UN NETWORKS
ಉಳ್ಳಾಲ: ಉಳ್ಳಾಲ ನಗರಸಭೆಯ 14ನೇ ವಾರ್ಡ್ನಿಂದ ಚುನಾಯಿತರಾದ ಯು.ಪಿ. ಅಯ್ಯೂಬ್ ಅವರಿಗೆ ಉಳ್ಳಾಲ ಮಾರ್ಗತಲೆ ಕಟ್ಟತ್ತಲ ನಾಗರಿಕರಿಂದ ಸನ್ಮಾನ ಕಾರ್ಯಕ್ರಮವು ಕಟ್ಟತ್ತಿಲ ಜಂಕ್ಷನ್ನಲ್ಲಿ ನಡೆಯಿತು.
ಈ ಸಂದರ್ಭ ಸನ್ಮಾನಿತಗೊಂಡು ಮಾತನಾಡಿದ ಅಯ್ಯೂಬ್ರವರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನನಗೆ ಬಿ ಫಾರಂ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಇದರಿಂದ ನನಗೆ ನಗರ ಸಭಾ ಕೌನ್ಸಿಲರಾಗಿ ಆಯ್ಕೆಯಾಗಲು ಅವಕಾಶ ಸಿಕ್ಕಿದೆ. ಯು.ಟಿ. ಖಾದರ್ ಅವರ ಪ್ರೀತಿ ವಿಶ್ವಾಸ ಗಳಿಸಿ ಕಾರ್ಯಕರ್ತರ ಜತೆಗೂಡಿ ನನ್ನ ಅವಧಿಯಲ್ಲಿ ಈ ವಾರ್ಡ್ನ ಕೆಲಸವನ್ನು ಉತ್ತಮವಾಗಿ ಮಾಡಿ ಕೊಡುವುದಾಗಿ ಹೇಳಿದರು.
ಈ ಸಂದರ್ಭ ಉಳ್ಳಾಲ ನಗರ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪಿ.ಎಂ. ಮೊಹಮ್ಮದ್, ಗುತ್ತಿಗೆದಾರರಾದ ಸಾದಿಕ್, ಪಕ್ವಾನ್ ಅಹ್ಮದ್, ಕರೀಂ ಅಳೇಕಲ, ಅಬ್ದುಲ್ ಲತೀಫ್, ಉಸ್ಮಾನ್ ಮಾರ್ಗತಲೆ, ಹನೀಫ್ ಪರಪ್ಪು , ಆಸೀಫ್ ಕಟ್ಟತ್ತಲೆ, ಅಶ್ಫಾಕ್ ಕಟ್ಟತ್ತೆಲ, ಮಿಸ್ಬಾಹ್ ಮಾರ್ಗತಲೆ, ಬಾದ್ಶ ಮಂಚಿಲ ಉಪಸ್ಥಿತರಿದ್ದರು. ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.


