ಜನವರಿ 10: ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿ ಬರುವ ವೇಳೆ ನಿಂತಿದ್ದ ಲಾರಿಗೆ ಅಯ್ಯಪ್ಪ ಭಕ್ತರಿದ್ದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಸಂಭವಿಸಿದೆ.

ಮೃತರನ್ನು ವೆಂಕಟೇಶ್ (30), ಮಾರುತಪ್ಪ (44) ಮತ್ತು ಸಾಕ್ಷಿ (7) ಎಂದು ಗುರುತಿಸಲಾಗಿದೆ. 11 ಜನರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಕ್ರೂಜರ್ ವಾಹನದಲ್ಲಿ ವಾಪಸ್ ಊರಿಗೆ ತೆಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಕುಕ್ಕನೂರು ಗ್ರಾಮದವರು ಎಂದು ಗುರುತಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೂಸರ್ನಲ್ಲಿ ಒಟ್ಟು 12 ಮಂದಿ ಪ್ರಯಾಣ ಮಾಡುತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಮಗಳನ್ನು ಕಳೆದುಕೊಂಡು ಆಕೆಯ ತಂದೆ ಉಲಗಪ್ಪ ಕಣ್ಣೀರು ಹಾಕುತ್ತಿದ್ದಾರೆ. ಸಾಕ್ಷಿ ನನ್ನ ಮಗಳು. ಶಬರಿ ಮಲೆಗೆ 5 ರಂದು ತೆರಳಿದ್ದೆವು. ದೇವರ ದರ್ಶನ ಮಾಡಿಕೊಂಡು ವಾಪಾಸ್ ಆಗುತಿದ್ದೆವು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ನಾವು 11 ಜನ ಪ್ರಯಾಣ ಮಾಡುತಿದ್ದೆವು. 10 ಜನ ಅಕ್ಕಪಕ್ಕದ ಊರಿನ ನಾವು ಒಟ್ಟಿಗೆ ಮಾಲೆ ಹಾಕಿದ್ದೆವು. ಒಟ್ಟಾಗಿ ಶಬರಿ ಮಲೆಗೆ ತೆರಳಿದ್ದೆವು. ಕಾರು ಚಾಲಕ ಸೇರಿ 11 ಜನ ಪ್ರಯಾಣ ಮಾಡುತಿದ್ದೆವು. ನನ್ನ ಮಗಳು ಒಂದನೇ ತರಗತಿ ಓದುತಿದ್ದಳು. ಎರಡನೇ ಬಾರಿ ಶಬರಿ ಮಾಲೆಗೆ ಕರೆದೊಯ್ದಿದ್ದೆವು. ಒಳ್ಳೆಯದಾಗಲಿ ಎಂದು ದೇವರ ದರ್ಶನ ಮಾಡಿ ವಾಪಾಸ್ ಆಗುತಿದ್ದೆವು. ಹೀಗಾಗಿದೆ ಎಂದು ಉಲಗಪ್ಪ ಕಣ್ಣೀರು ಹಾಕಿದ್ದಾರೆ.

