ಭಾರತದ 29 ವರ್ಷದ ಯುವಕನೊಬ್ಬ ಅಬುಧಾಬಿಯಲ್ಲಿ 240 ಕೋಟಿ ರೂಪಾಯಿ ಜಾಕ್ ಪಾಟ್ ಲಾಟರಿ ಗೆದ್ದಿದ್ದಾನೆ. ಭಾರತದ ಅನಿಲ್ ಕುಮಾರ್ ಬೊಲ್ಲಾ ಎಂಬಾತನೇ ಆ ಅದೃಷ್ಟಶಾಲಿ. ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾನಲ್ಲಿ ಅನಿಲ್ ಕುಮಾರ್ ಗ್ರ್ಯಾಂಡ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಲಾಟರಿ ವಿಜೇತ ಅನಿಲ್ ಕುಮಾರ್ ವಿಡಿಯೋವನ್ನು ಯುಎಇ ಲಾಟರಿ ಸಂಸ್ಥೆಯು ಟ್ವೀಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದೆ. ನಿರೀಕ್ಷೆಯಿಂದ ಆಚರಣೆವರೆಗೆ ಎಂದು ಕಾಪ್ಷನ್ ನೀಡಲಾಗಿದೆ. ಒಂದು ಅದೃಷ್ಟದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನಿಲ್‌ಕುಮಾರ್ ಗೆ ಅಕ್ಟೋಬರ್ 18 ಬರೀ ಮತ್ತೊಂದು ದಿನವಲ್ಲ. ಆ ದಿನ ಎಲ್ಲವನ್ನೂ ಬದಲಾಯಿಸಿಬಿಟ್ಟಿತ್ತು. ಜೀವನ ಬದಲಾವಣೆ ಮತ್ತು ನೀವು ಧೈರ್ಯ ಮಾಡಿ ಊಹಿಸಿಕೊಳ್ಳುವುದರಿಂದ ಏನಾಗುತ್ತೆ ಎಂಬುದರ ನೆನಪು. ಕಂಗ್ರಾಜುಲೇಷನ್ ಅನಿಲ್ ಕುಮಾರ್ ಎಂದು ಯುಎಇ ಲಾಟರಿ ಸಂಸ್ಥೆ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಅನಿಲ್ ಕುಮಾರ್ ತಮ್ಮ ಲಾಟರಿ ಗೆಲುವು ಅನ್ನು ಸಂಭ್ರಮಿಸುವುದನ್ನು ತೋರಿಸಲಾಗಿದೆ.ಅನಿಲ್ ಕುಮಾರ್‌ಗೆ ಲಾಟರಿ ಗೆದ್ದ ಹಣದ ಚೆಕ್ ನೀಡಲಾಗಿದೆ. ವಿಡಿಯೋದಲ್ಲಿ…
Author: UllalaVani
ಬೆಳ್ತಂಗಡಿ, ಅ. 30: ಕನ್ಯಾಡಿ ಸೇವಾ ಧಾಮದ ಸಮೀಪದ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಅಕ್ಟೋಬರ್ 29ರಂದು ನಡೆದಿದೆ. ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಎಂಬವರ ಪುತ್ರ, ಬೈಕ್ ಸವಾರ ಚಂದ್ರಹಾಸ (28) ಮೃತರು ಎಂದು ಗುರುತಿಸಲಾಗಿದೆ. ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಅ.29ರಂದು ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ತನ್ನ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸೇವಾ ಧಾಮದ ಸಮೀಪ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಅವರ ತಲೆ ಹಾಗೂ ಕಾಲಿಗೆ ಏಟು ತಗಲಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು…
ಪಾಣೆಮಂಗಳೂರು,ಅ.30; ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಇಲೆಕ್ಟ್ರಿಕ್ ಆಟೋ ರಿಕ್ಷಾ ನಿಲ್ಲಿಸಿ ನಾಪತ್ತೆಯಾಗಿದ್ದ ಮಾರ್ನಬೈಲು ನಿವಾಸಿ ಆಟೋ ಚಾಲಕ ಪ್ರೀತಂ ಲೋಬೋ ಅವರ ಮೃತದೇಹ ಗುರುವಾರ ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ರಿಕ್ಷಾದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಂಟ್ವಾಳ ನಗರ ಠಾಣಾ ಪೋಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಕೂಡ ನಡೆಸಿದ್ದರು. ಇದೀಗ ಮೃತದೇಹ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.
