ಕೊಲ್ಯ : 2025-26 ನೇ ಸಾಲಿನ ಯುವವಾಹಿನಿ (ರಿ.) ಕೊಲ್ಯ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಜುಲೈ 20, 2025ರ ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅಕ್ಷಯ ಕಾಲೇಜು, ಪುತ್ತೂರು ಇದರ ಛೇರ್ಮನ್ ಜಯಂತ್ ನಡುಬೈಲು ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷೆ ಸುಧಾ ಸುರೇಶ್ ವಹಿಸಲಿದ್ದಾರೆ.
ಪತಿಜ್ಞಾವಿಧಿ ಬೋಧನೆಯನ್ನು ಯುವವಾಹಿನಿ (ರಿ.) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಿತ್ತರಂಜನ್ ಕೆ, ಮ್ಯಾನೇಜಿಂಗ್ ಡೈರೆಕ್ಟರ್, ಬಿ ಆರ್ ಬೇಕರಿ (ತೊಕ್ಕೊಟ್ಟು, ಬೀರಿ ), Rtn ಪ್ರಮೋದ ಬೋಳಾರ್, ನಿರ್ದೇಶಕರು, ನವನಿಧಿ ವಿವಿಧೋದ್ದೇಶ ಸಹಕಾರ ಸಂಘ (ನಿ.), ಪಂಪ್ವೆಲ್ ಇವರುಗಳು ಭಾಗವಹಿಸಲಿದ್ದಾರೆ.
ರಾಜೇಶ್ ವಿಟ್ಲ , ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಮಂಗಳೂರು, ವೇಣುಗೋಪಾಲ್ ಕೊಲ್ಯ, ಅಧ್ಯಕ್ಷರು, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.), ಕೊಲ್ಯ, ಗೋಪಾಲ್ ಎಸ್. ಕೊಂಡಾಣ, ಅಧ್ಯಕ್ಷರು, ಬಿಲ್ಲವ ಸೇವಾ ಸಮಾಜ (ರಿ.), ಕೊಲ್ಯ, ತ್ರಿವೇಣಿ ಉದಯ್ ಕುಂಪಲ, ಅಧ್ಯಕ್ಷರು, ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ, ಕೊಲ್ಯ ಉಪಸ್ಥಿತರಿರುವರು.
ಕಾರ್ಯಕ್ರಮದ ಪೂರ್ವದಲ್ಲಿ ಬೆಳಿಗ್ಗೆ 09:00 ರಿಂದ 09:45 ರವರೆಗೆ ಯುವವಾಹಿನಿಯ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ಸಂಘಟಕರಾದ ಕಾರ್ಯದರ್ಶಿ ಸೌಮ್ಯ ಯೋಗೀಶ್, ನಿಯೋಜಿತ ಕಾರ್ಯದರ್ಶಿ, ಸುಧಾ ಸುರೇಶ್ ಅಧ್ಯಕ್ಷರು, ನಿತಿನ್ ಕರ್ಕೇರ ಮಾಡೂರು ನಿಯೋಜಿತ ಅಧ್ಯಕ್ಷರು ಯುವವಾಹಿನಿ (ರಿ.), ಕೊಲ್ಯ ಘಟಕ ಎಲ್ಲರನ್ನು ಸ್ವಾಗತಿಸಿದ್ದಾರೆ



