Author: UllalaVani

Kannada News From Coastal Karnataka

ಫರಿದಾಬಾದ್ ಸ್ಫೋಟಕ ಪ್ರಕರಣಕ್ಕೆ ಸಂಬAಧಿಸಿದoತೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಜಂಟಿ ಭದ್ರತಾ ಪಡೆಗಳು ಬಂಧಿಸಿವೆ. ಶ್ರೀನಗರ ಪೊಲೀಸ್ & ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ ಜಂಟಿ ಕಾರ್ಯಾಚರಣೆ ನಡೆಸಿ, ಮೌಲ್ವಿ ಇಮಾಮ್ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಿವೆ. ಆರೋಪಿ ಮನೆಯಿಂದ ಐದು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಪತ್ನಿಯನ್ನು ಶಂಕಿತ ಮೂಲಭೂತವಾದ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಮೌಲ್ವಿಯ ವಿಚಾರಣೆ ನಡೆಸಿದಾಗ ಮುಜಮ್ಮಿಲ್ ನಂಟು ಪತ್ತೆಯಾಗಿದೆ. ಇರ್ಫಾನ್ ಅಹ್ಮದ್ ವಾಗೆ, ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಆರೋಪಿಯು ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಜೊತೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ.

Read More

ಕಡಬ; ಕಡಬ ನೂಜಿಬಾಳ್ತಿಲ ಗ್ರಾಮದ ಯುವಕನೋರ್ವ ಬೆಂಗಳೂರಿನ ಬಾಡಿಗೆ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ (25) ಎಂದು ಗುರುತಿಸಲಾಗಿದೆ. ಅವರು ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿದ್ದಾನೆ.ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More

ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ಯವರ ಶಿಫಾರಸ್ಸಿನ ಮೇರೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧಕ್ಷೆ ಉಷಾ ಅಂಚನ್ ರವರು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಶಾರದಾ ಅರಸು ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.

Read More

ಮಂಗಳೂರು, ನ. 12; ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಎಕ್ಕೂರು ಮೈದಾನ ಬಳಿ ಮತ್ತು ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಎಕ್ಕೂರಿನಲ್ಲಿ ಹರಿಪ್ರಸಾದ್ ನನ್ನು ಹಾಗೂ ಪಡೀಲ್ ನಲ್ಲಿ ಮುಹಮ್ಮದ್ ಶಾರೂಕ್ ನನ್ನು ಬಂಧಿಸಲಾಗಿದೆ.ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಂಟ್ವಾಳ, ನ. 12 ; ಬೆಂಜನಪದವಿನಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದ ಮುಂಬೈ ಮೂಲದ ಅವಿವಾಹಿತ ಯುವತಿಯೊಬ್ಬಳು ನವೆಂಬರ್ 9 ರಿಂದ ಕಾಣೆಯಾಗಿದ್ದಾಳೆ ಎಂದು ವರದಿಯಾಗಿದೆ. ನಾಪತ್ತೆಯಾದ ಯುವತಿಯನ್ನು ಬೆಂಜನಪದವಿನ ಶಿವಾಜಿನಗರದ ನಿವಾಸಿ ಮರಿಯಾ ಆಲ್ಬರ್ಟ್ ಡಿಸೋಜಾ ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ, ಮರಿಯಾ ಒಂದು ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ನಂತರ, ಬೆಂಜನಪದವಿನಲ್ಲಿರುವ ತನ್ನ ಅತ್ತೆ ಮೊಲ್ಲಿ ಟೆಲ್ಲಿಸ್ ಅವರೊಂದಿಗೆ ವಾಸವಾಗಿದ್ದಳು. ಆಕೆಯ ತಂದೆ ಆಲ್ಬರ್ಟ್ ಡಿಸೋಜಾ ಅವರು ಮುಂಬೈನಲ್ಲಿ ನೆಲೆಸಿದ್ದಾರೆ.ನವೆಂಬರ್ 9 ರಂದು, ಆಕೆಯ ಅತ್ತೆ ಚರ್ಚ್‌ಗೆ ಹೋಗಿದ್ದರು. ಈ ವೇಳೆ ಮರಿಯಾ ಮನೆಯಿಂದ ಹೊರಟುಹೋಗಿದ್ದು, ಹಿಂತಿರುಗಿಲ್ಲ ಎಂದು ತಿಳಿದುಬಂದಿದೆ.ಆಕೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಣೆಯಾದ ಯುವತಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

