Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಕಿನ್ಯಾಜೆ- ಕುರ್ನಾಡು ಬೆಟ್ಟು ಸಂಪರ್ಕ ರಸ್ತೆ ಮೇಲೆ ಅತಿಕ್ರಮಣ; ಸಂಚಾರಕ್ಕೆ ಅಡಚಣೆ; ಪ್ರತಿಭಟನೆ ಎಚ್ಚರಿಕೆ

UllalaVaniBy UllalaVaniFebruary 7, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕುರ್ನಾಡು : ಕುರ್ನಾಡು ಗ್ರಾಮದ ಕಿನ್ಯಾಜೆಯಿಂದ ಕುರ್ನಾಡು ಬೆಟ್ಟುವನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆಯ ಮೇಲೆ ಅತಿಕ್ರಮಣ ನಡೆಯುತ್ತಿದ್ದು, ಇದರಿಂದ ಸುಮಾರು 12 ಕುಟುಂಬಗಳ ದೈನಂದಿನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಆದ್ದರಿಂದ ಕೂಡಲೇ ರಸ್ತೆಗೆ ಅಡ್ಡಲಾಗಿ ಹಾಕಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ವಂಚಿತರು ಹಾಗೂ ಊರಿನ ಪ್ರಮುಖರು ಸಂಘಟನೆಯ ಮುಂದಾಳ್ವತದಲ್ಲಿ ಫೆಬ್ರವರಿ 9ರ ಸೋಮವಾರದಂದು ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಎಚ್ಚರಿಕೆ ನೀಡಿದ್ದಾರೆ.



ಅವರು ಶುಕ್ರವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ರಸ್ತೆಯನ್ನು ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರು ಪ್ರತಿದಿನ ಬಳಸುತ್ತಿದ್ದು, ರಸ್ತೆ ಇಕ್ಕೆಲೆಗಳಲ್ಲಿ ಸಂತೋಷ್ ಡಿಸೋಜ ಎಂಬವರು ಅಡಿಕೆ ಮರದ ತುಂಡುಗಳು ಹಾಗೂ ಕಲ್ಲುಗಳನ್ನು ರಾಶಿ ಹಾಕಿರುವುದರಿಂದ ವಾಹನ ಹಾಗೂ ಕಾಲ್ನಡಿಗೆ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.
ಈ ರಸ್ತೆಯನ್ನು ಬಳಸುತ್ತಿರುವ 12 ಕುಟುಂಬಗಳಲ್ಲಿ 4 ಕುಟುಂಬಗಳು ದಲಿತ ಸಮುದಾಯಕ್ಕೆ ಸೇರಿದ್ದು, ಇತರ ವರ್ಗದ ಜನರೂ ಸಹ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಕಳೆದ 30 ವರ್ಷಗಳಿಂದ ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಾ ಬಂದಿದ್ದು, ಇದೀಗ ಏಕಾಏಕಿ ಸಂಚಾರಕ್ಕೆ ತಡೆ ಸೃಷ್ಟಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.


ಈ ಕುರಿತು ಪಂಚಾಯತ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ, ರಸ್ತೆಗೆ ಅಡ್ಡಲಾಗಿ ಇಡಲಾಗಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ಇನ್ನೂ ತೆರವುಗೊಳಿಸಿಲ್ಲ. ಪಂಚಾಯತ್ ಕೂಡ ಈ ರಸ್ತೆ ಸಾರ್ವಜನಿಕ ರಸ್ತೆ ಎಂದು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.


ದೇವಕಿ ಎಂಬವರ ಮಗ ನಿಧನರಾದ ಸಂದರ್ಭದಲ್ಲಿ ಮೃತದೇಹವನ್ನು ಸಾಗಿಸಲು ಅಪಾರ ಕಷ್ಟ ಅನುಭವಿಸಬೇಕಾಯಿತು. ರಸ್ತೆಯ ಅತಿಕ್ರಮಣದಿಂದ ವಾಹನಗಳು ಪ್ರವೇಶಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಮೃತದೇಹವನ್ನು ಹೊತ್ತುಕೊಂಡು ಸಾಗಬೇಕಾದ ದುಸ್ಥಿತಿ ಎದುರಾಯಿತು. ಅನಾರೋಗ್ಯದ ಸಂದರ್ಭದಲ್ಲೂ ಸಾರ್ವಜನಿಕರಿಗೆ ಭಾರೀ ತೊಂದರೆ ಎದುರಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಇದುವರೆಗೆ ಶಾಸಕರ ಗಮನಕ್ಕೆ ತರುವಂತೆ ಯಾವುದೇ ಲಿಖಿತ ದೂರು ನೀಡಲಾಗಿಲ್ಲ ಎಂದರು.


