Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಬುರ್ದುಗೋಳಿ ಕಲ್ಲಾಪುವಿನ ಮಣ್ಣುಮನೆಯ ಭಾವನೆ ನೀಡಿದೆ : ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ

UllalaVaniBy UllalaVaniJanuary 4, 2026Updated:January 4, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಲ್ಲಾಪು: ಬುರ್ದುಗೋಳಿ ಕಲ್ಲಾಪುವಿನ ಮಣ್ಣು ನನಗೆ ಮನೆ ಅನ್ನುವ ಭಾವನೆ ನೀಡಿದೆ. ಬೇರೆ ಊರಿಗೆ ಬಂದಿದ್ದೇವೆ ಎಂಬ ಯಾವುದೇ ರೀತಿಯ ಅಂಜಿಕೆ ಇಲ್ಲಿ ಎಷ್ಟೂ ಅನಿಸಿಲ್ಲ. ಸಮಿತಿ ಸದಸ್ಯರ ಪ್ರೀತಿ, ಅಪ್ಯಾಯತೆ, ಆತ್ಮೀಯತೆ ಹಾಗೂ ದೈವದಲ್ಲಿ ಇಟ್ಟ ಅಚಲ ನಂಬಿಕೆ ಇವೆಲ್ಲವೂ ನನಗೆ ಅಜ್ಜನ ಕಾರಣೀಕ ಶಕ್ತಿಯ ಜೀವಂತ ಪ್ರತ್ಯಕ್ಷ ಉದಾಹರಣೆಯಂತೆ ಕಾಣುತ್ತಿವೆ.ನಾವು ದೈವವನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೋ, ಆಪತ್ತು ಬಂದಾಗ ದೈವಗಳೇ ಕೈಚಾಚಿ ನಮ್ಮನ್ನು ರಕ್ಷಿಸುತ್ತವೆ ಎಂದು ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಗುಳಿಗ ಕೊರಗಜ್ಜ ದೈವದ ವರ್ಷಾವಧಿ ಕೋಲದಲ್ಲಿ ಭಾಗವಹಿಸಿ ಮಾತನಾಡಿದರು.ಕಲ್ಲಾಪುವಿನ ಮಣ್ಣಿನಲ್ಲಿ ನಮಗೆ ಏನಾಗಿದೆ ಎಂಬುದೇ ಮುಖ್ಯ. ಜೀವನದ ಪ್ರತಿಯೊಂದು ನಿರ್ಧಾರವೂ ಕೊರಗಜ್ಜನ ಅಪ್ಪಣೆಯಿಲ್ಲದೆ ತೆಗೆದುಕೊಳ್ಳುವುದೇ ಇಲ್ಲ. ಅಜ್ಜ ನಮ್ಮನ್ನು ಇಷ್ಟಪಡುತ್ತಾರಾ, ನಾವು ಅವರನ್ನು ಇಷ್ಟಪಡುತ್ತೇವೋ ಅದು ತಿಳಿಯುವುದಕ್ಕಿಂತ, ಅವರ ಜೊತೆಗಿನ ಅಂತರಂಗದ ಬಂಧವೇ ದೊಡ್ಡದು.ಬೆಳಕಿನ ದೀವಟಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಅಜ್ಜ ಮುಂದೆ ಸಾಗುತ್ತಾ, ನನ್ನನ್ನು ಹಿಂದೆ ಕರೆದುಕೊಂಡು ಹೋಗುತ್ತಿರುವ ಅನುಭವ,ಅದು ನನ್ನ ಬದುಕಿನ ಅಮೂಲ್ಯ ಕ್ಷಣ. ಅಜ್ಜನಿಂದ ನನಗೆ ಅಪಾರವಾದ ಪ್ರೀತಿ ದೊರೆತಿದೆ. ಎರಡು ವರ್ಷಗಳ ಪರಿಚಯದಲ್ಲಿ ಆಡಳಿತ ಮಂಡಳಿಯವರೊಂದಿಗೆ ಬೆಸೆದ ಆತ್ಮೀಯ ಸಂಬಂಧ, ಅಜ್ಜನ ಮೂಲ ಶಕ್ತಿಯನ್ನು ಇನ್ನಷ್ಟು ಹತ್ತಿರ ಮಾಡಿದೆ. ಯಶವಂತ್ ಶೆಟ್ಟಿ ಅವರಿಂದ ಪರಿಚಯವಾದ ಈ ಕ್ಷೇತ್ರ ನನ್ನ ಬದುಕಿನ ಹಾದಿಗಳನ್ನು ಬದಲಿಸಿದೆ. ಬೇರೆಯವರಿಗೆ ವಿಚಾರ ಹೇಳುವಾಗ ಒಂದೇ ಮಾತು ಹೇಳುತ್ತೇನೆ ಮರ್ಕಟ ಕಿಶೋರ ನ್ಯಾಯದಲ್ಲಿ ದೈವವನ್ನು ನಂಬಲೇಬೇಕು. ದೈವ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಅನ್ನುವುದನ್ನು ತಾನೇ ಸಾಕ್ಷಿ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ ಬುರ್ದುಗೋಳಿ ಕ್ಷೇತ್ರ ಇತಿಹಾಸ ಪಾವಿತ್ರ್ಯತೆಯನ್ನು ಹೊಂದಿರುವ, ಭಕ್ತಿಪೂರಕವಾದ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಸಮರ್ಥವಾಗಿ ಕೊಂಡೊಯ್ಯುತ್ತಿರುವ ಆಡಳಿತ ಸಮಿತಿಯ ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆ, ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದಿಂದ ಲಭ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಕ್ಷೇತ್ರಕ್ಕೆ ನೀಡುವ ಸಹಕಾರವು ಸಮಾಜಕ್ಕೆ ಪರೋಕ್ಷವಾಗಿ ನೀಡುವ ಸಹಕಾರದಂತೆಯೇ ಎಂಬ ನಂಬಿಕೆ ನಮ್ಮದು. ಈಗಾಗಲೇ ಡ್ರೈನ್ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವೆವು ಎಂದರು.

