Author: UllalaVani

Kannada News From Coastal Karnataka

ಜ.05:ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ, ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿ’ಸೋಜಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯ ಮೌಲ್ಯ ರೂ. 25,000, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಜನವರಿ 11, 2026 ರಂದು ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20 ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವ್ಜೊ ಅವರು ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಿದ್ದಾರೆ. ಕೊಂಕಣಿ-ಕನ್ನಡ ಕವಿ ಮತ್ತು ಸಣ್ಣ ಕಥೆಗಾರ ವಲೇರಿಯನ್ ಡಿಸೋಜಾ ಅವರು ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುತ್ತಾರೆ. ಅವರು 1947 ಜುಲೈ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ವಗ್ಗ ಎಂಬ ಸಣ್ಣ ಪಟ್ಟಣದಲ್ಲಿ ಪೀಟರ್ ಮತ್ತು ಮೇರಿ ಡಿ’ಸೋಜಾ ಅವರಿಗೆ ನಾಲ್ಕನೇ ಮಗುವಾಗಿ ಜನಿಸಿದರು. ಹದಿನೇಳನೇ ವಯಸ್ಸಿನಲ್ಲಿ,…

Read More

ಬಾಳೆಪುಣಿ,ಜ.05: ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪ್ರತಿ ವರ್ಷ ಈ ರೀತಿಯ ಕ್ರೀಡಾ ಕೂಟ ನಡೆಸುವ ಮೂಲಕ ಎತ್ತಿ ಹಿಡಿಯಬೇಕು. ಮಂಗಳೂರು ಕ್ಷೇತ್ರದಲ್ಲಿ ದಲಿತರ ಉದ್ಧಾರಕ್ಕಾಗಿ ಮಾಡಿದ ಮನವಿಗೆ ಕ್ಷೇತ್ರದ ಶಾಸಕರ ಜೊತೆಗೆ ಚರ್ಚಿಸಿ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇವರು ಉಳ್ಳಾಲ ವಿದಾನಸಭಾ ಕ್ಷೇತ್ರದ ಬಾಳೆಪುಣಿ ರಾಜೀವ್ ಗಾಂಧಿ ಪಂಚಾಯಿತಿ ಮೈದಾನದಲ್ಲಿ ನಡೆದ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ, ಉಳ್ಳಾಲ ತಾಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಘಟಕದಿಂದ ಪರಿಶಿಷ್ಟ ಜಾತಿ, ಪಂಗಡದ ಸಮಾಜ ಬಾಂಧವರಿಗೆ ನಡೆಸಲಾದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಮಾದರಿಯ “ಮಹಾನಾಯಕ ಜೈ ಭೀಮ್ ಟ್ರೋಫಿ” -2026″ರ ಪಂದ್ಯಾಕೂಟದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ನಮ್ಮ ದೇಶದ ಜನರ ಭಾಷೆ, ವರ್ಣ, ಸಂಸ್ಕೃತಿ, ಆಹಾರ ಪದ್ಧತಿ, ಆಚಾರ, ವಿಚಾರ, ಪದ್ಧತಿಗಳು ಬೇರೆ ಬೇರೆ ಆಗಿದ್ದರೂ ಎಲ್ಲರಲ್ಲೂ ಭಾರತೀಯರು ಎಂಬ ಭಾವನೆ ಒಕ್ಕೊರಲಲ್ಲಿ…

