Author: UllalaVani

Kannada News From Coastal Karnataka

ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಕೊಲೆಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ರಿಧಾ ಶಭನಾ (27) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ಮಹಮದ್‌ ಫೈಸಲ್ ಖಾನ್ (27), ಕರಂಬಳ್ಳಿ ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್‌ ಶುಕುರ್ (43) ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

Read More

ಉಳ್ಳಾಲ :  ಉಳ್ಳಾಲದ ಎಲ್ಲಾ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ  ಉಳ್ಳಾಲ ಶಾರದೋತ್ಸವದ ಸಂದರ್ಭ ನಡೆದ ಪೊಲೀಸರ ಕ್ರಮವನ್ನು ಖಂಡಿಸಲಾಯಿತು.ಶಾರದೋತ್ಸವ ವೇಳೆ ಠಾಣೆಯೆದುರು ಪ್ರತಿಭಟಿಸಿದವರ ಮೇಲೆ ಎಫ್ಐಆರ್ ಹಾಕಿರುವುದನ್ನು ವಿರೋಧಿಸಿ, ಕೇಸ್ ಹಿಂದೆ ಪಡೆಯುವಂತೆ ಇದೇ ಸಂದರ್ಭ ಹಿಂದೂ ಸಮಾಜ  ಆಗ್ರಹಿಸಿತು. ಉಳ್ಳಾಲ ಪರಿಸರದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಶ್ರೀ ಸೀತರಾಮ ದೇವಸ್ಥಾನ, ಶ್ರೀ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿ, ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ವಲಚಿಲ್ತಾಯ ದೇವಸ್ಥಾನ, ಶ್ರೀ ರಾಹುಗುಳಿಗ ಬನ, ಶ್ರೀ ಉಳಿಯ ಧರ್ಮರಸರ ಕ್ಷೇತ್ರ, ಶ್ರೀ ಮಲರಾಯ ದೈವಸ್ಥಾನ, ಸ್ವಾಮಿ ಗುಳಿಗಜ್ಜ- ಕೊರಗಜ್ಜ ಕಟ್ಟೆ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಹಾಗೂ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರ, ಅಯ್ಯಪ್ಪ ಮಂದಿರ, ಶ್ರೀ ಶಾರದಾ ನಿಕೇತನ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ, ವಿದ್ಯಾಂಜನೇಯ ವ್ಯಾಯಾಮ ಶಾಲೆ ಸೇರಿದಂತೆ ಎಲ್ಲಾ ಭಜನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಾಗೂ…

Read More

ಉಳ್ಳಾಲ : 78 ವರ್ಷಗಳಿಂದಲೂ ಉಳ್ಳಾಲದ ಸಮಸ್ತ ಹಿಂದುಗಳು ಸೇರಿ ಶೃದ್ದಾ ಭಕ್ತಿಯಿಂದ ಉಳ್ಳಾಲ ಶ್ರೀ ಶಾರದಾ ಉತ್ಸವವನ್ನು ಆಚರಿಸುತ್ತಾ ಇದ್ದೇವೆ. ಈ ಸಲದ ಉತ್ಸವದ ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆಗೆ ಹಾಗೂ ಸಮಸ್ತ ಹಿಂದೂ ಸಮಾಜಕ್ಕೆ ಧಕ್ಕೆಯಾಗುವಂತಹ ಘಟನೆಯು ನಡೆದು ಹೋಗಿರುವುದು ಹಿಂದುಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಎಲ್ಲರಿಗೂ ದುಃಖ ಆಗಿದೆ. ಈ ದುಃಖವನ್ನು ನಾವುಗಳು ನಾವು ನಂಬಿದ ದೈವ ದೇವರುಗಳ ಎದುರು ಪ್ರಾರ್ಥಿಸಿ ಈ ಘಟನೆಯ ಬಗ್ಗೆ ದೈವದೇವರುಗಳೇ ತೀರ್ಮಾನವನ್ನು ಕೊಡಲಿ ಎಂದು ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ದೈವಸ್ಥಾನ ದೇವಸ್ಥಾನಗಳಲ್ಲಿ ಅ.5 ಸಂಜೆ 6 ಗಂಟೆಗೆ ಸರಿಯಾಗಿ ಸಾಮೂಹಿಕ ಪ್ರಾರ್ಥನೆಗೆ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಶ್ರೀ ಶಾರದಾ ನಿಕೇತನ ಉಳ್ಳಾಲ ಕರೆ ನೀಡಿದೆ.ಪ್ರತೀ ಹಿಂದೂ ಭಾಂಧವರು ಈ ಸಮಯದಲ್ಲಿ ಹತ್ತಿರದ ದೇವಸ್ಥಾನ, ದೈವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಮಾಡಬೇಕಾಗಿದೆ. ಆಯಾಯ ದೇವಸ್ಥಾನಗಳ ಜವಾಬ್ದಾರಿಯನ್ನು ಈ ಕೆಳಗಿನವರಿಗೆ ನೀಡಲಾಗಿದೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿ. ಶ್ರೀ ವ್ಯಾಘ್ರ…

