Author: UllalaVani

Kannada News From Coastal Karnataka

ಮಂಗಳೂರು : ಅರೋಮಾಝೆನ್ ಪ್ರೈ. ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿ‌ಕೊಂಡಿದ್ದು, ಇದನ್ನು ಗಮನಿಸಿದ ಎಂ.ಸಿ.ಎಫ್ ಸಂಸ್ಥೆಯ ಸಿಬ್ಬಂದಿಗಳು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು ನಂತರ ಅಲ್ಲಿಗೆ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗು ಅಧಿಕಾರಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ‌ನಿಂದಾಗಿ ಅನಾಹುತ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು. ಇನ್ನು ಇದರ ಸಂಪೂರ್ಣ ತನಿಖೆ ನಡೆಯಬೇಕಾಗಿದೆ. ಸೋಪ್ ಹಾಗೂ ಪರ್ಫ್ಯೂಮ್ ಗೆ ಉಪಯೋಗಿಸುವ ಲಿಕ್ವೀಡ್ ತಯಾರಿಸುವ ಫ್ಯಾಕ್ಟರಿ ಇದಾಗಿತ್ತು. ಬೆಂಕಿ‌ ಆಹುತಿಯಿಂದ ಸರಿ ಸುಮಾರು 4 ಕೋಟಿ ನಷ್ಟ ಆಗಿರಬಹುದೆಂದು ಅಂದಾಜಿಸಲಾಗಿದೆ. ಮಂಗಳೂರಿನ ಬೈಕಂಪಾಡಿ‌ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಫ್ಯಾಕ್ಟರಿ ಇದಾಗಿದೆ.

Read More

ಮಂಗಳೂರು : ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 11 ಗುರುವಾರದಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ. ವಂ. ಡಾ| ಎಲೋಶಿಯಸ್ ಪೌಲ್ ಡಿ’ಸೋಜರವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದಾ ಮಣಿನಾಲ್ಕೂರುರವರಿಂದ ‘ಪ್ರೀತಿಯ ಸಿಂಚನ’ ಎಂಬ…

Read More

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ರೇಶನ್ ಸಂಸ್ಥೆಯ ವತಿಯಿಂದ ರೋಹನ್ ಸಿಟಿ ಕಛೇರಿಯಲ್ಲಿ ಒಣಂ ಹಬ್ಬವನ್ನು ಆಚರಿಸಲಾಯಿತು. ಸಿಬ್ಬಂದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಸಾಂಸ್ಕೃತಿಕ ವೈಭವವನ್ನು ಹಂಚಿಕೊಂಡರು.ಕಾರ್ಯಕ್ರಮವು ದೀಪಪ್ರಜ್ವಲನದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಅವರು ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಓಣಂ ಹಬ್ಬದ ಹೂವಿನ ಅಲಂಕಾರ ( ಪೂಕಳಂ ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಡಿಯೋನ್ ಮೊಂತೆರೋ “ಒಣಂ ಹಬ್ಬವು ಏಕತೆ ಸಂಕೇತ. ಇಂತಹ ಆಚರಣೆಗಳು ನಮ್ಮ ಬಾಂಧವ್ಯವನ್ನು ಬಲಪಡಿಸುತ್ತವೆ” ಎಂದು ಹೇಳಿದರು.“ಎಲ್ಲರೂ ಒಗ್ಗಟ್ಟಿನಿಂದ ಒಂದು ಕುಟುಂಬದಂತೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷಕರ. ಇಂತಹ ಸಂದರ್ಭಗಳು ಪರಸ್ಪರ ಗೌರವ ಮತ್ತು ಸ್ನೇಹವನ್ನು ಹೆಚ್ಚಿಸುತ್ತವೆ” ಎಂದು ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಹೇಳಿದರು.ರೋಹನ್ ಕಾರ್ಪೋರೇಶನ್ ವತಿಯಿಂದ ಹಮ್ಮಿಕೊಂಡಿದ್ದ ಈ ಒಣಂ ಆಚರಣೆಯು ಕೇವಲ…

