Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಧಾರ್ಮಿಕ ವಿಚಾರಗಳನ್ನು ಭಾವನಾತ್ಮಕವಾಗಿ ಬಿಂಬಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಿ:ಯಾದವ ಶೆಟ್ಟಿ

UllalaVaniBy UllalaVaniNovember 27, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತೊಕ್ಕೊಟ್ಟು: ಪರಿಸ್ಥಿತಿಯ ಲಾಭ ಪಡೆದು ಭಾವನಾತ್ಮಕವಾಗಿ ಜನ ಬೆಂಬಲ ಪಡೆದು ಆಕಸ್ಮಿಕವಾಗಿ ಎರಡು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಈ ಜಿಲ್ಲೆಗೆ ಜನಪರವಾದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಆದರೆ ಈ ಜಿಲ್ಲೆಯ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದ ಸಂದರ್ಭ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಆ ಬಳಿಕ ಆಯ್ಕೆಯಾದ ಸಂಸದರು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೂಡಿದರೆ ಹೊರತು ಜನಪರವಾದ ಯಾವುದೇ ಯೋಜನೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಯಾದವ ಶೆಟ್ಟಿ ಆರೋಪಿಸಿದರು.

ಜನರ ಅತ್ಯಾವಶ್ಯಕ ಬೇಡಿಕೆಗಳನ್ನು ಆಗ್ರಹಿಸಿ ಹೋರಾಟಕ್ಕೆ ಸಮಜ್ಜುಗೊಳಿಸುವ ನಿಟ್ಟಿನಲ್ಲಿ ಸಿಪಿಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟಿನ ಉಳ್ಳಾಲ ಪುರಸಭೆಯ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದ ವಾರ್ಷಿಕ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರಕಾರ ಈ ಬಾರಿ 27ಲಕ್ಷ ಕೋಟಿ ರೂ. ಬಜೆಟ್ ಇದ್ದರೂ ಸಂಸದ ಕಟೀಲು ಅವರು ಈ ಜಿಲ್ಲೆಗೆ 15ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಅಷ್ಟು ಮೊತ್ತದ ಅನುದಾನವಂತು ಆಗಿಲ್ಲ. ಅವರು ಅಷ್ಟು ಮೊತ್ತವನ್ನು ನದಿಗೆ ಹಾಕಿರಬೇಕು ಎಂಬ ಸಂಶಯ ಕಾಡುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಗಮನ ಕೊಡದೆ ಕೇರಳದ ಧಾರ್ಮಿಕ ಕೇಂದ್ರ ಶಬರಿಮಲೆ ಪ್ರವೇಶ ವಿಷಯದಲ್ಲಿ ರಾಜಕೀಯ ಮಾಡಲು ಹೊರಟರು. ಪ್ರಜ್ಞಾವಂತ ನಾಗರಿಕರು ನಿಮ್ಮ ಬೂಟಟಾಟಿಕೆಗೆ ಅವಕಾಶ ಕೊಡಲಾರದು. ನಿಮ್ಮದೇ ಕಾಯೃಕರ್ತರು ಶಬರಿಮಲೆ ಪ್ರವೆಶಕ್ಕೆ ಮವಿ ಮಾಡಿದ್ದರು. ಧಾರ್ಮಿಕ ನಂಬಿಕೆ ದುರುಪುಯೋಗ ಮಾಡಿ ಅದರಲ್ಲಿ ರಾಜಕೀಯವಾಗಿ ಲಾಭ ಮಾಡಲು ಹೊರಟಿದ್ದಾರೆ. ವಸತಿ, ವಿದ್ಯುತ್, ಅಸ್ಪøಶ್ಯತೆ ನಿವಾರಣೆ, ಆರೋಗ್ಯ ಮೊದಲಾದ 21ಪ್ರಮುಖ ವಿಷಯಘಲಲ್ಲಿ ಕೇರಳ ನಂಬರ್1 ಆಗಿರುವುದು ನೆನಪಿಟ್ಟುಕೊಳ್ಳಿ. ಕೇರಳದ ಪ್ರಜ್ಞಾವಂತರು ನಿಮ್ಮ ಬೂಟಾಟಿಕೆಗೆ ಬೆಲೆ ಕೊಡಲಾರರು ಎಂದರು.