Read More

ಕಾರ್ಕಳ : ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದ್ದ ಹದಿಹರೆಯದ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿಸಿದ ಯುವಕನ ಜೊತೆ ಹೋಗುತ್ತೇನೆ ಎಂದ ಕಾರಣಕ್ಕೆ ತಾಯಿಯೇ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನುವುದು ಬಯಲಾಗಿದೆ. ಕಾರ್ಕಳದ ಹಿರ್ಗಾನ ಗ್ರಾಮದ ನಿವಾಸಿಗಳಾದ ಶೇಖ್ ಮುಸ್ತಫಾ ಮತ್ತು ಗುಲ್ಮಾರ್ ಬಾನು ಅವರ ಪುತ್ರಿ ಶಿಫನಾಜ್(17) ಮೃತ ಯುವತಿ. ಈಕೆಯನ್ನು ಕೊಲೆ ಮಾಡಿದ ತಾಯಿ ಗುಲ್ಮಾರ್ ಬಾನುಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ ಶಿಫನಾಜ್ ತಾನು ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಕೆರಳಿದ ಗುಲ್ಮಾರ್ ಬಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಗಲಾಟೆ ಜೋರಾಗಿ ಮಗಳ ಬಾಯಿಗೆ ಬಟ್ಟೆ ತುರುಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ. ಶಿಫನಾಜ್ ಸಾವನ್ನು ಈ ಮೊದಲು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರಿಗೆ ಅನುಮಾನ ವ್ಯಕ್ತವಾದ ಕಾರಣ ಕಾರ್ಕಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ…

Read More

ಕಾಸರಗೋಡು : ಕಾಸರಗೋಡು ಸಿಪಿಸಿಆರ್‌ಐ ಯಲ್ಲಿ ಎರಡು ವರ್ಷದ ತೆಂಗಿನ ಸಸಿಗಳು ರಿಯಾಯತಿ ದರದಲ್ಲಿ ಲಭ್ಯವಿದೆ. ಈ ಬಗ್ಗೆ ಸಂಸ್ಥೆಯ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎರಡು ವರ್ಷಕ್ಕಿಂತ ಮೇಲ್ಪಟ್ಟ ತೆಂಗಿನ ಸಸಿಗಳನ್ನು, ಈಗಿರುವ ತೆಂಗಿನ ಸಸಿಗಳ ಅರ್ಧದಷ್ಟು ದರಕ್ಕೆ ಮಾರಾಟ ಮಾಡಲು ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ. ಹೀಗಾಗಿ ನಿರ್ಧರಿಸಲಾದ ರಿಯಾಯಿತಿ ದರವು ದಾಸ್ತಾನಿನಲ್ಲಿರುವ ಎರಡು ವರ್ಷಗಳ ಹಳೆಯ ತೆಂಗಿನ ಸಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಆದೇಶಗಳು ತಕ್ಷಣದಿಂದ ಜಾರಿಗೆ ಬರುತ್ತವೆ ಮತ್ತು ದಾಸ್ತಾನು ಖಾಲಿಯಾಗುವವರೆಗೆ ಮುಂದುವರಿಯುತ್ತವೆ. ಅಗತ್ಯವಿರುವ ರೈತರು ಈ ಪ್ರಯೋಜನವನ್ನು ಪಡೆಯಲು ತಕ್ಷಣ ಸಿಪಿಸಿಆರ್‌ಐ ಕಾಸರಗೋಡು ವಿಭಾಗವನ್ನು ಸಂಪರ್ಕಿಸಲು ಕೋರಲಾಗಿದೆ.