Read More

ಕಲ್ಲಾಪು: ಬುರ್ದುಗೋಳಿ ಕಲ್ಲಾಪುವಿನ ಮಣ್ಣು ನನಗೆ ಮನೆ ಅನ್ನುವ ಭಾವನೆ ನೀಡಿದೆ. ಬೇರೆ ಊರಿಗೆ ಬಂದಿದ್ದೇವೆ ಎಂಬ ಯಾವುದೇ ರೀತಿಯ ಅಂಜಿಕೆ ಇಲ್ಲಿ ಎಷ್ಟೂ ಅನಿಸಿಲ್ಲ. ಸಮಿತಿ ಸದಸ್ಯರ ಪ್ರೀತಿ, ಅಪ್ಯಾಯತೆ, ಆತ್ಮೀಯತೆ ಹಾಗೂ ದೈವದಲ್ಲಿ ಇಟ್ಟ ಅಚಲ ನಂಬಿಕೆ ಇವೆಲ್ಲವೂ ನನಗೆ ಅಜ್ಜನ ಕಾರಣೀಕ ಶಕ್ತಿಯ ಜೀವಂತ ಪ್ರತ್ಯಕ್ಷ ಉದಾಹರಣೆಯಂತೆ ಕಾಣುತ್ತಿವೆ.ನಾವು ದೈವವನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೋ, ಆಪತ್ತು ಬಂದಾಗ ದೈವಗಳೇ ಕೈಚಾಚಿ ನಮ್ಮನ್ನು ರಕ್ಷಿಸುತ್ತವೆ ಎಂದು ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಗುಳಿಗ ಕೊರಗಜ್ಜ ದೈವದ ವರ್ಷಾವಧಿ ಕೋಲದಲ್ಲಿ ಭಾಗವಹಿಸಿ ಮಾತನಾಡಿದರು.ಕಲ್ಲಾಪುವಿನ ಮಣ್ಣಿನಲ್ಲಿ ನಮಗೆ ಏನಾಗಿದೆ ಎಂಬುದೇ ಮುಖ್ಯ. ಜೀವನದ ಪ್ರತಿಯೊಂದು ನಿರ್ಧಾರವೂ ಕೊರಗಜ್ಜನ ಅಪ್ಪಣೆಯಿಲ್ಲದೆ ತೆಗೆದುಕೊಳ್ಳುವುದೇ ಇಲ್ಲ. ಅಜ್ಜ ನಮ್ಮನ್ನು ಇಷ್ಟಪಡುತ್ತಾರಾ, ನಾವು ಅವರನ್ನು…

Read More

ಉಳ್ಳಾಲ, ಜ:4: ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳದ ಕುರಿತಾದ ʻಸಿಂಗಾರ ಸುಗಿಪುʼ ತುಳು ಭಕ್ತಿಗೀತೆ ವಿಡಿಯೋ ಹಾಡುಗಳ ಬಿಡುಗಡೆಯನ್ನು ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕ್ಷೇತ್ರದಲ್ಲಿ ಶನಿವಾರ ಜರಗಿದ ವರ್ಷಾವಧಿ ಕೋಲ ಸಂದರ್ಭ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಅಜ್ಜನ ಕ್ಷೇತ್ರದ ಕುರಿತ ವೀಡಿಯೋ ಭಕ್ತಿಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಮನೆಮನೆಗಳಲ್ಲಿ ಈ ಭಕ್ತಿಗೀತೆಗಳು ನಾದಿಸುತ್ತಾ, ಕ್ಷೇತ್ರಕ್ಕೂ ತಂಡಕ್ಕೂ ಉತ್ತಮ ಹೆಸರು ಮತ್ತು ಗೌರವ ದೊರಕಲಿ. ದೈವವನ್ನು ನಂಬುವ ಎಲ್ಲ ಭಕ್ತರೂ ಇದನ್ನು ನೋಡಬೇಕು, ಆಲಿಸಬೇಕು. ಈ ಪ್ರಯತ್ನ ಸುಗ್ಗಿಯಂತೆ ಸಮೃದ್ಧ ಫಲ ನೀಡಲಿ, ದೈವ ಕೃಪೆ ಸದಾ ಇರಲಿ ಎಂದು ಹಾರೈಸಿದರು.ಮಾ. ಅಭಿಷೇಕ್‌ ಕಲ್ಲಾಪು ಹಾಗೂ ಕು.ಸಾನ್ವಿ ಕೊಟ್ಟಾರಿ ಗಾಯನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ತೋನ್ಸೆ ಪುಷ್ಕಳ್‌ ಕುಮಾರ್‌ ಸಾಹಿತ್ಯ ನೀಡಿದ್ದಾರೆ. ಸಮೀರ್‌ ಮುಡಿಪು ಧ್ವನಿ ಮುದ್ರಣ, ಸಂದೀಪ್‌ ಕಲ್ಲಾಪು ಛಾಯಗ್ರಹಣ, ಸಂಕಲನ, ಪ್ರಚಾರಕಲೆಯನ್ನು ಎಸ್ಎನ್.ಸಿ ಹಾಗೂ ಪುರುಷೋತ್ತಮ್‌ ಕಲ್ಲಾಪು,…

