Site icon Ullalavani

ತುಳುನಾಡಿನ ಜಾನಪದ ಕ್ಷೇತ್ರದ ಸಂಶೋಧನೆಗೆ ಬಿ.ಎ. ಲೋಕಯ್ಯ ಶಿಶಿಲ ಅವರಿಗೆ ಗೌರವ ಡಾಕ್ಟರೇಟ್

ತುಳುನಾಡಿನ ವಿಶಿಷ್ಟ ಜಾನಪದ ಕ್ಷೇತ್ರದಲ್ಲಿ ನಡೆಸಿರುವ ಮಹತ್ವದ ಸಂಶೋಧನೆಯನ್ನು ಗುರುತಿಸಿ, ಉಪನ್ಯಾಸಕ, ಸಾಹಿತಿ, ಸಂಶೋಧಕ ಹಾಗೂ ಸಿನಿಮಾ ನಿರ್ದೇಶಕರಾಗಿರುವ ಬಿ.ಎ. ಲೋಕಯ್ಯ ಶಿಶಿಲ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

ಏಷ್ಯಾ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿಶ್ವವಿದ್ಯಾನಿಲಯದ ವತಿಯಿಂದ ಈ ಗೌರವವನ್ನು ಪ್ರದಾನ ಮಾಡಲಾಗಿದ್ದು, ತುಳುನಾಡಿನ ಜಾನಪದ ಪರಂಪರೆ, ಸಂಸ್ಕೃತಿ ಹಾಗೂ ವಿಶಿಷ್ಟ ಆಚರಣೆಗಳ ಕುರಿತಾಗಿ ಅವರು ನಡೆಸಿರುವ ಸಂಶೋಧನಾ ಕಾರ್ಯಕ್ಕೆ ಈ ಮನ್ನಣೆ ದೊರೆತಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಲೋಕಯ್ಯ ಶಿಶಿಲ ಅವರ ಸಾಧನೆಗೆ ಈ ಗೌರವ ಮತ್ತೊಂದು ಗರಿಮೆ ತಂದಿದೆ.

Exit mobile version