ಉಳ್ಳಾಲ:ಶ್ರೀ ಬಾಲಕೃಷ್ಣ ಮಂದಿರ (ರಿ) ಕುಂಪಲ, ಸೋಮೇಶ್ವರ ಇದರ ಸಹ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ 25ನೇ ವರ್ಷದ ರಜತರಾಣಿ-2025ರ ಅಂಗವಾಗಿ ಡಿ.28ರ0ದು ಕುಂಪಲದ ಕೃಷ್ಣಾಂಗಣದಲ್ಲಿ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆ ನಲಿಕೆ ದಾಮಿನಿ-2025 ಕಾರ್ಯಕ್ರಮ ಮೇಳೈಸಲಿದೆ.

ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗಿಯಾಗುವ ಸ್ಪರ್ಧಿಗಳು ಈ ಕೆಳಗಿನ ನಿಯಮಗಳನ್ನು ಅನುಸರಿಸತಕ್ಕದ್ದು.
1.ನೃತ್ಯದಲ್ಲಿ ಮಹಿಳೆಯರು ಕಡ್ಡಾಯವಾಗಿ ಕನಿಷ್ಟ ಏಳು ಜನ ಗರಿಷ್ಟ 11 ಜನರ ಒಳಗೆ ಇರಬೇಕು,
2.ಒಂದು ತಂಡಕ್ಕೆ 7 + 2ನಿಮಿಶ ಕಾಲಾವಕಾಶ , (ಮೂರು ನಿಮಿಷ ಸಿದ್ದತೆಗೆ).
- ಜಾನಪದ ಹಾಡುಗಳಿಗೆ ಮಾತ್ರ ಅವಕಾಶ. ಹಾಡಿನ ನಡುವೆ ಸಂಭಾಷಣೆ ಹಾಗೂ ಎರಡರಿಂದ ಮೂರು ಹಾಡುಗಳ ಜೋಡಣೆಗೆ ಅವಕಾಶ ಇದೆ.
4.ಮಹಿಳೆಯರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟವರಾಗಿರಬೇಕು, ಸಂದೇಹವಿದ್ದರೆ ಆಧಾರ್ ಕಾರ್ಡ್ ತೋರಿಸಬೇಕು.
5.ವಸ್ತ್ರ ವಿನ್ಯಾಸ , ಹಾಗೂ ವೇದಿಕೆಯಲ್ಲಿ ವಿಶೇಷ ಸ್ತಬ್ದ ಚಿತ್ರಗಳನ್ನು ಉಪಯೋಗಿಸಿ ಮಾಡುವ ಹೊಸತನಗಳಿಗೆ ಅವಕಾಶವಿದೆ.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಫಲಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಗುವುದು.
ಮೊದಲು ನೋಂದಾಯಿತ 12 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸ್ಪರ್ಧೆಯ ಕ್ರಮ ಸಂಖ್ಯೆಗಳನ್ನು ಆ ದಿನವೇ ಎಲ್ಲರ ಸಮ್ಮುಖದಲ್ಲಿ ಚೀಟಿ ಎತ್ತಿ ನಿಗದಿ ಪಡಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಮತ್ತು ಹೆಸರು ನೊಂದಾಯಿಸಲು ಸಂಪರ್ಕಿಸಿ 9964280381



