ಬಾಳೆಪುಣಿ,ಜ.05: ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪ್ರತಿ ವರ್ಷ ಈ ರೀತಿಯ ಕ್ರೀಡಾ ಕೂಟ ನಡೆಸುವ ಮೂಲಕ ಎತ್ತಿ ಹಿಡಿಯಬೇಕು. ಮಂಗಳೂರು ಕ್ಷೇತ್ರದಲ್ಲಿ ದಲಿತರ ಉದ್ಧಾರಕ್ಕಾಗಿ ಮಾಡಿದ ಮನವಿಗೆ ಕ್ಷೇತ್ರದ ಶಾಸಕರ ಜೊತೆಗೆ ಚರ್ಚಿಸಿ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇವರು ಉಳ್ಳಾಲ ವಿದಾನಸಭಾ ಕ್ಷೇತ್ರದ ಬಾಳೆಪುಣಿ ರಾಜೀವ್ ಗಾಂಧಿ ಪಂಚಾಯಿತಿ ಮೈದಾನದಲ್ಲಿ ನಡೆದ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ, ಉಳ್ಳಾಲ ತಾಲೂಕು ಕ್ರೀಡಾ ಮತ್ತು ಸಾಂಸ್ಕೃತಿಕ ಘಟಕದಿಂದ ಪರಿಶಿಷ್ಟ ಜಾತಿ, ಪಂಗಡದ ಸಮಾಜ ಬಾಂಧವರಿಗೆ ನಡೆಸಲಾದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಮಾದರಿಯ “ಮಹಾನಾಯಕ ಜೈ ಭೀಮ್ ಟ್ರೋಫಿ” -2026″ರ ಪಂದ್ಯಾಕೂಟದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.
ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ನಮ್ಮ ದೇಶದ ಜನರ ಭಾಷೆ, ವರ್ಣ, ಸಂಸ್ಕೃತಿ, ಆಹಾರ ಪದ್ಧತಿ, ಆಚಾರ, ವಿಚಾರ, ಪದ್ಧತಿಗಳು ಬೇರೆ ಬೇರೆ ಆಗಿದ್ದರೂ ಎಲ್ಲರಲ್ಲೂ ಭಾರತೀಯರು ಎಂಬ ಭಾವನೆ ಒಕ್ಕೊರಲಲ್ಲಿ ಮೂಡಿಸಲು ಅದು ಬ್ಯೂಟಿ ಆಫ್ ಇಂಡಿಯಾ ಎಂದೆನಿಸಿಕೊಳ್ಳಲು ಮಹಾನಾಯಕ ಡಾ. ಅಂಬೇಡ್ಕರ್ ಅವರ ಸಂವಿಧಾನ ಕಾರಣ ಎಂದು ಹೇಳಿದರು.

ಶಾಸಕರಾದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ್ ಅವರು ಇಂತಹ ಪಂದ್ಯಕೂಟ ನಡೆಯುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹಾಗೂ ಅವರ ಆಪ್ತಸಹಾಯಕರಾದ ವಿಜಯ್ ಕುಮಾರ್ ಹಾಗೂ ಬಾಳೆಪುಣಿ ಗ್ರಾಮ ಪಂಚಾಯತ್ ಸಾಧನೆಗಳಿಗೆ ಇದರ ಜೊತೆಗೆ ಮಂಗಳೂರು ವಿಧಾನಸಭಾ ಸ್ಥಳೀಯಾಡಳಿತ ಸಂಸ್ಥೆಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ಚುನಾಯಿತ ಪ್ರತಿನಿಧಿಗಳು ಹಾಗೂ ಧಾರ್ಮಿಕ ಕ್ಷೇತ್ರದ ಮುಖಂಡರುಗಳಿಗೆ ಗೌರವ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಪಂದ್ಯಕೂಟಕ್ಕೆ ಸಚಿವರು ಹಾಗೂ ಶಾಸಕರು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದ್ರು. ಇದೇ ವೇಳೆ ಸಚಿವ ಜಾರಕಿ ಹೊಳಿ ಹಾಕಿರೋ ಬಾಲ್‌ಗೆ ಸ್ಪೀಕರ್ ಯು.ಟಿ.ಖಾದರ್ ಕ್ಲೀನ್ ಬೊಲ್ಡ್ ಆಗಿದ್ದಾರೆ.

ಹೀಗೆ ಸ್ವಲ್ಪ ಸಮಯ ಆಟವಾಡಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಡಾ. ಯು. ಟಿ. ಇಫ್ತಿಕರ್ ಅಲಿ,ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಬಾಳೆಪುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೆರೀಫ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಭರತ್ ಶೆಟ್ಟಿ, ಬಶೀರ್, ರಾಜ್ಯ ಸಂಚಾಲಕ ಜಗದೀಶ್ ಗಂಗೊಳ್ಳಿ, ಸಂಚಾಲಕ ಪ್ರವೀಣ್ ಕುಮಾರ್ ಜೆ.ಪಿ, ಸಂಚಾಲಕ ಸುರೇಂದ್ರ ಕುಂದಾಪುರ, ಸಂಘಟನಾ ಕಾರ್ಯದರ್ಶಿ ರವಿ ಎಸ್, ಜಿಲ್ಲಾ ಎಸ್ ಸಿ ಎಸ್ ಟಿ ಘಟಕ ಅಧ್ಯಕ್ಷ ದಿನೇಶ್ ಮೂಳೂರು ಉಪಸ್ಥಿತರಿದ್ದರು.
ಕ್ರೀಡಾಕೂಟ ಸಂಯೋಜಕ ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.



