Author: UllalaVani

Kannada News From Coastal Karnataka

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯವು, ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಆಶ್ರಯದಲ್ಲಿ, ಯುಜಿ (ಪದವಿ) ಮತ್ತು ಪಿಜಿ (ಸ್ನಾತಕೋತ್ತರ) ವಿದ್ಯಾರ್ಥಿಗಳಿಗಾಗಿ ಸಹಕಾರ ಕುರಿತು ವಿಶ್ವವಿದ್ಯಾಲಯ ಮಟ್ಟದ ಸಹಕಾರ ಕುರಿತು ಚರ್ಚಾ ಸ್ಪರ್ಧೆಯನ್ನು ಆಯೋಜಿಸಿತ್ತು. ಮೂಡುಬಿದಿರೆಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ಼್ ಕೊ-ಅಪರೇಟಿವ್ ಪ್ರಾಧ್ಯಾಪಕಿ ಶ್ರೀಮತಿ ಬಿಂದು ನಾಯರ್ ಅವರು ಮುಖ್ಯ ಅತಿಥಿಗಳಾಗಿದ್ದರು. ತಮ್ಮ ಭಾಷಣದಲ್ಲಿ ಅವರು, ಭಾರತದ ಸಹಕಾರ ಚಳುವಳಿಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಮತ್ತು ದೇಶಾದ್ಯಂತ 8.5 ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿದೆ. ಕೇವಲ ಕರ್ನಾಟಕವೊಂದರಲ್ಲೇ ಪ್ರಾಥಮಿಕ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸುಮಾರು 45,000 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಕೃಷಿ, ಬ್ಯಾಂಕಿಂಗ್, ಹೈನುಗಾರಿಕೆ, ಮೀನುಗಾರಿಕೆ ಮತ್ತು ವಸತಿ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳ ನಿರ್ಣಾಯಕ ಪಾತ್ರ ವಹಿಸುತ್ತಿದೆ.‌ ರಾಷ್ಟ್ರಮಟ್ಟದಲ್ಲಿ ಎನ್‌ಸಿಯುಐ (NCUI) ಮತ್ತು ಎನ್‌ಸಿಸಿಟಿ (NCCT), ಹಾಗೂ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ (ಬೆಂಗಳೂರು) ಸಹಕಾರ ಶಿಕ್ಷಣ ಮತ್ತು ತರಬೇತಿಯನ್ನು…

Read More

ಮಂಗಳೂರು ದಸರಾ ಪ್ರಯುಕ್ತ ದಿನಾಂಕ: 02-10-2025 ರಂದು ಸಂಜೆ 4-00 ಗಂಟೆಯಿಂದ ದಿನಾಂಕ 03-10-2025 ರಂದು ಬೆಳಿಗ್ಗೆ 6-00 ಗಂಟೆಯ ವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಮತ್ತು ಟ್ಯಾಬುಲುಗಳು ಕುದ್ರೋಳಿ ದೇವಸ್ಥಾನದ ದ್ವಾರ – ದುರ್ಗಾಮಹಲ್ ಜಂಕ್ಷನ್ – ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ – ಲಾಲ್‌ಭಾಗ್ – ಬಳ್ಳಾಲ್ ಭಾಗ್ -ಕೊಡಿಯಲ್ ಗುತ್ತು ಜಂಕ್ಷನ್ – ಬಿ.ಜಿ.ಸ್ಕೂಲ್ ಜಂಕ್ಷನ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ್ ವೃತ್ತ – ನವಭಾರತ ವೃತ್ತ – ಬಿಷಪ್ ಹೌಸ್ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಸಾಫ್ರಾನ್ ಹೊಟೇಲ್- ಟೆಂಪಲ್ ಸ್ಕ್ವೆರ್- ಕಾರ್ ಸ್ಟ್ರೀಟ್- ಬಾಲಾಜಿ ಜಂಕ್ಷನ್ – ನ್ಯೂಚಿತ್ರಾ ಜಂಕ್ಷನ್ – ಅಳಕೆ ಬ್ರಿಡ್ಜ್ – ಕುದ್ರೋಳಿ ದ್ವಾರದ ಮೂಲಕ ದೇವಸ್ಥಾನಕ್ಕೆ ಸಂಚರಿಸಲಿರುತ್ತದೆ. ಸದರಿ ದಿವಸ ಮಧ್ಯಾಹ್ನ 2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದಲ್ಲದೇ, ಸಾರ್ವಜನಿಕರಿಗೆ ಸುರಕ್ಷತೆಗಾಗಿ…

