Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಫೆ.15 ರಂದು ಸನಾತನ ಹಿಂದೂ ಸೇವಾ ಪ್ರತಿಷ್ಠಾನ; ಶ್ರೀ ಕ್ಷೇತ್ರ ಕುತ್ತಾರಿನಲ್ಲಿ ಉದ್ಘಾಟನೆ

UllalaVaniBy UllalaVaniFebruary 12, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಸನಾತನ ಹಿಂದೂ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಹಾಗೂ ಸನಾತನ ಧರ್ಮಸಭೆ ಉದ್ಘಾಟನಾ ಸಮಾರಂಭ ಹಾಗೂ ಸನಾತನ ಧರ್ಮಸಭೆ ಫೆ.15 ರಂದು ಸಂಜೆ 6 ಕ್ಕೆ ಶ್ರೀ ಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ದಿ| ಲೋಕಯ್ಯ ಗಟ್ಟಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.




ಸಮಾನ ಮನಸ್ಕರ ಬಳಗವಾಗಿ ರೂಪುಗೊಂಡಿರುವ ಈ ನೂತನ ಸಂಘಟನೆ ಧರ್ಮ ಜಾಗೃತಿ ಮೂಡಿಸುವುದು, ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರ್ಮಿಕ ಶ್ರದ್ಧೆ ಪಸರಿಸುವುದು, ಆರ್ಥಿಕ ಮತ್ತು ದೈಹಿಕವಾಗಿ ಅಶಕ್ತರಾಗಿರುವವರಿಗೆ ನೆರವು ನೀಡುವುದು ಉದ್ದೇಶವಾಗಿದೆ ಎಂದು ಸನಾತನ ಹಿಂದೂ ಸೇವಾ ಪ್ರತಿಷ್ಠಾನ ಇದರ ಅಧ್ಯಕ್ಷ ಸುರೇಶ್‌ ಚೌಟ ಹೇಳಿದರು.



ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಇಂದು ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಯುವಜನಾಂಗದಲ್ಲಿ ಹಿಂದೂ ಧರ್ಮದ ನಿಜಾರ್ಥದ ಪ್ರಜ್ಞೆ ಮೂಡಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಕಳಕಳಿಯ ಉದ್ದೇಶಗಳನ್ನು ಹೊಂದಿದೆ. ದೂರದ ಪ್ರದೇಶಗಳಿಂದ ಉದ್ಯಮಿಗಳನ್ನೂ, ದಾನಿಗಳನ್ನೂ ಗುರುತಿಸಿ ಅವರ ಮೂಲಕ ಆರ್ಥಿಕ ಸಹಾಯವನ್ನು ಸಂಗ್ರಹಿಸಿ ಸಮಾಜದಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನೆರವಾಗುವ ಉದ್ದೇಶದಿಂದ “ಹಿಂದೂ ಸೇವಾ ಪ್ರತಿಷ್ಠಾನ”ವನ್ನು ಸ್ಥಾಪಿಸಲಾಗುತ್ತಿದೆ. ಇಂದಿನ ಯುವಕರಿಗೆ ಹಿಂದೂ ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳು, ಸಂಕಷ್ಟಗಳು ಹಾಗೂ ಧಾರ್ಮಿಕ ಜಾಗೃತಿಯ ಅಗತ್ಯತೆ ಕುರಿತು ಅರಿವು ಮೂಡಿಸಿ, ಹಿಂದೂ ಬಾಂಧವರು ಒಗ್ಗಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯನ್ನು ತಿಳಿಸುವುದು ಈ ಸಂಘಟನೆಯ ಪ್ರಮುಖ ಧ್ಯೇಯವಾಗಿದೆ. ಅಗತ್ಯವಾದಾಗ ಹಿಂದೂ ಪರ ಹೋರಾಟ ನಡೆಸುವ ಮನೋಭಾವ ಮತ್ತು ಜನಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ರಾಜಾಜಿನಗರ (ಬೆಂಗಳೂರು) ಶಾಸಕರಾದ ಸುರೇಶ್ ಕುಮಾರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಚೌಟ ಕಕ್ಕೆಮಜಲು ವಹಿಸಲಿದ್ದಾರೆ. ಲಾಂಛನ ಅನಾವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕರಾದ ಪ್ರಕಾಶ್ ಪಿ.ಎಸ್. ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕ್ ಶೆಟ್ಟಿ ಬೋಳ್ಯಗುತ್ತು (ಉದ್ಯಮಿ, ಮುಂಬೈ), ಐಕಳ ಹರೀಶ್ ಶೆಟ್ಟಿ (ಜಾಗತಿಕ ಬಂಟರ ಸಂಘದ ಅಧ್ಯಕ್ಷರು), ಕಿಶೋರ್ ಕುಮಾರ್ ಬೊಟ್ಟಿಯಾಡಿ (ವಿಧಾನ ಪರಿಷತ್ ಸದಸ್ಯರು), ನಳಿನ್ ಕುಮಾರ್ ಕಟೀಲು (ಮಾಜಿ ಸಂಸದರು), ಅವಿನಾಶ್ ಕುಮಾರ್ ಕೆ.ಎಸ್., ಲಂಚುಲಾಲ್ ಕೆ.ಎಸ್., ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್‌ಗುತ್ತು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಧರ್ಮ ಸೇವಾಳುಗಳಿಗೆ ‘ಸನಾತನಾಭಿವಂದನೆ’ ನೀಡಿ ಗೌರವಿಸಲಿದ್ದು, ಡಾ|| ಎಂ.ಬಿ. ಪುರಾಣಿಕ್, ಪಿ. ಅನಂತಕೃಷ್ಣ ಭಟ್, ಶಕುಂತಲಾ ಶೆಟ್ಟಿ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು : ಮಧ್ಯಾಹ್ನ 2.00 ಗಂಟೆಯಿಂದ ದೇವಸ್ಥಾನದ ತಂಡದಿಂದ ಶುಭಾರಂಭ, ಮಂಡಲ ಜ್ಯೋತಿ ಪ್ರಜ್ವಲನೆ ಹಾಗೂ ಮಕ್ಕಳಿಂದ ಕುಣಿತ ಭಜನೆ ನಡೆಯಲಿದೆ.ಮಧ್ಯಾಹ್ನ 3.00 ಗಂಟೆಗೆ ವಿವಿಧ ಸಂಘಟನೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ.ಸಂಜೆ 4.00 ಗಂಟೆಗೆ ಸ್ಟಾರ್ ಮೆಲೋಡಿಸ್ ಮಂಗಳೂರು ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.ಇದೇ ವೇಳೆ ಸನಾತನ ಹಿಂದೂ ಸೇವಾ ಪ್ರತಿಷ್ಠಾನದ ಮಹಿಳಾ ಸದಸ್ಯರಿಂದ ‘ವೀರ ರಾಣಿ ಅಬ್ಬಕ್ಕ’ ತುಳು ಕಿರು ನಾಟಕ ಪ್ರದರ್ಶನಗೊಳ್ಳಲಿದೆ.ರಾತ್ರಿ 8.00 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ತಂಡದಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವಿರಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕರುಗಳಾದ ಪವಿತ್ರ ಕುಮಾರ್‌ ಗಟ್ಟಿ ಕುತ್ತಾರ್‌, ಕೆ.ಕೃಷ್ಣ ಶೆಟ್ಟಿ ತಾಮಾರ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಗಟ್ಟಿ ಕುತ್ತಾರ್‌, ಜೊತೆ ಕಾರ್ಯದರ್ಶಿ ಲತೀಶ್‌ ರೈ ಅಂಬ್ಲಮೊಗರು, ರಾಮಚಂದ್ರ ಶೆಟ್ಟಿ ಸಂತೋಷನಗರ , ಸುರೇಶ್‌ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು.
ಉದಯ ಕುಮಾರ್‌ ಗಟ್ಟಿ ಹಾಗೂ ಹರಿಣಿ ಉದಯ್‌ ರಚಿಸಿ ಹಾಡಿದ ಸನಾತನ ಧರ್ಮ ಸಭೆ ಕುರಿತ ಹಾಡಿನ ಆಡಿಯೋ ವನ್ನು ಬಿಡುಗಡೆಗೊಳಿಸಲಾಯಿತು.

ʻರಾಜಕೀಯದವರನ್ನು ಪದಾಧಿಕಾರಿಗಳಾಗಿ ಸ್ವೀಕರಿಸುವುದಿಲ್ಲʼ

ರಾಜಕೀಯ ಹುದ್ದೆಗಳನ್ನು ಹೊಂದಿರುವವರನ್ನು ಪದಾಧಿಕಾರಿಗಳಾಗಿ ಸ್ವೀಕರಿಸುವುದಿಲ್ಲ. ಸಂಘಟನೆಯ ಉದ್ದೇಶ ಸಮಾಜಸೇವೆ ಹಾಗೂ ಧಾರ್ಮಿಕ-ಸಾಮಾಜಿಕ ಜಾಗೃತಿ ಆಗಿದ್ದು, ರಾಜಕೀಯ ವಿಚಾರಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ.ರಾಜಕೀಯವಾಗಿ ಸಕ್ರಿಯರಾಗಿರುವವರು ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿದರೆ, ಸಂಘಟನೆಯನ್ನು ಚುನಾವಣಾ ಅಥವಾ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಅಂತಹವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡುವುದಿಲ್ಲ. ಯಾವುದೇ ಪಕ್ಷಕ್ಕೆ ಸೇರಿದ ಸಾಮಾನ್ಯ ಸದಸ್ಯರನ್ನು ಪ್ರತಿಷ್ಠಾನದಲ್ಲಿ ಸ್ವಾಗತಿಸುತ್ತೇವೆ. ಆದರೆ ಅವರು ಯಾವುದೇ ರಾಜಕೀಯ ಹುದ್ದೆಗಳನ್ನು ವಹಿಸಿಕೊಂಡಿರಬಾರದು ಎಂಬುದು ನಿಬಂಧನೆ.

