UN NETWORKS
ಉಳ್ಳಾಲ: ಗುರುವಾರ ಸಂಜೆ ವೇಳೆಗೆ ಸುರಿದ ಸಿಡಿಲು ಮಳೆಗೆ ತಲಪಾಡಿ ನಾರ್ಲ ಪಡೀಲ್ ಬಳಿ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು ತೆಂಗಿನ ಮರ ಬಿದ್ದು ಕಾರೊಂದಕ್ಕೆ ಹಾನಿಯಾಗಿದೆ.
ತಲಪಾಡಿ ನಾರ್ಲ ಪಡೀಲ್ ನಿವಾಸಿ ಹೇಮಾವತಿ ಕೃಷ್ಣ ಪೂಜಾರಿ ಅವರ ಮನೆಗೆ ಸಂಜೆ ವೇಳೆಗೆ ಸಿಡಿಲು ಬಡಿದು ಗ್ಯಾಸ್ ಸಿಲಿಂಡರ್, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.ಘಟನೆಯ ವೇಳೆಗೆ ಮನೆಯಲ್ಲಿದ್ದ ಇಬ್ಬರು ಹೊರಗಡೆ ಇದ್ದರಿಮದ ದೊಡ್ಡದೊಂದು ದುರಂತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಬಜರಂಗದಳ ಮತ್ತು ವಿಶ್ವಹಿಂದೂಪರಿಷತ್ನ ಸ್ವಾಮಿ ಕೊರಗಜ್ಜ ಶಾಖೆಯ ಸದಸ್ಯರು ಧಾವಿಸಿ ಮನೆಯವರಿಗೆ ಸಹಕಾರ ನೀಡಿದರು. ಇನ್ನೊಂದು ಘಟನೆಯಲ್ಲಿ ತಲಪಾಡಿ ನಾರ್ಲದಲ್ಲಿ ಕೀರ್ತಿ ಶೆಟ್ಟಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಾರ್ಲದಲ್ಲಿ ರಸ್ತೆಗೆ ಮರ ಬಿದ್ದು ಯಾವುದೇ ಹಾನಿಯಾಗಿಲ್ಲ.