Read More

ಮಂಗಳೂರು : ದಸರಾ ಮುಗಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿಯಂತೆ ಕೆಂಪುಕಲ್ಲು ತೆಗೆಯಲು ಅವಕಾಶ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪುಕಲ್ಲಿಗೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ನಿರ್ದೇಶನಗಳನ್ನು ನೀಡಲಿದ್ದಾರೆ. ಬಳಿಕ ಕೆಂಪುಕಲ್ಲು ಜನರಿಗೆ ಸಿಗಲಿದೆ. ನಾನ್ ಸಿಆರ್‌ಝಡ್ ಮರಳು ಪಡೆಯಲು ಟೆಂಡ‌ರ್ ಮೂಲಕ ತೆಗೆಯಲು ಅವಕಾಶ ಮಾಡಿಕೊಡಲಾಗಿದೆ. ಸಿಆರ್‌ಝಡ್ ಮರಳು ವಿಚಾರ ಕೇಂದ್ರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದುಸ್ಪಷ್ಟಪಡಿಸಿದ್ದಾರೆ.

Read More

ಬೆಂಗಳೂರು : ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಂತರ, ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೊನೆಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಜೋಡಿಯ ನಿಶ್ಚಿತಾರ್ಥದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದಂತೆ, ವಿಜಯ್ ತಂಡ ಶನಿವಾರ ಅವರ ನಿಶ್ಚಿತಾರ್ಥದ ಸುದ್ದಿಯನ್ನು ದೃಢಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ನಿಶ್ಚಿತಾರ್ಥದ ಬಗ್ಗೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಅವರ ತಂಡವು ಫೆಬ್ರವರಿ 2026 ರಲ್ಲಿ ಈ ಜೋಡಿ ವಿವಾಹವಾಗಲಿದ್ದಾರೆ ಎಂದು ದೃಢಪಡಿಸಿದೆ. ರಶ್ಮಿಕಾ ಅಥವಾ ವಿಜಯ್ ಇಬ್ಬರೂ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ ಅಥವಾ ಅವರ ನಿಶ್ಚಿತಾರ್ಥದ ಬಗ್ಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ. ರಶ್ಮಿಕಾ ಮತ್ತು ವಿಜಯ್ 2018 ರ ಹಿಟ್ ಚಿತ್ರ ಗೀತಾ ಗೋವಿಂದಂ ಮತ್ತು 2019 ರ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದಾಗಿನಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.…

Read More

ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಯವರ ಮನವಿಯ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು ಹಾಗೂ ಪೊಳಲಿಯ ನಡುವೆ ನರ್ಮ್ ಬಸ್ ಓಡಾಟ ಆರಂಭಗೊಂಡಿದ್ದು, ಇದರ ಉದ್ಘಾಟನೆ ಮಂಗಳೂರು ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ಗುರುವಾರ ನೆರವೇರಿತು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಶಾಸಕ ಭರತ್ ಶೆಟ್ಟಿಯವರನ್ನು ಶ್ಲಾಘಿಸಿದ ಘಟನೆಯೂ ನಡೆಯಿತು.‌ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಉದ್ಘಾಟಿಸಿ, ಗ್ರಾಮೀಣ ಭಾಗ ವಾಮಂಜೂರು ಬೋಂಡಂತಿಲ ಪೂಳಲಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯ ಒದಗಿಸಿಕೊಡುವಂತೆ ಸಾರ್ವಜನಿಕರು ಮನವಿಯನ್ನು ಅರ್ಪಿಸಿದ್ದರು. ಈ ಬಗ್ಗೆ ಸರಕಾರದ ಗಮನ ಸೆಳೆದು ಪತ್ರವನ್ನ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿ ಬಸ್ ಓಡಾಟ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು. ಹಾಗೆಯೇ ಗ್ರಾಮೀಣ ಭಾಗದ ರಸ್ತೆ ಅಗಲ ಕಿರಿದಾದ ತಿರುವುಗಳನ್ನು ಹೊಂದಿರುವ ಕಾರಣ ಸಣ್ಣ ಬಸ್ಸುಗಳು…