Read More

 ಉಡುಪಿ,ಜ.3: ಹೆಜಮಾಡಿ ಕಡಲ ತೀರದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂದಿದ್ದು, ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ಕಡಲ ತೀರಕ್ಕೆ ಜಿಗಿದು ಬಂದ ಪರಿಣಾಮ ಸ್ಥಳೀಯ ನಿವಾಸಿಗಳಿಗೆ ಮೀನಿನ ಮಹಾ ಸುಗ್ಗಿ ದೊರೆತಿದೆ. ಕೈರಂಪಣಿ ಬಲೆ ಬೀಸುವ ವೇಳೆ ಸಮುದ್ರದ ತೀರ ಪ್ರದೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಬೂತಾಯಿ ಮೀನುಗಳು ಜಿಗಿದು ಬಂದಿವೆ. ಅಚ್ಚರಿಯ ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ತೀರ ಪ್ರದೇಶದ ನಿವಾಸಿಗಳು ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ.ಕಡಲ ತೀರದಲ್ಲಿ ಬೂತಾಯಿ ಮೀನುಗಳು ಜಿಗಿಯುತ್ತಿರುವುದು ಹಾಗೂ ಜನರು ಅವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಅಪರೂಪದ ಘಟನೆ ದೃಶ್ಯ ರಮಣೀಯವೆನಸಿದರೂ ಮಾನವ ಆಹಾರ ಶೃಂಖಲೆಯನ್ನು ಒಂದೊಮ್ಮೆ ನೆನಪಿಸುತ್ತದೆ. ಆದರೂ ಇಂತಹ ಮೀನಿನ ಅಪ್ರತೀಕ್ಷಿತ ಸುಗ್ಗಿ ಕಂಡು ತೀರ ಪ್ರದೇಶದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದು, ಸಮುದ್ರ ನೀಡಿದ ಈ ಪ್ರಕೃತಿ ವರವನ್ನು ಸಂಭ್ರಮದಿಂದ ಸ್ವೀಕರಿಸಿದ್ದಾರೆ.

