Author: UllalaVani

Kannada News From Coastal Karnataka

ಮಂಗಳೂರು : ಶಿವ ಮತ್ತು ನಮ್ಮಿಬ್ಬರ ಸಂಬಂಧ ನನ್ನ ಈ ವೇದಿಕೆಯ ಅಲಂಕಾರಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಬಂಧುತ್ವದ ಬಂಧನ ಸಾಧನೆಗೆ ಸಾಧನ ಆಗಿರುತ್ತದೆ ಅನ್ನೋದು ಉತ್ತಮ. ಬದುಕಿನುದ್ದದ ಅವಿರತ ಶ್ರಮ, ಒದ್ದಾಟವು ಶಿವರಾಮ ಅವರ ಆರಾಧ್ಯ ಕುಲವೃತ್ತಿಗೆ ಸಾಥ್ ನೀಡಿದ್ದು, ಇವೆಲ್ಲವುಗಳ ಫಲಿತಾಂಶ ಶಿವಾ’ಸ್ ಸಲೂನ್‌ಗಳ ಉಗಮ, ವಿಸ್ತಾರತ್ವವಾಗಿದೆ. ನಾವು ವಿಶ್ವವಿಡೀ ಸಾಧನೆ ಸಿದ್ಧಿಸಿದರೂ ತವರೂರಲ್ಲಿ ಕನಿಷ್ಠ ಮಟ್ಟದ ಉದ್ಯಮ ನಡೆಸಿದಾಗ ಮಾತ್ರ ನಮ್ಮೂರ ಸಾಧಕರೆಣಿಸಲು ಸಾಧ್ಯವಾಗುವುದು. ಕ್ಷೌರ್ಯವೃತ್ತಿ ಮೂಲಕ ಮುಂಬಯಿ, ಮಂಗಳೂರು ಮಹಾನಗರಗಳಲ್ಲಿ ಹೆಸರುವಾಸಿಯಾದ ಶಿವಾಸ್ ಭವಿಷ್ಯದಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ಪಸರಿಸಿ ಇಡೀ ರಾಷ್ಟ್ರಕ್ಕೆ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಅಂತರಾಷ್ಟ್ರೀಯ ಪ್ರಸಿದ್ಧ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಎಂದರು.ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಮಂಗಳೂರು ಕದ್ರಿ ಇಲ್ಲಿನ ಶಾಂಘೈಗುಡ್ಡೆಯಲ್ಲಿನ ಎಸ್.ಕ್ಯೂಬ್ ಸಾಂಟ್ರೋ ಕಟ್ಟಡದಲ್ಲಿ ಬಾಲಿವುಡ್‌ನ ಪ್ರಸಿದ್ಧ ಹೇರ್ ಡಿಸೈನರ್ ಡಾ| ಶಿವರಾಮ ಕೆ.ಭಂಡಾರಿ ಕಾರ್ಕಳ ಆಡಳಿತ್ವದ ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್…

Read More

ತೊಕ್ಕೊಟ್ಟು,ಅ.28: ರಾಣಿ ಅಬ್ಬಕ್ಕ ದೇವಿಯ ಶೌರ್ಯ ಭೂಮಿಯಾದ ಉಳ್ಳಾಲದ ಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮವನ್ನು ಗೂಡುದೀಪಗಳ ಸಂಗಮಗಳ ಮೂಲಕ ಆಚರಣೆ ತಂದಿರುವಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕೊಟ್ಟು ಇದರ 17 ವರುಷದ ದೀಪಾವಳಿ ಸಂಭ್ರಮ – ಗೂಡುದೀಪ ಸಂಗಮ, ಗೂಡುದೀಪ ಸ್ಪರ್ಧಾ ಕಾರ್ಯಕ್ರಮ ನ. 1ರಂದು ಶನಿವಾರ ಸಂಜೆ 5 ರಿಂದ ತೊಕ್ಕೊಟಿನ ಒಳಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ತಿಳಿಸಿದ್ದಾರೆ. ಇವರು ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ವಿಭಾಗದಲ್ಲಿ ನಡೆಯಲಿದ್ದು, ಎಲ್ಲಾ ವಿಭಾಗಗಳಿಗೂ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಗದು ಮತ್ತು ಟ್ರೋಫಿ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಅಂತ ಹೇಳಿದ್ರು. ಸಭಾ ಕಾರ್ಯಕ್ರಮವನ್ನು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ.…