ಪವಿತ್ರ ಕುಮಾರ್‌ ಗಟ್ಟಿ ಕುತ್ತಾರ್‌
ಪ್ರಧಾನ ಸಂಚಾಲಕರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಪೊಲೀಸ್ ಠಾಣೆಯಲ್ಲಿ ದರ್ಪ ತೋರುವ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶಾಕ್

February 12, 2026

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

February 10, 2026

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ; ಜೈಲಿನಲ್ಲೇ ಕೊಲೆ

February 10, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಪೊಲೀಸ್ ಠಾಣೆಯಲ್ಲಿ ದರ್ಪ ತೋರುವ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶಾಕ್

By UllalaVaniFebruary 12, 20260

​ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಧಿಕಾರಿಗಳು ನಾಗರೀಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಹಾಗೂ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ, ಅದು ಮಾನವ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಫೆ.15 ರಂದು ಸನಾತನ ಹಿಂದೂ ಸೇವಾ ಪ್ರತಿಷ್ಠಾನ; ಶ್ರೀ ಕ್ಷೇತ್ರ ಕುತ್ತಾರಿನಲ್ಲಿ ಉದ್ಘಾಟನೆ

February 12, 2026

ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​..!

February 10, 2026

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ದಿಢೀರ್ ಬೆಂಕಿ- ಪ್ರಯಾಣಿಕರು ಅಪಾಯದಿಂದ ಪಾರು..!!

February 10, 2026
1 2 3 … 1,799 Next
Automatic YouTube Gallery

ಜಿಲ್ಲಾಧಿಕಾರಿಯವರು ಹಣವನ್ನು ನೀಡುತ್ತಿಲ್ಲ; ಸ್ಪೀಕರ್ ಸ್ಪಂದಿಸಲ್ಲ

ಅಬ್ಬಕ್ಕ ಹೆಸರು ಇಡೀ ದೇಶಕ್ಕೆ ಗೊತ್ತು: ಅನುದಾನ ಮಾತ್ರ ಬಿಡುಗಡೆಗೊಂಡಿಲ್ಲ

ಬೇಸರ ವ್ಯಕ್ತಪಡಿಸಿದ ಅಬ್ಬಕ್ಕ ಉತ್ಸವ ಸಮಿತಿ
ಜಿಲ್ಲಾಧಿಕಾರಿಯವರು ಹಣವನ್ನು ನೀಡುತ್ತಿಲ್ಲ; ಸ್ಪೀಕರ್ ಸ್ಪಂದಿಸಲ್ಲ
Now Playing
ಜಿಲ್ಲಾಧಿಕಾರಿಯವರು ಹಣವನ್ನು ನೀಡುತ್ತಿಲ್ಲ; ಸ್ಪೀಕರ್ ಸ್ಪಂದಿಸಲ್ಲ
ಅಬ್ಬಕ್ಕ ಹೆಸರು ಇಡೀ ದೇಶಕ್ಕೆ ಗೊತ್ತು: ಅನುದಾನ ಮಾತ್ರ ಬಿಡುಗಡೆಗೊಂಡಿಲ್ಲ ಬೇಸರ ...
ಅಬ್ಬಕ್ಕ ಹೆಸರು ಇಡೀ ದೇಶಕ್ಕೆ ಗೊತ್ತು: ಅನುದಾನ ಮಾತ್ರ ಬಿಡುಗಡೆಗೊಂಡಿಲ್ಲ

ಬೇಸರ ವ್ಯಕ್ತಪಡಿಸಿದ ಅಬ್ಬಕ್ಕ ಉತ್ಸವ ಸಮಿತಿ
ಫೆ.14ರಂದು ತೊಕ್ಕೊಟ್ಟು ಅಂಬೇಡ್ಕರ್ ರಂಗಮAದಿರದಲ್ಲಿ  ವೀರರಾಣಿ ಅಬ್ಬಕ್ಕ ಉತ್ಸವ 2025-26||ಸುದ್ದಿಗೋಷ್ಠಿ||
Now Playing
ಫೆ.14ರಂದು ತೊಕ್ಕೊಟ್ಟು ಅಂಬೇಡ್ಕರ್ ರಂಗಮAದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ 2025-26||ಸುದ್ದಿಗೋಷ್ಠಿ||
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ;ಫೆ.14ರಂದು ವೀರರಾಣಿ ಅಬ್ಬಕ್ಕ ಉತ್ಸವ ...
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ;ಫೆ.14ರಂದು ವೀರರಾಣಿ ಅಬ್ಬಕ್ಕ ಉತ್ಸವ 2025-26

ಕುತ್ತಾರಿನಲ್ಲಿ ಅಬ್ಬಕ್ಕ ಉತ್ಸವ ಸಮಿತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ

#abbakka utsava #news #latsetnews #kuttar #ullalavani
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d