Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಇರಾ

ಇರಾದಲ್ಲಿ ಫಾರ್ಮಾ ಪಾರ್ಕ್ ತಯಾರಿಕಾ ಘಟಕಕ್ಕೆ ಅಧಿಕಾರಿಗಳ ನಿಯೋಗ ಭೇಟಿ

UllalaVaniBy UllalaVaniJanuary 24, 2016No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಇರಾ: ಜಿಲ್ಲೆಯಲ್ಲಿ ಫಾರ್ಮಾ ಪಾರ್ಕ್ (ಸಮೂಹ ಔಷಧ ಉತ್ಪಾಧನಾ ಕೇಂದ್ರಗಳ) ರಚನೆಗೆ ಇರಾ ಗ್ರಾಮದ ಕೆಐಎಡಿಬಿಯ ಸ್ಥಳವನ್ನು ನಿಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರುಗಳ ಸಹಿತ ಇಲಾಖೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆಗಳ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಹೇಳಿದರು.

ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರ ಹಾಗೂ ಕೆಐಎಡಿಬಿ ಅಧಿಕಾರಿಗಳ ನಿಯೋಗ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿರುವ ಕೆಐಎಡಿಬಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

23ullal3ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರ ಚಿಂತನೆ ಮೇರೆಗೆ ಇರಾದಲ್ಲಿ ಔಷಧ ಉತ್ಪಾಧನೆ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 100 ಎಕರೆ ವಿಶಾಲವಾದ ಸ್ಥಳದಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗಲಿದೆ. ಔಷಧ ಉತ್ಪಾಧನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚಿನ ಒಲವು ನೀಡುತ್ತಿದೆ. ಉತ್ಪಾಧನಾ ಘಟಕಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರಕಾರಗಳು ಒದಗಿಸಿದಲ್ಲಿ ಒಂದು ವರ್ಷದ ಅವಧಿಯಲ್ಲಿ 10 ಘಟಕಗಳ ಸ್ಥಾಪನೆಯಾಗಲಿದೆ. ಅಸೋಸಿಯೇಷನ್ನಿನವರು ಸ್ಥಳದ ವರದಿಯನ್ನು ಸಂಗ್ರಹಿಸಿದ್ದು, ಮುಂದೆ ಹೂಡಿಕೆದಾರರ ಸಮಾವೇಶದಲ್ಲಿ ಘಟಕ ಸ್ಥಾಪಿಸಲು ಇಚ್ಛಿಸುವ ಆಸಕ್ತರಿಗೆ ವಿವರ ನೀಡಲಾಗುವುದು ಎಂದರು.

ರಾಜ್ಯದ ಔಷಧ ನಿಯಂತ್ರಕ ರಘುರಾಂ ಭಂಡಾರಿ ಮಾತನಾಡಿ ಎಷ್ಟರಮಟ್ಟಿಗೆ ಹಾಗೂ ಯಾವ ರೀತಿಯಲ್ಲಿ ಘಟಕಗಳನ್ನು ಸ್ಥಾಪಿಸಬಹುದೆಂಬ ಉದ್ದೇಶವನ್ನು ಮುಂದಿಟ್ಟು ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದೇವೆ. ಒಂದು ಲಕ್ಷ ಕೋಟಿ ರೂ.ಗಳ ಔಷಧದ ರಫ್ತು ದೇಶದಿಂದ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಒಲವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದಾಗಿದೆ. ಫೆ.3,4,5 ರಂದು ರಾಜ್ಯದಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶದಲ್ಲಿ ಘಟಕ ಸ್ಥಾಪಿಸಲು ಹೂಡಿಕೆಗೆ ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಸ್ಥಳದ ವಿವರಣೆಯನ್ನು ನೀಡಲಾಗುವುದು. ಘಟಕಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲಾಗುವುದು ಹಾಗೂ ಇದರಿಂದ ಘಟಕಗಳಿಗೆ ಅನುಕೂಲವಾಗಲಿದೆ ಎಂದರು.

ಕರ್ನಾಟಕ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ಅಸೋಸಿಯೇಶನ್‍ನ ಕಾರ್ಯದರ್ಶಿ ಹರೀಶ್, ಪ್ಲಾಸ್ಟಿಕ್ ಉತ್ಪಾಧನೆ ಮತ್ತು ವ್ಯಾಪಾರಿಗಳ ಅಸೋಸಿಯೇಶನ್‍ನ ಅಧ್ಯಕ್ಷ ಬಿ.ಎ ನಝೀರ್, ಸುಳ್ಯ ಕೆವಿಜೆ ಆಯುರ್ವೇದ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಲೀಲಾಧರ್, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ರಾಮ್ ಮೋಹನ್ ಪೈ, ಸದಸ್ಯರಾದ ಸುರೇಶ್ ನಾಯಕ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮರ್ ಪಜೀರು, ಕಾಂಗ್ರೆಸ್ ಮುಖಂಡ ನಾಸಿರ್ ನಡುಪದವು ಇದ್ದರು.

ಸಚಿವ ಯು.ಟಿ. ಖಾದರ್ ಅವರ ಮಹತ್ವಾಕಾಂಕ್ಷೆಯ ಫಾರ್ಮಾಪಾರ್ಕ್ ನಿರ್ಮಾಣಗೊಂಡಲ್ಲಿ ಇರಾ ಗ್ರಾಮದ ಆಸುಪಾಸಿನ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸುವುದಲ್ಲದೆ ಪಂಚಾಯಿತಿ ಆದಾಯವೂ ಹೆಚ್ಚುವುದು.

ಅಬ್ದುಲ್ ರಝಾಕ್ ಕುಕ್ಕಾಜೆ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

February 5, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಉಳ್ಳಾಲ

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

By UllalaVaniFebruary 5, 20260

ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರುಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d