UN NETWORKS
ಕೊಣಾಜೆ: ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಅನ್ವೈಯಿಕ ಪ್ರಾಣಿಶಾಸ್ತ್ರ ವಿಭಾಗದ `ನ್ಯಾಚುರಲ್ ಹಿಷ್ಟರಿ ಅಸೋಸಿಯೇಶನ್’ ಸಹಯೊಗದಲ್ಲಿವನ್ಯಜೀವಿ ಛಾಯಾ ಚಿತ್ರಗಳ ಪ್ರರ್ದಶನ ಮಂಗಳೂರು ವಿಶ್ವವಿದ್ಯಾಲಯದಲ್ಲಿನಡೆಯಿತು.
ವನ್ಯಜೀವಿ ಛಾಯಾಚಿತ್ರ ಪ್ರರ್ದಶನಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ ವನ್ಯಜೀವಿ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ. ಮಾನವನ ದುರಾಸೆಯಿಂದ ಕಾಡುನಾಶವಾಗುತ್ತಿದ್ದು, ವನ್ಯಜೀವಿಗಳ ಅವಾಸಕ್ಕೆ ಕುತ್ತು ಉಂಟಾಗಿದೆ. ವನ್ಯಜೀವಿ ಛಾಯಾಚಿತ್ರ ಪ್ರರ್ದಶನದಂತಹ ಕಾರ್ಯಕ್ರಮಗಳ ಆಯೋಜಯನೆಯು ಸಾರ್ವಜಿನಿಕರು ಮತ್ತು ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬಹಳ ಸಹಕಾರಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ`ನ್ಯಾಚುರಲ್ ಹಿಸ್ಟರಿ ಅಸೋಸಿಯೇಶನ್’ನ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾಧ್ಯಾಪಕ ಎನ್. ನರಸಿಂಹಯ್ಯ, ವಿಭಾಗ ಅಧ್ಯಕ್ಷ ಪ್ರೊಫೆಸರ್ ಕೆ. ಭಾಸ್ಕರ್ ಶೆಣೈ, ಪ್ರೊಫೆಸರ್ ಶ್ರೀಪಾದ ಮತ್ತು ಎಮ್.ಎಸ್.ಮುಸ್ತಾಕ್, ಡಾ. ಶಾಮಪ್ರಾಸಾದ್ ಹಾಗೂ ಸಂಶೋಧನಾ ವಿಧ್ಯಾರ್ಥಿಗಳು ಹಾಗೂ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


