Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ತೊಕ್ಕೊಟ್ಟು: ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

UllalaVaniBy UllalaVaniJune 20, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತೊಕ್ಕೊಟ್ಟು : ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಮನೆಯೊಂದರಲ್ಲಿ ಬುಧವಾರ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ನಡೆದ ಘಟನೆ ಕುರಿತು ಶವಮಹಜರಿನಿಂದ ತಿಳಿದುಬರಬೇಕಿದೆ.

ಚೆಂಬುಗುಡ್ಡೆ ನಿವಾಸಿ ಪದ್ಮನಾಭ (75) ಮತ್ತು ವಿಮಲ (60) ಮೃತ ದಂಪತಿ. ಬುಧವಾರ ಮಧ್ಯಾಹ್ನ ಅಳಿಯ ಉಮಾನಾಥ್ ಎಂಬವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಎಲ್ಲಾ ಬಾಗಿಲುಗಳು ಮುಚ್ಚಿದ ರೀತಿಯಲ್ಲಿತ್ತು. ಉಳ್ಳಾಲ ಪೊಲೀಸರು, ಇಬ್ಬರು ಪುತ್ರರು, ಮಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳನೋಡಿದಾಗ ಅಡುಗೆ ಕೋಣೆಯಲ್ಲಿ ದಂಪತಿ ಶವ ಸುಟ್ಟುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಸೀಮೆಎಣ್ಣೆ ದೀಪ ಕಳಗೆ ಬಿದ್ದಿರುವುದು ಕಂಡುಬಂದಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಅನ್ನುವುದು ಶವಮಹಜರು ಬಳಿಕ ತಿಳಿದುಬರಬೇಕಿದೆ. ಪದ್ಮನಾಭ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ದಿನಾ ಮಗಳ ಜತೆಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರೂ, ಸಂತಸದಿಂದಲೇ ಇದ್ದರೆಂದು ಪುತ್ರಿ ತಿಳಿಸಿದ್ದಾರೆ.