ಶ್ರೀ ಕ್ಷೇತ್ರ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್‌ ಪಂಡಿತ್‌ ಹೌಸ್ ಮಾತನಾಡಿ, ಸ್ಥಳಾವಕಾಶ ಹಾಗೂ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಇದ್ದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಭೂದಾನ ನಿಧಿ ಹಾಗೂ ಸ್ವರ್ಣ ಭಂಡಾರ ನಿಧಿಗಳನ್ನು ಆರಂಭಿಸಲಾಗಿದೆ. ಕೊರಗಜ್ಜನ ಕಾರಣಿಕ ಶಕ್ತಿಯಿಂದಾಗಿ ಈ ಎಲ್ಲಾ ವ್ಯವಸ್ಥೆಗಳು ನಿಧಾನವಾಗಿ ನಿವಾರಣೆಯಾಗುತ್ತಿದ್ದು, ಕೈಗೊಂಡಿರುವ ಕಾರ್ಯಗಳು ಸೂಸೂತ್ರವಾಗಿ ಮತ್ತು ಯಶಸ್ವಿಯಾಗಿ ನೆರವೇರುತ್ತಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ದೈವಾನುಗ್ರಹ ಪಡೆದುಕೊಳ್ಳುತ್ತಿದ್ದಾರೆ ಎಂದರು.ಈ ಸಂದರ್ಭ ಬೆಂಗಳೂರಿನ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಮೇಘರಾಜ್‌ , ತಮಿಳುನಾಡು ಪಿಎಂಕೆ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಮಂಜುನಾಥ್‌ , ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್‌ ಆಳ್ವ ಕುವೆತ್ತಬೈಲ್ ಹಾಗೂ ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್‌ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳದ ಕುರಿತಾದ ʻಸಿಂಗಾರ ಸುಗಿಪುʼ ತುಳು ಭಕ್ತಿಗೀತೆ ವಿಡಿಯೋ ಹಾಡುಗಳ ಬಿಡುಗಡೆಯನ್ನು ಸ್ವಾಮಿಗಳು ನಡೆಸಿಕೊಟ್ಟರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು CCB ಪೊಲೀಸರ ಕಾರ್ಯಾಚರಣೆ — ತೊಕ್ಕೊಟ್ಟು ಮೂಲದ ಇಬ್ಬರು ಸೇರಿದಂತೆ 3 ಮಂದಿ ಅರೆಸ್ಟ್

March 23, 2026

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ….!!

March 23, 2026

ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ..!

March 23, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಮೀನುಗಾರರ ಬಲೆ, ಪರಿಕರಗಳು ಮುಳುಗಡೆ

By UllalaVaniMarch 23, 20260

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಗಿಲೆಟ್‌ ದೋಣಿಯಲ್ಲಿ ಅವಘಡ ಸಂಭವಿಸಿ, ಮೀನುಗಾರಿಕೆಗಾಗಿ ಬಳಸುತ್ತಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದಲ್ಲಿ ಮುಳುಗಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು CCB ಪೊಲೀಸರ ಕಾರ್ಯಾಚರಣೆ — ತೊಕ್ಕೊಟ್ಟು ಮೂಲದ ಇಬ್ಬರು ಸೇರಿದಂತೆ 3 ಮಂದಿ ಅರೆಸ್ಟ್

March 23, 2026

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ….!!

