Author: UllalaVani

Kannada News From Coastal Karnataka

ಉಳ್ಳಾಲ : ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರ ತಂಡ ಮೂರು ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ. ಬಂಧಿತರನ್ನು ಲಾರಿ ಚಾಲಕ ಇಕ್ಬಾಲ್ ಮೋಂಟೆಪದವು ,ಮಾಲಕ ಶಫೀಕ್ , ಚಾಲಕರಾದ ಅಮ್ಮೆಂಬಳ ನಿವಾಸಿ ಝೈನುದ್ದೀನ್ , (42), ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಕೆಂಪು ಕಲ್ಲು ಸಾಗಾಟದ ಒಂದು ಲಾರಿಯನ್ನು ಉಳ್ಳಾಲ ಪೊಲೀಸರು ತಲಪಾಡಿ ಯಲ್ಲಿ ಹಾಗೂ ಎರಡು ಲಾರಿಗಳನ್ನು ತೌಡುಗೋಳಿ ಬಳಿ ಕೊಣಾಜೆ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ . ಮಂಜನಾಡಿ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ ಮೊಹಮ್ಮದ್ ಗೌಸ್ ರವರ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದಾಗ ಒಂದು ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕೇರಳ ಕಡೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಲಾರಿ ಹಾಗೂ ಕೆಂಪುಕಲ್ಲುಗಳನ್ನು…

Read More

ಉಳ್ಳಾಲ : ಬೀದಿ ದೀಪಗಳು ಇಲ್ಲದೇ ತಲಪಾಡಿ ಭಾಗದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ಮುಂದಿಟ್ಟು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೋಷಿಯಲ್ ಅಚ್ಚೀವ್ಮೆಂಟ್ ಫಾರಮ್ ತಲಪಾಡಿ ಇದರ ವತಿಯಿಂದ ಮನವಿ ಸಲ್ಲಿಸಲಾಯಿತು.ಹತ್ತು ವರ್ಷವಾದರೂ ಅಳವಡಿಸದ ಬೀದಿ ದೀಪ ಇಲ್ಲದೆ ನಿರಂತರವಾಗಿ ಅಫಘಾತಗಳು ಸಂಭವಿಸುತ್ತಲೇ ಇದೆ. ಈಗಾಗಲೇ ಮೂರು ಜೀವಗಳು ಬಲಿಯಾಗಿದೆ. ಈ ಕೂಡಲೇ ಬೀದಿ ದೀಪ ಅಳವಡಿಸಿ ತಲಪಾಡಿಯ ನಾಗರಿಕರ ಜೀವಗಳನ್ನು ಉಳಿಸಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭ ಅಧ್ಯಕ್ಷರಾದ ಶೇಕ್ ಮಹಮ್ಮದ್, ಪ್ರ.ಕಾರ್ಯದರ್ಶಿ ಬಿ.ಎಸ್.ಇಸ್ಮಾಯಿಲ್, ಕೋಶಾಧಿಕಾರಿ ಐಸನ್ ತಲಪಾಡಿ, ಝಾಕಿರ್ ತಲಪಾಡಿ.ಟಿ.ಎಸ್, ಹನೀಫ್, ಶಬೀರ್ ತಲಪಾಡಿ ಉಪಸ್ಥಿತರಿದ್ದರು.

