ಲೋ ಬಿಪಿಯಿಂದ ಸ್ವಂತ ಅಂಗಡಿಯಲ್ಲೇ
ಕುಸಿದುಬಿದ್ದಿದ್ದ ಮೊಂಟೆಪದವು ನಿವಾಸಿ
ನವವಿವಾಹಿತ ಚಿಕಿತ್ಸೆ ಫಲಕಾರಿಯಾಗದೆ ಸಾವು
ಉಳ್ಳಾಲ : ಲೋ ಬಿಪಿಗೆ ಒಳಗಾಗಿ ಮಂಗಳೂರಿನ ಫಾರಮ್ ಮಾಲ್ ನಲ್ಲಿರುವ ಸ್ವಂತ ಮಳಿಗೆಯಲ್ಲಿ ಕುಸಿದುಬಿದ್ದಿದ್ದ ಮಂಜನಾಡಿ ನಿವಾಸಿ ನವವಿವಾಹಿತ ಇಂದು ಚಿಜಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಜನಾಡಿ ಮೊಂಟೆಪದವು ವೀರಮಾರುತಿ ಮಂದಿರ ಬಳಿಯ ಶಾಂತನಗರ ನಿವಾಸಿ ದಿ. ವೆಂಕಪ್ಪ ಟೈಲರ್ ಮತ್ತು ಪಾರ್ವತಿ ದಂಪತಿ ಪುತ್ರ ಭರತ್ (36) ಮೃತರು. ಜು.1 ರಂದು ಫಾರಮ್ ಮಾಲ್ ನಲ್ಲಿರುವ ಅಂಗಡಿಯಲ್ಲಿ ಇರುವಾಗ ಲೋ ಬಿಪಿಯಾಗಿ ಎಕಾಏಕಿ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು 9 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಭರತ್ ಸಾವನ್ನಾಪ್ಪಿದ್ದಾರೆ. ಏಪ್ರಿಲ್ 21 ರಂದು ವಿವಾಹವಾಗಿದ್ದರು . ಪತ್ನಿಯೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ.ಮೃತರು ತಾಯಿ , ಮೂವರು ಸಹೋದರಿಯರನ್ನು ಅಗಲಿದ್ದಾರೆ.