ಸಂತೋಷ್ ಡಿಸೋಜ ಅವರು ಈ ವಿಚಾರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಬಾರದು ಎಂದು ತಿಳಿಸಿದ್ದಾರೆ. ಆದರೆ ನಮಗೆ ಯಾವುದೇ ಅಭಿವೃದ್ಧಿ ಬೇಡ, ಕೇವಲ ರಸ್ತೆಗೆ ಅಡ್ಡಲಾಗಿ ಹಾಕಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿದರೆ ಸಾಕು ಎಂದು ಅವರು ಸ್ಪಷ್ಟಪಡಿಸಿದರು.


ರಸ್ತೆ ವಂಚಿತರಾದ ಚಂದ್ರಶೇಖರ್ ಆಚಾರ್ಯ ಮಾತನಾಡಿ, “ನನಗೆ ಲೋ ಬಿಪಿ ಆಗಿ ಮನೆಯಲ್ಲಿ ಬಿದ್ದಿದ್ದಾಗ ಸ್ಥಳೀಯ ಯುವಕರು ಬೆಂಚಿನ ಮೂಲಕ ಹೊತ್ತುಕೊಂಡು ಹೋಗಬೇಕಾಯಿತು. ಮತ್ತೊಮ್ಮೆ ಕಾಲು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲೂ ಆಟೋ ರಿಕ್ಷಾ ಬರಲು ಅವಕಾಶ ನೀಡುವಂತೆ ವಿನಂತಿಸಿದರೂ ಸಂತೋಷ್ ಡಿಸೋಜ ಅವರು ಒಪ್ಪಲಿಲ್ಲ” ಎಂದು ಆರೋಪಿಸಿದರು.


ತಾತ್ಕಾಲಿಕ ಪರ್ಯಾಯ ರಸ್ತೆ ನೀಡಲಾಗಿದ್ದರೂ, ಮಳೆಗಾಲದಲ್ಲಿ ಆ ರಸ್ತೆ ಸಂಪೂರ್ಣವಾಗಿ ಉಪಯೋಗಕ್ಕೆ ಅಸಾಧ್ಯವಾಗಿದ್ದು ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ಕೂಡಲೇ ರಸ್ತೆ ಮೇಲಿನ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಪ್ರಸಾದ್ ಬೊಳ್ಯಾರು, ತಾಲೂಕು ಸಂಚಾಲಕ ಜಗದೀಶ್ ಮಂಜನಾಡಿ, ರಸ್ತೆ ವಂಚಿತರಾದ ಭವಾನಿ, ರತ್ನ, ನಾರಾಯಣ ಆಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

May 1, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ಅತ್ಯಾಚಾರ ಕೇಸಲ್ಲಿ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

April 30, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
All News

ಹರೇಕಳ: ತಡರಾತ್ರಿ ಕಾಡುಕೋಣ ಪ್ರತ್ಯಕ್ಷ ಸ್ಥಳೀಯರಲ್ಲಿ ಮನೆಮಾಡಿದ ಆತಂಕ

By UllalaVaniMay 1, 20260

ಹರೇಕಳ: ದೊಡ್ಡ ಗಾತ್ರದ ಕಾಡುಕೋಣವೊಂದು ಹರೇಕಳ ಶಾಲೆ ಬಳಿ ತಡರಾತ್ರಿ ವೇಳೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ .…

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

May 1, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ಅತ್ಯಾಚಾರ ಕೇಸಲ್ಲಿ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

April 30, 2026
1 2 3 … 1,892 Next
Automatic YouTube Gallery

|| ULLALA TALUK HIGHLIGHTS || 01.05.2026

|| ULLALA TALUK HIGHLIGHTS

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted ...
and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| ULLALA TALUK HIGHLIGHTS || 01.05.2026
Now Playing
|| ULLALA TALUK HIGHLIGHTS || 01.05.2026
|| ULLALA TALUK HIGHLIGHTS 📍 Ullal | Dakshina Kannada | Coastal ...
|| ULLALA TALUK HIGHLIGHTS

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted ...
and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
Now Playing
"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ...
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ತೆರವು

ಗ್ರಾಮಸ್ಥರ ಅಳಲು; ಅಧಿಕಾರಿಗಳ ಮೌನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Belma #Ullala
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version