ತುಳುನಾಡಿನ ವಿಶಿಷ್ಟ ಜಾನಪದ ಕ್ಷೇತ್ರದಲ್ಲಿ ನಡೆಸಿರುವ ಮಹತ್ವದ ಸಂಶೋಧನೆಯನ್ನು ಗುರುತಿಸಿ, ಉಪನ್ಯಾಸಕ, ಸಾಹಿತಿ, ಸಂಶೋಧಕ ಹಾಗೂ ಸಿನಿಮಾ ನಿರ್ದೇಶಕರಾಗಿರುವ ಬಿ.ಎ. ಲೋಕಯ್ಯ ಶಿಶಿಲ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

ಏಷ್ಯಾ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿಶ್ವವಿದ್ಯಾನಿಲಯದ ವತಿಯಿಂದ ಈ ಗೌರವವನ್ನು ಪ್ರದಾನ ಮಾಡಲಾಗಿದ್ದು, ತುಳುನಾಡಿನ ಜಾನಪದ ಪರಂಪರೆ, ಸಂಸ್ಕೃತಿ ಹಾಗೂ ವಿಶಿಷ್ಟ ಆಚರಣೆಗಳ ಕುರಿತಾಗಿ ಅವರು ನಡೆಸಿರುವ ಸಂಶೋಧನಾ ಕಾರ್ಯಕ್ಕೆ ಈ ಮನ್ನಣೆ ದೊರೆತಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಲೋಕಯ್ಯ ಶಿಶಿಲ ಅವರ ಸಾಧನೆಗೆ ಈ ಗೌರವ ಮತ್ತೊಂದು ಗರಿಮೆ ತಂದಿದೆ.

