ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಪ್ರವಾಸಿ ದೇರಳಕಟ್ಟೆ ಇದರ ಆಶ್ರಯದಲ್ಲಿ ರಂಜಾನ್ ಪ್ರಯುಕ್ತ ನಾಟೆಕಲಿನಲ್ಲಿ ಕಾರ್ಯಾಚರಿಸುತ್ತಿರುವ ಮುಸ್ಲಿಂ ವಸತಿ ಶಾಲೆಯ ಮಕ್ಕಳೊಂದಿಗೆ ಇಫ್ತಾರ್ ಕೂಟವನ್ನು ಶನಿವಾರ ಸಂಜೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಸನಬ್ಬ ಮಾತನಾಡಿ ಆಥಿ೯ಕವಾಗಿ ಹಿಂದುಳಿದವರನ್ನು ಹುಡುಕಿ ಅವರಿಗೆ ನೆರವು ನೀಡುವ ಈ ಸಂಘಟನೆಯ ಆಸೆಗಳೆಲ್ಲವೂ ನೆರವೇರಲಿ ಇನ್ನು ಹೆಚ್ಚು ಒಳ್ಳೆಯ ಕೆಲಸ ಮಾಡಲು ಅನುಗ್ರಹಿಸಲಿ ಎಂದು ಪ್ರಾಥಿ೯ಸಿದರು.

ಅಶ್ರಫ್ ದೇರಳಕಟ್ಟೆ ರಂಜಾನ್ ಸಂದೇಶ ನೀಡಿ ಈ ಕೇಂದ್ರದಲ್ಲಿ ನಾವು ಈವರೆಗೆ ಕಾಣದ ಸಂತೋಷವನ್ನು ಕಂಡಿದ್ದೇವೆ. ಇವರ ಸಹಾಯಕ್ಕೆ ಕೈಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿ ಮನುಷ್ಯ ಹುಟ್ಟಿ ಬೆಳೆವ ಸಂದರ್ಭದಲ್ಲಿ ತನಗಾಗಿ ಗಳಿಸಿದ ಒಂದು ಅಂಶವನ್ನು ಇಂತಹ ಬಡವರಿಗೆ ನೀಡಿದರೆ ದೇವರ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಆಗ ಅವನ ಜೀವನ ಸಾರ್ಥಕವಾಗುತ್ತದೆ ಎಂದರು.
ಮಗ್ರಿಬ್ ನಮಾಜಿನ ಬಳಿಕ ವಿಶೇಷ ಬೋಜನದ ವ್ಯೆವಸ್ಥೆ ಮಾಡಲಾಗಿತ್ತು ಕಾಯ೯ಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಹಂಝ ದೇರಳಕಟ್ಟೆ, ಕಬೀರ್ ದೇರಳಕಟ್ಟೆ, ಮುತ್ತಲಿಬ್ ದೇರಳಕಟ್ಟೆ, ಅನ್ವರ್ ಮತ್ತು ಶಾಹುಲ್ ಹಮೀದ್ ರವರ ಸಹಿತ ಎಲ್ಲಾರನ್ನು ಅಶ್ರಫ್ ದೇರಳಕಟ್ಟೆ ಸ್ವಾಗತಿಸಿದರು