ಮೊಬೈಲ್ ಸ್ವೀಕರಿಸಿರಲಿಲ್ಲ : ವಿಟ್ಲದ ಕನ್ಯಾನದಲ್ಲಿರುವ ಮಗಳು ಮೊಬೈಲಿನಲ್ಲಿ ತಾಯಿ ಜತೆಗೆ ಸೋಮವಾರದಂದು ಮಧ್ಯಾಹ್ನ ವೇಳೆ ಮಾತನಾಡಿದ್ದರು. ಅಲ್ಲದೆ ಇಬ್ಬರಲ್ಲಿಯೂ ವಿಟ್ಲಕ್ಕೆ ಬರಲು ಕಾರು ಕಳುಹಿಸುತ್ತೇವೆ ಎಂದು ಕರೆದಿದ್ದರೂ, ಸದ್ಯ ಬರುವುದಿಲ್ಲವೆಂದೂ ಹೇಳಿದ್ದರು. ಮಂಗಳವಾರ ಸಂಜೆ ಮತ್ತೆ ಪುತ್ರಿ ಮೊಬೈಲಿಗೆ ಕರೆ ಮಾಡಿದಾಗ ಯಾರೂ ಸ್ವೀಕರಿಸಿರಲಿಲ್ಲ. ಈ ಹಿಂದೆ ಪದ್ಮನಾಭ ಅವರು ಅನಾರೋಗ್ಯದಿಂದ ಇದ್ದ ಸಂದರ್ಭ ದಂಪತಿ ಮಕ್ಕಳಿಗೆ ತಿಳಿಸದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಈ ಸಂದರ್ಭ ಕೂಡಾ ಮೊಬೈಲ್ ಸ್ವೀಕರಿಸಿರಲಿಲ್ಲ. ಇದರಿಂದ ಪುತ್ರಿ , ಹೆತ್ತವರು ಆಸ್ಪತ್ರೆಗೆ ದಾಖಲಾಗಿರಬಹುದು ಅದಕ್ಕಾಗಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸುಮ್ಮನಾಗಿದ್ದರು. ಆದರೂ ಸಂಶಯಗೊಂಡು ಬುಧವಾರ ಅಳಿಯ ಉಮಾನಾಥ ಅವರು ಚೆಂಬುಗುಡ್ಡೆಗೆ ಬಂದಿದ್ದರು. ಈ ವೇಳೆ ಬಾಗಿಲು ಮುಚ್ಚಿದ್ದು, ನೊಣಗಳು ಹೊರಬರುವುದನ್ನು ಗಮನಿಸಿ ದಂಪತಿಯ ಇಬ್ಬರು ಪುತ್ರರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುಟ್ಟ ಸ್ಥಿತಿಯಲ್ಲಿದ್ದ ದಂಪತಿ ಶವ ಕೊಳೆತು ದುರ್ನಾತ ಬೀರುತಿತ್ತು. ಸೋಮವಾರ ರಾತ್ರಿ ವೇಳೆ ಘಟನೆ ನಡೆದಿರುವ ಸಾಧ್ಯತೆಗಳಿವೆ. ಮೃತದೇಹವಿರುವ ಸ್ಥಳದಲ್ಲೇ ಚಿಮಿಣಿ ದೀಪ ಬಿದ್ದಿರುವುದು ಕಂಡುಬಂದಿದೆ. ವಿದ್ಯುತ್ ಹೋದಾಗ ಚಿಮಿಣಿ ಉರಿಸಲು ವಿಮಲ ಮುಂದಾದಾಗ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಸೀರೆಗೆ ಬೆಂಕಿ ತಗಲಿರುವ ಸಾಧ್ಯತೆಗಳಿವೆ. ಅದನ್ನು ಆರಿಸಲೆಂದು ತೆರಳಿದ ಪದ್ಮನಾಭ ತಲೆತಿರುಗಿ ಬಿದ್ದು, ಇಬ್ಬರೂ ಬೆಂಕಿಯಿಂದ ಸುಟ್ಟುಹೋಗಿ ಸಾವನ್ನಪ್ಪಿರುವ ಶಂಕೆ ಇದೆ. ಸಂಬಂಧಿಕರ ಪ್ರಕಾರ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಕಿಟಕಿಗೂ ಪರದೆಗಳನ್ನು ಅಡ್ಡವಾಗಿ ಕಟ್ಟಿರುವುದರಿಂದ ವಿಷ ಸೇವಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದು, ಎಲ್ಲರೂ ಮದುವೆಯಾಗಿ ಬೇರೆ ಮನೆ ಮಾಡಿಕೊಂಡಿದ್ದಾರೆ. ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಶವಮಹಜರು ಪರೀಕ್ಷೆ ನಡೆದಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ರಾಮರಾವ್, ಠಾಣಾಧಿಕಾರಿ ಗೋಪಿಕೃಷ್ಣ , ಎಸ್.ಐ ಗುರುವಪ್ಪ ಕಾಂತಿ, ಎಎಸ್ ಐ ಶಾಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

