

ತಲಪಾಡಿ: ದಾರುಲ್ ಉಲೂಮ್ ಮಹಿಳಾ ಅರೇಬಿಕ್ ಮತ್ತು ಸೆಕುಲ್ವೇರ್ ಕಾಲೇಜು ತಲಪಾಡಿಯಲ್ಲಿ ಸ್ವಾತಂತ್ರೊತ್ಸವ ಆಚರಿಸಲಾಯಿತು.
ಅಬ್ರಾರ್ ಮಸೀದಿ ಉಪಾಧ್ಯಕ್ಷರಾದ ಅಹಮ್ಮದ್ ತಲಪಾಡಿ ಮತ್ತು ಮಹಿಳಾ ಕಾಲೇಜು ಪ್ರ.ಕಾರ್ಯದರ್ಶಿ ಐಸನ್ ತಲಪಾಡಿಯವರು ದ್ವಜಾರೋಹಣಗೈದರು.
ತಲಪಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಟಿ.ಇಸ್ಮಾಯಿಲ್ ಪ್ರಧಾನ ಬಾಷಣಗೈದರು. ಸೋಷಿಯಲ್ ಅಚೀವ್‌ಮೆಂಟ್ ಫಾರಂ ಕಾರ್ಯದರ್ಶಿ ಇಸ್ಮಾಯಿಲ್ ಬಿ.ಎಸ್., ಉದ್ಯಮಿ ಸಂಶುದ್ದೀನ್ ಅಬ್ರಾರ್, ಸಮಿತಿ ಸದಸ್ಯರಾದ ಅರಬಿ ಕುಂಞಿ.ಟಿ.ಎಮ್, ಬಶೀರ್.ಸಲೀಂ, ಇಬ್ರಾಹಿಂ ಸುಪರ್, ಸಿದ್ದೀಕ್ ತಲಪಾಡಿ, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಸ್ವಾತಂತ್ರೋತ್ಸವದ ಹಿತನುಡಿ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಅರೇಬಿಕ್ ಭಾಷೆಯಲ್ಲಿ ನೀಡಿದರು.