ಸಂಸದರು ಈ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ರಾಷ್ಟ್ರೀಯ ಹೆದ್ದಾರಿಗೆ ಕನಿಷ್ಠ ಡಾಮರೀಕರಣ ಮಾಡಲು ಸಾಧ್ಯವಾಗಿಲ್ಲ. ಎಷ್ಟು ವರ್ಷ ಆಯಿತು ಜನರನ್ನು ಮೋಸ ಮಾಡಲು ಆರಂಭಿಸಿ. ಮೊನ್ನೆ ಹೇಳ್ತೀರಿ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದೇನೆ. 27ಲಕ್ಷ ಕೋಟಿ ರೂ. ಬಜೆಟ್‍ನಲ್ಲಿ ಉದ್ಯೋಗ ಖಾತರಿ, ಎಸ್‍ಸಿ ಎಸ್‍ಟಿ, ಅಂಗನವಾಡಿ ಇಲಾಖೆ, ವಸತಿ ಸೇರಿದಂತೆ ಎಲ್ಲ ಯೋಜನೆ ಕಡಿಮೆ ಮಾಡಿದ್ದು ನಿಮ್ಮ ಸಾಧನೆ. ಬಂಡವಾಳಶಾಹಿಗಳ ಸುಮಾರು 3.49ಲಕ್ಷ ಕೋಟಿ ರೂ. ಕಾರ್ಪೊರೇಟ್ ಕಂಪೆನಿಗೆ ರಿಯಾಯಿತಿ 7.33ಲಕ್ಷ ಲಕ್ಷ ಕೋಟಿ ರೂ. ಸಾಲ ಮ್ನನಾ ಮಾಡಿರುವ ಬಿಜೆಪಿ ಸರಕಾರ ರೈತರ ಸಾಲ ಮನ್ನಾ ಮಾಡಲು ಮನಸ್ಸು ಮಾಡದೆ ರೈತರು ಉತ್ತಾದಿಸುವ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನೂ ಕೊಡದಿರುವುದು ನಿಮ್ಮ ಸಾಧನೆ ಎಂದರು.

ಕೇಂದ್ರ ಸರಕಾರ ಸ್ವಾಮಿನಾಥನ್ ವರದಿ ಜಾರಿಗೆ ತರದಿರುವುದರಿಂದ ರೈತರ ಬದುಕು ಹೈರಾಣಾಗುತ್ತಿದೆ. ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಎಲ್ಲ ಭರವಸೆ ಮರೆತಿದೆ. ಭಾವನಾತ್ಮಕವಾಗಿ ಧಾರ್ಮಿಕ ವಿಷಯ ತಂದು ರಾಜಕೀಯ ಲಾಭ ಪಡೆದುಕೊಳ್ಳುವುದನ್ನೇ ಕಾಯಕವಾಗಿಸಿದ್ದೀರಿ ಎಂದು ನುಡಿದರು. ಶಾಸಕರಾಗಿ, ಸಚಿವರಾಗಿರುವ ಯು.ಟಿ. ಖಾದರ್ ಅವರು ತಲಪಾಡಿ, ಮಂಜನಾಡಿ, ಮುನ್ನೂರು, ಉಳ್ಳಾಲ ಮೊದಲಾದ ಭಾಗದಲ್ಲಿ ಲಕ್ಷಾಂತರ ಜನರು ಸ್ವಂತ ನಿವೇಶನ ಇಲ್ಲದೆ ಕಷ್ಟಪಡುತ್ತಿದ್ದುಗಮನಿಸಲ್ಲವೇ? ಅವರಿಗೆ ಸರಕಾರದ ಪರವಾಗಿ ನಿವೇಶನ ಕಲ್ಪಿಸಿಕೊಡಿ. ದೊಡ್ಡ ಕುಟುಂಬಗಳು ಸ್ವಂತ ಸೂರಿಲ್ಲದೆ ನಿತ್ಯದ ಬದುಕು ನರಕಯಾತನೆ ಅನುಭವಿಸುತ್ತಿದೆ. ಹಾಗಾಗಿ ಸರಕಾರ ನೂರು ಎಕರೆ ಅಥವಾ ಇನ್ನೂರು ಎಕರೆ ಸ್ತಳ ಅಥವಾ ಫ್ಲ್ಯಾಟ್ ಕಟ್ಟಿಯಾದರೂ ಕೊಟ್ಟು ಅವರನ್ನು ಬಾಡಿಗೆ ಮುಕ್ತ ಮನೆಯಲ್ಲಿ ಜೀವನ ಸಾಗಿಸಲು ಅವಕಾಶ ಕೊಡಿ. ಕಟ್ಟಡ ಕಾರ್ಮಿಕರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಜಂಜಾಟದ ಬದುಕು ಸಾಗಿಸುವಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಧ್ಯಮ ವರ್ಗದ ಜನರ ಕಷ್ಟ ಕೇಳುವ ನಾಯಕರೇ ಇಲ್ಲದಾಗಿದ್ದಾರೆ. ಅದಕ್ಕಾಗಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಅಗತ್ಯ ಇದೆ.

