ಮುಡಿಪು : ಜ.2,3,4 ರಂದು ಮುಡಿಪುವಿನ ರಾಜೀವ್ ಗಾಂಧಿ ಪಂಚಾಯತ್ ಮೈದಾನದಲ್ಲಿ ಆಯೋಜಿಸಲಾದ ೮ ನೇ ಬಾರಿಯ ರಾಜ್ಯಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾಜಬಾಂಧವರ ಹೊನಲು ಬೆಳಕಿನ ಪ್ರತಿಷ್ಠಿತ ಲೀಗ್ ಕಮ್ ನಾಕೌಟ್ ಮಹಾನಾಯಕ ಜೈ ಭೀಮ್ ಟ್ರೋಫಿ-೨೦೨೬ ಕ್ರಿಕೆಟ್ ಪಂದ್ಯಾಟದ ಪೂರ್ವಭಾವಿ ಸಭೆ ಮುಡಿಪು ಕುಲಾಲ ಭವನದಲ್ಲಿ ಭಾನುವಾರ ನಡೆಯಿತು. ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರ ನೇತೃತ್ವದಲ್ಲಿ ನಡೆಯಲಿರುವ ಪಂದ್ಯಾಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಆಲಿ ಫರೀದ್ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭ ಮಾತನಾಡಿದ ಅವರು ಮಹಾನಾಯಕ ಜೈಭೀಮ್ ಕ್ರಿಕೆಟ್ ಪಂದ್ಯಾಟ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯ ಬಾಂಧವರಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮೂರು ದಿನದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವುದು ಅತ್ಯಂತ ಸಂತೋಷ. ಸಭಾಧ್ಯಕ್ಷರ ಆಪ್ತ ಸಹಾಯಕರಾದ ಪ್ರವೀಣ್ ಕುಮಾರ್ ಜೆ ಪಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮಾಜದ ಕ್ರಿಕೆಟ್ ಆಯೋಜಕರಾದ ಜಗದೀಶ್ ಗಂಗೊಳ್ಳಿ ರವರ ಸಾರಥ್ಯದೊಂದಿಗೆ ಅತ್ಯಂತ ವಿಜೃಂಭಣೆಯಿAದ ನಡೆದು ಯಶಸ್ವಿಯಾಗಲಿ. ಈ ಪಂದ್ಯಾಕೂಟಕ್ಕೆ ತಾವು ಬನ್ನಿ ತಮ್ಮವರನ್ನು ಕರೆತನ್ನಿ, ಮಹಾನಾಯಕ ಜೈಭೀಮ್ ಪಂದ್ಯಾಕೂಟವನ್ನು ಯಶಸ್ವಿಗೊಳಿಸಿರಿ ಎಂದರು. ಈ ಸಂದರ್ಭ ಪ್ರವೀಣ್ ಕುಮಾರ್ ಜೆ.ಪಿ, ಜಗದೀಶ್ ಗಂಗೊಳ್ಳಿ, ದಿನೇಶ್ ಮೂಳೂರು, ಸದಾನಂದ ಬಾಳೆಪುಣಿ, ಯಾದವ ಅಸೈಗೋಳಿ, ರೋಹಿತ್ ಉಳ್ಳಾಲ್, ನಾಗೇಶ್ ಕೈರಂಗಳ, ಸಂದೀಪ್ ಯೆನೆಪೋಯ, ರವಿ.ಯೆಸ್.ಗಾಂಧಿನಗರ, ಸುರೇಶ್ ಕೆ.ಸಿ.ರೋಡ್, ಶಶಿಧರ್, ಮಾಧವ ಸುತ್ಪಾಡಿ, ಸಂದೀಪ್ ಕೆ.ಸಿ.ರೋಡ್, ಗೌತಮ್ ರಾಜ್, ಶಿವಪ್ರಸಾದ್, ಪೂವಪ್ಪ ಬಾಳೆಪುಣಿ, ವಸಂತ್ ಕುರ್ನಾಡ್, ಹೇಮಂತ್ ಕೆ.ತೆಕ್ಕುಂಜ, ಅಶೋಕ್ ಇರಾ ಪರ್ಲಡ್ಕ, ರವಿ ಪರಿಯಾಲ, ಹೇಮಂತ್ ಕುರ್ನಾಡ್, ಬಾಲಕೃಷ್ಣ, ಮೀನಾಕ್ಷಿ, ಚರಣ್ ಕಿನ್ಯ, ಅಭಿಷೇಕ್ ವಾಲ್ಮೀಕಿ, ಮಹೇಶ್, ಮಂಜುನಾಥ್, ಸಾದಿರ ಅತ್ತಾವರ, ಶೋಭ, ಸತೀಶ್ ಜೆಪ್ಪು, ದಿನೇಶ್ ಕುರ್ನಾಡ್, ರಾಮದಾಸ್ ಕೋಟ್ಯಾನ್, ಭಾಸ್ಕರ್ ನಾರ್ಯ, ಸಂಜೀವ ನಾರ್ಯ, ಭಾಸ್ಕರ್ ಮೂಳೂರು, ಚಂದ್ರಹಾಸ್ ಗುಂಡ್ಯ ಬೋಳಿಯಾರ್, ಯು.ಉಮೇಶ್ ಅಮೀನ್, ಸಂದೀಪ್, ಚಂದನ್, ಅರುಣಾ, ಸಿದ್ದರಾಮೇಶ್ವರ, ಸಂಜಯ್ ಜೆ.ಎಸ್, ಅರುಣ್ ಕುಮಾರ್, ಭರತ್ ರಾಜ್, ಪೃಥ್ವಿರಾಜ್, ವೀಕ್ಷಿತ್, ಪವನ್, ಉಮನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.



