ತಲಪಾಡಿ: ಭೂಮಿಯ ಪಾವಿತ್ರö್ಯತೆಯನ್ನು ಕಾಪಾಡುವ ಉದ್ದೇಶಗಳ ಜೊತೆಗೆ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಅವಿನಾಶಿ ಮಹಾದೇವ ಮಾತೃ ಮಂಡಳಿ ದೇವಿನಗರ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನಾರ್ಹ ಎಂದು ಬಿಜೆಪಿ ಮಂಜನಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ನಿತ್ಯಾನಂದ ಭಂಡಾರಿ ಸಾಂತ್ಯ ಹೇಳಿದ್ದಾರೆ.
ಉಳ್ಳಾಲ ತಾಲೂಕಿನ ತಲಪಾಡಿ ದೇವಿನಗರದ ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರ ದೇವಿನಗರ ಇಲ್ಲಿ ಇತ್ತೀಚೆಗೆ ಮಂದಿರ ಮತ್ತು ಶ್ರೀ ಅವಿನಾಶಿ ಮಹಾದೇವ ಮಾತೃ ಮಂಡಳಿ ದೇವಿನಗರ ಇದರ ಸಹಯೋಗದಲ್ಲಿ ಹಮ್ಮಿಕೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಮತ್ತು ವನ ಮಹೋತ್ಸವ ಪ್ರಯುಕ್ತ ಪ್ರತಿ ಮನೆಗೆ ಗಿಡ ವಿತರಿಸಿ
ಮಾತನಾಡಿದರು.
ಮನೆಗೊಂದು ಗಿಡ ಕೊಡುವ ಮುಖೇನ ಪರಿಸರವನ್ನು ಹಾಗೂ ಅದರ ಪಾವಿತ್ರö್ಯತೆಯನ್ನು ಕಾಪಾಡುವ ಕಾರ್ಯಗಳಾಗುತ್ತವೆ. ಅದಕ್ಕೆ ತಕ್ಕುದಾಗಿ ಔಷಧೀಯ ಸತ್ವಗಳುಳ್ಳ ಆಹಾರಗಳನ್ನು ಆಟಿ ತಿಂಗಳಿನಲ್ಲಿ ತಿನ್ನುವ ಹಾಗೂ ತಿನ್ನಿಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಕಾರಿ ಎಂದರು.
ಕುಲಾಲ ಸಂಘ ಕೊಲ್ಯ ಇದರ ಕೋಶಾಧಿಕಾರಿ ಪ್ರಕಾಶ್ ಪಿಲಿಕೂರು, ಮಂದಿರದ ಗೌರವ ಸಲಹೆಗಾರ. ಬಿಜೆಪಿ ರಾಜ್ಯ ಪ್ರಕೋಷ್ಠ ಸದಸ್ಯ, ತಲಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸುರೇಶ್ ಆಳ್ವ ಸಾಂತ್ಯಗುತ್ತು, ಮಾತೃ ಮಂಡಳಿ ಅಧ್ಯಕ್ಷರಾದ ಹೇಮಾವತಿ ಶೆಟ್ಟಿ, ಮಂದಿರದ ಅಧ್ಯಕ್ಷರೂ ತಲಪಾಡಿ ಗ್ರಾಮ ಪಂಚಾಯತಿ ಸದಸ್ಯರಾದ ನವೀನ್ ಆಳ್ವ , ಅಂಗನವಾಡಿ ಶಿಕ್ಷಕಿ ಸುನಂದಾ ಉಪಸ್ಥಿತರಿದ್ದರು.
ಈ ಸಂದರ್ಭ ಮಾತೃ ಮಂಡಳಿ ಯ ಸದಸ್ಯರು ಸುಮಾರು ೪೦ ಕ್ಕೂ ಹೆಚ್ಚಿನ ಬಗೆಯ ಈ ತಿಂಗಳಿನಲ್ಲಿ ವಿಶೇಷವಾಗಿ ಹಿಂದೆ ಮನೆಯಲ್ಲಿ ಮಾಡುತ್ತಿದ್ದ ತಿಂಡಿ ತಿನಿಸುಗಳನ್ನು ಎಲ್ಲರಿಗೂ ಹಂಚಿದರು. ಕಾರ್ಯಕ್ರಮದಲ್ಲಿ ಅನಾರೋಗ್ಯದಲ್ಲಿದ್ದ ಮಾತೃ ಮಂಡಳಿಯ ಸದಸ್ಯರೊಬ್ಬರಿಗೆ ಸದಸ್ಯೆಯರು ತಮ್ಮ ಕೈಯಿಂದಲೇ ಒಟ್ಟು ಮಾಡಿದ ಸಹಾಯಧನವನ್ನು ವಿತರಿಸಿದರು.