Read More

ಕೊಣಾಜೆ,ನ,12:ಕೊಣಾಜೆ ಗ್ರಾಮದ ಬೊಲ್ಮದಪ್ಪೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಸೋಮವಾರ ರಾತ್ರಿ ಹರಕೆಯ ಕೋಲೋತ್ಸವಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಸಂದರ್ಭ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಾಪ್ ಕಾಮ್ಸ್ ಅಧ್ಯಕ್ಷರಾದ ಪ್ರಶಾಂತ್ ಗಟ್ಟಿ ಕುರ್ನಾಡು, ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾದ ನವೀನ್ ಗಟ್ಟಿ ನೆಟ್ಲ, ಹಾಗೂ ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಸುಂದರ್ ಬಂಗಾಡಿ ಇವರನ್ನು ಶ್ರೀ ಕ್ಷೇತ್ರದ ಪರವಾಗಿ ಗೌರವಿಸಲಾಯಿತು.. ಕ್ಷೇತ್ರದ ಮಾರ್ಗದರ್ಶಕರಾದ ಸುದರ್ಶನ್ ಭಟ್ ಕೊಣಾಜೆ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಳ್ಳಿಮಾರು, ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲಾ ಕ್ಷೇತ್ರದ ಮಧ್ಯಸ್ಥರಾದ ದೇವದಾಸ ಗಟ್ಟಿ ಕಾಯಂಗಳ, ಯಜಮಾನರಾದ ನೇಮು ಗಟ್ಟಿ ಕೊರಂತೋಡಿ,ಯಜಮಾನರ ಪ್ರತಿನಿಧಿ ಮಾಧವಗಟ್ಟಿ ಕೆಳಗಿನ ಮನೆ, ಟ್ರಸ್ಟಿನ ಅಧ್ಯಕ್ಷರಾದ ವಸಂತ್ ಕೆ ಎನ್ ಕುಂಪಲ, ಪ್ರಮುಖರಾದ ಚಂದ್ರಶೇಖರ ಗಟ್ಟಿ ಅಂದಾಡಿ, ಕೇಶವ ಗಟ್ಟಿ ಪಿಲಾರ್, ವಾಸುದೇವ ಕೊಣಾಜೆ, ಪ್ರವೀಣ್ ಗಟ್ಟಿ…

