ತಲಪಾಡಿ;ಸೋಷಿಯಾಲ್ ಅಚೀವ್ಮೆಂಟ್ ಫೋರಮ್ ಹಾಗೂ ಪೂಮಣ್ಣು ಫ್ರೆಂಡ್ಸ್ ಕ್ಲಬ್ ತಲಪಾಡಿ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಅಬ್ರಾರ್ ಮಸೀದಿ ಬಳಿಯ ಅಬ್ರಾರ್ ಮದ್ರಸ ಹಾಲ್‌ನಲ್ಲಿ ನಡೆಯಿತು. ಡಾ.ಮಿಸ್ಬಾ ಇಸ್ಮಾಯಿಲ್ ನೇತೃತ್ವದ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕೆ.ಪಿ.ಎನ್ ವೆಲ್ನೆಸ್ಸ್ ಸೆಂಟರ್ ತಂಡದ ವೈದ್ಯರಿಂದ ಆರೋಗ್ಯ ಶಿಬಿರ ಆಯೋಜನೆಗೊಂಡಿತ್ತು. ಶಿಬಿರವನ್ನು ಮುಸ್ತಫಾ ದಾರಿಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ಆರೋಗ್ಯವನ್ನು ಉತ್ತೇಜಿಸಲು,ನಿರ್ವಹಿಸಲು ಅಥವಾ ಪುನಃಸ್ಥಾಪಿಸಲು ಸಹಾಯ ಮಾಡುವ ಒಂದು ರೀತಿಯ ಚಿಕಿತ್ಸೆಯಾಗಿದೆ. ಎಲ್ಲಾ ಭಾಗಗಳಲ್ಲಿಯೂ ಈ ಚಿಕಿತ್ಸೆಯ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಈ ಚಿಕಿತ್ಸೆ ಬಗ್ಗೆ ಹಲವರು ಅರಿತು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಚಿಕಿತ್ಸೆಯ ಪ್ರಯೋಜವನ್ನು ಪಡೆದ ಫಲಾನುಭವಿಗಳು ಮಾತನಾಡಿ, ಕಠಿಣವಾದ ಕೆಲಸದಿಂದ ಸೊಂಟ ನೋವು, ಬೆನ್ನು ನೋವು ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಬಾಧಿಸಿದ್ದವು. ಇದೀಗ ಈ ಚಿಕಿತ್ಸೆಯನ್ನು ಪಡೆದ ನಂತರ ಆರಾಮದಾಯಕವೆಂದೆನಿಸತ್ತಿದೆ. ಇಲ್ಲಿ ಲಭ್ಯವಿರುವ ಫಿಸಿಯೋಥೆರಪಿ, ಕೈರೋಪ್ರಾಕ್ಟಿಕ್, ಅಕ್ಯುಪಂಕ್ಚರ್, ಡ್ರೆöÊ ಕಪ್ಪಿಂಗ್ ಥೆರಪಿಗಳು ವ್ಯಾಯಾಮ, ಹಿಗ್ಗಿಸುವಿಕೆ…
Author: UllalaVani
ತೊಕ್ಕೊಟ್ಟು,ಅ.27: ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರಿಯದರ್ಶಿನಿ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ “ಪರಿವರ್ತನಾ” ಮಹಿಳಾ ಸಮಾವೇಶ ನವೆಂಬರ್ 1ರಂದು ಮಧ್ಯಾಹ್ನ 12 ಗಂಟೆಗೆ ಅಂಬಿಕಾರೋಡ್‌ನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ ಎಂದು ಗೇರು ಕೃಷಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದರು. ಅವರು ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ನಮ್ಮ ಕಥೆ, ನಮ್ಮ ಶಕ್ತಿ, ನಮ್ಮ ಯಶಸ್ಸು ಬನ್ನಿ ಮಹಿಳಾ ಸಮಾವೇಶದಲ್ಲಿ!” ಎಂಬ ಘೋಷಣೆಯಡಿ ಆಯೋಜಿಸಲಾದ ಈ ಸಮಾವೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಮಹಿಳಾ ನಾಯಕಿಯರು ಭಾಗವಹಿಸಿ ದಿಕ್ಕೂಚಿ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಮಹಿಳಾ ಶಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಇದೇ ವೇಳೆ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕಾರ್ಡ್ ವಿತರಣೆ ಹಾಗೂ ಗೃಹಲಕ್ಷಿö್ಮÃ ಯೋಜನೆ ಫಲಾನುಭವಿಗಳ ನೋಂದಣಿ ಕಾರ್ಯವೂ ನಡೆಯಲಿದೆ ಎಂದರು. ಸಮಾವೇಶದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಹಾಗೂ ಮುಡಿಪು ಬ್ಲಾಕ್…
