ವರದಿ: ಆರೀಫ್ ಕಲ್ಕಟ್ಟ
ಉಳ್ಳಾಲ : ಅಳೇಕಲ ತಾಜುಲ್ ಉಲಮಾ ಸೆಂಟರ್ನಲ್ಲಿ ಮಾಸಿಕ ಸಿ.ಎಂ.ಮಡವೂರು ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವದಲ್ಲಿ ನಡೆಯಿತು.
ಅಬೂ ಝಿಯಾದ್ ಮದನಿ ಪಟ್ಟಾಂಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್.ಹಂಝ, ತಾಜುಲ್ ಉಲಮಾ ಸೆಂಟರ್ನ ಗೌರಾವಾಧ್ಯಕ್ಷ ಜಲಾಲುದ್ದೀನ್ ತಂಙಳ್, ತಾಜುಲ್ ಉಲಮಾ ಸೆಂಟರ್ನ ಅಧ್ಯಕ್ಷ ಅಬ್ದುಲ್ ಲತೀಫ್ ಮದನಿ, ಪ್ರ.ಕಾರ್ಯದರ್ಶಿ ಜಂಶೀರ್ ಅಳೇಕಲ, ಸಿದ್ದೀಕ್ ಹಳೇಕೋಟೆ, ನಝೀರ್ ಅಳೇಕಲ, ಶಮೀರ್ ಅಳೇಕಲ, ಇರ್ಫಾನ್ ಅಳೇಕಲ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.


