ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಗ್ರಾಮೀಣ ಪ್ರದೇಶಕ್ಕೆ ಕೇಂದ್ರ, ರಾಜ್ಯ ಸರಕಾರದ ಆರ್ಥಿಕ ಸೌಲಭ್ಯಗಳನ್ನು ಸೊಸೈಟಿ ಮುಖೇನ ನೀಡುವ ಉದ್ದೇಶದಿಂದ ಕುಂಪಲದ ಅಮೃತನಗರದ ನಿಸರ್ಗ ಪರಿಸರದಲ್ಲಿ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಅ.25 ರಂದು ಬೆಳಿಗ್ಗೆ 10.00ಕ್ಕೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಅವರು ಕುಂಪಲದ ಅನುಗ್ರಹ ಕಾ-ಆಪರೇಟಿವ್ ಸೊಸೈಟಿಯಲ್ಲಿ ಬುಧವಾರ ಹಮ್ಮಿಕೊಂಡ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೊಸೈಟಿಯನ್ನು ಉದ್ಘಾಟಿಸಲಿದ್ದು, ಹೊಸ ಕಟ್ಟಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಲಿದ್ದಾರೆ.
ಸೋಮೇಶ್ವರ ಗ್ರಾಮದಲ್ಲಿ ಕುಂಪಲ ದೊಡ್ಡ ಜನಸಂಖ್ಯೆಯುಳ್ಳ ಪ್ರದೇಶವಾಗಿದೆ. ಕಳೆದ 15 ವರ್ಷಗಳ ಹಿಂದೆ ಪ್ರದೇಶ ತೀರಾ ಹಿಂದುಳಿದಿತ್ತು. ಇದೀಗ ಪ್ರದೇಶ ಸಾಮಾಜಿಕ , ಧಾರ್ಮಿಕ ಇನ್ನಿತರ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಈ ಭಾಗಕ್ಕೆ ಆರ್ಥಿಕ ಭದ್ರತೆ, ಗುಣಮಟ್ಟದ ಸೇವೆ, ನಂಬಿಕೆಯ ವ್ಯವಹಾರ ನೀಡುವ ಉದ್ದೇಶದಿಂದ ಹಾಗೂ ಜನರು ಆರ್ಥಿಕವಾಗಿ ಅಭಿವೃದ್ಧಿ ಆಗುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದರು.
ಈ ವೇಳೆ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೇಶವದಾಸ್ ಬಗಂಬಿಲ, ಉಪಾಧ್ಯಕ್ಷ ಆನಂದ.ಎನ್, ಮುಖ್ಯ ಪ್ರಬಂಧಕ ನಿತಿನ್ ರಾಜ್ ಶೆಟ್ಟಿ, ನಿರ್ದೇಶಕರುಗಳಾದ ಮಾಲತಿ.ಕೆ ಮೊದಲಾದವರು ಉಪಸ್ಥಿತರಿದ್ದರು.



