ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಸ್ತ್ರೀ ಸಮಾನತೆಯಿಂದ ಸಂಸ್ಕøತಿ ಅಳಿವಿನಂಚಿನಲ್ಲಿದ್ದು, ಇದರಿಂದ ಉನ್ನತ ಸ್ಥಾನದಲ್ಲಿರುವ ತಾಯಂದಿರು ಕೆಳಗಿಳಿಯುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದಿಕ್ ಪ್ರಮುಖ್ ಗಜಾನನ ಪೈ ಖೇದ ವ್ಯಕ್ತಪಡಿಸಿದ್ದಾರೆ.
ಅವರು ಕುಂಪಲ ವ್ಯಾಸನಗರದ ಕೇಸರಿ ಮಾತೃ ಮಂಡಳಿ ವತಿಯಿಂದ ಕೇಸರಿ ಸಭಾಂಗಣದಲ್ಲಿ ಜರಗಿದ ಶ್ರೀವರಮಹಾಲಕ್ಷ್ಮೀ ಪೂಜಾ ವೃತದ ಪ್ರಯುಕ್ತ ಜರಗಿದ ಧಾರ್ಮಿಕಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಂಪತ್ತಿನ ಅಧಿದೇವತೆಯ ಆರಾಧನೆಯಿಂದ ಸಂಸ್ಕøತಿಯನ್ನು ಉಳಿಸುವ ಕಾರ್ಯ ಆಗುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ವರಮಹಾಲಕ್ಷ್ಮೀ ಆರಾಧನೆ ಶ್ಲಾಘನೀಯ. ತಾಯಂದಿರಿಗೆ ಭಯಯಭೀತಿ ಇಲ್ಲದೆ ನೆಮ್ಮದಿ ಇರುವ ಪ್ರದೇಶದಲ್ಲಿ ದೇವರು ಇರುತ್ತಾರೆ. ಸಂಸ್ಕಾರ , ಪರಿಶ್ರಮ ಇರುವ ಮನೆಗಳಲ್ಲಿ ಲಕ್ಷ್ಮೀ ಒಲಿಯುತ್ತಾಳೆ. ಸಾಮಾನ್ಯ ವ್ಯಕ್ತಿಯನ್ನು ಒಳ್ಳೆಯ ದಾರಿಗೆ ತರುವುದು ಸಂಸ್ಕಾರದ ಅರ್ಥ. ಈಗಿನ ಪದ್ಧತಿಯಲ್ಲಿ ಕೂಡು ಕುಟುಂಬದ ಬದಲು ಸ್ವಾರ್ಥದ ಕಡೆ ಜನ ವಾಲುತ್ತಿದ್ದಾರೆ. ಮನೆಯಲ್ಲಿ ನಡವಳಿಕೆ, ಮಾತುಕತೆ ಸರಿಯಿದ್ದರೆ ಮನೆಯೆಲ್ಲಾ ಬೆಳಗುತ್ತದೆ. ಕರಣ ಪಿಶಾಚಿಯಂತಿರುವ ಮೊಬೈಲಿನಿಂದ ಈಗ ಮಕ್ಕಳ ದಿನಚರಿಯೇ ಬದಲಾಗಿದೆ. ಅವರದ್ದೇ ವಯಸ್ಸಿನ ಮಕ್ಕಳ ಜತೆಗೆ ಬಾಳಲು ತೊಡಗಿದಾಗ ಸಾಮೂಹಿಕ ಜೀವನದಲ್ಲಿ ಬಾಳುವ ಅಭ್ಯಾಸ ಮಕ್ಕಳಲ್ಲಿ ಬೆಳೆಯುವುದರಿಂದ ಸಂಸ್ಕಾರ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಉದ್ಯಮಿ ಹರಿದಾಸ್ ಮಾಡೂರು ಅಧ್ಯಕ್ಷತೆ ವಹಿಸಿದ್ದರು. ಕೇಸರಿ ಮಾತೃ ಮಂಡಳಿಯ ಗೌರವ ಸಲಹೆಗಾರ ಜಯಲಕ್ಷ್ಮೀ, ಮುಖ್ಯ ಅತಿಥಿಯಾಗಿದ್ದರು. ಮಮತಾ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಿಜಯ್ ಸ್ವಾಗತಿಸಿದರು. ಕೇಸರಿ ಮಿತ್ರ ವೃಂದದ ಅಧ್ಯಕ್ಷ ಸತ್ಯನಾರಾಯಣ ಹೂಡೆ ವಂದಿಸಿದರು.
ಇದೇ ಸಂದರ್ಭ ಶ್ರೀಕಾಂತ್ ಭಟ್ ಕೋಟೆಕಾರು ಇವರ ನೇತೃತ್ವದಲ್ಲಿ ಜರಗಿದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತದಲ್ಲಿ ಸಹಸ್ರ ಮಹಿಳೆಯರು ಪಾಲ್ಗೊಂಡರು.