ಸಾವಿರಾರು ಕೋಟಿ ರೂ. ತೆರಿಗೆ ಹಣ ಲೂಟಿ ಮಾಡಿ ಹೋಗಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಡ ಜನರ ಸಮಸ್ಯೆ ಪರಿಹಾರಕ್ಕೆ ದುಡ್ಡಿಲ್ಲ. ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರತಿಮೆ ಮಾಡುವ ಮೋದಿ ಬದುಕನ್ನೇ ಕಳೆದುಕೊಂಡ ಕೇರಳದ ಲಕ್ಷಾಂತರ ಜನರಿಗೆ ಕೇವಲ ಐನೂರು ಕೋಟಿ ರೂ. ಕೊಟ್ಟಿದ್ದಾರೆ. ಜನರ ಭಾವನೆ ಕಷ್ಟ ಸಮಸ್ಯೆ ಅರ್ಥಮಾಡಿಕೊಳ್ಳುವ ಪಕ್ಷವೊಂದಿದ್ದರೆ ಅದು ಕೇವಲ ಸಿಪಿಎಂ ಮಾತ್ರ. ಉದ್ಯೋಗ ಖಾತರಿ ಯೋಜನೆ ಮುನ್ನೂರು ಗ್ರಾಮದಲ್ಲಿ ಯಶಸ್ವಿಯಾಗುವುದಾದರೆ ಇತರ ಗ್ರಾಮದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ. ಉಸ್ತುವಾರಿ ಸಚಿವರೇ ನಮ್ಮದೇ ಜಿಲ್ಲೆಯ ಇತರ ಭಾಗದಲ್ಲಿ ನಡೆಯುವ ಯಶಸ್ವಿ ಕಾರ್ಯಕ್ರಮ ಮಂಗಳೂರು ಕ್ಷೇತ್ರದ ಇತರ ಭಾಗದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಉಳ್ಳಾಲ, ತಲಪಾಡಿ, ತೊಕ್ಕೊಟ್ಟು ಭಾಗದಲ್ಲಿ ಯಾಕೆ ಸರಕಾರಿ ಬಸ್, ಸರಕಾರಿ ಕಾಲೇಜು ಭಾಗ್ಯ ಇನ್ನೂ ಇಲ್ಲ. ಹಾಗಾಗಿ ಅದಕ್ಕೆ ಪರಿಹಾರ ಕಲ್ಪಿಸುವಂತೆ ಸಿಪಿಎಂ ಸದಾ ಹೋರಾಟ ನಡೆಸಲಿದೆ. ತುಳು ಭಾಷೆಯನ್ನು ಸಂವಿಧಾದಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಹೋರಾಟ ನಡೆಸುತ್ತಾ ಬಂದಿದ್ದರೂ ನಮ್ಮ ಜಿಲ್ಲೆಯ ಶಾಸಕರು, ಸಂಸದರು ಇದುವರೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಬೀಡಿ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ತುಟ್ಟಿಭತ್ಯೆ, ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಕೊಡುತ್ತಿಲ್ಲ. ಇಂತಹ ಬಹಳಷ್ಟು ಸಮಸ್ಯೆಗಳು ನಮ್ಮ ಮುಂದೆ ಇದ್ದು ಜನರ ಪರವಾಗಿ ಹೋರಾಟ ಮಾಡಿದ ಪಕ್ಷವೊಂದಿದ್ದರೆ ಅದು ಸಿಪಿಎಂ ಮಾತ್ರ.
ವಲಯ ಸಮಿತಿ ಸದಸ್ಯರಾದ ಮಹಾಬಲ ದೆಪ್ಪೆಲಿಮಾರ್, ರೋಹಿದಾಸ್ ತೊಕ್ಕೊಟ್ಟು, ವಿಲಾಸಿನಿ ತೊಕ್ಕೊಟ್ಟು, ಚಂದ್ರಹಾಸ ಪಿಲಾರ್, ಸುಂದರ ಕುಂಪಲ, ಸಂಕಪ್ಪ ಕರ್ಕೇರ ಅಸೈಗೋಳಿ, ಹೊನ್ನಪ್ಪ ಪಾವೂರು, ನರಾಯಣ ತಲಪಾಡಿ, ಅಶ್ರಫ್ ಕೆ.ಸಿ. ರೋಡ್, ಜನಾರ್ದನ್ ಕೆ, ಸಂಜೀವ ಪಿಲಾರ್ ಹಾಗೂ ಗಂಗಯ್ಯ ಪಿಲಾರ್ ಉಪಸ್ಥಿತರಿದ್ದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ. ಕೃಷ್ಣಪ್ಪ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಯು. ಜಯಂತ್ ನಾೈಕ್ ವಂದಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

