UN NETWORKS
ಮುಡಿಪು: ಮುಡಿಪಿನ ಕುರ್ನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕ್ರಿಕೆಟ್ ಲೀಗ್ ಪಂದ್ಯ ನಡೆಯಿತು.
ದೈಹಿಕ ಶಿಕ್ಷಕ ವಿಠ್ಠಲ್ ನಾಯಕ್ ಮಾತನಾಡಿ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಪಟುಗಳಿಗೆ ನಿರಂತರವಾಗಿ ತಮ್ಮನ್ನು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಇತರ ಕ್ರೀಡೆಗಳಾದ ಕಬ್ಬಡಿ, ವಾಲಿಬಾಲ್, ತ್ರೋಬಾಲ್ ಲೀಗ್ ಪಂದ್ಯವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಮಾತನಾಡಿ ತಮ್ಮ ಕಾಲೇಜಿನ ದಿನಗಳ ಕ್ರೀಡಾಸಕ್ತಿ ಮತ್ತು ಅಂತರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್ನಂತೆ ಇತರೆ ಗೇಮ್ಸ್ನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು. ಕಾರ್ಯಕ್ರಮ ಸಂಯೋಜಕಿ ಶುಭ ಕೆ.ಎಚ್. ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಮಹಮ್ಮದ್ ಮೆರ್ಜೂಕ್ ನಿರೂಪಿಸಿದರು.
ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಮನ್ಸೂರ್ ಸ್ವಾಗತಿಸಿದರು. ಮಹಮ್ಮದ್ ತ್ವಾಹಿರ್ ಇಕ್ಬಾಲ್ ವಂದಿಸಿದರು.