Read More

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ 14ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಪ್ರಯುಕ್ತ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣಾ ಶಿಬಿರವು “ಆತ್ಮಶಕ್ತಿ ಸೌಧ” ಬೈರಾಡಿಕೆರೆ ಹತ್ತಿರ, ಪಡೀಲ್ ಮಂಗಳೂರು ಇಲ್ಲಿ ಜರುಗಿತು . ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಜೋಸೆಪ್ ತಿಯೋದರ್ ರವರು ಉದ್ಘಾಟಿಸಿದರು.ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇದರ ವೈದ್ಯರಾದ ಡಾ. ಪ್ರವೀಣ್ ಜೋಡಳ್ಳಿ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರ ಮುಂದಾಳತ್ವದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಜಾಗೃತಿಯನ್ನು ಮೂಡಿಸುತ್ತಾ ಬರುತ್ತಿದೆ. ಶಿಬಿರದಲ್ಲಿ ಲಭ್ಯವಿರುವ ಎಲ್ಲಾ ವೈದ್ಯಕೀಯ ಸೇವೆಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಮಂಗಳೂರು : ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ) ಇದರ ಪ್ರಕಾಶಿತ ಆತ್ಮಶಕ್ತಿ ಪತ್ರಿಕೆಯ ದಸರಾ ವಿಶೇಷಾಂಕವನ್ನು ಮಂಗಳೂರು ದಸರಾ ವೇದಿಕೆ (ಕುದ್ರೋಳಿ) ಯಲ್ಲಿ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ ಯವರು ಬಿಡುಗಡೆ ಗೊಳಿಸಿದರು. ಆತ್ಮಶಕ್ತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿಯವರು “ಆತ್ಮಶಕ್ತಿ ಪತ್ರಿಕೆಯ ಪ್ರಾರಂಭಿಕ ಸಂಚಿಕೆಯನ್ನು ಇಪ್ಪತ್ತು ವರ್ಷಗಳ ಹಿಂದೆ ನಾನೇ ಬಿಡುಗಡೆ ಗೊಳಿಸಿದ್ದೆ. ಪತ್ರಿಕೆ ಚೆನ್ನಾಗಿ ಬೆಳೆದು ಬಾಳಲಿ ” ಎಂದು ಹಸನ್ಮುಖಿಯಾಗಿ ಹರಸಿ ಹಾರೈಸಿದರು.ಈ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜೈ ರಾಜ್ ಸೋಮಸುಂದರಂ, ಟ್ರಸ್ಟಿಯಾದ ಡಾ ಬಿ. ಜಿ ಸುವರ್ಣ, ದೇವೇಂದ್ರ ಪೂಜಾರಿ, ಸಂತೋಷ್ ಜೆ. ಕುಮಾರ್, ದೀಪಕ್ ಜೆ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ ಬಿ. ಜಿ ಸುವರ್ಣ, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ವಾಮನ್ ಕೆ,…

