಡುಬಿದ್ರಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡುಬಿದ್ರಿ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ನೇತ್ರ ತಪಾಸಣಾ ಶಿಬಿರವು ಯುವವಾಹಿನಿ (ರಿ) ಪಡುಬಿದ್ರಿ ಘಟಕ ಮತ್ತು ಲಯನ್ಸ್ ಕ್ಲಬ್ ಪಡುಬಿದ್ರಿ, ಇವರುಗಳ ಜಂಟಿ ಸಹಯೋಗದೊಂದಿಗೆ ನ.2ರಂದು ಬೆಳಿಗ್ಗೆ 9.3೦ ರಿಂದ ಮದ್ಯಾಹ್ನ 12.30ರ ವರೆಗೆ ಪಡುಬಿದ್ರಿ ಬಿಲ್ಲವ ಸೇವಾ ಸಂಘ (ರಿ.) ಇದರ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ನೇತ್ರ ತಪಾಸಣಾ ಶಿಬಿರದಲ್ಲಿ ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಅಗತ್ಯವುಳ್ಳವರಿಗೆ ಸಂಘದ ವತಿಯಿಂದ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ತಿಳಿಸಿರುತ್ತಾರೆ.

Read More

ಮುಡಿಪು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಡಿಪು ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ನವೀನ್ ಚಂದ್ರ, ಕಾಶೀಮ್ ಕೆ, ಶ್ರೀಮತಿ ಕ್ಯಾತರಿನ್ ಡಿಸೋಜ ಹಾಗೂ ದುಶ್ಯಂತ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ನವೀನ್ ಚಂದ್ರ ರವರು ಮಾತನಾಡಿ “ಸಂಘದ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಸಂಘದ ಉನ್ನತಿಗೆ ಕಾರಣವಾಗಿದೆ. ಸಂಘವು ಬ್ಯಾಂಕಿಂಗ್ ಸೇವೆಯ ಜೊತೆಗೆ ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಉಚಿತ ವೈಧ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇನ್ನು ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ನೀಡುವಂತಾಗಲಿ” ಎಂದು ಆಶಿಸಿದರು.ಸಂಘದ ಸದಸ್ಯರಾದ ಕಾಸಿಮ್ ಕೆ ಇವರು ಮಾತನಾಡಿ “ಸಂಘವು ಅತೀ ಕಡಿಮೆ ಅವಧಿಯಲ್ಲಿ ಸಾಧಿಸಿರುವ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಶಾಖೆಯನ್ನು ತೆರೆಯುವಂತಾಗಲಿ” ಎಂದು ಶುಭ ಹಾರೈಸಿದರು.ಸಂಘದ ಅಧ್ಯಕ್ಷರಾದ ಸಹಕಾರ…

Read More

ದೇರಳಕಟ್ಟೆ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಇತ್ತೀಚೆಗೆ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಆನಂದ್ ಕೆ, ಎಸ್. ಜಯಪ್ರಸಾದ್, ಅಬ್ಬಾಸ್ ಎಮ್, ಮಹಮ್ಮದ್ ಎ. ಎಸ್ ಹಾಗೂ ಶ್ರೀಮತಿ ಮಾಲತಿ ಕೆ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಆನಂದ್ ಕೆ ರವರು ಮಾತನಾಡಿ “ಯಾವುದೇ ಒಂದು ಸಂಘವು ಬೆಳೆಯಬೇಕಾದರೆ ಎರಡು ಅಂಶಗಳು ಮುಖ್ಯವಾಗಿರುತ್ತದೆ. ಒಂದು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿಯ ಆತ್ಮಸ್ಥೈರ್ಯ, ಇನ್ನೊಂದು ಅವರಿಗಿರುವ ವ್ಯಕ್ತಿತ್ವ. ಇವೆರಡು ನಮ್ಮ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರಲ್ಲಿ ಕಾಣಸಿಗಬಹುದು ಎಂದು ಶ್ಲಾಘಿಸಿದರು. ಮುಖ್ಯವಾಗಿ ಇವರು ಸಂಘದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಹೀಗಾಗಿ ಸಂಘವು ನೀಡುತ್ತಿರುವ ಗುಣಮಟ್ಟದ ಸೇವೆಯೇ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣ” ಎಂದರು.ಸಂಘದ ಸದಸ್ಯರಾದ ಅಬ್ಬಾಸ್ ಎಮ್…

Read More

ಬಂಟ್ವಾಳ, ಅ. 30: ಬಿಸಿಲೆ ಘಾಟ್ ನಲ್ಲಿ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ಸಮಯ ಅಲ್ಲಿನ ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಂಭೀರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ KA.22.C.1382 ನೇ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 1.30 ಕ್ಕೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್ ಜಿ ಸರ್ಕಲ್ನಿಂದ ಅಂಬ್ಯುಲೆನ್ಸ್ ಮುಂದಿನಿಂದ KA.19.EK.0696 ನೇ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ನ ಸೈರನ್ ಶಬ್ದ ಕೇಳಿಯೂ ಗೆ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ವ್ಯಕ್ತಿಯಾದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ( 38) ಎಂಬಾತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 128/2025 ಕಲಂ:110, 125 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read More

ಉಳ್ಳಾಲ, ಅ. 30: ವಾಟ್ಸಾಪ್ ನಲ್ಲಿ ಭಾರತ ದೇಶಕ್ಕೆ ವಿರುದ್ಧ ವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಟಿಸಿರೋಡ್ ನ ಮೊಹಮ್ಮದ್ ಹನೀಫ್ (48), ಉಚ್ಚಿಲ ನಿವಾಸಿ ಮನೋಜ್ (56), ಫರಂಗಿಪೇಟೆ ನಿವಾಸಿ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಮು ಸಂಘರ್ಷಕ್ಕೆ ಪ್ರಚೋದನೆಯಾಗುವಂತಹ ಪೋಸ್ಟ್ ಅನ್ನು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More