Read More

ಹಳೆಯಂಗಡಿ: 2026ರ ಫೆ.11ರಿಂದ 14ರ ವರೆಗೆ ಇತಿಹಾಸ ಪ್ರಸಿದ್ಧ ಹುತ್ ಸೆಯ್ಯಡ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್ ಕದಿಕೆ ಹಳೆಯಂಗಡಿ ಇಲ್ಲಿ ಎರಡು ವರ್ಷಕ್ಕೆ ನಡೆಯುವ ಉರೂಸ್ ಸಮಾರಂಭವು ಜರುಗಲಿದೆ. ಉರೂಸ್ ಸಂಬಂಧ ರವಿವಾರ ದರ್ಗಾ ವಠಾರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ನೂತನ ಉರೂಸ್ ಸಮಿತಿಯ ಪದಗ್ರಹಣ ಕಾರ್ಯಕ್ರಮ ಇದೇ ವೇಳೆ ನಡೆಯಿತು. ಉರೂಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹ್ಮಾನ್ ಕುಡುಂಬೂರು ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕದಿಕೆ, ಮುಹಮ್ಮದ್ ಅಶ್ರಫ್ ಪಡುತೋಟ, ಕಾರ್ಯದರ್ಶಿಗಳಾಗಿ ಎಚ್.ಕೆ. ಮುಹಮ್ಮದ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಜೊತೆ ಕಾರ್ಯದರ್ಶಿಯಾಗಿ ಫಕ್ರುದ್ದೀನ್, ಖಜಾಂಚಿ ಯಾಗಿ ಅಬ್ದುಲ್ ಖಾದರ್ ಸಾಗ್, ಪ್ರಚಾರ ಸಮಿತಿಯ ಸಂಚಾಲಕರಾಗಿ ಜಮಾಲುದ್ದೀನ್ ಕದಿಕೆ, ಸಿದ್ದೀಕ್ ಕದಿಕೆ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.

Read More

ಮಂಗಳೂರು,ಅ.28: ಮೀನು ಸಾಗಾಟದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ, ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿದ್ದ ಮೂವರು ಗಾಯಗೊಂಡ ಘಟನೆ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ವಾಹನದ ಚಾಲಕ ರತೀಶ್ (38). ವಾಹನದಲ್ಲಿದ್ದ ಶೈಲಜಾ (57) ಮತ್ತು ಶಾರದಾ(60) ಗಾಯಗೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಮೀನು ಸಾಗಾಟದ ಈ ಪಿಕ್ ವಾಹನ (ಕೆಎಲ್ 14 ಎನ್ 8273). ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿರ್ಲಕ್ಷ್ಯತನದಿಂದ ವಾಹನ ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Read More

AI Generated Hate in India ಅಥವಾ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಭಾರತದಲ್ಲಿ ಬಿತ್ತಲಾಗುತ್ತಿರುವ ದ್ವೇಷ..’ ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಒಂದು ವರದಿ ಬಿಡುಗಡೆಗೊಂಡಿತ್ತು. ಸೆಂಟರ್ ಫಾರ್ ದ ಸ್ಟಡಿ ಆಫ್ ಆನ್‌ಲೈನ್ ಹೇಟ್ ಎಂಬ ಸಂಸ್ಥೆಯು ಬಿಡುಗಡೆಗೊಳಿಸಿದ ಈ ವರದಿಯಲ್ಲಿ ದಂಗುಬಡಿಸುವ ಹಲವು ಮಾಹಿತಿಗಳಿದ್ದವು. ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾವನೆ ಜೀವಂತವಾಗಿರುವುದಕ್ಕೆ ಏನು ಕಾರಣ ಎಂಬ ಬಗ್ಗೆ ಹುಡುಕಾಟವನ್ನು ನಡೆಸಬಯಸುವ ಯಾರಿಗೇ ಆಗಲಿ ಈ ವರದಿಯಲ್ಲಿರುವ ಅಂಶಗಳು ಬಹಳ ಪ್ರಯೋಜನಕಾರಿಯಾಗಬಲ್ಲವು. 2023ರಿಂದ 2025ರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿರುವ ವೀಡಿಯೋ ಮತ್ತು ಚಿತ್ರಗಳನ್ನು ಈ ಸಂಸ್ಥೆಯು ಪರಿಶೀಲನೆಗೆ ಒಡ್ಡಿತು. ಮುಖ್ಯವಾಗಿ ಇನ್‌ಸ್ಟಾಗ್ರಾಮ್, ಎಕ್ಸ್ ಜಾಲತಾಣ ಮತ್ತು ಫೇಸ್‌ಬುಕ್‌ಗಳ ಮೇಲೆ ಗಮನಹರಿಸಿದ ಸಂಸ್ಥೆಯು ಈ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವೀಡಿಯೋಗಳು ಮತ್ತು ಚಿತ್ರಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದವುಗಳು ಎಷ್ಟಿವೆ ಎಂಬುದರ ಪತ್ತೆಗೆ ತೊಡಗಿತು. ಒಟ್ಟು 297 ಸಾಮಾಜಿಕ ಜಾಲತಾಣಗಳಲ್ಲಿ 1326ಕ್ಕಿಂತಲೂ ಅಧಿಕ ಎಐ ವೀಡಿಯೋ ಮತ್ತು ಚಿತ್ರಗಳು ಹಂಚಿಕೆಯಾಗಿರುವುದನ್ನು…

