UN NETWORKS
ಉಳ್ಳಾಲ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ರವರ ಹೆಸರಿನಲ್ಲಿ ಎರಡು ವರ್ಷಕೊಮ್ಮೆ ನಡೆಸಿ ಬರುವ ಮಂಜನಾಡಿ ಉರೂಸ್ ಜನವರಿ 10ರಿಂದ 19ರ ತನಕ ನಡೆಯಲಿದ್ದು ಶುಕ್ರವಾರ ಮಂಜನಾಡಿ ಜಮಾಅತ್ ಗೌರವಾಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣಗೈದು ಮಂಜನಾಡಿ ಉರೂಸ್ ಗೆ ಚಾಲನೆ ನೀಡಿದರು.
ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ, ಪ್ರ.ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷರುಳಾದ ಇಸ್ಮಾಯಿಲ್ ದೊಡ್ಡಮನೆ, ಮೊದ್ದೀನ್ಕುಂಞ ಬಸರ, ಕೋಶಾಧಿಕಾರಿ ಕುಂಞ ಬಾವ ಹಾಜಿ ಕಲ್ಕಟ್ಟ, ಜೊತೆ ಕಾರ್ಯದರ್ಶಿ ಎನ್.ಕೆ ಬಾವು ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.