Read More

ಕುತ್ತಾರು : ದಕ್ಷಿಣ ಕನ್ನಡದ ಆಟೋ ರಿಕ್ಷಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಸುಪ್ರೀಮ್ ಬಜಾಜ್, ಇದೀಗ ಕುತ್ತಾರಿನಲ್ಲಿ ತನ್ನ ಹೊಸ ಮಾರಾಟ ಮತ್ತು ಸರ್ವಿಸ್ ಸೆಂಟರ್ ಆರಂಭಿಸುತ್ತಿದೆ.ಈ ಹೊಸ ಕೇಂದ್ರದ ಆರಂಭದಿಂದ ದೇರಳಕಟ್ಟೆ, ಮುಡಿಪು, ಕೊಣಾಜೆ, ಹರೇಕಳ, ಪಾವೂರು, ಬೀರಿ, ಮಡ್ಯಾರು, ತಲಪಾಡಿ, ತೊಕ್ಕೊಟ್ಟು, ಎಲಿಯಾರು ಪದವು, ಮಂಜನಾಡಿ, ಕಲ್ಕಟ್ಟ, ಕೈರಂಗಳ, ಸಜಿಪು ಹಾಗೂ ಸಜಿಪು ನಡು ಭಾಗದ ರಿಕ್ಷಾ ಚಾಲಕರಿಗೆ ಮಹತ್ತರವಾದ ಅನುಕೂಲ ಸಿಗಲಿದೆ. ಹಿಂದಿನಂತೆ ಮಂಗಳೂರಿಗೆ ತೆರಳಿ ದಿನಪೂರ್ತಿ ಸಮಯ ಕಳೆಯಬೇಕಾದ ಅವಶ್ಯಕತೆಯಿಲ್ಲದೆ, ಆಟೋ ಖರೀದಿ ಹಾಗೂ ಸರ್ವಿಸ್ ಸೌಲಭ್ಯ ಈಗ ಸ್ಥಳೀಯ ಮಟ್ಟದಲ್ಲೇ ಲಭ್ಯವಾಗಲಿದೆ. ಇದರಿಂದ ಚಾಲಕರು ತಮ್ಮ ಅಮೂಲ್ಯವಾದ ಸಮಯವನ್ನು ಉಳಿಸಿಕೊಂಡು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ.ಸುಪ್ರೀಮ್ ಬಜಾಜ್ ತನ್ನ ಗುಣಮಟ್ಟದ ವಾಹನಗಳು ಹಾಗೂ ವಿಶ್ವಾಸಾರ್ಹ ಸೇವೆಯಿಂದಲೇ ಈಗಾಗಲೇ ಆಟೋ ರಿಕ್ಷಾ ಜಗತ್ತಿನಲ್ಲಿ ಖ್ಯಾತಿ ಪಡೆದಿದೆ. ಕುತ್ತಾರಿನಲ್ಲಿ ಆರಂಭವಾಗುತ್ತಿರುವ ಈ ಶೋರೂಮ್ ಮೂಲಕ ಸ್ಥಳೀಯ ಚಾಲಕರು  ಹೊಸ ಮಾದರಿಯ ಬಜಾಜ್ ಆಟೋ ರಿಕ್ಷಾ ಮಾದರಿಗಳನ್ನು…

Read More

ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ರಿಚ್ಚಾರ್ಡ್ ಮೊರಸ್ ಖರ್ಚು–ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ IPS ಅವರೊಂದಿಗೆ ಖ್ಯಾತ ಕವಿ–ಲೇಖಕ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಭೆಗೆ ಡೊಲ್ಫಿ ಕಾಸ್ಸಿಯಾ ಪ್ರಾಸ್ತವಿಕ ಭಾಷಣ ಮಾಡಿ ಸ್ವಾಗತ ಮಾಡಿದರು. ಹೆನ್ರಿ ಮಸ್ಕರೇನಸ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಅ್ಯನಿ ಕ್ಯಾಸ್ತಲಿನೊ ನುಡಿಗಟ್ಟುಗಳೊಂದಿಗೆ ಸುಂದರವಾಗಿ ನಿರ್ವಹಿಸಿದರು.