Read More

25ರ ಮಾರ್ಚ್ 22ನೇ ದಿನ ಪೋಲಿಸರಿಂದ ದೊರಕಿದ ಮಾಹಿತಿಯ ಮೇರೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಸ್ನೇಹಾಲಯದ ರಕ್ಷಣಾ ತಂಡವು ಪೂಜಾ ಮತ್ತು ಆಕೆಯ ಎಂಟು ತಿಂಗಳಿನ ಮಗು ಆಯುಷನನ್ನು ರಕ್ಷಿಸಿ ತಾಯಿ–ಮಗುವನ್ನು ಮಂಜೇಶ್ವರದ ಸ್ನೇಹಾಲಯ ಮನೋ ಸಾಮಾಜಿಕ ಪುನಶ್ಚೇತನ ಸಂಸ್ಥೆಯ ಮಹಿಳೆಯರ ವಿಭಾಗದಲ್ಲಿ ದಾಖಲಿಸಿದರು. ದೊರೆತ ಮಾಹಿತಿಯ ಪ್ರಕಾರ ಪೂಜಾ ಓರ್ವ ಗೃಹಿಣಿಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಬಿಹಾರವನ್ನು ಬಿಟ್ಟು ಉದ್ಯೋಗಕ್ಕಾಗಿ ತಮಿಳುನಾಡಿಗೆ ಹೊರಟಿದ್ದರು. ಆದರೆ ದುರಾದೃಷ್ಟದಿಂದ ತಮ್ಮ ಕುಟುಂಬದೊಡನೆ ಸಂಪರ್ಕ ಕಳೆದುಕೊಂಡರು ಅವರಿಂದ ಬೇರ್ಪಟ್ಟರು. ಆದರೆ ಸ್ನೇಹಾಲಯದಲ್ಲಿ ಆವಳ ಜೀವನಕ್ಕೆ ಒಂದು ಹೊಸ ತಿರುವು ಬಂತು. ಸ್ನೇಹಾಲಯದಲ್ಲಿ ದೊರೆತ ಸಮಗ್ರ ಮಾನಸಿಕ ಶಾರೀರಿಕ ಚಿಕಿತ್ಸೆ, ಅತ್ತ್ಯುತ್ತಮ ಆರೈಕೆ ಮತ್ತು ಸಮಾಲೋಚನೆಗಳಿಂದ ಆಕೆಯು ತನ್ನ ಮಾನಸಿಕ ಆರೋಗ್ಯವನ್ನು ಪುನಃ ಪಡೆದುಕೊಂಡಳು. ತದನಂತರ ಅವರ ಪುನರ್ಮಿಲನ ಪ್ರಕ್ರಿಯೆ ಪ್ರಾರಂಭವಾಯಿತು. ಶ್ರದ್ಧಾ ಫೌಂಡೇಶನಿನ ಬಸವರಾಜ್ ಅವರ ನೇತ್ರತ್ವದಲ್ಲಿ ಪೂಜಾಳ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ನಡೆಯಿತು ಹಾಗೂ ದೂರದ ಬಿಹಾರದಲ್ಲಿ ವಾಸಿಸುತ್ತಿರುವ ಆಕೆಯ…

Read More

ಮಂಗಳೂರು : ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಭಾರತದ ರಿಯಲ್‌ ಎಸ್ಟೇಟ್‌ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ಗೂ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ. ಮಂಗಳೂರಿನ ಸುರತ್ಕಲ್‌ NITK ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದ್ದು ಮತ್ತು ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ-ಲಕ್ಷುರಿ ಅಪಾರ್ಟ್ಮೆಂಟ್‌ ಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ “ದಿ ರಿಟ್ರೀಟ್” ಮತ್ತು 47 ಮಹಡಿಗಳಿರುವ “ದಿ ರಿಸಾರ್ಟ್” ಎಂಬ ಎರಡು ಟವರ್ ಗಳಿದ್ದು, ರೋಹನ್ ಮರೀನಾ ಒನ್ ಅನ್ನು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲಾಗಿ ನಿಲ್ಲುವಂತೆ ಮಾಡಿದೆ. ಕರಾವಳಿ ಜೀವನಶೈಲಿಯಲ್ಲೇ…

Read More

ದೇರಳಕಟ್ಟೆ : ಆಳುವ ಸರಕಾರಗಳು ಉದ್ಯೋಗಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಮರೆತು ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸಿ ಅಲ್ಲಿ ಯುವಜನರನ್ನು ಗುತ್ತಿಗೆ ಅರೆಗುತ್ತಿಗೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ. ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ‌ ನೇತೃತ್ವದಲ್ಲಿ ನಡೆಯುತ್ತಿರುವ ಉದ್ಯೋಗದ ಹಕ್ಕಿಗಾಗಿ ಯುವಜನ ಜಾಥಾದ ಭಾಗವಾಗಿ ದೇರಳಕಟ್ಟೆಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂತೋಷ್ “ಇತ್ತೀಚೆಗೆ ಕೇಂದ್ರ ಸರಕಾರ ಇತ್ತೀಚೆಗಿನ ಬಜೆಟ್ ನಲ್ಲಿ ಇಎಲ್ಐ ಸ್ಕೀಮ್ ಎಂದು 2 ಲಕ್ಷ ಕೋಟಿ ಹಣವನ್ನು ಉದ್ಯೋಗ ಸೃಷ್ಟಿಯ ಹೆಸರಲ್ಲಿ 500 ಖಾಸಗೀ ಕಂಪನಿಗಳಿಗೆ ವಹಿಸುವ ಕಾರ್ಪೊರೇಟ್ ಪರವಾದ ನೀತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಬಿದ್ದಿದ್ದೆ ಅವುಗಳನ್ನು ಭರ್ತಿಗೆ ಕ್ರಮಗಳೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಮಾತನಾಡಿದ ಸಾಮಾಜಿಕ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ “ದೇಶದ ಯುವಜನತೆಗೆ ಸಮಾನ ಶಿಕ್ಷಣ ಸಮಾನ ಉದ್ಯೋಗವನ್ನು ಪಡೆಯುವ ಅವಕಾಶ…

