ಮಂಗಳೂರು: ಶಾರದಾ ಅಕಾಡ್‌ಎಕ್ಸ್ಪೋ 2025ರ ಸ್ಪರ್ಧೆಯಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನÀದ ಹೈಸ್ಕೂಲ್ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಗಳಿಸಿಕೊಂಡಿದ್ದಾರೆ.


ನ.15ರಂದು ಕೋಡಿಯಾಲ್‌ಬೈಲ್‌ನಲ್ಲಿರುವ ಭುವನರಾಜ ಸಭಾಂಗಣದಲ್ಲಿ ಶಾರದಾ ಪಿಯು ಕಾಲೇಜು ಆಯೋಜಿಸಿದ್ದ
ಹೈಸ್ಕೂಲ್ ವಿದ್ಯಾರ್ಥಿಗಳ ಅಂತರ್ ಶಾಲಾ ಸ್ಪರ್ಧೆಯಾದ ಶಾರದಾ ಅಕಾಡ್‌ಎಕ್ಸ್ಪೋ 2025ರಲ್ಲಿ ಒಟ್ಟು ಚಾಂಪಿಯನ್‌ಶಿಪ್‌ನ್ನು ಪಡೆದುಕೊಳ್ಳುವ ಮೂಲಕ ಶಾರದಾ ವಿದ್ಯಾನಿಕೇತನ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.
ಶಾರದಾ ಅಕಾಡ್‌ಎಕ್ಸ್ಪೋ -2025ರ ಫಲಿತಾಂಶಗಳು ಹೀಗಿವೆ.
ಡಂಬ್ ಶೆರೇಡ್ಸ್ ಸ್ಪರ್ಧೆಯಲ್ಲಿ ಸೋಹನ್ ರಾಜ್, ಆರ್ಯನ್, ಧರ್ಮಿಕ್- ಪ್ರಥಮ ಸ್ಥಾನ
ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ವಿಶ್ರುತ್, ಅಕ್ಷಜ್ -ಪ್ರಥಮ ಸ್ಥಾನ
ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ರಿತೇಶ್, ಜೈವಲ್- ದ್ವಿತೀಯ ಸ್ಥಾನ
ಸೈನ್ಸ್ ಮಾದರಿ ಸ್ಪರ್ಧೆಯಲ್ಲಿ ದೈವಿಕ್ ಮತ್ತು ಮಹಿತ್- ಪ್ರಥಮ ಸ್ಥಾನ
ಕ್ವಿಜ್ ಇಂಟೆಲಿಜೆನ್ಸಿಯಾ ಸ್ಪರ್ಧೆಯಲ್ಲಿ ಶ್ರೀಶರಣ್ ಮತ್ತು ಪ್ರಯಾಗ್ -ದ್ವಿತೀಯ ಸ್ಥಾನ
ಗುಂಪು ಗಾನ ಸ್ಪರ್ಧೆಯಲ್ಲಿ ಅಶ್ಲೇಶ್, ಪ್ರಯಾಗ್, ಶ್ರಾವ್ಯ, ಶ್ರೀಧಾ, ಶಾರಣ್ಯ, ಸ್ನೇಹಾ ಭಟ್, ಪಾವನಿ, ನಿವೇದ್ಯ- -ದ್ವಿತೀಯ ಸ್ಥಾನ
ರೀಲ್ ಮೇಕಿಂಗ್ ಸ್ಪರ್ಧೆಯಲ್ಲಿ ಮಣ್ವಿತ್, ಯತಿರಾಜ್ -ದ್ವಿತೀಯ ಸ್ಥಾನ
ಪೆನ್ಸಿಲ್ ಸ್ಕೆಚ್ ಸ್ಪರ್ಧೆಯಲ್ಲಿ ಪ್ರಣಂ-ತೃತೀಯ ಸ್ಥಾನ
ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಯಾಗ್- ತೃತೀಯ ಸ್ಥಾನ
ಪ್ರಬಂಧ ಬರಹ ಸ್ಪರ್ಧೆಯಲ್ಲಿ ನಿವೇದ್ಯ -ತೃತೀಯ ಸ್ಥಾನ
ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಅಧ್ಯಕ್ಷರು ಹಾಗೂ ವ್ಯವಸ್ಥಾಪನ ಮಂಡಳಿ ಅಭಿನಂದನೆ ಸಲ್ಲಿಸಿದೆ.




