ಬಂಟ್ವಾಳ: ಎಂಟು ವರ್ಷಗಳ ಪ್ರೀತಿಯನ್ನು ತಿರಸ್ಕರಿಸಿದಳೆಂದು ನೊಂದ ಯುವಕ ಯುವತಿಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿ ಸಂಭವಿಸಿದೆ.ಕೊಡ್ಮಾಣ್ ನಿವಾಸಿ ಸುಧೀರ್(30) ತನ್ನ ಪ್ರೇಯಸಿ ಫರಂಗಿ ಪೇಟೆಯ ದಿವ್ಯಾ ಯಾನೆ ದೀಕ್ಷಿತಾ(26)ಳನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಆಕೆ ಅವನ್ನು ದೂರ ಮಾಡುತ್ತಿದ್ದುದಕ್ಕೆ ಈ ಕೃತ್ಯ ಎಸಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದರೂ ಸಹ ಆರೋಪಿ ಸುಧೀರ್ ಆಕೆಗೆ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದ. ಇದು ವಿಪರೀತಕ್ಕೇರಿ ಇಂದು ಬೆಳಿಗ್ಗೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು ಸುಧೀರ್ ದಿವ್ಯಾಳೊಂದಿಗೆ ನನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಆಗ ದಿವ್ಯಾ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಹೀಗೆ ಮಾತಿಗೆ ಮಾತು ಬೆಳೆದು, ಆರೋಪಿ ಸುಧೀರ್ ತಾನು ಮೊದಲೇ ತಂದಿದ್ದ ಚಾಕುವಿನಿಂದ ದಿವ್ಯಾಳನ್ನು ಸಾಯಿಸಲು ಚುಚ್ಚಿದ್ದಾನೆ. ಆದೆರೆ ಆಕೆ ತಪ್ಪಿಸಿಕೊಂಡು ಮೂರ್ಛೆ ತಪ್ಪಿ…
Author: UllalaVani
ಪುತ್ತೂರಿನ ಬಿಜೆಪಿ ಮುಖಂಡ, ವಾಸ್ತು ತಜ್ಞ ಹಾಗೂ ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರ ಕೃತ್ಯವು ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಮದುವೆಯಾಗುವ ಭರವಸೆ ನೀಡಿ, ವಂಚಿಸಿ, ಅತ್ಯಾಚಾರವೆಸಗಿ, ಆಕೆಯನ್ನು ಬಸುರಿಯಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡಿರುವ ಆರೋಪದಡಿ ಕೃಷ್ಣ ಜೆ. ರಾವ್ ಕಂಬಿಗಳ ಹಿಂದೆ ಇದ್ದಾನೆ. ಆದರೆ ಮಗುವಿನ ಜನನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರೇ ಇಲ್ಲದೇ ಅನಾಥ ಎಂಬಂತೆ ಬಿಂಬಿಸಿದೆ. ಘಟನೆಯು ಕೇವಲ ಒಂದು ಕಾನೂನು ಪ್ರಕರಣವಾಗಿ ಮಾತ್ರ ಉಳಿಯದೆ, ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಮತ್ತು ಸಾಮಾಜಿಕ ನ್ಯಾಯದ ಕೊರತೆಯನ್ನು ಪ್ರಶ್ನಿಸುವಂತಹ ಗಂಭೀರ ವಿಷಯವಾಗಿ ಎದ್ದು ಕಾಣುತ್ತಿದೆ.ಕೃಷ್ಣ ಜೆ. ರಾವ್ ಅವರ ತಂದೆ ಜಗನ್ನಿವಾಸ ರಾವ್ ಒಬ್ಬ ಧಾರ್ಮಿಕ ವಾಸ್ತು ತಜ್ಞ, ಸಾಮಾಜಿಕ ಕಾರ್ಯಕರ್ತ, ಮತ್ತು ರಾಜಕೀಯ ಮುಖಂಡ. ತಾಯಿಯು ಶಿಕ್ಷಕಿಯಾಗಿದ್ದಾರೆ. ಇದು ಕೇವಲ ವೈಯಕ್ತಿಕ ವಿಫಲತೆಯಲ್ಲ, ಬದಲಿಗೆ ಸಮಾಜದಲ್ಲಿ ನಾವು ಜಪಿಸುವ ಸಂಸ್ಕೃತಿ ಮತ್ತು ಸಂಸ್ಕಾರದ…
ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ನಡುಪದವು ನಿವಾಸಿ ವಿನಯ ಎಂಬವರಿಗೆ ಶೌಚಾಲಯ ನಿರ್ಮಾಣಕ್ಕಾಗಿ ಮೈಸೂರು ಇಲೆಕ್ಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ 20 ಸಾವಿರ ನೆರವು ನೀಡಿ ಸಹಕರಿಸಿದ್ದಾರೆ. ಈ ಸಂದರ್ಭ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಯೋಗ ಶಿಕ್ಷಕಿ ಶಮಾ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಹರೇಕಳ: ತುಂಬೆ ಸಮೀಪ ಸ್ವಿಫ್ಟ್ ಕಾರು ಡಿವೈಡರಿಗೆ ಬಡಿದು ಹರೇಕಳ ದೆಬ್ಬೇಲಿ ನಿವಾಸಿ ರಝಾಕ್ ಎಂಬವರ ಪುತ್ರ ನೌಫಾಲ್ (32) ಸಾವನ್ನಪ್ಪಿದ್ದು, ಮೃತ ನೌಫಾಲ್ ಹರೇಕಳ ಶ್ರೀರಾಮಕೃಷ್ಣ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಉತ್ತಮ ವಾಲಿಬಾಲ್ ಆಟಗಾರನೂ ಆಗಿದ್ದರು.ಸಿವಿಲ್ ಇಂಜಿನಿಯರ್ ಪದವೀಧರನಾಗಿದ್ದ ಹರೇಕಳ ದೆಬ್ಬೇಲಿ ನಿವಾಸಿ ನೌಫಾಲ್ ಊರಿನಲ್ಲಿ ಸಿವಿಲ್ ಇಂಜಿನಿಯರ್ ವೃತ್ತಿಯನ್ನೇ ನಿರ್ವಹಿಸಿಕೊಂಡು ಬಂದಿದ್ದರು. ಸ್ವಿಫ್ಟ್ ಕಾರನ್ನು ಮಾರಾಟಕ್ಕಾಗಿ ಲೋನ್ ಕ್ಲಿಯರೆನ್ಸ್ ನಡೆಸಿಕೊಂಡು ಬಿ.ಸಿ.ರೋಡಿನಿಂದ ಹರೇಕಳದ ತನ್ನ ಮನೆಗೆ ವಾಪಸ್ಸಾಗುವ ಸಂದರ್ಭ ಕಾರು ಡಿವೈಡರ್ ಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ನೌಫಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೇಕಳ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದ ನೌಫಾಲ್, ಉತ್ತಮ ವಾಲಿಬಾಲ್ ಆಟಗಾರನಾಗಿದ್ದು, ರಾಜ್ಯಮಟ್ಟದ ತಂಡವನ್ನು ಪ್ರತಿನಿಧಿಸಿದ್ದರು. ಮೃತರ ಅಂತ್ಯಕ್ರಿಯೆ ರಾಥ್ರಿ 10ರ ಸಮಯ ಆಲಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ ಜರಗಲಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ. ಮೃತರಿಗೆ ವಿಧಾನಸಭಾ ಸ್ಪೀಕರ್, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಮಲಾರ್,…
ಮಂಗಳೂರು : 2025–26ನೇ ಶೈಕ್ಷಣಿಕ ವರ್ಷದಿಂದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇತರ ಮಾಧ್ಯಮಗಳ ಜೊತೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಹೊಸದಾಗಿ ಪರಿಚಯಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ, ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯ 115 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. 2019 ರಿಂದ 2024 ರವರೆಗೆ, ಜಿಲ್ಲೆಯಲ್ಲಿ ಒಟ್ಟು 120 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣವನ್ನು ಸರ್ಕಾರ ಅನುಮೋದಿಸಿತ್ತು. ಇತ್ತೀಚೆಗೆ, ಇನ್ನೂ ಮೂರು ಶಾಲೆಗಳನ್ನು ಸೇರಿಸಲಾಗಿದ್ದು, ದ್ವಿಭಾಷಾ ಮಾಧ್ಯಮ ಬೋಧನೆಯನ್ನು ನೀಡುವ ಒಟ್ಟು ಶಾಲೆಗಳ ಸಂಖ್ಯೆ 123 ಕ್ಕೆ ತಲುಪಿದೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಿಗೆ ಪ್ರತ್ಯೇಕ ತರಗತಿಗಳು ಇರುತ್ತವೆ. ಶಿಕ್ಷಕರು ವಿದ್ಯಾರ್ಥಿಗಳು ಆಯ್ಕೆ ಮಾಡಿದ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುತ್ತಾರೆ. ಜಿಲ್ಲೆಯಲ್ಲಿ, 2019–20ರಲ್ಲಿ 48 ಶಾಲೆಗಳು, 2020–21ರಲ್ಲಿ 34 ಮತ್ತು 2024–25ರಲ್ಲಿ 38 ಶಾಲೆಗಳನ್ನು ದ್ವಿಭಾಷಾ ಮಾಧ್ಯಮಕ್ಕೆ ಅನುಮೋದಿಸಲಾಗಿದೆ. ಹೊಸದಾಗಿ ನೀಡಲಾದ ಅನುಮೋದನೆಯೊಂದಿಗೆ, ಹೆಚ್ಚುವರಿಯಾಗಿ 115 ಶಾಲೆಗಳನ್ನು ಸೇರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 892…
ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಾದ್ಯಂತ ಶುಕ್ರವಾರವೂ ಭಾರಿ ಮಳೆ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಬೆಳಿಗ್ಗೆ ಭಾರೀ ಮಳೆಯಾಗಿ ಕೃತಕ ಪ್ರವಾಹ ಉಂಟಾಗಿದ್ದು, ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಸಂಜೆ ಮತ್ತೆ ಮಳೆಯಾಯಿತು. ಮಂಗಳೂರು ನಗರದಲ್ಲಿ ದಿನವಿಡೀ ನಿರಂತರ ಆದರೆ ಗಣನೀಯ ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಉಳ್ಳಾಲ, ಸುರತ್ಕಲ್, ವಿಟ್ಲ, ಕನ್ಯಾನ, ಬೆಳ್ತಂಗಡಿ, ಮಡಂತ್ಯಾರ್ ಮತ್ತು ಧರ್ಮಸ್ಥಳದಂತಹ ಪ್ರದೇಶಗಳಲ್ಲಿ ಮಳೆಯಾಗಿದೆ. ಜುಲೈ 4 ರಂದು ಬೆಳಿಗ್ಗೆ 8:30 ರವರೆಗೆ ದಾಖಲಾದ ಮಾಹಿತಿಯ ಪ್ರಕಾರ, ಬಂಟ್ವಾಳ ತಾಲೂಕಿನಲ್ಲಿ 68.2 ಮಿ.ಮೀ, ಬೆಳ್ತಂಗಡಿ 62.6 ಮಿ.ಮೀ, ಮಂಗಳೂರು 49 ಮಿ.ಮೀ, ಪುತ್ತೂರು 49 ಮಿ.ಮೀ, ಸುಳ್ಯ 61 ಮಿ.ಮೀ, ಮೂಡಬಿದ್ರಿ 36 ಮಿ.ಮೀ, ಕಡಬ 48.4 ಮಿ.ಮೀ, ಮೂಲ್ಕಿ 26.6 ಮಿ.ಮೀ, ಮತ್ತು ಉಳ್ಳಾಲ 40.3 ಮಿ.ಮೀ – ದಕ್ಷಿಣ ಕನ್ನಡದಾದ್ಯಂತ ಸರಾಸರಿ 56 ಮಿ.ಮೀ…
ಉಡುಪಿ : ಕುಂಜಾಲುವಿನಲ್ಲಿ ಇತ್ತೀಚೆಗೆ ವರದಿಯಾದ ಗೋಹತ್ಯೆ ಘಟನೆಗೆ ಸಂಬಂಧಿಸಿದಂತೆ ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್‌ವೆಲ್ ವಿರುದ್ಧ ಉಡುಪಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಆರೋಪಿ ಶರಣ್ ಪಂಪ್‌ವೆಲ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಅಶಾಂತಿ ಉಂಟುಮಾಡುವ ಸುಳ್ಳು ಮಾಹಿತಿಯನ್ನು ಅವರು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಹೇಳಿಕೆಗಳು ಧಾರ್ಮಿಕ ಸಮುದಾಯಗಳ ನಡುವೆ ಅಶಾಂತಿಯನ್ನು ಉಂಟುಮಾಡುವ ಗುರಿಯನ್ನು ಹೊಂದಿವೆ ಎಂದು ವರದಿಯಾಗಿದೆ. ತನಿಖೆ ನಡೆಯುತ್ತಿರುವ ಸೂಕ್ಷ್ಮ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳು ಬೇಜವಾಬ್ದಾರಿಯುತ ಮಾತ್ರವಲ್ಲ, ಅಪಾಯಕಾರಿಯೂ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಏಕೆಂದರೆ ಅವು ವಿವಿಧ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಪೊಲೀಸರು ಪ್ರಸ್ತುತ ಈ ವಿಷಯವನ್ನು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಈ…
