ಮಂಗಳೂರು: ಇಲ್ಲಿನ ಸೇಂಟ್ ಅಲೋಶಿಯಸ್ ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವು ಕೊಟೇಕಾರಿನ ಎಐಎಂಐಟಿ ಕ್ಯಾಂಪಸ್ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಕೆಸಿಸಿಐ ಅಧ್ಯಕ್ಷರಾದ ಪಿ.ಬಿ. ಅಹ್ಮದ್ ಮುದಸ್ಸರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.

ಎಐಎಂಐಟಿ ನಿರ್ದೇಶಕರಾದ ವಂ| ಡಾ| ಕಿರಣ್ ಕೊಥಾ ಎಸ್.ಜೆ. ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಡೀನ್ ಡಾ. ರಜನಿ ಸುರೇಶ್ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರೆ, ಸಾಂತಾ ಕ್ಲಾರಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದ ಸಂಯೋಜನೆಯಲ್ಲಿ ಡಾ. ಸ್ವಪ್ನಾ ರೋಸ್ ಪ್ರಮುಖ ಪಾತ್ರ ವಹಿಸಿದ್ದರು.

ವಿದ್ಯಾರ್ಥಿ ಸಂಯೋಜಕರಾದ ರಿಯೋನಾ ತೆರೇಸಾ ತ್ರಿಂದಾದೆ ಸ್ವಾಗತಿಸಿ, ಜಿಲ್ಸನ್ ಹ್ಯಾನ್ಸನ್ ಮಚಾದೊ ವಂದಿಸಿದರು. ರೆನಿಶಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.

ತಾಂತ್ರಿಕಗೋಷ್ಠಿಗಳಲ್ಲಿ ‘ಜ್ಯೂಸ್ ಬಾಟಲ್’ ಸ್ಥಾಪಕಿ ಪ್ರೀತಿ ನಾಯಕ್, ‘ಕೆವಿಪಿ ಬಿಸಿನೆಸ್ ಸೊಲ್ಯೂಷನ್ಸ್’ನ ಅಜಯ್ ಪ್ರಭು ಹಾಗೂ ‘ರೋಹನ್ ಕಾರ್ಪೊರೇಶನ್’ ನಿರ್ದೇಶಕ ಡಿಯೋನ್ ಮೊಂತೇರೋ ಅವರು ತಮ್ಮ ಉದ್ಯಮ ಪಯಣದ ಸ್ಫೂರ್ತಿದಾಯಕ ಅನುಭವಗಳನ್ನು ಹಂಚಿಕೊAಡಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ನಡೆದ ‘ಮೆಂಟರ್ಪಿಚ್’ ಸಂವಾದದಲ್ಲಿ ವಾತಿಕಾ ಪೈ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಉದ್ಯಮಿಗಳಾದ ಥೋಬಿಸ್ಮನ್ ಥಾಮಸ್, ಜೋಯಲ್ ಪಿಂಟೊ, ಐಶ್ವರ್ಯ ಫ್ರಾನ್ಸಿಸ್, ಮನೋಜ್ ಕುಮಾರ್, ಗ್ವೆನ್ ಡಿಸೋಜ, ಮೊಹಮ್ಮದ್ ತೈಸೀರ್ ಮತ್ತು ಆಕಾಶ್ ಎಂ.ಜೆ. ತಮ್ಮ ಉದ್ಯಮ ಯೋಜನೆಗಳನ್ನು ಮಂಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.




