
ಮಂಗಳೂರು :ಕರ್ನಾಟಕ ಸರ್ಕಾರದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕೆ.ಆರ್. ವೃತ್ತ ಬೆಂಗಳೂರು ಆಯೋಜಿಸಿದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -2024 ಪ್ರಶಸ್ತಿಯನ್ನು ಮಂಗಳೂರು ತಾಲೂಕಿನಲ್ಲಿ ಕಳೆದ 22 ವರ್ಷಗಳಿಂದ ಅತ್ಯುತ್ತಮ ಸೇವೆ ನಡೆಸಿದ ಪರವಾನಿಗೆ ಭೂಮಾಪಕರಾಗಿರುವ ಪುಟ್ಟೇಗೌಡ ಕೆ.ಎಂ ಇವರು ಪಡೆದುಕೊಂಡಿದ್ದಾರೆ.
ಸೆ.27 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ ( ಐಎಎಸ್), ಭುಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್ ಐಎಎಸ್ ಉಪಸ್ಥಿತರಿದ್ದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದನ್ನು ಗುರುತಿಸಿ, ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿಯನ್ನು ಇಲಾಖೆ ನೀಡುತ್ತಿದೆ . ಕಳೆದ 22 ವರ್ಷಗಳಿಂದ ಪುಟ್ಟೇಗೌಡರು ಮಂಗಳೂರು ತಾಲೂಕಿನಲ್ಲಿ ಭುಮಾಪಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಮೂಲತ: ಮಂಡ್ಯ ಜಿಲ್ಲೆಯ , ಪಾಂಡವಪುರ ತಾಲೂಕಿನ ಕಡಬ ಗ್ರಾಮದ ಚಿನ್ಕುರುಳಿ ಹೋಬಳಿ ನಿವಾಸಿಯಾಗಿರುವ ಪುಟ್ಟೇಗೌಡರು, ದಿ| ಮರಿಗೌಡ ಹಾಗೂ ತಾಯಿ ಜವರಮ್ಮ ದಂಪತಿ ಪುತ್ರನಾಗಿದ್ದು, ಪತ್ನಿ ಪೂರ್ಣಿಮಾ ಎಸ್.ಎನ್ ಹಾಗೂ ಪುತ್ರರಾದ ಇಶಾಂತ್ ಗೌಡ, ಲತೇಶ್ ಗೌಡ ಅವರೊಂದಿಗೆ ನೆಲೆಸಿದ್ದಾರೆ.


