ಹರೇಕಳ, ಮೇ.08: ಹರೇಕಳ ಗ್ರಾಮ ಪಂಚಾಯತ್‌ನ ಪ್ರಸ್ತುತ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾದ ಬದ್ರುದ್ದೀನ್ ಫರಿದ್ ನಗರ ವಿರುದ್ಧ ಸಾರ್ವಜನಿಕ ನಿಧಿಗಳ ದುರುಪಯೋಗ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಕುರಿತು ಗಂಭೀರ ಆರೋಪ ಕೇಳಿಬಂದಿತ್ತು.

ಈ ಸಂಬAಧ ಡೆನ್ಜಿಲ್ ದಯಾ ಪಿಂಟೋ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದು, ದೂರಿನಲ್ಲಿ ಬದ್ರುದ್ದೀನ್ ಫರಿದ್ ನಗರ ಅವರು ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಒಳಸಂಚು ನಡೆಸಿ, ಟೆಂಡರ್ ಹಂಚಿಕೆ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಅನಿಯಮಿತತೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

2025-26ನೇ ಸಾಲಿನ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಸಮಂಜಸ ಕಾರಣಗಳನ್ನು ದಾಖಲಿಸದೇ ಸ್ಪರ್ಧಾತ್ಮಕತೆ ಮತ್ತು ಪಾರದರ್ಶಕತೆಯ ತತ್ವಗಳನ್ನು ಉಲ್ಲಂಘಿಸಿ “ಹಿಂದುಸ್ತಾನ್ ಸೋಲಾರ್ ಇಂಡಸ್ಟ್ರೀಸ್” ಸಂಸ್ಥೆಗೆ ಕಾಮಗಾರಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕರ್ನಾಟಕ ಸಾರ್ವಜನಿಕ ಖರೀದಿ ನಿಯಮಾವಳಿ ಹಾಗೂ ಆಡಳಿತಾತ್ಮಕ ಪಾರದರ್ಶಕತಾ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅದರೊಂದಿಗೆ, 2025-26ನೇ ಸಾಲಿನ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆಯಡಿಯಲ್ಲಿ ಕೈಗೊಂಡ ಕೆಲ ಕಾಮಗಾರಿಗಳಲ್ಲಿ ಸ್ಪಷ್ಟ ಅನಿಯಮಿತತೆಗಳು ಹಾಗೂ ಭ್ರಷ್ಟಾಚಾರದ ಲಕ್ಷಣಗಳು ಗೋಚರಿಸುತ್ತಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನಲ್ಲಿ ಉಲ್ಲೇಖಿಸಲಾದ ಕಾಮಗಾರಿಗಳು ಹೀಗಿವೆ:
ಇರಾ ಗ್ರಾಮದ ಗ್ರಂಥಾಲಯಗಳಲ್ಲಿ 5 ಕೆವಿ ಸೌರ ಘಟಕ ಅಳವಡಿಕೆ ಕಾಮಗಾರಿ – ರೂ.9.50 ಲಕ್ಷ ವೆಚ್ಚ. ಅತಿರೇಕದ ಅಂದಾಜು, ಗುಣಮಟ್ಟದ ಅನುಮಾನ ಹಾಗೂ ಬಿಲ್ಲಿಂಗ್‌ನಲ್ಲಿ ಅಸಂಗತತೆ ಕಂಡುಬAದಿದೆ ಎನ್ನಲಾಗಿದೆ.
ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಸೌರ ಕಾಮಗಾರಿ ರೂ.9.80 ಲಕ್ಷ ವೆಚ್ಚ. ಕಾಮಗಾರಿಯ ಪ್ರಮಾಣ ಮತ್ತು ವೆಚ್ಚದ ನಡುವೆ ವೈಷಮ್ಯವಿದ್ದು, ತಾಂತ್ರಿಕ ಮಾನದಂಡಗಳ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕಿಸಾನ್ ನಗರ (ಹರೇಕಳ ಜಿ.ಪಿ.) ಸೌರ ಬೀದಿ ದೀಪ ಕಾಮಗಾರಿ ರೂ.1 ಲಕ್ಷ ವೆಚ್ಚ. ಕಾರ್ಯನಿರ್ವಹಣಾ ಗುಣಮಟ್ಟದ ಕೊರತೆ ಹಾಗೂ ಖರೀದಿ ಮತ್ತು ಅಳವಡಿಕೆ ಪ್ರಕ್ರಿಯೆಯಲ್ಲಿ ಅಸಂಗತತೆಗಳಿವೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬೋಳಿಯಾರು ಗ್ರಾಮದ ರಂತಡ್ಕ ಪ್ರದೇಶದ ಸೌರ ಕಾಮಗಾರಿ ರೂ.1 ಲಕ್ಷ ವೆಚ್ಚ. ದಾಖಲೆಗಳು ಮತ್ತು ನೆಲದ ವಾಸ್ತವ ಸ್ಥಿತಿಯ ನಡುವೆ ವ್ಯತ್ಯಾಸವಿದೆ ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಸಾರ್ವಜನಿಕ ನಿಧಿಗಳ ಅಪಹರಣದ ಸೂಚನೆಗಳು ಕಂಡುಬರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಬAಧಿತ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಾರ್ವಜನಿಕ ಪ್ರತಿನಿಧಿಗಳ ಪಾತ್ರವನ್ನು ಸಂಪೂರ್ಣವಾಗಿ ತನಿಖೆಗೆ ಒಳಪಡಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರ ಡೆನ್ಜಿಲ್ ದಯಾ ಪಿಂಟೋ ಒತ್ತಾಯಿಸಿದ್ದಾರೆ. ಅಗತ್ಯವಿದ್ದಲ್ಲಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಹಸ್ತಾಂತರಿಸುವುದನ್ನೂ ಪರಿಗಣಿಸಬೇಕೆಂದು ಅವರು ಮನವಿ ಮಾಡಿದ್ದರು. ಇದೀಗ ಸಂಬAಧಪಟ್ಟ ಅಧಿಕಾರಿ ತನಿಖೆ ನಡೆಸಿದ್ದು, ಈ ಸಂದರ್ಭ ಅನೇಕ ಭ್ರಷ್ಟಚಾರ ನಡೆದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