Read More

ಸಪ್ಟೆಂಬರ್ 21ರಂದು ಬೆಂದೂರ್ ಚರ್ಚ್ ಸಭಾಂಗಣದಲ್ಲಿ ಕಾಸ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ನಡೆಯಿತು. ಮಹಾಸಭೆಯ ನಂತರ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ನೆರವೇರಿತು.ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಾನ್ಸಿಯಾ ಅವರ ಕೊಂಕಣಿ ಪರಂಪರೆಯ ನುಡಿನಮನ, ಪ್ರಜ್ವಲ್ ಮತ್ತು ಶವಿಲ್ ಅವರ ‘ಗುಮಟ್’ ವಾದನ, ಮೆಲ್ವಿಟಾ ಹಾಗೂ ತಂಡದಿಂದ ದೆಖ್ಣಿ ನಾಚ್, ರೋಮಿತ್ ಹಾಗೂ ತಂಡದಿಂದ ತೊಣಿಯೊ ನಾಚ್ ನಂತಹ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಫ್ರ್ಯಾಂಕ್ಲಿನ್ ಅವರ ‘ ಮಾಂಡೊ’ ಗಾಯನವು ಉತ್ಸವಕ್ಕೆ ಶಾಸ್ತ್ರೀಯ ಗೋವಾ ಸೊಬಗನ್ನು ನೀಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿಮಾ ಅವರನ್ನು ಗೌರವಿಸಲಾಯಿತು. ಜಾನೆಟ್ ಡಿಸೋಜಾ ನಡೆಸಿ ಕೊಟ್ಟ ಹೌಸಿ…

Read More

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೊರೇಶನ್ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಳಜಿ ವಹಿಸುವ ಉದ್ದೇಶದಿಂದ, ಸೆಪ್ಟೆಂಬರ್ 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು. ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ ಪಾದರಕ್ಷೆಗಳನ್ನು ಹಸ್ತಾಂತರಿಸಿದರು.“ಪೌರ ಕಾರ್ಮಿಕರು ನಮ್ಮ ಸಮಾಜದ ಬೆನ್ನೆಲುಬು. ಅವರ ಶ್ರಮದಿಂದಲೇ ನಗರ ಸ್ವಚ್ಛವಾಗಿರುತ್ತದೆ. ಅವರ ಸುರಕ್ಷತೆಗಾಗಿ ನಾವು ಕೈಗೊಂಡಿರುವ ಈ ಉಪಕ್ರಮ ನಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ” ಎಂದು ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಹೇಳಿದರು. ಮಹಾ ನಗರ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ, ಪೌರ ಕಾರ್ಮಿಕರ ಸುರಕ್ಷತೆಯ ಕಡೆ ಗಮನ ಹರಿಸಿರುವ ರೋಹನ್ ಕಾರ್ಪೊರೇಶನ್ ನ ಸಮಾಜಮುಖಿ…

Read More

ನಾಟೆಕಲ್‌ : ಉತ್ತಮ ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಹೋಲ್ಸೇಲ್ ಮತ್ತು ರೀಟೇಲ್ ದರದಲ್ಲಿ ಒದಗಿಸುತ್ತಿರುವ  ನಾಟೆಕಲ್‌ ಜಂಕ್ಷನ್ನಿನಲ್ಲಿರುವ ನ್ಯೂ ಕರ್ನಾಟಕ ಸ್ಟೀಲ್ಸ್ ಮತ್ತು  ಸಿಮೆಂಟ್ಸ್ ದೇರಳಕಟ್ಟೆ ಸುತ್ತಮುತ್ತಲಿನ ಪ್ರದೇಶಗಳ ವಿಶ್ವಾಸಾರ್ಹ ಕೇಂದ್ರವಾಗಿದೆ. ಎಲ್ಲಾ ರೀತಿಯ ಕಟ್ಟಡ ಹಾಗೂ ಕೈಗಾರಿಕಾ ಅಗತ್ಯಗಳಿಗೆ ಅಗತ್ಯವಾದ ಸಿಆರ್ ರೌಂಡ್ ಪೈಪ್ಸ್, ಜಿಪಿ ಪೈಪ್ಸ್, ಹೆಚ್‌ಆರ್ ಪೈಪ್ಸ್, ಜಿಎಲ್ ರೌಂಡ್ ಪೈಪ್ಸ್, ಸೀಮ್‌ಲೆಸ್ ಪೈಪ್ಸ್, ಬಾಯ್ಲರ್ ಪೈಪ್ಸ್, ಆಂಗಲ್‌ಗಳು, ಬೀಮ್‌ಗಳು, ಸ್ಟೇನ್‌ಲೆಸ್ ಸ್ಟೀಲ್, ಚಾನಲ್‌ಗಳು, ಚೌಕ ರಾಡ್‌ಗಳು ಮತ್ತು ಬ್ರೈಟ್ ಬಾರ್ಸ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ನೀವು ಕಾಂಟ್ರಾಕ್ಟರ್ ಆಗಿರಲಿ, ಬಿಲ್ಡರ್ ಆಗಿರಲಿ ಅಥವಾ ವೈಯಕ್ತಿಕ ಗ್ರಾಹಕರಾಗಿರಲಿ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸ್ಪರ್ಧಾತ್ಮಕ ಬೆಲೆ ನಮ್ಮಲ್ಲಿ ಸದಾ ಖಚಿತ. ಸಂಪರ್ಕಿಸಲು: 9108929355, 9108348025 ಅಥವಾ newkarnatakasteelandcements@gmail.com. ವಿಳಾಸ: ನಾಟೆಕಲ್ ಜಂಕ್ಷನ್ ಹತ್ತಿರ, ದೇರಳಕಟ್ಟೆ– 575018.   ನ್ಯೂ ಕರ್ನಾಟಕ ಸ್ಟೀಲ್ಸ್ & ಸಿಮೆಂಟ್ಸ್ – ಬಲವಾದ ನಾಳೆಗೆ ಬಲವಾದ ಅಡಿಪಾಯ.