Read More

ಉಳ್ಳಾಲ : ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿನ್ಯ ಗ್ರಾಮ ಪಂಚಾಯತ್ ರಸ್ತೆಯ ಕೆರೆಯಲ್ಲಿ ನಡೆದಿದೆ. ಮೃತದೇಹ ಹುಡುಕಾಟಕ್ಕಾಗಿ ಸ್ಥಳೀಯ ಯುವಕರ ತಂಡ ಹಾಗೂ ಗೃಹರಕ್ಷಕ ಸಿಬ್ಬಂದಿ ಹಲವು ಗಂಟೆಗಳ ಕಾರ್ಯ ಕಾರ್ಯಚರಿಸಿ ಹೊರ ತೆಗೆದಿದ್ದಾರೆ. ಕಿನ್ಯ ನಿವಾಸಿ ಮಿಥುನ್ ಶೆಟ್ಟಿ (28) ಕೆರೆ ಗೆ ಹಾರಿದವರು. ಬೆಳಿಗ್ಗೆಯಿಂದ ನಾಪತ್ತೆಯಾದವರಿಗಾಗಿ ಮನೆಮಂದಿ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಪಂಚಾಯತ್ ರಸ್ತೆಯ ಸಮೀಪದ ಕೆರೆಯ ಬಳಿ ಮಿತುನ್ ಚಪ್ಪಲಿಗಳು ಪತ್ತೆಯಾಗಿತ್ತು. ಕೂಡಲೇ ಉಳ್ಳಾಲ ಪೋಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಮೊಗವೀರ ಪಟ್ಣ ಹಾಗೂ ಸ್ಥಳೀಯರಾದ ಹಸೈನಾರ್ ಕಿನ್ಯ, ಫಾರೂಕ್ ಉಳ್ಳಾಲ್, ರಝಕ್ ಕಿನ್ಯ, ಅನ್ಸಾರ್ ಕಿನ್ಯ, ರವೂಫ್, ಹೈದರ್ ಕಿನ್ಯ ನೀರಿನಲ್ಲಿ ಮುಳುಗಿ ಶೋಧ ಕಾರ್ಯ ನಡೆಸಿ ಬಳಿಕ ಹಲವು ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಹಲವು ಗಂಟೆಗಳ ಕಾಲ ಶೋಧ ನಡೆಸಿ ಮೃತದೇಹ ಪತ್ತೆಯಾಗದೇ ಇದ್ದಾಗ ಉಡುಪಿಯ ಈಶ್ವರ್ ಮಲ್ಪೆ ಅವರಿಗೆ…

Read More

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಇಂದು ವಿಟ್ಲದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ (Under-17) ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರ ತಂಡದ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ವಿಜಯದೊಂದಿಗೆ ತಂಡವು ಮೈಸೂರು ವಿಭಾಗೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಶಾಲೆಯ ತರಬೇತುದಾರ ನಿಖಿಲ್ ಗಟ್ಟಿಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಗೆಲುವು ಸಾಧಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ತಂಡದ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ತಲಪಾಡಿ : ಅಪರಿಚಿತ ಮೃತದೇಹದ ಕಳೇಬರ ತಲಪಾಡಿ ಸಮೀಪದ ದೇವಿಪುರ ರಸ್ತೆಯ ಅಕ್ಷಯ ಫಾರ್ಮ್‌ನ ಪೊದೆಗಳಲ್ಲಿ ಪತ್ತೆಯಾಗಿದ್ದು, ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿರುವುದರಿಂದ ನೇಣುಬಿಗಿದು ಸತ್ತಿರುವ ಶಂಕೆಯಿದೆ. ಸ್ಥಳದಲ್ಲಿ ಸಿಕ್ಕ ಮೊಬೈಲ್‌ ಸಿಮ್‌ ಆಧಾರದಡಿ ಮಂಜೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನಾಗಿರುವ ಶಂಕೆಯಿದೆ. ಎಫ್‌ ಎಸ್‌ ಎಲ್‌ ವರದಿ ಬಳಿಕ ದೃಢವಾಗಲಿದೆ. ಮರಕ್ಕೆ ಕಟ್ಟಿರುವ ಲುಂಗಿಯನ್ನು ಆಧರಿಸಿ ಇದೊಂದು ಕೊಲೆ ನಡೆಸಿ ನೇತುಹಾಕಿದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರಿನ ಫರ್ನೀಚರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಹುಲ್ ಕುಮಾರ್ (17) ಆ.7 ರಂದು ನಾಪತ್ತೆಯಾಗಿದ್ದರು.) ಈ ಕುರಿತು ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರಿಂದ ಯಾವುದೇ ಶೋಧ ಕಾರ್ಯಗಳು, ತನಿಖೆ ನಡೆಯದೇ ಇದ್ದುದರಿಂದ ಮೃತದೇಹ ಸಾಕ್ಷ್ಯವಿಲ್ಲದ ಬರೀ ಕಳೇಬರ ಪತ್ತೆಯಾಗುವಂತಾಗಿದೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಅದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತಿತ್ತು. ಮರದ…

