ದೇರಳಕಟ್ಟೆ: ಮೇಲ್ತೆನೆ (ಬ್ಯಾರಿ ಎಲ್ತ್ಕಾರ್-ಕಲಾವಿದಮಾರೆ ಕೂಟ) ಇದರ ವತಿಯಿಂದ ಇಂದು ನಾಟೆಕಲ್ ವಿಜಯನಗರದಲ್ಲಿರುವ ಇಲೈಟ್ ಟ್ಯೂಶನ್ ಸೆಂಟರ್ನಲ್ಲಿ ಬ್ಯಾರಿ ಭಾಷೆ ದಿನವನ್ನು ಆಚರಿಸಲಾಯಿತು.

ಬ್ಯಾರಿ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಸಲುವಾಗಿ ನಡೆಸಲಾಗುವ ಈ ಐತಿಹಾಸಿಕ ದಿನವನ್ನು ಮುಂದಿನ ವರ್ಷದಿಂದ ಮತ್ತಷ್ಟು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿಗೆ ಪ್ರತ್ಯೇಕ ಧ್ವಜ (ಬಾವುಟ) ನಿರ್ಮಿಸಲು ಮುಂದಾಗಬೇಕು. ಬ್ಯಾರಿ ಭಾಷೆಯಲ್ಲಿ ಸಂವಿಧಾನ ಪೀಠಿಕೆ ರಚಿಸಿ ಬಿಡುಗಡೆಗೊಳಿಸಬೇಕು ಎಂದು ಈ ಈ ಸಂದರ್ಭ ಆಗ್ರಹಿಸಲಾಯಿತು. ಗೌರವಾಧ್ಯಕ್ಷರಾದ ಆಲಿಕುಂಞಿ ಪಾರೆ ಅವರು ಈ ಸಂದರ್ಭ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹಿಂ ನಡುಪದವು, ಉಪಾಧ್ಯಕ್ಷ ಇಬ್ರಾಹಿಂ ರಫೀಕ್ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿ ಸಿ.ಎಂ. ಶರೀಫ್ ಪಟ್ಟೋರಿ, ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಮಾಸ್ಟರ್, ಮುಹಮ್ಮದ್ ಬಾಷಾ ನಾಟೆಕಲ್, ಸದಸ್ಯರಾದ ಯೂಸುಫ್ ವಕ್ತಾರ್, ಸಿದ್ದೀಕ್ ಎಸ್.ರಾಝ್, ಹೈದರ್ ಆಲಡ್ಕ ಉಪಸ್ಥಿತರಿದ್ದರು.