ಲಯನ್ಸ್ ಕ್ಲಬ್ ಮಂಗಳೂರು ಸೋಮೇಶ್ವರ ವತಿಯಿಂದ ವಿಶ್ವ ಶಾಂತಿ ಚಿತ್ರಕಲಾ ಸ್ಪರ್ಧೆಯನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರದಲ್ಲಿ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ ಕಮಾಂಡರ್ ಕೆ ವಿಜಯಕುಮಾರ್ (ನಿವೃತ್ತ) ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಲಯನ್ ಕೆ ವಿಜಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ರಂಜಿತಾ ಮಹೇಶ್ ಜೋಶಿ ಉಪಸ್ಥಿತರನ್ನು ಸ್ವಾಗತಿಸಿದರು. ಕ್ಲಬ್ ಸದಸ್ಯರಾದ ನಿತೀಶ್ ಕೃಷ್ಣ, ಶಶಿಕುಮಾರ್ ನಾಯರ್, ಫ್ಲೇವಿಯಾ ಡಿ’ಸೋಜಾ ಮತ್ತು ನಿರ್ಮಿತಾ ಭಂಡಾರಿ ಸಭೆಯಲ್ಲಿ ಭಾಗವಹಿಸಿದರು . ಕ್ಲಬ್ ಕಾರ್ಯದರ್ಶಿ ಲಯನ್ ಕೆ ಗೋಪಿನಾಥ್ ಧನ್ಯವಾದ ಅರ್ಪಿಸಿದರು. ವಿಜೇತರಿಗೆ ಲಯನ್ ಇಂಟರ್ನ್ಯಾಷನಲ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪರಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳಾದ ಮಾಸ್ಟರ್ ದಿಶಾನ್ ಕೆ 7ನೇ ತರಗತಿ,ಮಾಸ್ಟರ್ ಮಹಿನ್ ಶ್ರೀರಾಮ್ 6ನೇ ತರಗತಿ ಹಾಗೂ ಕುಮಾರಿ ಶ್ರೇಯ 8ನೇ ತರಗತಿ ಕ್ರಮೇಣವಾಗಿ 1,2,3 ಬಹುಮಾನವನ್ನು ಪಡೆದರು.
ಮಂಗಳೂರು, ಅಕ್ಟೋಬರ್ 30: ದಾಯ್ಜಿವರ್ಲ್ಡ್ ಮೀಡಿಯಾ ತನ್ನ 25 ವರ್ಷಗಳ ಮಾಧ್ಯಮ ಶ್ರೇಷ್ಠತೆಯ ಆಚರಣೆಯ ಭಾಗವಾಗಿ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (MIO) ಸಹಯೋಗದಲ್ಲಿ ‘ಕ್ಯಾನ್ಸರ್ ಗೆಲ್ಲೋಣ’ ಎಂಬ ಒಂದು ವರ್ಷದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಭವ್ಯವಾಗಿ ಆರಂಭಿಸಿದೆ. ಈ ಉಪಕ್ರಮದ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಗುಣಮುಖತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಒIಔ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ(MIO)ಯ ವಿಕಿರಣ ಆಂಕೊಲಾಜಿ ವಿಭಾಗದ ನಿರ್ದೇಶಕ ಡಾ. ಸುರೇಶ್ ರಾವ್, ದಾಯ್ಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ, (MIO)ಯ ಮುಖ್ಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಜಲಾಲುದ್ದೀನ್ ಅಕ್ಬರ್ ಮತ್ತು ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ರೋಹನ್ಚಂದ್ರ ಗಟ್ಟಿ ಅವರು ಗೌರವಾರ್ಥವಾಗಿ ಹಾಜರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಾರಂಪರಿಕ ದೀಪ ಪ್ರಜ್ವಲನೆ ಮಾಡಲಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಕಾರಾತ್ಮಕ ದೃಷ್ಟಿಕೋನದಿಂದ ಸಾಮಾಜಿಕ ಜಾಗೃತಿ ಸೃಷ್ಟಿಸಲು ದಾಯ್ಜಿವರ್ಲ್ಡ್ ಮತ್ತು ಎಂಐಒ ಸಹಯೋಗಿತ…
ಮ0ಗಳೂರು,ಅ.30: ಬಾಲಿವುಡ್‌ನ ಪ್ರಸಿದ್ಧ ಹೇರ್ ಡಿಸೈನರ್ ಡಾ| ಶಿವರಾಮ ಕೆ.ಭಂಡಾರಿ ಆಡಳಿತ್ವದ ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್‌ನ 26ನೇ ಹಾಗೂ ಮಂಗಳೂರು ನಗರದಲ್ಲಿನ ದ್ವಿತೀಯ ಶಾಖೆ ಉದ್ಘಾಟನೆ ಸಮಾರಂಭ ನಡೆಯಿತು. ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ನ್ನು ಅಂತರಾಷ್ಟ್ರೀಯ ಪ್ರಸಿದ್ಧ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಮತ್ತು ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪುರಸ್ಕೃತ ಬಾಲಿವುಡ್ ಅಭಿನೇತ್ರಿ ಆಯೀಷಾ ಎಸ್.ಐಮನ್ ಉದ್ಘಾಟಿಸಿದರು. ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಮಾತನಾಡಿ, ಬದುಕಿನುದ್ದದ ಅವಿರತ ಶ್ರಮ, ಒದ್ದಾಟವು ಶಿವರಾಮ ಅವರ ಆರಾಧ್ಯ ಕುಲವೃತ್ತಿಗೆ ಸಾಥ್ ನೀಡಿದ್ದು, ಇವೆಲ್ಲವುಗಳ ಫಲಿತಾಂಶ ಶಿವಾ’ಸ್ ಸಲೂನ್‌ಗಳ ಉಗಮ, ವಿಸ್ತಾರತ್ವವಾಗಿದೆ. ನಾವು ವಿಶ್ವವಿಡೀ ಸಾಧನೆ ಸಿದ್ಧಿಸಿದರೂ ತವರೂರಲ್ಲಿ ಕನಿಷ್ಠ ಮಟ್ಟದ ಉದ್ಯಮ ನಡೆಸಿದಾಗ ಮಾತ್ರ ನಮ್ಮೂರ ಸಾಧಕರೆಣಿಸಲು ಸಾಧ್ಯವಾಗುವುದು. ಕ್ಷೌರ್ಯವೃತ್ತಿ ಮೂಲಕ ಮುಂಬಯಿ, ಮಂಗಳೂರು ಮಹಾನಗರಗಳಲ್ಲಿ ಹೆಸರುವಾಸಿಯಾದ ಶಿವಾಸ್ ಭವಿಷ್ಯದಲ್ಲಿ…
ಉಳ್ಳಾಲ: ಸಂತ ಸೆಬಾಸ್ತಿಯನ್ನರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಸಂಘವು 1996–2002 ಬ್ಯಾಚ್ ಸಹಯೋಗದೊಂದಿಗೆ ನವೆಂಬರ್ 7, 2025 ಶುಕ್ರವಾರದಂದು ಶಾಲಾ ಸಭಾಂಗಣದಲ್ಲಿ “ಸವಿನೆನಪಿನ ಸಂಜೆ – ಹಳೆಯ ನೆನಪುಗಳ ಮೆಲುಕು” ಕಾರ್ಯಕ್ರಮವನ್ನು ಆಯೋಜಿಸಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸಿಹಿ ಕ್ಷಣಗಳನ್ನು ನೆನೆದು, ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಸೆಬಾಸ್ತಿಯನ್ನರ ಚರ್ಚ್ ತೊಕ್ಕೊಟ್ಟು ಪಾರಿಷ್ ಧರ್ಮಗುರು ರೆ| ಫಾ| ಸಿಪ್ರಿಯನ್ ಪಿಂಟೋ ವಹಿಸಲಿದ್ದು, ಗೌರವಾಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ಧರಾಮಯ್ಯ, ಯು.