March 20, 2026

ಉಳ್ಳಾಲ ಯುನೈಟೆಡ್ ವತಿಯಿಂದ ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ `ಈದ್’ ಹಬ್ಬ ಆಚರಣೆ

March 20, 2026

ಕರಾವಳಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

March 20, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಹಿದಾಯತ್ ನಗರ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

By UllalaVaniMarch 20, 20260

ಕೋಟೆಕಾರ್: ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ನಡೆದ ಈದ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು – ಸುಬ್ರಹ್ಮಣ್ಯ ಮಾರ್ಗದ ರೈಲು 35 ದಿನ ರದ್ದು; ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

March 20, 2026

ರಿಷಬ್ ಶೆಟ್ಟಿ ನಿಜಕ್ಕೂ ಹೊಂಬಾಳೆ ಇನ್ಸ್ಟಾಗ್ರಾಂ ಅನ್‌ಫಾಲೋ ಮಾಡಿದ್ರಾ..?? ಏನಿದು ವಿಚಾರ

March 20, 2026

ಉಳ್ಳಾಲ ಯುನೈಟೆಡ್ ವತಿಯಿಂದ ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ `ಈದ್’ ಹಬ್ಬ ಆಚರಣೆ

March 20, 2026
1 2 3 … 1,840 Next
Automatic YouTube Gallery

ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ಈದ್ ಹಬ್ಬ ಆಚರಣೆ

ಉಳ್ಳಾಲ ಯುನೈಟೆಡ್ ಉಳ್ಳಾಲ ಸಂಘಟನೆಯ ವತಿಯಿಂದ ;ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ಈದ್ ಹಬ್ಬ ಆಚರಣೆ

ಆಶ್ರಮವಾಸಿಗಳಿಗೆ ಹಬ್ಬದ ಹಿನ್ನಲೆ ಔತಣ ಕೂಟ; ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವರು ಭಾಗಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ಈದ್ ಹಬ್ಬ ಆಚರಣೆ
Now Playing
ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ಈದ್ ಹಬ್ಬ ಆಚರಣೆ
ಉಳ್ಳಾಲ ಯುನೈಟೆಡ್ ಉಳ್ಳಾಲ ಸಂಘಟನೆಯ ವತಿಯಿಂದ ;ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ...
ಉಳ್ಳಾಲ ಯುನೈಟೆಡ್ ಉಳ್ಳಾಲ ಸಂಘಟನೆಯ ವತಿಯಿಂದ ;ಪಶ್ಚಿಮ್ ರಿಹ್ಯಾಬ್ ಕೇಂದ್ರದಲ್ಲಿ ಈದ್ ಹಬ್ಬ ಆಚರಣೆ

ಆಶ್ರಮವಾಸಿಗಳಿಗೆ ಹಬ್ಬದ ಹಿನ್ನಲೆ ಔತಣ ಕೂಟ; ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವರು ಭಾಗಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ದರ್ಗಾದಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆ
Now Playing
ಉಳ್ಳಾಲ ದರ್ಗಾದಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆ
ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ಈದುಲ್ ಫಿತ್ರ್ ಹಬ್ಬ;ವಿಶೇಷ ಈದ್ ನಮಾಝ್ ...
ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ಈದುಲ್ ಫಿತ್ರ್ ಹಬ್ಬ;ವಿಶೇಷ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ

ಹಬ್ಬದ ಶುಭಾಶಯ ಕೋರಿದ ಸ್ಪೀಕರ್ ಯು.ಟಿ.ಖಾದರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d