Read More

ಉಳ್ಳಾಲ : ಉಳ್ಳಾಲದಲ್ಲಿ ನಡೆದ ದಸರಾ ಮೆರವಣಿಗೆಯ ವೇಳೆ ಉಂಟಾದ ಸಣ್ಣ ವಿವಾದವನ್ನು ಮೋಗವೀರ ಸಮಾಜ, ಉಳ್ಳಾಲ ದಸರಾ ಸಮಿತಿ ಹಾಗೂ ಪೊಲೀಸರ ಮಧ್ಯೆ ಸಂಪೂರ್ಣವಾಗಿ ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ. ಪ್ರತಿಯೊಂದು ಧಾರ್ಮಿಕ ಮೆರವಣಿಗೆಯ ಮೊದಲು ಆಯೋಜಕರು ಸಮಯ ವಿಸ್ತರಣೆಗೆ ವಿನಂತಿ ಮಾಡುತ್ತಿದ್ದರು ಮತ್ತು ನಿಗದಿತ ಅವಧಿಯೊಳಗೆ ಮೆರವಣಿಗೆಯನ್ನು ಪೂರ್ಣಗೊಳಿಸುತ್ತಿದ್ದರು. ಉಳ್ಳಾಲದ ಆಯೋಜಕರು ಸಹ ಸಭೆಯಲ್ಲಿ ರಾತ್ರಿ 1 ಗಂಟೆಯೊಳಗೆ ಮೆರವಣಿಗೆಯನ್ನು ಮುಗಿಸಲು ಒಪ್ಪಿಕೊಂಡಿದ್ದರು. ಕಾನೂನಿನ ಪ್ರಕಾರ ರಾತ್ರಿ 12 ನಂತರ ಧ್ವನಿವರ್ಧಕ ಬಳಕೆ ನಿಷೇಧಿತವಾದರೂ, ಮೆರವಣಿಗೆಯ ಸೌಕರ್ಯಕ್ಕಾಗಿ ಪೊಲೀಸ್ ಇಲಾಖೆ ವಿಶೇಷವಾಗಿ ಅನುಮತಿ ನೀಡಿತ್ತು.ಆದರೆ ಮೆರವಣಿಗೆ ನಿಗದಿತ ಸಮಯದಲ್ಲಿ ಮುಗಿಯದೆ ಹೋದ ಕಾರಣ ಅಧಿಕಾರಿಗಳು ಸಂಗೀತವನ್ನು ನಿಲ್ಲಿಸಲು ಸೂಚಿಸಿದರು. ಆ ಸಂದರ್ಭದಲ್ಲಿ ಮೈಕ್ ನಿಲ್ಲಿಸಲು ಹೋದ ಉಪನಿರೀಕ್ಷಕರಿಗೆ ಮೆರವಣಿಗೆಯಲ್ಲಿದ್ದ ವ್ಯಕ್ತಿಯೋರ್ವ ಅಸಭ್ಯ ಶಬ್ದ ಬಳಸಿ ಅವಮಾನ ಮಾಡಿದ್ದಾರೆ. ಉಪನಿರೀಕ್ಷಕರು ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದರು. ಇದರಿಂದ…

