UN NETWORKS
ಮುಡಿಪು: ಡಿಸೆಂಬರ್ 6ರಿಂದ 8ರತನಕ ನಡೆಯಲಿರುವ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕೋತ್ಸವದ ಹೊರೆ ಕಾಣಿಕೆ ಮೆರವಣಿಗೆ ಭಾನುವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಕ್ಷೇತ್ರದ ಧರ್ಮಗುರು ವಂ.ಫಾ.ಬೆಂಜಮಿನ್ ಪಿಂಟೋ, ಮೂರು ದಿನಗಳಲ್ಲೂ ಮಧ್ಯಾಹ್ನದಿಂದ ರಾತ್ರಿವರೆಗೆ ನಿರಂತರ ನಡೆಯಲಿದೆ. ಪುಣ್ಯಕ್ಷೇತ್ರಕ್ಲೆ ಜಾತಿ ಭೇದವಿಲ್ಲದೆ ಹೊರೆಕಾಣಿಕೆ ನೀಡಿದ್ದಾರೆ. ಡಿ.6ರಂದು ರೋಗಿಗಳಿಗೆ ನಡೆಯುವ ವಿಶೇಷ ಪೂಜೆಯ ನೇತೃತ್ವ ಫಾ.ಪೀಯುಸ್ ಥೋಮಸ್ ಡಿಸೋಜ ವಹಿಸಲಿದ್ದಾರೆ. 7ರಂದು ಪೀಟರ್ ಪೌಲ್ ಸಲ್ದಾನ, 8ರಂದು ಫಾ.ಲೂವಿಸ್ ಪೌಲ್ ಡಿಸೋಜ ಹಾಗೂ ರಾತ್ರಿ 8ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಫಾ.ಮ್ಯಾಕ್ಸಿಂ ಎಲ್.ನೊರೋನ್ಹ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಒಲವಿನ ಹಳ್ಳಿ ಪುನರ್ವಸತಿ ಕೇಂದ್ರದ ವಂ.ಫಾ.ಲಾರೆನ್ಸ್ ಡಿಸೋಜ ಬಲಿಪೂಜೆಯ ನೇತೃತ್ವ ವಹಿಸಿದ್ದರು. ವಂ.ಫಾ.ಮೈಕಲ್ ಮಸ್ಕರೇನಸ್, ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಮಾರ್ಸೆಲ್ ಡಿಸೋಜ, ಅರುಣ್ ಡಿಸೋಜ ಮುಡಿಪು ಇನ್ನಿತರರು ಉಪಸ್ಥಿತರಿದ್ದರು.
ಭಾರೀ ಪ್ರಮಾಣದಲ್ಲಿ ಹೊರೆ ಕಾಣಿಕೆ
ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕೃಷಿ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು ಕಂಡು ಬಂದವು. ಅಡಿಕೆ, ಬಾಳೆಹಣ್ಣು, ಅಕ್ಕಿ, ಕುಂಬಳಕಾಯಿ, ಸಿಯಾಳ ಸಹಿತ ಸಾಕಷ್ಟು ವಸ್ತುಗಳಿದ್ದವು.ಅಲ್ಲದೆ ಆಡು, ಕೋಳಿ, ಮೊಲವನ್ನೂ ಭಕ್ತರು ಹರಕೆ ರೂಪದಲ್ಲಿ ನೀಡಿದರು.