Read More

ಬೆಂಗಳೂರು, ಅಕ್ಟೋಬರ್ 28: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಆರ್​​ಎಸ್​ಎಸ್ ಚಟುವಟಿಕೆಗಳು ಹಾಗೂ ಪಥಸಂಚಲನ  ನಿರ್ಬಂಧಿಸಿ ಆದೇಶ ಹೊರಡಿಸಿದ್ದ ಕಾಂಗ್ರೆಸ್  ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆಯಾಗಿದೆ. ಪಥಸಂಚಲನ ನಿರ್ಬಂಧಿಸುವ ಸಂಬಧ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್​ನ  ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ನ ಧಾರವಾಡ ಪೀಠಕ್ಕೆ ಸಂಸ್ಥೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಭಳ್ಳಿ ಕಮಿಷನರ್​ಗೆ ನೋಟಿಸ್ ನೀಡಿದೆ. ಆರ್​ಎಸ್​ಎಸ್ ಪಥಸಂಚಲನ ನಿರ್ಬಂಧ ಬಗ್ಗೆ ಹೈಕೋರ್ಟ್ ಹೇಳಿದ್ದೇನು? 2025 ರ ಅ.18 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಆರ್​ಎಸ್​​ಎಸ್ ಪ್ರಶ್ನಿಸಿತ್ತು. ಈ ವಿಚಾರವಾಗಿ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್​ನ ಧಾರವಾಡ ಪೀಠ, ಅನುಮತಿಯಿಲ್ಲದೇ 10 ಜನ ಜನ ಸೇರಿದರೆ…

Read More

ಬೆಂಗಳೂರು, ಅಕ್ಟೋಬರ್​ 28: ಕರ್ನಾಟಕ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ಗೆ ರಾಜ್ಯ ಸರ್ಕಾರ ಗುಡ್​ ಬೈ ಹೇಳಿದ್ದು, ಇಂದಿನಿಂದ ನೇವಿ ಬ್ಲೂ ಪೀಕ್ ಕ್ಯಾಪ್‌ಗಲ್ಲಿ ಪೇದೆಗಳು ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಮಾದರಿಯ ಕ್ಯಾಪ್​ಗಳು ತೆಲಂಗಾಣ ಪೊಲೀಸ್​ ಯೂನಿಫಾರಂನಿಂದ ಪ್ರೇರಿತವಾಗಿದ್ದು, ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ ಇತಿಹಾಸದ ಪುಟ ಸೇರಿದೆ. ಬದಲವಾಣೆ ಯಾಕೆ? ದೀರ್ಘಾವಧಿಯಲ್ಲಿ ಸ್ಲೌಚ್ ಹ್ಯಾಟ್​ಗಳ ಬಳಕೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳು ಹೇಳಿದ್ದವು. ಅಲ್ಲದೆ ಇವುಗಳನ್ನು ಧರಿಸುವುದರಿಂದ ತಲೆ ಭಾಗದಲ್ಲಿ ಗಾಳಿಯ ಸಂಚಾರದ ಕೊರತೆಯೂ ಉಂಟಾಗಿ ಕಾನ್ಸ್‌ಟೇಬಲ್‌ಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಕೊಳ್ಳುತ್ತಿದ್ದವು. ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್​ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್​ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ಬಹಳ ಸಮಯದಿಂದ ಕಾನ್ಸ್‌ಟೇಬಲ್‌ಗಳು ದೂರುತ್ತಿದ್ದರು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್​ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ.…

Read More

ಉಳ್ಳಾಲ.ಅ,28: ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕಿಯರ ನಿಸ್ತಂತು ಚಾಲನಾ ತರಬೇತಿಯಲ್ಲಿ ರಾಜ್ಯದ 27 ಜಿಲ್ಲೆಗಳ ಗೃಹರಕ್ಷಕರು ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಘಟಕದ ಮೆರಿಟಾ ಡಿ’ಸೋಜ ಯಶಸ್ವಿಯಾಗಿ ತರಬೇತಿ ಪೂರೈಸಿದ್ದಾರೆ. ಮೆರಿಟಾ ಡಿಸೋಜ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳ ಇಲಾಖೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಇವರನ್ನು ಗೃಹರಕ್ಷಕ ಇಲಾಖೆಯ ಇನ್‌ಸ್ಪೆಕ್ಟರ್ ಯತೀಶ್ ಮತ್ತು ನಿಸಂತ್ತು ಇಲಾಖೆಯ ಸಬ್ ಇನ್ಸ್ಪೆಕ್ಟರ್ ವಿಠಲ್ ಅಭಿನಂದಿಸಿದ್ದಾರೆ.