Read More

ಮಂಗಳೂರು,ಜ.03: ಬೋಂದೆಲ್‌ನ ಸೇಂಟ್ ಲಾರೆನ್ಸ್ ದೇಗುಲ ಮತ್ತು ಚರ್ಚ್‌ನ ಪ್ಯಾರಿಷ್ ಧರ್ಮಗುರು ಫಾದರ್ ಆಂಡ್ರ್ಯೂ ಲಿಯೋ ಡಿ’ಸೋಜಾ ಅವರು ಜನವರಿ 1 ರಂದು ಕಾರು ಅಪಘಾತಕ್ಕೀಡಾಗಿದ್ದರೂ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಫಾದರ್ ಡಿ’ಸೋಜಾ ಅವರು ತಮ್ಮ ನಿವಾಸದಲ್ಲಿ ನಡೆದ ಹೊಸ ವರ್ಷದ ಕೂಟದಲ್ಲಿ ಭಾಗವಹಿಸಿದ ನಂತರ ತಮ್ಮ ಹುಟ್ಟೂರು ನೀರುಡೆಯಿಂದ ಬೊಂದೆಲ್ ಚರ್ಚ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮರಕಡ ಮೂಲಕ ಹಾದುಹೋಗುವಾಗ ಅವರ ಕಾರಿನ ಒಂದು ಟೈರ್ ಸ್ಫೋಟಗೊಂಡು ವಾಹನ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ.ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರು ರಸ್ತೆಯಿಂದ ಹೊರಟು ರಸ್ತೆಯ ಪಕ್ಕದಲ್ಲಿರುವ ಮನೆಯ ಅಂಗಳದಲ್ಲಿ ಪಕ್ಕಕ್ಕೆ ಬಿದ್ದಿದೆ. ಅಪಘಾತದಲ್ಲಿ ಫಾದರ್ ಡಿ’ಸೋಜಾ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.ಅಪಘಾತವನ್ನು ಕಂಡ ಅನೇಕ ಪ್ರೇಕ್ಷಕರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರನ್ನು ಮೇಲೆತ್ತಲು ಮತ್ತು ಫಾದರ್ ಡಿಸೋಜಾ ಅವರನ್ನು ವಾಹನದಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು. ಘಟನೆಯ ನಂತರ ಮಾತನಾಡಿದ ಫಾದರ್ ಡಿ’ಸೋಜಾ, ದೇವರ ದಯೆಯಿಂದ ಇಂತಹ ಭೀಕರ ಅಪಘಾತದಿಂದ ಪಾರಾಗಿದ್ದಾನೆ…

Read More

ಕೊಲ್ಯ: ಜಗದ್ಗುರು ಶ್ರೀ ಶ್ರೀ ರಮಾನಂದ ಸ್ವಾಮೀಜಿಯವರು ಸ್ಥಾಪಿಸಿದ, “ದಕ್ಷಿಣದ ಕೊಲ್ಲೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಅನನ್ಯ ಆರಾಧಕರು ಹಾಗೂ ಶ್ರೀ ಮೂಕಾಂಬಿಕ ಬಿಲ್ಡರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಚಂದ್ರಹಾಸ್ ಪಂಡಿತ್ ಹೌಸ್ ಅವರನ್ನು ಆಯ್ಕೆ ಮಾಡಲಾಗಿದೆ. ಧಾರ್ಮಿಕ ಶ್ರದ್ಧೆ, ಸಾಮಾಜಿಕ ಬದ್ಧತೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ಗುರುತಿಸಿಕೊಂಡಿರುವ ಚಂದ್ರಹಾಸ್ ಪಂಡಿತ್ ಹೌಸ್ ಅವರ ಆಯ್ಕೆ ದೇವಸ್ಥಾನದ ದೈನಂದಿನ ಆಡಳಿತ, ಧಾರ್ಮಿಕ ಆಚರಣೆಗಳ ಸುವ್ಯವಸ್ಥೆ, ಭಕ್ತರಿಗೆ ಅನುಕೂಲವಾಗುವ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಕ್ಷೇತ್ರದ ಸಮಗ್ರ ಪ್ರಗತಿಗೆ ಅವರು ಮಹತ್ವದ ಕೊಡುಗೆ ನೀಡುವ ವಿಶ್ವಾಸ ವ್ಯಕ್ತವಾಗಿದೆ.ಪೌರಾಣಿಕ ಹಿನ್ನೆಲೆಯಂತೆ ಕೋಲ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೇ “ಕೊಲ್ಯ” ಎಂದು ನಾಮಾಂಕಿತವಾಗಿದ್ದು, ತಾಯಿ ಶ್ರೀ ಮೂಕಾಂಬಿಕೆಯ ಕೃಪೆಯಿಂದ ಈ ಕ್ಷೇತ್ರವು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ. ನೂತನ ಅಧ್ಯಕ್ಷರ ನೇತೃತ್ವದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಧಾರ್ಮಿಕ ಪ್ರವಾಸೋದ್ಯಮದ ಉತ್ತೇಜನ…