March 23, 2026

ಪತ್ನಿಯನ್ನು ಕೊಲೆಗೈದು, ಬಳಿಕ ತಾನೂ ಕತ್ತು ಸೀಳಿಕೊಂಡಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು..!

March 23, 2026
1 2 3 … 1,843 Next
Automatic YouTube Gallery

ವಿಧಾನಸೌಧದ ಮುಖ್ಯ ದ್ವಾರ, ಸೋಲಾರ್ ವ್ಯವಸ್ಥೆ ಸೇರಿ ಹಲವು ಕಾಮಗಾರಿಗಳಿಗೆ ಮಾ.25ರಂದು ಉದ್ಘಾಟನೆ: ಯು.ಟಿ.ಖಾದರ್

ಮಾ.25ರಂದು ವಿಧಾನಸೌಧದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ;ಸಿಎಂ ಸಿದ್ದರಾಮಯ್ಯರವರಿಂದ ಲೋಕಾರ್ಪಣೆಗೊಳ್ಳಲಿರುವ ಕಾಮಗಾರಿಗಳು

ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ...
ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Ullalavani #UtKhader #CM #Siddaramaiah #Vidhanasabha #Mangalore
Show More
ವಿಧಾನಸೌಧದ ಮುಖ್ಯ ದ್ವಾರ, ಸೋಲಾರ್ ವ್ಯವಸ್ಥೆ ಸೇರಿ ಹಲವು ಕಾಮಗಾರಿಗಳಿಗೆ ಮಾ.25ರಂದು ಉದ್ಘಾಟನೆ: ಯು.ಟಿ.ಖಾದರ್
Now Playing
ವಿಧಾನಸೌಧದ ಮುಖ್ಯ ದ್ವಾರ, ಸೋಲಾರ್ ವ್ಯವಸ್ಥೆ ಸೇರಿ ಹಲವು ಕಾಮಗಾರಿಗಳಿಗೆ ಮಾ.25ರಂದು ಉದ್ಘಾಟನೆ: ಯು.ಟಿ.ಖಾದರ್
ಮಾ.25ರಂದು ವಿಧಾನಸೌಧದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ;ಸಿಎಂ ...
ಮಾ.25ರಂದು ವಿಧಾನಸೌಧದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ;ಸಿಎಂ ಸಿದ್ದರಾಮಯ್ಯರವರಿಂದ ಲೋಕಾರ್ಪಣೆಗೊಳ್ಳಲಿರುವ ಕಾಮಗಾರಿಗಳು

ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ...
ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Ullalavani #UtKhader #CM #Siddaramaiah #Vidhanasabha #Mangalore
Show More
ಶ್ರೀ ಆದಿಮಾಯೆ ನಾಗಬ್ರಹ್ಮ ಮೋಗೇರ್ಕಳ  ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆಯಲ್ಲಿ ಭಕ್ತಿ-ಒಗ್ಗಟ್ಟುಗೆ ಕರೆ
Now Playing
ಶ್ರೀ ಆದಿಮಾಯೆ ನಾಗಬ್ರಹ್ಮ ಮೋಗೇರ್ಕಳ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆಯಲ್ಲಿ ಭಕ್ತಿ-ಒಗ್ಗಟ್ಟುಗೆ ಕರೆ
ಶ್ರೀ ಆದಿಮಾಯೆ ನಾಗಬ್ರಹ್ಮ ಮೋಗೇರ್ಕಳ ದೈವಸ್ಥಾನದ ಬ್ರಹ್ಮಕಲಶೋತ್ಸವ ;ಮೇ.8ರಂದು ...
ಶ್ರೀ ಆದಿಮಾಯೆ ನಾಗಬ್ರಹ್ಮ ಮೋಗೇರ್ಕಳ ದೈವಸ್ಥಾನದ ಬ್ರಹ್ಮಕಲಶೋತ್ಸವ ;ಮೇ.8ರಂದು ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿಸಭೆ

ಧಾರ್ಮಿಕ ಕಾರ್ಯಗಳಲ್ಲಿ ರಾಜಕೀಯ ಬೇಡ: ಜಗದೀಶ್ ಆಳ್ವ ಕುವೆತ್ತಬೈಲ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d