Read More

ಕೃಪೆ : ದ ಫೈಲ್ ಬೆಂಗಳೂರು : ನಿರಂತರವಾಗಿ ಹಣಕಾಸಿನ ಕ್ರೋಢೀಕೃತ ನಷ್ಟದಲ್ಲಿ ಮುಳುಗುತ್ತಲೇ ಇರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇದೀಗ ನೌಕರರಲ್ಲಿ ಹಣಕಾಸಿನ ಅಭದ್ರತೆಯನ್ನು ಸೃಷ್ಟಿಸಿದೆ. ಶಕ್ತಿ ಯೋಜನೆಯಿಂದಲೂ ನಿಶ್ಯಕ್ತಿಯಾಗಿರುವ ಬಿಎಂಟಿಸಿ ಇದೀಗ ತೀವ್ರ ಪ್ರಮಾಣದಲ್ಲಿ ನಗದು ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ವಿಶೇಷ ಅನುದಾನವನ್ನು ಒದಗಿಸಬೇಕು ಎಂದು ಬಿಎಂಟಿಸಿಯು ಸರ್ಕಾರದ ಮುಂದೆ ಅಂಗಲಾಚಲು ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ. ಶಕ್ತಿ ಯೋಜನೆಯಿಂದ ಬಿಎಂಟಿಸಿಗೆ ಹಣಕಾಸಿನ ನಷ್ಟವುಂಟಾಗುತ್ತಿದೆ 2024ರ ಜೂನ್ 13ರಂದು ನಡೆದಿದ್ದ ಸಭೆಯಲ್ಲಿಯೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೇ ಅಂಕಿ ಅಂಶಗಳನ್ನು ಮುಂದೊಡ್ಡಿದ್ದರು. ಈ ಸಭೆ ನಡೆದ ಒಂದು ವರ್ಷದ ನಂತರ ಇದೀಗ ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಅಧೋಗತಿಗಿಳಿದಿದೆ. ಬಿಎಂಟಿಸಿಯು ಪ್ರತಿನಿತ್ಯ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಪ್ರಯಾಣಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆಯಾದರೂ ಈ ಸಂಸ್ಥೆಯಲ್ಲಿ ದುಡಿಯುತ್ತಿರುವ 29 ಸಾವಿರ ಸಂಖ್ಯೆಯಲ್ಲಿರುವ ನೌಕರರಿಗೆ ಹಿಂದಿನ ಬಾಕಿಯನ್ನು ಪಾವತಿಸಲು ಏದುಸಿರು ಬಿಡುತ್ತಿದೆ. ಬಿಎಂಟಿಸಿ ನೌಕರರಿಗೆ ಅತ್ಯಗತ್ಯವಾಗಿ ಪಾವತಿಸಬೇಕಿರುವ ಮೊತ್ತವೇ ಅಂದಾಜು 2,000…

Read More