ಶ್ರೀ ಕೃಷ್ಣ ಭಜನಾ ಮಂದಿರ (ರಿ) ಸುದರ್ಶನ ನಗರ ಪಜೀರು ಇದರ 2025- 2026ರ ಸಾಲಿಗೆ ನೂತನ ಅಧ್ಯಕ್ಷರಾಗಿ ನಾಲ್ಕನೇ ಅವಧಿಗೆ ವಿಜೇತ್ ಪಜೀರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಾನಂದ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಶಿವ ಪ್ರಸಾದ್ ಚೌಟ, ಜತೆ ಕಾರ್ಯದರ್ಶಿಯಾಗಿ ಮಿಥುನ್ ಪಜೀರು, ಕೋಶಾಧಿಕಾರಿಯಾಗಿ ಯಶೋಧರ ಜೆ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ಮಲ್ ಭಟ್ ವೈ., ಲೆಕ್ಕ ಪರಿಶೋಧಕರಾಗಿ ತಾರನಾಥ ವರ್ಮ, ಗೌರವ ಸಲಹೆಗಾರರಾಗಿ ಲಕ್ಷ್ಮಣ್ ಸಾಲ್ಯಾನ್, ಸೀತಾರಾಮ ಶೆಟ್ಟಿ, ಸೇಸಪ್ಪ ಪೂಜಾರಿ, ಆಂಡಿ, ಜಯರಾಮ ಶೆಟ್ಟಿ, ಸುಂದರ ಸಪಲ್ಯ, ತುಕ್ಕೋಜಿ ರಾವ್, ಭಜನ ಸಂಚಾಲಕರಾಗಿ ವಸಂತ್ ಜಿ., ಪಿ.ಕೆ.ರಾಮ, ಗಂಗಾಧರ ಪೂಜಾರಿ,. ಸಂಘಟನ ಕಾರ್ಯದರ್ಶಿಗಳಾಗಿ ಪುಷ್ಪ ರಾಜ್, ಮನೋಜ್, ಸತೀಶ್, ರವಿ ಭಂಡಾರಿ, ಭವಾನಿ ಶಂಕರ್, ಅನೂಪ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಉಳ್ಳಾಲ: ಜು. 2 ರಂದು ರಾತ್ರಿ ಮಲಗುವ ಕೊಠಡಿ ಯಿಂದ ನಾಪತ್ತೆಯಾದ ಬೀರಿ ನಿವಾಸಿ ಯುವಕನ ಮೃತ ದೇಹ ಉಚ್ಚಿಲ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ. ಕೋಟೆಕಾರು ಬೀರಿ ನಿವಾಸಿ ಮೋಹದಾಸ್ ಅಮೀನ್ ಎಂಬವರ ಪುತ್ರ ತೇಜಸ್(25) ಜು.2ರಂದು ರಾತ್ರಿ ಮಲಗುವ ಕೋಣೆಯಿಂದ ನಾಪತ್ತೆಯಾಗಿದ್ದನು.ಈ ಕುರಿತು ತಂದೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಿಗ್ಗೆ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ಯುವಕ ಮಣಿಪಾಲ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮಂಗಳೂರು : ಮೆಟ್ರಿಕ್ ನಂತರದ ಹಾಗೂ ಮೆರಿಟ್ -ಕಂ-ಮೀನ್ಸ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ(SSP)ದಲ್ಲಿ ಶುಲ್ಕ ಮರು ಪಾವತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಯಾಗಿರಬೇಕು. ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿಗಳಿಗೆ 2.50 ಲಕ್ಷ ಒಳಗಿರಬೇಕು. SSP 5 https://ssp.postma- tric.karnataka.gov.in ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‌ಸೈಟ್ https://dom. karnataka.gov.in SSP https:// ssp.postmatric.karnataka.gov.in : 8277799990 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

