UN NETWORKS
ಸೋಮೇಶ್ವರ : ಕೃಷಿ ಪ್ರಧಾನ ಸಮಾಜವಾಗಿರುವ ಗಟ್ಟಿ ಸಮಾಜ ಅನಾದಿಕಾಲದಿಂದಲೂ ಶ್ರೀ ಸೋಮನಾಥ ದೇವರನ್ನು ಆರಾಧನೆ ಮಾಡಿಕೊಂಡು ಬರುವುದರೊಂದಿಗೆ ಜಾತ್ರಾ ಸಂದರ್ಭದಲ್ಲಿ ಕೃಷಿಯಲ್ಲಿ ಬೆಳೆದ ವಸ್ತುಗಳನ್ನು ದೇವರಿಗೆ ಅರ್ಪಣೆ ಮಾಡಿಕೊಂಡು ಬಂದಿದ್ದು, ಹಿರಿಯರ ನಂಬಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ರೀ ಸೋಮನಾಥನಿಗೆ ನೀಡುವ ಗೌರವ ಎಂದು ಸೋಮೇಶ್ವರ ಸೋಮನಾಥ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಭಿಪ್ರಾಯಪಟ್ಟರು.
ಸೋಮೇಶ್ವರ ಸೋಮನಾಥ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಗಟ್ಟಿ ಸಮಾಜ ಸೇವಾ ಸಂಘ ಅಂಬಿಕಾರಸ್ತೆ ಇಲ್ಲಿ ಗಟ್ಟಿ ಸಮಾಜ ಭವನದಲ್ಲಿ ಗಟ್ಟಿ ಸಮಾಜದ ವತಿಯಿಂದ ಕುಲಸ್ವಾಮಿ ಸೋಮನಾಥ ದೇವರಿಗೆ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ನಾಯ್ಗರಾದ ಪದ್ಮನಾಭ ಗಟ್ಟಿ ಕಟ್ಟಪುಣಿ, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಸೋಮನಾಥ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಗಟ್ಟಿ ಕೊರಂತೋಡಿ, ಯುವಜನ ವಿಭಾಗದ ಅಧ್ಯಕ್ಷ ರಾಜೇಶ್ ಗಟ್ಟಿ ಕುಂಪಲ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತೀ ಹರೀಶ್ ಗಟ್ಟಿ, ಹಿರಿಯರಾದ ಕೃಷ್ಣ ಮೋಹನ್ ಗಟ್ಟಿ, ಕುಂಬ್ಳೆ ಸೀಮೆ ಗಟ್ಟಿ ಸಮಾಜದ ಅಧ್ಯಕ್ಷ ರಾಜೇಶ್ವರ ಗಟ್ಟಿ , ಶಂಕರ ಗಟ್ಟಿ ಕುಂಬಳೆ, ಸೇವಾ ಸಮಿತಿ ಪುರುಷೋತ್ತಮ ಗಟ್ಟಿ, ಕಾಚಾರ್, ಭಾಸ್ಕರ ಗಟ್ಟಿ ಕಾಪಿಕಾಡು, ಶೇಷಪ್ಪ ಗಟ್ಟಿ ಕೊಲ್ಯ, ನಿತಿನ್ ಗಟ್ಟಿ ಲೇಡಿಹಿಲ್, ಪದ್ಮನಾಭ ಗಟ್ಟಿ ಬಜಿಲಕೇರಿ, ಕಿರಣ್‍ದಾಸ್ ಗಟ್ಟಿ, ಕೃಷ್ಣಪ್ಪ ಗಟ್ಟಿ ತಂದೊಳಿಗೆ, ಭುಜಂಗ ಗಟ್ಟಿ ಕಟ್ಟಪುಣಿ, ರಾಜೇಶ್ ಗಟ್ಟಿ ಪಿಲಾರ್, ಸತ್ಯಮೋಹನ್ ಗಟ್ಟಿ ಮತ್ತು ಒಂಭತ್ತು ಮಾಗಣೆ ಸೀಮೆ ಗುರಿಕಾರರು ಉಪಸ್ಥಿತರಿದ್ದರು.
ಹೊರೆ ಕಾಣಿಕೆ ಮೆರವಣಿಗೆ ಗಟ್ಟಿ ಸಮಾಜ ಭವನದಿಂದ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ ದೇವಸ್ಥಾನದವರೆಗೆ ನಡೆಯಿತು.


