Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ವತಿಯಿಂದ ಭಾವೈಕ್ಯತೆಯ ಬೆಳಕಿನ ದೀಪಾವಳಿ ಸಂಭ್ರಮಾಚರಣೆ

UllalaVaniBy UllalaVaniNovember 9, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಹಬ್ಬಗಳ ಅಂತ್ಯದಲ್ಲಿ ಭಾವೈಕ್ಯತೆಯ ಸಂದೇಶ ಸಾರುತ್ತಾ ಎಲ್ಲರನ್ನೂ ಒಗ್ಗೂಡಿಸುವುದು ದೇವರು ಮೆಚ್ಚುವ ಕಾರ್ಯವಾಗಿದೆ. ಇಂತಹ ಆಚರಣೆಗಳಿಂದ ಪರಸ್ಪರರ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಅರಿಯಲು ಸಾಧ್ಯವಾಗುತ್ತದೆ. ಇದು ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಉತ್ತಮ ಕಾರ್ಯವಾಗಿದೆ. ಎಂದು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಅಭಿಪ್ರಾಯಪಟ್ಟರು.


ಅವರು ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ವತಿಯಿಂದ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಸಹಯೋಗದೊಂದಿಗೆ ತೊಕ್ಕೊಟ್ಟು ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಭಾವೈಕ್ಯತೆಯ ಬೆಳಕಿನ ದೀಪಾವಳಿ ಸಂಭ್ರಮಾಚರಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಸ್ಕಾಂ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ ಕಾಂಗ್ರೆಸ್ ಪಕ್ಷ ಭಾವೈಕ್ಯತೆಯ ಸಂಕೇತವಾಗಿದ್ದು, ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಉಳ್ಳಾಲದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಎರಡನೇ ವರ್ಷದ ಸೌಹಾರ್ದ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಪ್ರೀತಿಯ ಉತ್ತಮ ವಾತಾವರಣ ನಿರ್ಮಿಸುವ ಕಾರ್ಯ ಮಾಡಿದ್ದಾರೆ. ಇಂತಹ ಆಚರಣೆಗಳು ಪರಸ್ಪರರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿಯಲು ಸಹಕಾರಿಯಾಗುವುದರ ಜೊತೆಗೆ ಸಮಾಜದ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.


ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪದ್ಮರಾಜ್‌ ಆರ್‌ ಪೂಜಾರಿ ಮಾತನಾಡಿ, ದಕ್ಷಿಣ ಕನ್ನಡದ ಜನರಿಗೆ ದೈವ-ದೇವರುಗಳ ಮೇಲಿರುವ ಭಕ್ತಿ, ಧಾರ್ಮಿಕ ನಂಬಿಕೆ ಹಾಗೂ ಪರಸ್ಪರ ಪ್ರೀತಿಯೇ ನಮ್ಮ ಸಂಸ್ಕೃತಿಯ ವಿಶೇಷತೆ. ಸರ್ವಧರ್ಮಗಳ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸುವ ಮೂಲಕ ಶಕ್ತಿಯುತವಾದ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸವಾಗಬೇಕು. ದ್ವೇಷವನ್ನು ದೂರವಾಗಿಸಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಕಾರ್ಯಗಳು ಹೆಚ್ಚಾಗಬೇಕು. ದೀಪಾವಳಿ, ಕ್ರಿಸ್ಮಸ್, ರಂಜಾನ್ ಸೇರಿದಂತೆ ಎಲ್ಲ ಧರ್ಮಗಳ ಹಬ್ಬಗಳ ಉದ್ದೇಶವೂ ಒಂದೇ. ಮನುಷ್ಯರ ನಡುವೆ ಪ್ರೀತಿ, ಸಹಬಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುವುದೇ ಎಲ್ಲ ಹಬ್ಬಗಳ ಆಶಯ ಎಂದರು.


ಈ ಮೌಲ್ಯಗಳು ಮುಂದಿನ ಪೀಳಿಗೆಗೂ ತಿಳಿಯಬೇಕು. ಎಲ್ಲ ಧರ್ಮದವರನ್ನೂ ಒಂದೆಡೆ ಸೇರಿಸಿ ದೀಪಾವಳಿ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.


ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್‌ ಭಟ್ನಗರ, ಬರಹಗಾರ್ತಿ, ಕವಯಿತ್ರಿ ಶಮೀಮ ಕುತ್ತಾರ್‌ ,ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರ್‌ , ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್‌ ಗಟ್ಟಿ ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಚಂದ್ರಿಕಾ ರೈ, ತುಳು ಪರಿಷತ್‌ ಅಧ್ಯಕ್ಷರು ಶುಭೋದಯ ಆಳ್ವ , ತಾ.ಪಂ ಮಾಜಿ ಅಧ್ಯಕ್ಷ ಮೋನು ಮಲಾರ್‌ , ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ ಸನಿಲ್‌‌, ಬ್ಲಾಕ್‌ ಕಾಂಗ್ರೆಸ್ ಉಪಾಧ್ಯಕ್ಷ ಪುರುಷೋತ್ತಮ್‌ ಶೆಟ್ಟಿ ಪಿಲಾರ್‌, ಶೌಕತ್‌ ಆಲಿ ,ಎ.ಕೆ ರೆಹಮಾನ್‌ ಕೋಡಿಜಾಲ್‌, ತಲಪಾಡಿ ವಲಯ ಕಾಂಗ್ರೆಸ್‌ ಅಧ್ಯಕ್ಷ ವೈಭವ್‌ ಶೆಟ್ಟಿ , ಯು.ಟಿ ಫರೀದ್‌ , ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಪ್ಪಿ. ಮುಡಾ ಸದಸ್ಯೆ ಸಬಿತಾ ಮಿಸ್ಕಿತ್‌ , ಶಶಿಕಲಾ , ದೇವಕಿ ಆರ್‌ ಉಳ್ಳಾಲ್‌, ರಝಿಯಾ ಇಬ್ರಾಹಿಂ , ಅರುಣ್‌ ಮಾರ್ಗತಲೆ , ಮುಡಿಪು ಬ್ಲಾಕ್‌ ಮಹಿಳಾ ಅಧ್ಯಕ್ಷೆ ವೃಂದ ಮೇರೆಜಮಲು ,ಸಾಹಿಲ್‌ ಮಂಚಿಲ, ರಿಚರ್ಡ್‌ ಉಪಸ್ಥಿತರಿದ್ದರು.


ಈ ಸಂದರ್ಭ ಕಿಸಾನ್‌ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸನ್‌ ಕುಂಞಿ ಕೋಡಿಜಾಲ್‌ ಇವರಿಗೆ ಆದೇಶ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮ ಸಂಯೋಜಕಿ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಮಿತಾ ಅಶ್ವಿನ್‌ ಸ್ವಾಗತಿಸಿದರು. ಕುಮಾರಿ ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು. ರಝಿಯಾ ಇಬ್ರಹಿಂ ವಂದಿಸಿದರು.
ಕಾರ್ಯಕ್ರಮದಲ್ಲಿ ಲಕ್ಕಿ ಕೂಪನ್‌ ವಿಜೇತ ಇಬ್ಬರು ಮಹಿಳೆಯರಿಗೆ ಟೈಲರಿಂಗ್‌ ಯಂತ್ರವನ್ನು ವಿತರಿಸಿದರು. ಇದೇ ಸಂದರ್ಭ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಇದೇ ಸಂದರ್ಭ ರೂಪೇಶ್‌ ಭಟ್ನಗರ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಜರಗಿತು.

ʻಭಾವೈಕ್ಯತೆಯ ಬಹುತ್ವದ ದೀಪಾವಳಿ ಆಚರಣೆ: ಬರಹಗಾರ್ತಿ ಶಮೀಮಾ ಕುತ್ತಾರ್‌
ಭಾವೈಕ್ಯತೆಯ ಬಹುತ್ವದ ದೀಪಾವಳಿ ಆಚರಣೆಗಳು ಪ್ರತಿಯೊಂದು ಹಬ್ಬದ ನೈಜ ಅರ್ಥವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತವೆ. ಪ್ರತಿಯೊಂದು ಧರ್ಮದ ಹಬ್ಬಗಳ ಹಿಂದೆಯೂ ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಬಾಳ್ವೆಯನ್ನು ಬೆಳೆಸುತ್ತವೆ. ಒಂದು ಮನೆಯ ಸಂತೋಷ ಮತ್ತು ನೆಮ್ಮದಿಯ ಹಿಂದೆ ಮಹಿಳೆಯರ ಪಾತ್ರ ಬಹಳ ಮಹತ್ವದ್ದಾಗಿದೆ. ಮಹಿಳೆಯರು ಕುಟುಂಬವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದಾರೆ. ಅದೇ ರೀತಿ ಸಮಾಜದಲ್ಲಿಯೂ ಮಹಿಳೆಯರು ಒಗ್ಗಟ್ಟಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ಯಾವುದೇ ಧಕ್ಕೆ ಬಾರದಂತೆ, ಎಲ್ಲ ಧರ್ಮ ಮತ್ತು ಸಮುದಾಯಗಳ ಭಾವನೆಗಳಿಗೆ ಗೌರವ ನೀಡುತ್ತಾ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ.

ಎಲ್ಲಾ ಧರ್ಮದವರನ್ನು ಒಗ್ಗೂಡಿಸುವ ಕಾರ್ಯ: ಅಮಿತಾ ಅಶ್ವಿನ್‌
ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ಎರಡನೇ ವರ್ಷದ ಸೌಹಾರ್ದ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಎಲ್ಲಾ ಧರ್ಮದವರನ್ನು ಒಗ್ಗೂಡಿಸುವ ಉತ್ತಮ ಕಾರ್ಯ ನಡೆಯುತ್ತಿದೆ. ಆಟೋಟಗಳಲ್ಲಿ ಭಾಗವಹಿಸುತ್ತಾ, ಪರಸ್ಪರ ಸಂತಸ ಹಂಚಿಕೊಳ್ಳುತ್ತಾ ಎಲ್ಲರೂ ಒಂದಾಗಿ ದೀಪಾವಳಿ ಹಬ್ಬವನ್ನು ಸಂಭ್ರಮಿಸುವ ಈ ಕಾರ್ಯಕ್ರಮವು ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ಧರ್ಮಗಳ ನಡುವಿನ ಸೌಹಾರ್ದತೆ, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ.
ಅಮಿತಾ ಅಶ್ವಿನ್‌
ಅಧ್ಯಕ್ಷರು
ಉಳ್ಳಾಲ ನಗರ ಕಾಂಗ್ರೆಸ್‌ ಸಮಿತಿ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬೋಳಿಯಾರು : ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ಪ್ರಕರಣ: ಪಿಕಪ್ ಚಾಲಕ ಸೆರೆ

October 21, 2026

ಕುತ್ತಾರು : ಬೇಸಿಗೆಕಾಲದಲ್ಲಿಯೂ ತುಂಬಿ ತುಳುಕುತ್ತಿದ್ದ ಕೊರಗಜ್ಜ ರಚಿಸಿದ್ದ ಕನ್ನಡಿಕೆರೆ, ಮತ್ತೆ ಕೆರೆ ಅಭಿವೃದ್ಧಿಗೆ ಒಂದಾದ ಮುಂಡೋಳಿ-ಪಿಲಾರು ಗ್ರಾಮಸ್ಥರು

October 18, 2026

ಒಲಿಂಪಿಕ್ಸ್ ಪದಕ ವಿಜೇತೆ ಪೂವಮ್ಮ ಅವರಿಗೆ LIAFI ವತಿಯಿಂದ ಗೌರವ ಸನ್ಮಾನ

October 5, 2026

Comments are closed.

Advertise
ಸಂಪರ್ಕಿಸಿ

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026
All News

ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ವತಿಯಿಂದ ಭಾವೈಕ್ಯತೆಯ ಬೆಳಕಿನ ದೀಪಾವಳಿ ಸಂಭ್ರಮಾಚರಣೆ

By UllalaVaniNovember 9, 20260

ಉಳ್ಳಾಲ: ಹಬ್ಬಗಳ ಅಂತ್ಯದಲ್ಲಿ ಭಾವೈಕ್ಯತೆಯ ಸಂದೇಶ ಸಾರುತ್ತಾ ಎಲ್ಲರನ್ನೂ ಒಗ್ಗೂಡಿಸುವುದು ದೇವರು ಮೆಚ್ಚುವ ಕಾರ್ಯವಾಗಿದೆ. ಇಂತಹ ಆಚರಣೆಗಳಿಂದ ಪರಸ್ಪರರ ಸಂಸ್ಕೃತಿ,…

ಇತಿಹಾಸದ ಪುಟಗಳಲ್ಲಿ ‘ಅಬ್ಬಕ್ಕ’ ಅಜರಾಮರ: ಪ್ರೊ. ಜಗದೀಶ್ ಪ್ರಸಾದ್ ಡಿ.