Read More

ಬೆಂಗಳೂರು, ಅ.28: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 100ಮೀ. ಅಥ್ಲೆಟಿಕ್ಸ್‌ನಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಎಸ್ ನಾಯ್ಕ್ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಹಾಸನದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳು ಶಿಕ್ಷಣದ ಜೊತೆ ಕ್ರೀಡಾಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಓದಿನ ಜೊತೆಗೆ ಆಟಕ್ಕೂ ಒತ್ತು ನೀಡಿದಾಗ ಒಬ್ಬ ವಿದ್ಯಾರ್ಥಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಇದೀಗ ಸಂತೋಷ್ ಕುಮಾರ್ ಮತ್ತು ನಿಶಾ ಎಸ್ ನಾಯ್ಕ್ ದಂಪತಿಯ ಸುಪುತ್ರಿ ಸಾನ್ವಿ ಎಸ್ ನಾಯ್ಕ್ ಮಿಂಚಿನ ಓಟದ ಮೂಲಕ 100ಮೀ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಹೆತ್ತವರಿಗೂ, ತಾನು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಗೂ ಹೆಸರನ್ನು ತಂದುಕೊಟ್ಟಿದ್ದಾರೆ. ಇದೇ ರೀತಿ ಕಲಿಕೆಯಲ್ಲೂ, ಕ್ರೀಡೆಯಲ್ಲೂ ಉತ್ತಮ ಸಾಧನೆಗೈದು ಸಾನ್ವಿ ಇನ್ನಷ್ಟು ಗರಿಮೆಗಳನ್ನ ತಮ್ಮದಾಗಿಸಿಕೊಳ್ಳುವಂತಾಗಲಿ ಎಂಬುವುದು ನಮ್ಮೆಲ್ಲರ ಆಶಯ.

Read More

ಮಗು ಹಿಮಾನಿ ರಕ್ಷಿಸಿದ ವಿವೇಕ್ ಘಟನಾ ಸ್ಥಳದಲ್ಲಿ ಮಗುವನ್ನು ರಕ್ಷಿಸಿದ ಕ್ಷಣ ಉಳ್ಳಾಲ: ಆಟವಾಡುತ್ತಿದ್ದ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ ಮನೆ ಆವರಣದಲ್ಲಿರುವ 15 ಅಡಿ ಬಾವಿಗೆ ಬಿದ್ದಿದ್ದು, ಮಗುವನ್ನು ಸ್ಥಳೀಯ ಯುವಕ ಜೀವದ ಹಂಗು ತೊರೆದು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ದೇರಳಕಟ್ಟೆ ಬೆಳ್ಮ ಗ್ರಾಮದ ಮಾರಿಯಮ್ಮಗೋಳಿ ದೈವಸ್ಥಾನದ ಸಮೀಪ ಭಾನುವಾರ ಸಂಜೆ ವೇಲೆ ನಡೆದಿದೆ.ಗುರುಪ್ರಸಾದ್ ಎಂಬವರ ಮಗಳಾದ ಎರಡೂವರೆ ಹರೆಯದ ಹಿಮಾನಿಯನ್ನು ರಕ್ಷಿಸಲಾಗಿದೆ. ಮನೆಮಂದಿ ಅಂಗಳದಲ್ಲಿ ಕುಳಿತಿದ್ದ ಸಂದರ್ಭ ಅಂಗಳದಲ್ಲಿ ಆಟವಾಡುತ್ತಾ ಮಗು ಮನೆ ಆವರಣದಲ್ಲಿನ ತೆರೆದ ಬಾವಿಯೊಳಗೆ ಬಿದ್ದಿದೆ. 15 ಅಡಿ ಆಳದ ನೀರಿದ್ದ ಬಾವಿಯೊಳಗೆ ಬಿದ್ದ ಮಗುವನ್ನು ತಕ್ಷಣ ಚಿಕ್ಕಪ್ಪ ಜೀವನ್ ಎಂಬವರು ಹಗ್ಗ ಹಾಕಿ ರಕ್ಷಿಸಲು ಬಾವಿಗೆ ಇಳಿದಿದ್ದಾರೆ. ಆದರೆ ಈಜು ಬಾರದೇ ಇರುವುದರಿಂದ ಹಗ್ಗದ ಸಹಾಯದಲ್ಲಿ ನಿಂತು ಮಗುವಿನ ಕೈಯನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗದೇ ಅಲ್ಲೇ ಉಳಿದಿದ್ದರು. ಅದಾಗಲೇ ಒಂದು ಬಾರಿ ನೀರಿನೊಳಗೆ ಹೋಗಿ ಮಗು ಮೇಲೆ ಬಂದಿತ್ತು. ಭಾನುವಾರದ ದಿನವಾಗಿದ್ದರಿಂದಾಗಿ…

Read More