

ಹಣಬಲದ ಮೇಲೆ ಔಪಚಾರಿಕ ಶಿಕ್ಷಣ ದೊರತರೆ, ಗುರು ತತ್ವದ ಮೂಲಕ ಅನೌಪಚಾರಿಕ ಶಿಕ್ಷಣ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗೆ ಸಿಗುತ್ತದೆ. ಉದಾಹರಣೆಗೆ ನೋಡುವುದಾದರೆ ತಾಯಿ, ತಂದೆ, ಗುರು ಹಿರಿಯರು, ಬಂಧುಗಳು, ಅಧ್ಯಾತ್ಮಿಕ ಕೇಂದ್ರಗಳು, ಸಭ್ಯ ನೆರೆಹೊರೆಯವರು, ಪರಿಸರ, ಶ್ರೇಷ್ಠ ವ್ಯಕ್ತಿಗಳ ಸಂಪರ್ಕದಿಂದ ಸ್ವಯಂ ಶಿಕ್ಷಣ ಪಡೆಯಬಹುದು.
ಎಂದು ಡಾ .ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಧ್ಯಾಪಕರಾದ ಡಾ . ನವೀನ್ ಕೊಣಾಜೆ ಅವರು ಅಭಿಪ್ರಾಯ ಪಟ್ಟರು.
ಅವರು ಶ್ರೀ ರಾಮಕೃಷ್ಣ ಪದವಿ ಕಾಲೇಜು ಬಂಟ್ಸ್ ಹಾಸ್ಟೇಲ್, ಮಂಗಳೂರು, ಮಂಗಳೂರು ವಿಶ್ವ ವಿದ್ಯಾನಿಲಯ ಇವುಗಳ ಆಶ್ರಯದಲ್ಲಿ ಏಳು ದಿನಗಳ ಕಾಲ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಲಿರುವ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಉದ್ಘಾಟನೆಯನ್ನು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನೆರವೇರಿಸಿ,
ವಿದ್ಯಾರ್ಥಿ ಜೀವನದಲ್ಲಿ ಸಿಕ್ಕುವ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ಕೆ ಎನ್ ಆಳ್ವ ಅವರು ವಹಿಸಿ ಶಿಬಿರಗಳು ಕೇವಲ ನಾಯಕತ್ವ ಗುಣಗಳನ್ನು ಮಾತ್ರ ಕಲಿಸದೇ ವೃತ್ತಿ ಜೀವನಕ್ಕೆ ಬೇಕಾದ ಮಾರ್ಗೋಪಾಯವನ್ನು ಕೂಡ ಒದಗಿಸಿಕೊಡುತ್ತದೆ ಎಂದರು.
ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ ಇದರ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ಇವರು ಶ್ರಮದಾನವನ್ನು ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕರು ಡಾ. ಬಿ. ಸಂಜೀವ ರೈ ಅವರು ಶುಭಶ0ಸನೆಗೈದರು.
ಮುಖ್ಯ ಅತಿಥಿಗಳಾಗಿ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗುಲಾಬಿ, ಬಂಟರ ಸಂಘ ಉಳ್ಳಾಲ ವಲಯ ಇದರ ಅಧ್ಯಕ್ಷರಾದ ಸುರೇಶ್ ಚೌಟ, ಉದ್ಯಮಿಗಳಾದ ರಾಧಾಕೃಷ್ಣ ರೈ ಉಮಿಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ರೈ, ಉದ್ಯಮಿಗಳಾದ ನರಸಿಂಹ ನಾಯ್ಕ್ ಪಂಚಲಗುಳಿ, ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ, ಶಿಕ್ಷಕರಾದ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು
ರಾಮಕೃಷ್ಣ ಪದವಿ ಕಾಲೇಜು ಪ್ರಾಂಶುಪಾಲರು ಡಾ. ಅನಸೂಯ ರೈ ಪ್ರಸ್ತಾವನೆಗೈದರು.
ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಸುಮನಾ ಎನ್ ರೈ ಧನ್ಯವಾದ ವಿತ್ತರು. ಪ್ರಾಧ್ಯಾಪಕರಾದ ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರಾದ ಕುಮಾರಿ ಸಮಿತ ಕೋಟ್ಯಾನ್ , ದೈಹಿಕ ಶಿಕ್ಷಣ ನಿರ್ದೇಶಕರಾದ ಸದಾಶಿವ ಮುಂತಾದವರು ಉಪಸ್ಥಿತರಿದ್ದರು.