November 9, 2026

ಮಂಗಳೂರು ವಿವಿ: ‘ಕನಕ ಕೀರ್ತನ ಗಂಗೋತ್ರಿ’ಗೆ ಗಾಯಕರಿಂದ ಅರ್ಜಿ ಆಹ್ವಾನ

November 9, 2026

ಕೋಟಿಪದವು ಶ್ರೀ ರಾಮ ಮಂದಿರದಲ್ಲಿ ಗೋಪೂಜೆ , ಎರಡು ಕುಟುಂಬಗಳಿಗೆ ಗೋದಾನ

November 9, 2026
1 2 3 … 2,163 Next
Automatic YouTube Gallery

ಅಸೈಗೋಳಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ: ಡಾ. ಸುಪ್ರಿಯಾ ಜಿ. ಶೆಟ್ಟಿ

ಸಿರಿ ಮಹಿಳಾ ಉಳಿತಾಯ ಗುಂಪುಗಳ 23ನೇ ವರ್ಷದ ಸಾಮೂಹಿಕ ದುರ್ಗಾಪೂಜೆ;ಅಸೈಗೋಳಿ ಬಂಟರಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ

ಮಹಿಳೆಯರು ಸಂಘಟಿತರಾದರೆ ಮನೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ: ಗೋವರ್ಧನ ಶೆಟ್ಟಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಸೈಗೋಳಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ: ಡಾ. ಸುಪ್ರಿಯಾ ಜಿ. ಶೆಟ್ಟಿ
Now Playing
ಅಸೈಗೋಳಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ: ಡಾ. ಸುಪ್ರಿಯಾ ಜಿ. ಶೆಟ್ಟಿ
ಸಿರಿ ಮಹಿಳಾ ಉಳಿತಾಯ ಗುಂಪುಗಳ 23ನೇ ವರ್ಷದ ಸಾಮೂಹಿಕ ದುರ್ಗಾಪೂಜೆ;ಅಸೈಗೋಳಿ ...
ಸಿರಿ ಮಹಿಳಾ ಉಳಿತಾಯ ಗುಂಪುಗಳ 23ನೇ ವರ್ಷದ ಸಾಮೂಹಿಕ ದುರ್ಗಾಪೂಜೆ;ಅಸೈಗೋಳಿ ಬಂಟರಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ

ಮಹಿಳೆಯರು ಸಂಘಟಿತರಾದರೆ ಮನೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ: ಗೋವರ್ಧನ ಶೆಟ್ಟಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಂಗಳೂರಿನ ಸೀ-ರೇ ಮಳಿಗೆಯಲ್ಲಿ ವಿಶೇಷ ಸೀರೆಗಳ ಬಿಡುಗಡೆ
Now Playing
ಮಂಗಳೂರಿನ ಸೀ-ರೇ ಮಳಿಗೆಯಲ್ಲಿ ವಿಶೇಷ ಸೀರೆಗಳ ಬಿಡುಗಡೆ
ಯಕ್ಷಗಾನದಿಂದ ಕಂಬಳದವರೆಗೆ... ಸೀರೆಯಲ್ಲಿ ಕರಾವಳಿಯ ವೈಭವ; - ಸೀ-ರೇಯಲ್ಲಿ ...
ಯಕ್ಷಗಾನದಿಂದ ಕಂಬಳದವರೆಗೆ... ಸೀರೆಯಲ್ಲಿ ಕರಾವಳಿಯ ವೈಭವ; - ಸೀ-ರೇಯಲ್ಲಿ ಅನಾವರಣಗೊಂಡ ತುಳುನಾಡಿನ ಸಾಂಸ್ಕೃತಿಕ ಸೀರೆಗಳು

ಸೀರೆ ಖರೀದಿಗೆ AI ತಂತ್ರಜ್ಞಾನದ ಹೊಸ ಸ್ಪರ್ಶ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version