Read More

ಮಂಗಳೂರು : ಮಂಗಳೂರು: ನಗರದ ಹೊರ ವಲಯದ ಕಣ್ಣೂರಿನ ಗಾಣದಬೆಟ್ಟು ಎಂಬಲ್ಲಿಯ ವಸತಿ ಸಮುಚ್ಚಯವೊಂದರಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಂಕನಾಡಿ ನಗರ ಠಾಣೆ ಪೊಲೀಸರು ಓರ್ವ ಮಹಿಳೆ ಮತ್ತು ಪುರುಷನನ್ನು ಬಂಧಿಸಿದ್ದಾರೆ.ಬಂಟ್ವಾಳ ತಾಲೂಕು ಪುದು ನಿವಾಸಿ ಹಸೀನಾ (30) ಮತ್ತು ಪಾವೂರು ಬದ್ರಿಯಾ ನಗರದ ಅಬ್ದುಲ್‌ ಲತೀಫ್‌ (38) ಬಂಧಿತರು. ಉತ್ತರ ಪ್ರದೇಶ ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.ವೇಶ್ಯಾವಾಟಿಕೆ ಬಗ್ಗೆ ದಕ್ಷಿಣ ವಲಯ ಎಸಿಪಿ ವಿಜಯ ಕ್ರಾಂತಿ ಅವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೋಮವಾರ(ಅ.6) ಸಂಜೆ 5.15ರ ವೇಳೆಗೆ ದಾಳಿ ನಡೆಸಲಾಗಿದೆ. ಮೂರನೇ ಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಕಾಂಡಮ್‌ಗಳು ಹಾಗೂ 2 ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ. ಸ್ಪಷ್ಟನೆ : ದೂರಿನ ಆಧಾರದಲ್ಲಿ ದಯಾಂಬು ಎಂಬಲ್ಲಿನ ವಸತಿಗೃಹ ಎಂದು ನಮೂದಿಸಲಾಗಿತ್ತು. ವಾಸ್ತವವಾಗಿ ಗಾಣದಬೆಟ್ಟುವಿನಲ್ಲಿ ವಸತಿ ಸಮುಚ್ಛಯ ಇದೆ ಎಂಬುದಾಗಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

Read More

ಉಳ್ಳಾಲ : ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮತ್ತು ಕೋಟೆಕಾರ್ ಸರ್ಕಲ್ ಬೀಡಿ ಲೇಬಲ್ ಯೂನಿಯನ್ ಸಿ.ಐ.ಟಿ.ಯು ಉಳ್ಳಾಲ ತೊಕ್ಕೋಟ್ಟು ವತಿಯಿಂದ 2018 ರಿಂದ 2024ರ ವರೆಗಿನ 6 ವರ್ಷಗಳ ಕನಿಷ್ಟ ಕೂಲಿಯನ್ನು ಪಾವತಿಸಲು ಒತ್ತಾಯಿಸಿ ಮತ್ತು 2024ರಿಂದ ಅಧಿಸೂಚಿಸಿದ ಕನಿಷ್ಟ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿಕಾರ್ಮಿಕರಿಗೆ ಪಾವತಿಸಲು ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಹಕ್ಕೋತ್ತಾಯ ಚಳುವಳಿ ಉಳ್ಳಾಲ ಭಾರತ್ ಬೀಡಿ ವರ್ಕ್ಸ್ ಡಿಪ್ಪೋ ಎದುರು ಸೋಮವಾರ ನಡೆಯಿತು.ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ದ.ಕ ಜಿಲ್ಲೆ ಸಿ.ಐ.ಟಿ.ಯು ಅಧ್ಯಕ್ಷ ಕಾಂ.ವಸಂತ್ ಆಚಾರ್ ಮಾತನಾಡಿ ಬೀಡಿ ಕಾರ್ಮಿಕರಿಗೆ 2018 ರಿಂದ 2024ರ ವರೆಗಿನ ತುಟ್ಟಿ ಭತ್ಯೆಯನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ 2024 ರಿಂದ ಸಾವಿರ ಬೀಡಿಗೆ ರೂ 301.92 ನ್ನು ಸರಕಾರ ಜಾರಿಗೊಳಿಸಿದ ಮಜೂರಿಯನ್ನು ಕೂಡಲೇ ಪಾವತಿಸ ಬೇಕು ಎಂದರು. ಕಾರ್ಯದರ್ಶಿ ಕಾಂ.ಬಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ ಬೀಡಿ ಮಾಲಕರಿಂದ ಮತ್ತು ಸರಕಾರದಿಂದ ನಮಗೆ ಅನ್ಯಾಯವಾಗಿದೆ,…