ಟಿ. ಹಲೀಮ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಚೇರ್‌ಮನ್ ಝುಲ್ಫೀಕರ್ ಅಲಿ ಅಹ್ಮದ್, ಯುವ ಉದ್ಯಮಿ ಪ್ರಕಾಶ್ ಕುಂಪಲ, ಜಾನ್ ಕಿಶೋರ್ ಡಿಸೋಜ, ಮೈಸೂರಿನ ಉದ್ಯಮಿ ಹಿಮೆನ್, ಶಾಲಾ ಮುಖ್ಯೋಪಾಧ್ಯಾಯಿನಿ ಅವಿಟ ಮರಿಯಾ ಡಿಸೋಜ ಸೇರಿದಂತೆ ಅತಿಥಿಗಳಾಗಿ ಹೆಚ್‌ಎಸ್‌ಬಿಸಿ ಬ್ಯಾಂಕ್ ನಿರ್ದೇಶಕಿ ಕವಿತಾ ಶೆಟ್ಟಿ, ಇನ್ಫೋಸಿಸ್…
ಉಳ್ಳಾಲ : ಕಡಲತಡಿ ಸುರಕ್ಷತೆಯಿಂದ ಹಿಡಿದು ರಸ್ತೆ, ನೀರು, ಶಿಕ್ಷಣ ಆರೋಗ್ಯ ಹಾಗೂ ಕೃಷಿಯೆಡೆಗೆ ಕಳೆದ 25 ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ರೂ.5,000 ಕೋಟಿ ಸರ್ಕಾರಿ ಅನುದಾನ ಬಿಡುಗಡೆಯಾಗಿರುವುದಾಗಿ ಅಂದಾಜಿಸಲಾಗಿದೆ.ಉಳ್ಳಾಲ ತಾಲೂಕು, ಅದರ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯೊಂದಿಗೆ, ಕಡಲ ಕಿನಾರೆಯ ಈ ಭೂಮಿಯಲ್ಲಿ ಸರ್ಕಾರಿ ಅಭಿವೃದ್ಧಿ ಯೋಜನೆಗಳಿಗೆ ಗಮನ ಹಿಂತಿರುಗಿದೆ. 2000ರಿಂದ 2025 ರವರೆಗಿನ 25 ವರ್ಷಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉಳ್ಳಾಲಕ್ಕೆ ಬಿಡುಗಡೆಯಾದ ಅನುದಾನದ ಒಟ್ಟು ಮೊತ್ತವು ನಿಖರವಾಗಿ ಲಭ್ಯವಿಲ್ಲ ಎಂಬುದು ಒಂದು ಸವಾಲು. ಆದರೂ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ, ಇದು ಸುಮಾರು 5,000 ಕೋಟಿ ರೂಪಾಯಿಗಳಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಬಹುದು. ಈ ಅನುದಾನಗಳು ಮೂಲತಃ ರಸ್ತೆ, ನೀರು, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಅಭಿವೃದ್ಧಿಗೆ ಸಂಬಂಧಿಸಿವೆ. ಪ್ರಮುಖ ಅನುದಾನಗಳ ಸ್ವರೂಪ ರಸ್ತೆ ಮತ್ತು ಸಾರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (NHDP) ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ…
ಮದಕ : ಉಳ್ಳಾಲ ತಾಲೂಕಿನ ಕುತ್ತಾರು-ಎಲಿಯಾರುಪದವು ರಸ್ತೆ ಅತ್ಯಂತ ಕಿರಿದಾಗಿದ್ದು, ಇಲ್ಲಿನ ಮದಕ ಸಮೀಪದ ಬರುವ ರಸ್ತೆ ಕಿರಿದಾಗಿರುವುದರಿಂದ ಬಸ್ ಚಾಲಕರು ಒಂಚೂರು ಬದಿಗೆ ಕೊಂಡೊಯ್ದರೂ ಹೂತುಹೋಗುವ ದುಸ್ಥಿತಿ ಎದುರಾಗಿದೆ. ಉಳ್ಳಾಲ ತಾಲೂಕಿನಲ್ಲಿ ಅನೇಕ ಗ್ರಾಮ ಸಂಪರ್ಕ ರಸ್ತೆಗಳು ಕಿರಿದಾದ ಸ್ಥಿತಿಯಲ್ಲಿವೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಅತೀಬುದ್ಧಿವಂತಿಕೆ ಮತ್ತು ಗುತ್ತಿಗೆದಾರರ ಹಣದ ದಾಹದಿಂದ ಗ್ರಾಮೀಣ ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರ ಫಲವಾಗಿ ಬಡ ಬಸ್ ಚಾಲಕರು ಮತ್ತು ಮಾಲಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಎರಡು ಕಡೆಯಿಂದ ಬಸ್ ಬಂದಾಗ ಸೈಡ್ ಕೊಡಲು ಸ್ಥಳವೇ ಇಲ್ಲದ ಪರಿಸ್ಥಿತಿಯಲ್ಲಿ ಬಸ್ಸುಗಳು ರಸ್ತೆ ಬದಿಯಲ್ಲಿ ಹೂತುಹೋಗುತ್ತಿವೆ. ಮಳೆಗಾಲದಲ್ಲಿ ಗ್ರಾಮೀಣ ಶಾಲಾ ಮಕ್ಕಳು ಮತ್ತು ನಗರಕ್ಕೆ ಕೆಲಸಕ್ಕೆ ಹೋಗುವ ಜನರ ದುಸ್ಥಿತಿ ಹೇಳತೀರದು. ರಸ್ತೆಯ ಬದಲಾವಣೆಗಿಂತ ರಾಜಕಾರಣಿಗಳು ಹೊಸ ಹೊಸ ವಾಹನಗಳ ಬದಲಾವಣೆಯಲ್ಲೇ ತಲ್ಲೀನರಾಗಿರುವುದು ವಿಷಾದನೀಯ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಮಂಗಳೂರು : ನಗರದ ಪಡೀಲ್‌ನಲ್ಲಿ ಆಕರ್ಷಣೀಯವಾಗಿ ಕಟ್ಟಲಾದ ಪ್ರಜಾಸೌಧದೊಳಕ್ಕೆ ಕಡತಗಳು ಆಮೆಗತಿಯಲ್ಲಿ ವಿಲೇವಾರಿಯಾಗುತ್ತಿದೆ, ಕೇಸ್ ವರ್ಕರ್‌ಗಳ ಮೇಲ್ವಿಚಾರಣೆಯಲ್ಲಿರುವ ಆಫೀಸ್ ಸುಪರಿಟೆಂಡೆಂಟ್‌ಗಳು ಮತ್ತು ಕೆಲವು ಅಧಿಕಾರಿಗಳು ಜಿಲ್ಲಾಧಿಕಾರಿಯವರಂತೆ ವರ್ತಿಸುತ್ತಿರುವ ಆರೋಪಗಳು ಸಿಬ್ಬಂದಿ ವಲಯದಿಂದಲೇ ಕೇಳಿಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೇಲೆ “ಪ್ರಜಾಸೌಧ” ಎಂಬ ಗೌರವಪೂರ್ಣ ಹೆಸರು ಬರೆದಿದೆ. ಆದರೆ ಒಳಗಡೆ ನಡೆಯುತ್ತಿರುವ ಪ್ರಜಾ ವ್ಯವಹಾರಗಳ ಸ್ಥಿತಿ ಅದರ ಹೆಸರಿಗೆ ತಕ್ಕಂತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಕೇಳಿಬರುತ್ತಿದೆ. ಸಾರ್ವಜನಿಕರು ಯಾವುದೇ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದಾಗ ಅದು ಫೈಲ್ (ಕಡತ) ರೂಪದಲ್ಲಿ ಕೇಸ್ ವರ್ಕರ್‌ಗಳಿಗೂ, ನಂತರ ಸಂಬಂಧಪಟ್ಟ ಅಧಿಕಾರಿಗಳಿಗೂ ಹೋಗಬೇಕು. ಸರ್ಕಾರದ ಇ-ಗವರ್ನೆನ್ಸ್ ಇಲಾಖೆಯ ಸುಪರ್ದಿಯಲ್ಲಿ “ಇ-ಆಫೀಸ್” ಸಾಫ್ಟ್‌ವೇರ್ ಮೂಲಕ ಈ ಪ್ರಕ್ರಿಯೆ ವೇಗಗೊಳ್ಳಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಹಿಂದಿನ ಆಶಯ – ಸಾರ್ವಜನಿಕರ ಕೆಲಸ ತ್ವರಿತವಾಗಿ ಆಗಬೇಕು, ಪಾರದರ್ಶಕತೆ ಬರಬೇಕು ಎಂಬುದು. ಆದರೆ ಜಿಲ್ಲಾಧಿಕಾರಿ ಕಚೇರಿಯ ನೈಜ ಸ್ಥಿತಿ ಇದಕ್ಕಿಂತ ವಿಭಿನ್ನವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.…