Read More

ಮಂಗಳೂರು : ಕೂಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧವಿ ಎಂಬ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ದೊಡ್ಡ ರಸ್ತೆಯ ಗುಂಡಿಗೆ ಬಿದ್ದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಮೀನು ತುಂಬಿದ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವಿಗೀಡಾದರು. ಈ ದಾರುಣ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದ್ದು, ಅವರು ಮೂಲ್ಕಿಯಿಂದ ಪಂಪ್‌ವೆಲ್‌ಗೆ ಸಾಗುವ ಹೆದ್ದಾರಿಯ ದುಸ್ಥಿತಿಯ ಬಗ್ಗೆ ಗಂಭೀರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದೊಡ್ಡ ಗುಂಡಿಗಳು ಇರುವುದರಿಂದ ದಿನಕ್ಕೊಂದು ಅಪಘಾತ ಸಂಭವಿಸುವಂತಹ ಪರಿಸ್ಥಿತಿಯಿದೆ ಎಂದು ಸ್ಥಳೀಯರು ದೂರಿದ್ದಾರೆ ನಿವಾಸಿಗಳ ಪ್ರಕಾರ, ರಸ್ತೆಯ ದುರಸ್ತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಿರ್ಲಕ್ಷ್ಯ ಮಾತ್ರ ಮುಂದುವರೆದಿದೆ. ಇಂತಹ ದುರ್ಘಟನೆಗಳು ನಡೆದ ಬಳಿಕ ಮಾತ್ರ ತುರ್ತು ಕ್ರಮ ಕೈಗೊಳ್ಳುವ ನಿಯಮವಾಗಿಬಿಟ್ಟಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಅನೇಕ ಅಮೂಲ್ಯ ಜೀವಗಳು ಈ ಅಪಾಯಕಾರಿ…

Read More

ಉಳ್ಳಾಲ : ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಅಭಿಷೇಕ, ಮಹಾ ಪೂಜೆ ಸಾರ್ವಜನಿಕ ಗ್ರಹಣ ಶಾಂತಿ ಹೋಮ ಶಿವ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸಿಯಾಳಾಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನದಾನ ಸೇವೆ ನಡೆಯಿತು.

Read More

ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ .ಕಲ್ಲಡ್ಕ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆಯಂತೆ ರೂ. 486 ಕೋಟಿ ವ್ಯವಹಾರ ನಡೆಸಿ ಆಡಿಟ್ ವರ್ಗೀಕರಣದಲ್ಲಿ “ಎ” ಗ್ರೇಡ್ ಹೊಂದಿ ರೂ.1,55,11,828.70 ಲಾಭಗಳಿಸಿರುತ್ತದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ಸಂಘವು ಘೋಷಿಸಲಾಯಿತು. ಸಂಘವು 2024-2025ನೇ ಆರ್ಥಿಕ ವರ್ಷದಲ್ಲಿ 1495 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 24.11 ಕೋಟಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಸಾಲವನ್ನು ವಿತರಿಸಿದೆ. 164 ಸದಸ್ಯರಿಗೆ 3% ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿಗಾಗಿ ರೂ 4.97 ಕೋಟಿ ಸಾಲ, ವಾಹನ ಖರೀದಿ ಸಾಲ, 8.2ಲಕ್ಷ.34 ಸದಸ್ಯರಿಗೆ, ಪಶುಗಳ ದೈನಂದಿನ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ಸಾಲ, 18 ಸದಸ್ಯರಿಗೆ ರೂ. 1.50 ಕೋಟಿ…

Read More

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ 2024-25ನೇ ಸಾಲಿನ 14ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.21 ರವಿವಾರದಂದು ಪೂರ್ವಾಹ್ನ 10.30ಕ್ಕೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಆಡಳಿತ ಕಛೇರಿ “ಆತ್ಮಶಕ್ತಿ ಸೌಧ” ಸಭಾಂಗಣ, ಬೈರಾಡಿಕೆರೆ ಹತ್ತಿರ, ಪಡೀಲ್, ಮಂಗಳೂರು ಇಲ್ಲಿ ಜರುಗಲಿರುವುದೆಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Read More