Read More

ಮುಲ್ಕಿ,ಜ.2: ಎಮ್ಮೆ ಹಾಗೂ ಹಸುಗಳನ್ನು ಹೊಂದಿದ್ದ ವ್ಯಕ್ತಿಯೋರ್ವರ ಸುಲಿಗೆಗೆ ಯತ್ನಿಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬAಧಿಸಿದ0ತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಅಂಗಾರಗುಡ್ಡೆಯ ನಿವಾಸಿ ಅಬೂಬಕ್ಕರ್ ಎಂಬುವವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಅಬೂಬಕ್ಕರ್ ಅವರ ಬಳಿ ಮೂವರು ಜೋಡಿ ಎಮ್ಮೆ, ಹಾಲು ನೀಡುವ ಐದು ಹಸುಗಳು ಹಾಗೂ ಇನ್ನಿತರ ಎತ್ತು-ಎಮ್ಮೆಗಳನ್ನು ಸಾಕುತ್ತಿದ್ದರು. ಇತ್ತೀಚೆಗೆ ಅವರ ಎಮ್ಮೆಗಳು ಕಂಬಳ ಕೂಟದಲ್ಲಿ ಬಹುಮಾನ ಗೆದ್ದಿದ್ದವು. ಪಕ್ಕದ ಗ್ರಾಮದಿಂದ ಬಂದಿದ್ದ ಮೂವರು ಆರೋಪಿಗಳು ಅಬೂಬಕ್ಕರ್ ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಬೂಬಕ್ಕರ್ ಅವರ ತಂದೆ ಶಂಶುದ್ದೀನ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅಬೂಬಕ್ಕರ್ ಅವರು ಮಧ್ಯಪ್ರವೇಶಿಸಿ ತಂದೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಅಬೂಬಕ್ಕರ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ…

Read More

ಬಳ್ಳಾರಿ, ಜನವರಿ 02: ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರವೀಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಎಂಎಲ್​​ಎ ನಾರಾ ಭರತ್​​ ರೆಡ್ಡಿ ವಿರುದ್ಧ ಸಮರಕ್ಕೆ ಕಾರಣವಾಗಿದೆ. ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್​ ಮಾಡಲು ಇಂತಹ ನೀಜ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ ಎಂದು ಏಕವಚನದಲ್ಲೇ ಭರತ್​​ ರೆಡ್ಡಿ ಕಿಡಿಕಾರಿದ್ದಾರೆ. ಇದೆಲ್ಲದರ ನಡುವೆ ಯುವಕ ರಾಜಶೇಖರ್​​ ಸಾವಿಗೆ ಕಾರಣವಾದ ಬುಲೆಟ್ ಫೈರ್​​ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಬ್ಯಾನರ್ ವಿಚಾರವಾಗಿ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಶಾಸಕ ಭರತ್ ರೆಡ್ಡಿ ಆಪ್ತನ ಬಾಡಿಗಾರ್ಡ್ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬ0ಧ ಖಾಸಗಿ ಗನ್‌ಮ್ಯಾನ್‌ಗಳ ೩ಗನ್ ಸೀಜ್ ಮಾಡಿದ್ದಾರೆ. ಅವುಗಳನ್ನು…

Read More

ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ. ಸರಕುಗಳ ಮೇಲೆ ಪ್ರಸ್ತುತ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ.ಫೆ.1 ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಅಂತಹುದೇ ಉತ್ಪನ್ನಗಳಿಗೆ ಶೇ. 40 ರಷ್ಟು ಜಿಎಸ್‌ಟಿ ದರ ಇರಲಿದೆ. ಬೀಡಿಗಳಿಗೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೀಳಲಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು, ಆದರೆ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುತ್ತವೆ. ಬುಧವಾರ ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾ ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ)…

Read More