Read More

ಮಂಗಳೂರು : ಪುತ್ತೂರಿನ ಹೆಣ್ಣುಮಗಳ ಪ್ರಕರಣದಲ್ಲಿ ಯಾಕೆ ಯಾರೂ ತುಟಿ ಬಿಚ್ಚುತ್ತಿಲ್ಲ? ಹೆಣ್ಣಿನ ವಿಚಾರದಲ್ಲಿ ತುಟಿ ಬಿಚ್ಚದ ಎಲ್ಲ ಪಕ್ಷದ ರಾಜಕಾರಣಿಗಳೂ ನೀಚರೇ…! ಆರೋಪಿ ಶ್ರೀಕೃಷ್ಣ ರಾವ್ ಮದುವೆ ಆಗುವುದಿಲ್ಲ ಅಂತ ಹೇಳಿದ್ರೆ ಅವನನ್ನು ಸುಮ್ಮನೆ ಬಿಡಲ್ಲ. ಅವನ ಮನೆಯಲ್ಲೇ ಮದುವೆ ಆಗುವತನಕ ಪ್ರತಿಭಟನೆ ಮಾಡ್ತವೆ. ನೀವಿದನ್ನು ಬೆದರಿಕೆ ಅಂತ ಬೇಕಾದ್ರೂ ತಿಳಿಯಿರಿ… ಕೇಸ್ ಹಾಕಿದ್ರೂ ಕೇರ್ ಮಾಡಲ್ಲ” ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ. ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸಿ ವಂಚಿಸಿದ ಪ್ರಕರಣದ ಡಿಎನ್‌ಎ ವರದಿ ಬಂದಿದ್ದು, ಯುವತಿ ಆಪಾದಿಸಿದ ಯುವಕನ ಡಿಎನ್ಎ ಸಾಬೀತಾಗಿದೆ. ಆರೋಪಿ ಯುವಕ ಕೃಷ್ಣ ಜೆ ರಾವ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದು, ಯುವಕನ ಹೆತ್ತವರು ಮಗನಿಗೆ ಯುವತಿಯ ಜತೆ ಮದುವೆ ಮಾಡುವ ಮನಸು ಮಾಡಬೇಕು ಎಂದು ರಾಜ್ಯ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಕೆಪಿ ನಂಜುಂಡಿ ಮಾಹಿತಿ ಬಹಿರಂಗಪಡಿಸಿದ್ದರು. ಇದಕ್ಕಿಂತ ಮುಂಚೆ ಸಂತ್ರಸ್ಥ ಯುವತಿಗೆ ನ್ಯಾಯ ಒದಗಿಸುವುದಾಗಿ ಟೊಂಕ ಕಟ್ಟಿಕೊಂಡು ನಿಂತಿದ್ದ…

Read More

ಚಿಕ್ಕಮಗಳೂರು : ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಆತಂಕವೂ ಎದುರಾಗಿದೆ. ಇದರ ನಡುವೆ ಮೆಡಿಕಲ್ ಕೋರ್ಸ್ ಓದಲು ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕ್ಕಮಗಳೂರು ನಗರದ ಸತ್ಯಪಾಲ್ ಅವರ ಮಗಳು ಐಶ್ವರ್ಯ ಮೆಡಿಕಲ್ ಕೋರ್ಸ್ ಓದಲು ಫಿಲಿಪಿನ್ಸ್‌ಗೆ ತೆರಳಿದ್ದರು. ಇದೀಗ ಸಿಬುನಗರದಲ್ಲಿ ಅವರು ಸಿಲುಕಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅವರು ಐದು ವರ್ಷದ ಕೋರ್ಸ್ ಮುಗಿಸಿದ್ದರು. ಇನ್ನೇನೂ ಕೆಲವೇ ದಿನಗಳಲ್ಲಿ ಊರಿಗೆ ವಾಪಸ್ ಆಗುವವರಿದ್ದರು ಎಂದು ತಿಳಿದುಬಂದಿದೆ. ಮಗಳನ್ನ ವಾಪಸ್ ಕರೆಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೋಷಕರು ಮನವಿ ಮಾಡಿದ್ದಾರೆ. ಇನ್ನೂ ಹಲವು ಭಾರತೀಯ ವಿದ್ಯಾರ್ಥಿಗಳು ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟ, ತಿಂಡಿ, ನೀರು ಯಾವುದೂ ಸಿಗದೇ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಐಶ್ಚರ್ಯ ಮೆಡಿಕಲ್ ಓದುತ್ತಿರುವ ಕಾಲೇಜಿನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯದ ಸುಮಾರು 50-60 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ತಿಳಿದುಬಂದಿದೆ.

Read More