` ಕರ್ನಾಟಕದವರಲ್ಲಿ ವಿಶ್ವಾಸವಿರಲಿಲ್ಲ’
ಮೂಲತ: ಕೇರಳದ ತಲಶ್ಶೇರಿ ಚಿಣ್ಣೇರಿ ನಿವಾಸಿಗಳಾದ ದಂಪತಿ ಹಲವು ವರ್ಷಗಳ ಹಿಂದೆ ತೊಕ್ಕೊಟ್ಟು ಚೆಂಬುಗುಡ್ಡೆಗೆ ಬಂದು ನೆಲೆಸಿದ್ದರು. ಕೇರಳೀಯರನ್ನೇ ಮೆಚ್ಚುತ್ತಿದ್ದ ಅವರು ಆಗಾಗ್ಗ ಕರ್ನಾಟಕದವರು ಸರಿಯಿಲ್ಲ, ಕೇರಳದವರಲ್ಲಿ ಮಾತ್ರ ತಮಗೆ ವಿಶ್ವಾಸ ಅನ್ನುವುದನ್ನು ಅಳಿಯ ಉಮಾನಾಥ್ ಅವರಲ್ಲಿ ಹೇಳಿಕೊಳ್ಳುತ್ತಿದ್ದರು. ತಾವಿಬ್ಬರೂ ಯಾರಿಗೂ ಹೊರೆಯಾಗಿ ಬಾಳುವುದಿಲ್ಲ. ಅನ್ನುತ್ತಾ ಮಗಳ ಮನೆಯಲ್ಲಿ ಕೆಲಕಾಲವಿದ್ದರೂ ಅಲ್ಲಿಂದಲೂ ಮತ್ತೆ ಮನೆಗೆ ವಾಪಸ್ಸಾಗಿದ್ದರು. ಸರಕಾರ ಮಾಸಿಕವಾಗಿ ನೀಡುವ ಪೆನ್ಶನ್ ಹಣವನ್ನೇ ಬಳಸುತ್ತಿದ್ದ ದಂಪತಿ, ಮಕ್ಕಳು ನೀಡುವ ಹಣ, ಅಕ್ಕಿಯನ್ನೂ ಪಡೆಯಲು ಹಿಂದೇಟು ಹಾಕುತ್ತಿದ್ದರು. ಸ್ವಾಭಿಮಾನದಿಂದಲೇ ಬಾಳಲು ದಂಪತಿ ಪ್ರಯತ್ನಿಸಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಸಂತಾಪ

June 23, 2026

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಕೈ ಸನ್ನೆ- ಡಿಎಂಕೆ ಸಭಾತ್ಯಾಗ

By UllalaVaniJune 23, 20260

ಚೆನ್ನೈ, ಜೂ. 23:ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ವಿಜಯ್ ಅವರು ಭಾಷಣದ ವೇಳೆ ಕೈ…

ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ-2026: ಪಾವಂಜೆಯಲ್ಲಿ ಪೂರ್ವಭಾವಿ ಸಭೆ

June 23, 2026

ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಸಂತಾಪ

June 23, 2026

ಆ. 7-8ರಂದು ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

June 23, 2026
1 2 3 … 1,978 Next
Automatic YouTube Gallery

ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ

ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ಪಾವಂಜೆಯಲ್ಲಿ ಪೂರ್ವಬಾವಿ ಸಭೆ

ಜನಬಲವೇ ಸಂಘಟನೆಯ ದೊಡ್ಡ ಶಕ್ತಿ: ರವಿ ದೇವಾಡಿಗ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ
Now Playing
ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ
ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ...
ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ಪಾವಂಜೆಯಲ್ಲಿ ಪೂರ್ವಬಾವಿ ಸಭೆ

ಜನಬಲವೇ ಸಂಘಟನೆಯ ದೊಡ್ಡ ಶಕ್ತಿ: ರವಿ ದೇವಾಡಿಗ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಚಾಲಕ ಅಸ್ವಸ್ಥಗೊಂಡ ಪರಿಣಾಮ ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ..!!
Now Playing
ಚಾಲಕ ಅಸ್ವಸ್ಥಗೊಂಡ ಪರಿಣಾಮ ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ..!!
ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ; ಚಾಲಕ ಅಸ್ವಸ್ಥಗೊಂಡ ಪರಿಣಾಮ ಡಿವೈಡರ್ ಏರಿದ ಖಾಸಗಿ ...
ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ; ಚಾಲಕ ಅಸ್ವಸ್ಥಗೊಂಡ ಪರಿಣಾಮ

ಡಿವೈಡರ್ ಏರಿದ ಖಾಸಗಿ ಬಸ್..!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version