ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಕಾರ್ಯಕ್ರಮ ಇತ್ತೀಚೆಗೆ ಆಚರಿಸಿದರು.
ಎಸ್.ಇ.ಝೆಡ್ ಲಿ. ಗ್ರೀನ್ ಬೆಲ್ಟ್ ನ ಸಲಹೆಗಾರ ದಿನೇಶ್.ಎಂ.ನಾಯಕ್ ಸಸಿಗಳನ್ನು ಕೊಡುಗೆಯಾಗಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಸಿ.ವಿ.ರಘುವೀರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಪಿ. ಜಯರಾಜನ್ ಫಿಸಿಯೋಥೆರಪಿ ಕಾಲೇಜಿನ ಮುಖ್ಯಸ್ಥ ಪದ್ಮಕುಮಾರ್ ಎಸ್.ಪಿ ಉಪಸ್ಥಿತರಿದ್ದರು.
ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕಿ ಡಾ.ಭಾಗ್ಯ.ಬಿ.ಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು.