ಉಳ್ಳಾಲ,ಅ.27: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು, ಮಂಗಳೂರು ಜಿಲ್ಲೆಯ ಭಾಗವಾಗಿದ್ದು, ಇದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಮುಖ ಕೇಂದ್ರವಾಗಿದೆ. ಆದರೆ, ಇಲ್ಲಿನ ಗ್ರಾಮ ಪಂಚಾಯತ್‌ಗಳು, ಕೋಟೆಕಾರು ಪಟ್ಟಣ ಪಂಚಾಯತ್, ಸೋಮೇಶ್ವರ ಪಟ್ಟಣ ಪಂಚಾಯತ್ ಮತ್ತು ಉಳ್ಳಾಲ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರ ಸಮಸ್ಯೆಯಾಗಿ ಬದಲಾಗಿದೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಉಳ್ಳಾಲದ ದೇರಳಕಟ್ಟೆ ಪ್ರದೇಶದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು, ಯೆನೆಪೋಯ ಮತ್ತು ಕಣಚೂರು ಮೆಡಿಕಲ್ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಈ ಪ್ರದೇಶಗಳಲ್ಲಿ ನಾಯಿಗಳ ದಾಳಿಗಳು ಹೆಚ್ಚಾಗಿರುವುದರಿಂದ, ವಿದ್ಯಾರ್ಥಿಗಳ ಭದ್ರತೆಗೆ ಧಕ್ಕೆ ತಲುಪಿದೆ. ಸಮಸ್ಯೆಯ ತೀವ್ರತೆ: ಉಳ್ಳಾಲ ತಾಲೂಕಿನಾದ್ಯಂತ ಹಾವಳಿ ಉಳ್ಳಾಲ ತಾಲೂಕು ಸೇರಿದಂತೆ ಡೆಪ್ಯುಟಿ ಕಮಿಷನರ್ ಸ್ವರೂಪಾ ಟಿ.ಕೆ. ಅವರು 2025ರ ಸೆಪ್ಟೆಂಬರ್‌ನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಆಹಾರ ನಿಯಂತ್ರಣ, ಸ್ಟೆರಿಲೈಜೇಶನ್ (ABC) ಮತ್ತು ರೇಬೀಸ್ ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ…
ಸುರತ್ಕಲ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಇನಾಯತ್ ಅಲಿ ಅಭಿಮಾನಿ ಬಳಗ ಕೋಡಿಕಲ್ ವತಿಯಿಂದ ಸೌಹಾರ್ದ ದೀಪಾವಳಿ ಕಾರ್ಯಕ್ರಮವು ರವಿವಾರ ಕೋಡಿಕಲ್ ನಲ್ಲಿ ನಡೆಯಿತು. ಸಮಾರಂಭವನ್ನು ಗಣ್ಯರು ದೀಪಬೆಳಗಿ ಉದ್ಘಾಟಿಸಿದರು . ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಅವರು, ಭಾರತ ವೈವಿದ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ದೇಶ ಈ ವೈವಿಧ್ಯಮಯ ಭಾರತವನ್ನು ಇನಾಯತ್ ಅಲಿ ಅವರು ಸೌಹಾರ್ದ ದೀಪಾವಳಿ ಕಾರ್ಯಕ್ರಮ ಎಲ್ಲಾ ಜಾತಿ ಧರ್ಮಗಳನ್ನು ಒಂದುಗೂಡಿಸುವ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಮನುಷ್ಯರಿಗೆ ಸೌಹಾರ್ದಯುತ ಬದುಕು ಬೇಕಾಗಿದೆ. ಉತ್ತಮ ಸ್ವಾಸ್ಥ್ಯ ಜೀವನಕ್ಕೆ ಇಂತಹಾ ಕಾರ್ಯಕ್ರಮ ಪ್ರೇರಣೆ, ಮುಂದಿನ ದಿನಗಳಲ್ಲಿ ಸರ್ವರನ್ನೂ ಒಗ್ಗೂಡಿಸುವ ಇನ್ನಷ್ಟು ಸೌಹಾರ್ದ ಹಬ್ಬಗಳು ನಡೆದು ಸೌಹಾರ್ದಯುತ ಬದುಕು ಕಾಣುವಂತಾಗಲಿ ಎಂದು ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ದೀಪಾವಳಿ ಕೇವಲ ದೀಪಗಳನ್ನು ಬೆಳಗಿ ಕತ್ತಲೆ ದೂರಮಾಡುವ ಹಬ್ಬವಲ್ಲ ಇದು ಜಾತಿ, ಧರ್ಮ, ಮತ, ಪಂಗಡ, ಪಕ್ಷ…