Read More

ಮಂಗಳೂರು,ನ.12: ಮಂಗಳೂರು ನಗರದ , ಶಿವಬಾಗ್ ಮುಖ್ಯರಸ್ತೆಯಲ್ಲಿ ನೂತನ ಹಾಗು ಅತ್ಯಾಧುನಿಕ ಉಪಕರಣಯುಕ್ತ, ಸ್ವಸ್ಥ್ಯ ಫಿಸಿಯೋಥೆರಪಿ ಆಂಡ್ ರಿಹ್ಯಾಬಿಲಿಟೇಶನ್ ಕ್ಲಿನಿಕ್ ಆರಂಭಗೊAಡಿದೆ.ನಿಟ್ಟೆ ವಿಶ್ವವಿದ್ಯಾಲದ ಕುಲಾಧಿಪತಿ ಎನ್ ವಿನಯ ಹೆಗ್ಡೆ ಮತ್ತು ಲಕ್ಷ್ಮಿ ಮೆಮೋರಿಯಲ್ ಸಂಸ್ಥೆಯ ಅಧ್ಯಕ್ಷ ಎ ಜೆ ಶೆಟ್ಟಿ ಯವರು, ನೂತನ ಕ್ಲಿನಿಕ್‌ನ್ನು ಉದ್ಘಾಟಿಸಿದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪೂಜ್ಯ ಜೀತಕಾಮನಂದ್ ಮಹಾರಾಜ ಆಶೀರ್ವದಿಸಿದರು. ಸ್ವಾಸ್ಥ್ಯ ಘಟಕದ ವೆಸ್ಟಿಬುಲರ್ ರಿಹ್ಯಾಬಿಲಿಟೇಶನ್ ವಿಭಾಗವನ್ನು ನಿಟ್ಟೆ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾಕ್ಟರ್ ಶಾಂತಾರಾಮ್ ಶೆಟ್ಟಿ ಮತ್ತು ಶ್ರೀ ವಿಶಾಲ್ ಹೆಗ್ಡೆ ನೆರವೇರಿಸಿದರು. ಎಲೆಕ್ಟ್ರೋಥೆರಪಿ ಚಿಕಿತ್ಸಾ ವಿಭಾಗ ವನ್ನು ಡಾಕ್ಟರ್ ಹಂಸರಾಜ್ ಆಳ್ವ ಮತ್ತು ಡಾಕ್ಟ್ಪರ್ ಕಿಶೋರ್ ಶೆಟ್ಟಿ ನೆರವೇರಿಸಿದರು. ವ್ಯಾಯಾಮ ಚಿಕಿತ್ಸಾ ಘಟಕವನ್ನು ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾಕ್ಟ್ಪರ್ ಮೂಡಿತ್ತಾಯ ನೆರವೇರಿಸಿದರು. ಮಂಗಳೂರು ದಕ್ಷಿಣ ಶಾಸಕ ಶ್ರೀ ವೇದವ್ಯಾಸ್ ಕಾಮತ್ ಅವರು ಅತಿಥಿಗಳನ್ನು ಉದ್ದೇಶಿಸಿ ಮಾತಾಡಿದರು. ನಮ್ಮ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ವಿಶೇಷ ಹಾಗು ವಿಭಿನ್ನ ಸಲಕರಣೆ, ರೋಗಿಗಳ ಶಾರೀರಿಕ…

Read More

ಕಾಸರಗೋಡು: ಭಾರೀ ಪ್ರತಿಭಟನೆ ಹಾಗೂ ಕಾನೂನು ಹೋರಾಟಗಳ ಮಧ್ಯೆಯೂ ನಾಳೆಯಿಂದ ಕುಂಬಳೆಯಲ್ಲಿ ನೂತನವಾಗಿ ನಿರ್ಮಿಸಲಾದ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ. ಅರಿಕ್ಕಾಡಿ (ಕುಂಬಳೆ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್‌ಗೇಟ್‌ನಲ್ಲಿ ವಾಹನ ಸವಾರರಿಂದ ಬಳಕೆದಾರ ಶುಲ್ಕ (ಟೋಲ್‌ ಫೀ) ಸಂಗ್ರಹಣೆ ನವೆಂಬರ್ 12, 2025ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ. ನ್ಯಾಯಾಲಯದ ಅಭಿಪ್ರಾಯಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಲೆಕ್ಕಿಸದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಶುಲ್ಕ ವಸೂಲಿ ಪ್ರಾರಂಭಿಸಲು ಸಜ್ಜಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಾಸರಗೋಡು ಜಿಲ್ಲೆಯ ಸಾಮಾನ್ಯ ಪ್ರಯಾಣಿಕರ ಮೇಲೆ ಇದು ಭಾರೀ ಆರ್ಥಿಕ ಹೊರೆ ಉಂಟುಮಾಡುವ ಸಾಧ್ಯತೆ ವ್ಯಕ್ತವಾಗಿದೆ. ಅರಿಕ್ಕಾಡಿ ಟೋಲ್‌ಗೇಟ್ ನಿರ್ಮಾಣದ ಕುರಿತು “ಆಂಟಿ-ಟೋಲ್ ಆಕ್ಷನ್ ಸಮಿತಿ” ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಈ ನಡುವೆ ನ್ಯಾಯಾಲಯವು ಆ ಪ್ರಕರಣವನ್ನು ಪರಿಗಣಿಸುತ್ತಿರುವ ವೇಳೆ ಟೋಲ್ ವಸೂಲಿ ಪ್ರಾರಂಭಿಸುವುದು ನ್ಯಾಯೋಚಿತವಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.ಇದೇ ವೇಳೆ ತಲಪಾಡಿ ಟೋಲ್‌ಪ್ಲಾಜಾ ಮತ್ತು ಅರಿಕ್ಕಾಡಿ ಟೋಲ್‌ಪ್ಲಾಜಾಗಳ…

Read More

ಪುತ್ತೂರು; ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ಪುತ್ತೂರು ನಗರ ಮಂಡಲದ ಅಟಲ್ ವಿರಾಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಹಾಗೂ ನಗರ ಮಂಡಲದ ಅಧ್ಯಕ್ಷರಾದ ಶಿಶಿರ ಪೆರ್ವೋಡಿ ಹಾಗೂ ನಿತೇಶ್ ಕಲ್ಲೇಗ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಹಾಗೂ ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಭಾರಿಗಳಾದ ಕೃಷ್ಣ ಎಂ ಆರ್ ಕಡಬ, ಜಿಲ್ಲಾ ಕಾರ್ಯದರ್ಶಿಗಳಾದ ಮಚ್ಚಿಮಲೆ ವಿರುಪಾಕ್ಷ ಭಟ್, ಬಿಜೆಪಿ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆದೇಶ್ ಶೆಟ್ಟಿ ಹಾಗೂ ಎರಡು ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Read More

ಮಾತು ಜ್ಯೋತಿರ್ಲಿಂಗದ ಹಾಗೆ, ಮಾತೆಂದರೆ ಬೆಳಕಿನ ಹಾಗೆ, ಮಾತಿಗೆ ಪಾವಿತ್ರ್ಯತೆ, ಆಧ್ಯಾತ್ಮಿಕ ಪ್ರಭೆ ಇದೆ. ನಾವು ಸಮಾಜದಲ್ಲಿ ನೆಮ್ಮದಿ, ಶಾಂತಿಯಿಂದ ಬದುಕಬೇಕಾದರೆ ನಮ್ಮ ಹೃದಯದೊಳಗೆ ಸೌಹಾರ್ದದ ಹೂವು ಅರಳಬೇಕು, ಆ ಹೂವಿಗೆ ಸುಗಂದ ಇರಬೇಕು. ಎಂದು ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯಪಟ್ಟರು. ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಬಿಲ್ಲವ ಸೇವಾ ಸಮಾಜ ಯುವವಾಹಿನಿ, ರೋಟರಿ ಸಮುದಾಯ ದಳ, ಉಳ್ಳಾಲ ಜಮಾಅತೆ ಇಸ್ಮಾಮಿ ಹಿಂದ್, ನವೋದಯ ಫ್ರೆಂಡ್ಸ್, ಪೊಸಕುರಲ್ ಬಳಗ, ಸದ್ಫಾವನಾ ವೇದಿಕೆ, ಕಿನ್ಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಮಂಡಲ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಬಿಲ್ಲವ ಸಮಾಜದ ನಾರಾಯಣ ಗುರು ಕಲಾಂಗಣದಲ್ಲಿ ಗುರುವಾರ ನಡೆದ ಸೌಹಾರ್ದ ದೀಪಾವಳಿ ಸಂಗಮದಲ್ಲಿ ಮಾತನಾಡಿದರು. ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಮಾತನಾಡಿ, ಎಲ್ಲಾ ಧರ್ಮಗಳು ಜಗತ್ತಿಗೆ ಬೆಳಕನ್ನು ಕೊಟ್ಟಿದೆ. ಆದರೆ ನಾವಿಂದು ಅಕ್ರಮ, ಹಿಂಸೆ, ಸುಳ್ಳು, ಅನೈತಿಕ ಎಂಬ…

Read More