Read More

ಮಂಜೇಶ್ವರ : ದಂಪತಿಗಳಿಬ್ಬರು ಮಗುವನ್ನು ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಹೊಸಂಗಡಿ ಬಳಿಯ ಕಡಂಬಾರು ಚೆಂಬಪದವಿನಲ್ಲಿ ನಡೆದಿದೆ.ಇಲ್ಲಿನ ನಿವಾಸಿಗಳಾದ ಅಜಿತ್ (35), ಪತ್ನಿ ಶ್ವೇತ (27) ಆತ್ಮಹತ್ಯೆಗೈದಿರುವ ದಂಪತಿಗಳಾಗಿದ್ದಾರೆ. ವಿಷ ಸೇವಿಸಿದ ಅಜಿತ್ ಕಡಂಬಾರು ಮನೆಯಲ್ಲಿ ಮೃತಪಟ್ಟರೆ, ಶ್ವೇತ ರವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಅಜಿತ್ ಪೈಂಟಿಂಗ್ ಕಾರ್ಮಿಕನಾಗಿದ್ದು, ಪತ್ನಿ ಶ್ವೇತ ವರ್ಕಾಡಿ ಕಳಿಯೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ನಿನ್ನೆ ಅಜಿತ್ ಹಾಗೂ ಶ್ವೇತ ತಮ್ಮ ಕೆಲಸ ಕಾರ್ಯ ಬಿಟ್ಟು ಮನೆಗೆ ಬೇಗನೆ ಬಂದಿದ್ದು ಅನಂತರ ಮಗನನ್ನು ಬಂದ್ಯೋಡಿನ ಸಹೋದರಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. ನಮಗೆ ತುರ್ತು ಬೇರೆ ಕಡೆಗೆ ಹೋಗಲಿಕ್ಕಿದೆ. ಮಗುವನ್ನು ನೋಡಿಕೊಳ್ಳಿ ಎಂದು ಹೇಳಿ ಬಂದಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಲು ಆರ್ಥಿಕ ಸಂಕಷ್ಟವೆಂದು ಸ್ಥಳೀಯರ ಮಾತಾಗಿದೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಯುವ ಸಂಚಲನ (ರಿ.) ಬೆಳರಿಂಗೆ ಕಿನ್ಯ ಇವರ ಸಹಯೋಗದೊಂದಿಗೆ ಸಮುದಾಯ ದಂತ ಆರೋಗ್ಯ ವಿಭಾಗ, ಯೆನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ, ನೇತ್ರ ಮತ್ತು ದಂತ ತಪಾಸಣಾ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಯುವ ಸಂಚಲನದ ಆವರಣದಲ್ಲಿ ಜರುಗಿತು. ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆ, ಕಿನ್ಯಾ ಬೆಳರಿಂಗೆ ಇದರ ಅರ್ಚಕರಾದ ರವಿ ಪೂಜಾರಿ ಹಾಗೂ ಅರ್ಚಕ ಪಾತ್ರಿಯಾದ ಕಿಶೋರ್ ಪೂಜಾರಿ ಯವರು ಉಚಿತ ವೈದ್ಯಕೀಯ, ನೇತ್ರ ಮತ್ತು ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮುದಾಯ ದಂತ ಆರೋಗ್ಯ ವಿಭಾಗ, ಯೆನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ದಂತ ವೈದ್ಯರಾದ ಡಾ|…

Read More