ಮಂಗಳೂರು, ಅ.27: ಕಳೆದ ಸುಮಾರು ಆರು ವರ್ಷಗಳಿಂದ ಪಾಳು ಬಿದ್ದಿರುವ ಉರ್ವ ಮಾರುಕಟ್ಟೆ ಕಟ್ಟಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಅಅಗತ್ಯ ಮಾರ್ಪಾಡುಗಳೊಂದಗೆ ವ್ಯಾಪಾರಸ್ಥರಿಗೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಿದರು. ಮಳಿಗೆಗಳಲ್ಲಿ ವ್ಯಾಪಾರಸ್ಥರು ವ್ಯಾಪಾರಕ್ಕೆ ಬರುವಂತಾಗಲು ಅಗತ್ಯ ವ್ಯವಸ್ಥೆಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಾರುಕಟ್ಟೆಯನ್ನು ಅವೈಜಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ವ್ಯಾಪರಸ್ಥರ ಜತೆ ಚರ್ಚಿಸಿ ಅವರ ಅಗತ್ಯ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 2019ರಲ್ಲಿ ಮುಡಾದಿಂದ ಸುಮಾರು 14 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಪಾಲಿಕೆಗೆ ಹಸ್ತಾಂತರಗೊಂಡಿದೆ. ಕೋ.ರೂ ಗಳನ್ನು ಪಾಲಿಕೆಯವರು ಪಾವತಿಸಿದ್ದಾರೆ. ಇನ್ನೂ ಸುಮಾರು 7 ಕೋ.ರೂ. ಪಾವತಿಗೆ ಬಾಕಿ ಇದೆ.ಒಳಭಾಗದಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕೆಲವು ವಿನ್ಯಾಸವನ್ನು ಮಾರ್ಪಡಿಸಲು ಸೂಚಿಸಲಾಗಿದೆ. ಹೊಸ ಮಾರ್ಕೆಟ್ ಕಟ್ಟಡಕ್ಕೆ ಬರಲು ವ್ಯಾಪಾರಿಗಳು ಸಿದ್ದರಿದ್ದಾರೆ. ಆದರೆ ಅವರಿಗೆ ಅಗತ್ಯ ವ್ಯವಸ್ಥೆ…
ಕಾಸರಗೋಡು, ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ಪೆರ್ಮುದೆ ಸಮೀಪದ ಕುಂಬಳ ಠಾಣಾ ವ್ಯಾಪ್ತಿಯ ಪರಿಯಡ್ಕ ಎಂಬಲ್ಲಿ ರವಿವಾರ ಸಂಜೆ ಬೆಳಕಿಗೆ ಬಂದಿದೆ. ಶರೀಫ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶರೀಫ್ ದುಬೈ ಯಲ್ಲಿ ಉದ್ಯೋಗದಲ್ಲಿದ್ದು ಪತ್ನಿ ರುಕ್ಸಾನಾ ಹಾಗೂ ಇಬ್ಬರು ಮಕ್ಕಳು ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆ ಮರಳಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಹಿಂಬಾಗಿಲ ಗ್ರಿಲ್ಸ್ ಮುರಿದು ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿ ಕಪಾಟಿ ನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಕಪಾಟಿನಲ್ಲಿದ್ದ ವಸ್ತ್ರ ಹಾಗೂ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೀಗ ಮುರಿಯಲೆತ್ನಿಸಿದ ಕಬ್ಬಿಣದ ರಾಡ್ ಮನೆಯೊಳಗೆ ಪತ್ತೆಯಾಗಿದೆ. ಕುಂಬಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಮನೆಯವರ ಚಲನವಲನ ಅರಿತವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಮಂಗಳೂರು ಅ. 27; ನಿರಂತರ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳ ಪಟಾಕಿ ವ್ಯಾಪಾರಿಗಳಿಗೆ ತೀವ್ರ ಹೊಡೆತ ನೀಡಿದೆ. ಈ ವರ್ಷ ವ್ಯಾಪಾರವು ಸುಮಾರು ಅರ್ಧದಷ್ಟು ಕಡಿಮೆಯಾಗಿದೆ. ಸ್ಥಳೀಯ ಆಡಳಿತಗಳು ತೆರೆದ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡಿದ್ದವು. ಆದರೆ, ಒಂದೇ ಪ್ರದೇಶದಲ್ಲಿ ಹಲವಾರು ಮಳಿಗೆಗಳು ಸಾಲುಗಟ್ಟಿ ನಿಂತಿದ್ದರೂ, ಗ್ರಾಹಕರಲ್ಲಿ ಉತ್ಸಾಹ ಕಡಿಮೆಯಾಗಿತ್ತು. ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಮಾರಾಟಕ್ಕೆ ಅಡ್ಡಿಯುಂಟಾಯಿತು. ತೇವಾಂಶಭರಿತ ಹವಾಮಾನದಿಂದಾಗಿ ರಾತ್ರಿಯ ಸಮಯದಲ್ಲಿ ಮನೆಗಳ ಅಂಗಳದಲ್ಲಿ ಪಟಾಕಿ ಸಿಡಿಸಲು ಅಥವಾ ದೀಪಗಳನ್ನು ಬೆಳಗಿಸಲು ಜನರಿಗೆ ಕಷ್ಟವಾಯಿತು.ಮಂಗಳೂರಿನಲ್ಲಿ ಮಳೆಯಿಂದಾಗಿ ಪಟಾಕಿ ಮಾರಾಟ ಇಳಿಕೆಯಾಗಿದ್ದು, ದೀಪಾವಳಿ ಸಂಭ್ರಮಕ್ಕೆ ಅಡ್ಡಿಯುಂಟಾಗಿದೆ. ಅಕಾಲಿಕ ಮಳೆಯ ಕಾರಣದಿಂದಾಗಿ ಈ ವರ್ಷ ಪಟಾಕಿ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ವರದಿ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ದೀಪಾವಳಿ ಹಬ್ಬದಂದು ಜನರು ಮನೆಯೊಳಗೆ ಇರುವಂತಾಯಿತು. ಮಳೆ ಶುರುವಾಗುತ್ತಿದ್ದಂತೆ ಜನರು ಅಂಗಡಿಗಳಿಗೆ ಬರುವುದನ್ನು ನಿಲ್ಲಿಸಿದರು ಎಂದು ಸ್ಥಳೀಯ ಮಾರಾಟಗಾರರು ತಿಳಿಸಿದ್ದಾರೆ.ನಿರಂತರ ಮಳೆಯಿಂದಾಗಿ ಗ್ರಾಹಕರು ಪಟಾಕಿ ಮಳಿಗೆಗಳು…
ಉಳ್ಳಾಲ,ಅ,27: ಕೋಟೆಕಾರು ಪ.ಪಂ. ವ್ಯಾಪ್ತಿಯ ದೇರಳ ಕಟ್ಟೆ ಪನೀರ್ ನಿವಾಸಿ ಜೆ.ಎಮ್.ಇಸ್ಮಾಯಿಲ್ (68) ರವರು 15 ವರ್ಷ ಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆ ಆಗಿದ್ದು, ಈ ಬಗ್ಗೆ ಅವರ ಪುತ್ರ ಶಫೀಕುದ್ದೀನ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮನೆ ಬಿಟ್ಟು ಹೋದರೆ 6 ತಿಂಗಳಿಗೊಮ್ಮೆ ಅಥವಾ 1 ವರ್ಷಕ್ಕೊಮ್ಮೆ ಹಿಂದಿರುಗಿ ಮನೆಗೆ ಬರುತ್ತಿದ್ದರು .ಆದರೆ ಅವರು 2010 ಫೆಬ್ರುವರಿ 08 ರಂದು ಮನೆ ಬಿಟ್ಟು ಹೋದವರು ವಾಪಸ್ ಮನೆಗೆ ಬಾರದೆ ಕಳೆದ 15 ವರ್ಷದಿಂದ ನಾಪತ್ತೆ ಆಗಿದ್ದಾರೆ. ಅವರನ್ನು ನಾವು ಮತ್ತು ಸಂಬಂದಿಕರು ಸೇರಿಕೊಂಡು ಕೇರಳ, ತಮಿಳುನಾಡು, ಆಂಧ್ರ ಸಹಿತ ವಿವಿಧ ಕಡೆಗಳಲ್ಲಿ ಸಂಚರಿಸಿ ಪತ್ತೆಗೆ ಪ್ರಯತ್ನಿ ಸಿದರೂ ಅವರು ಪತ್ತೆಯಾಗಿರುವುದಿಲ್ಲ. ತನ್ನ ತಂದೆಯನ್ನು ಪತ್ತೆ ಮಾಡಿಕೊಡಬೇಕು ಎಂದು ಅವರ ಪುತ್ರ ಶಫೀಕುದ್ದೀನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಕಾರ್ಕಳ : ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭಾ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ದೇಶವ್ಯಾಪಿ ನಡೆಸುತ್ತಿರುವ “ಸ್ಟಾಪ್ ವೋಟ್ ಚೋರಿ” ಅಭಿಯಾನಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಸಹಿ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾನ ದೇಶದ ಪ್ರಜೆಗಳ ಹಕ್ಕು ಆದರೆ ಮತಗಳ್ಳತನದ ಮೂಲಕ ಬಿಜೆಪಿ ‘ಶದ ಜನತೆಗೆ ಅತೀ ದೊಡ್ಡ ದ್ರೋಹವೆಸಗಿದೆ. ಇದರ ವಿರುದ್ದ ನಾವೆಲ್ಲರೂ ಒಂದಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ, ಬಿಜೆಪಿ ಅಧಿಕಾರಕ್ಕಾಗಿ ಜನರ ಹಕ್ಕನ್ನು ಕಸಿಯುವ ದೇಶ ದ್ರೋಹದ ಕೆಲಸ ಮಾಡಿದೆ ಇದರ ವಿರುದ್ದ ಪ್ರತಿಯೊಬ್ಬ ಪ್ರಜೆಯೂ ಧ್ವನಿ ಎತ್ತಬೇಕು. ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಬೇಕು. ಅತೀ ಹೆಚ್ಚು ಸಹಿ ಸಂಗ್ರಹ ಮಾಡಿದ ವಾರ್ಡ್ ಸಮಿತಿಗೆ ಪ್ರೋತ್ಸಾಹ…
ಮಂಗಳೂರು, ಅ. 25: ಜನವರಿ 18ರಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಜಾಗತಿಕ ಬಿಲ್ಲವರ ಪ್ರಥಮ ಕ್ರೀಡೋತ್ಸವ ನಡೆಯಲಿದೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೂನಿಯನ್‌ನ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಈ ಬಗ್ಗೆ ಈಗಾಗಲೇ ಬಿಲ್ಲವ ಸಂಘಗಳ ಪ್ರತಿನಿಧಿಗಳ, ಸಮಾಜ ಮುಖಂಡರ ಸಭೆ ನಡೆದಿದೆ. ಕ್ರೀಡೋತ್ಸವದ ಲೋಗೋ ಬಿಡುಗಡೆಯನ್ನು ಈಗಾಗಲೇ ನಟ ಡಾ.ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ನಡೆಸಿದ್ದಾರೆ. ಕ್ರೀಡೋತ್ಸವದಲ್ಲಿ ಸಮಾಜದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಕಬಡ್ಡಿ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಭಾಗವಹಿಸುವ ತಂಡಗಳು ಹೆಸರನ್ನು ಅ.27ರಿಂದ ನವೆಂಬರ್ 30ರೊಳಗೆ ಆನ್‌ಲೈನ್‌ನಲ್ಲಿ ನಿಯಮ, ನಿಬಂಧನೆಗೆ ಅನುಸಾರವಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9242783800ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಪುರುಷಕರ ಕಬಡ್ಡಿಯಲ್ಲಿ ಮೊದಲು ನೋಂದಾಯಿಸಿದ 24, ವಾಲಿಬಾಲ್‌ನಲ್ಲಿ 16, ಮಹಿಳೆಯರ ಕಬಡ್ಡಿ ಹಾಗೂ ತ್ರೋಬಾಲ್‌ನಲ್ಲಿ ತಲಾ 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪುರುಷರ ಕಬಡ್ಡಿಯಲ್ಲಿ ಟ್ರೋಫಿಯೊಂದಿಗೆ ಪ್ರಥಮ 2 ಲಕ್ಷ…

