UN NETWORKS
ಉಳ್ಳಾಲ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸಂಭ್ರಮಾಚರಣೆ ಮತ್ತು ಸಹೋದರಿ ನಿವೇದಿತಾ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ದ್ವಿಗ್ವಿಜಯ ರಥವು ಬೆಂಗಳೂರಿನಿಂದ ಹೊರಟು ರಾಜ್ಯದಾದ್ಯಂತ ಸಂಚರಿಸಿ ಬುಧವಾರ ಸಂಜೆ ಕೋಟೆಕಾರಿಗೆ ತಲುಪಿದ್ದು, ಈ ಸಂದರ್ಭದಲ್ಲಿ ರಥವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.
ಕೋಟೆಕಾರ್ ಬೀರಿಯಲ್ಲಿ ಭಕ್ತರು ಸ್ವಾಮಿ ವಿವೇಕಾನಂದರ ಹಾಗೂ ಸಹೋದರಿ ನಿವೇದಿತಾ ಅವರ ವಿಗ್ರಹಗಳಿಗೆ ವೀರಯೋಧ ಸಂತೋಷ್ ಕುಲಾಲ್ ಹಾಗೂ ಹಿರಿಯರಾದ ಕೃಷ್ಣ ಶೆಟ್ಟಿ ತಾಮಾರು ಮತ್ತು ನಾಗರಿಕರು ಪುಷ್ಪಾರ್ಚನೆ ಸಲ್ಲಿಸಿದರು.ವಿವೇಕ ಶಿಕ್ಷಣವಾಹಿನಿಯ ಸಂಸ್ಥಾಪಕರಾದ ನಿತ್ಯಾನಂದ ವಿವೇಕವಂಶಿಯವರು ಈ ಸಂದರ್ಭದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಚಿಕಾಗೋದಲ್ಲಿ ಅವರು ರಾಷ್ಟ್ರವನ್ನು ಕುರಿತು ಮಾಡಿದ ಭಾಷಣವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಗ್ರಾಮಾಂತರ ಸಂಪರ್ಕ ಪ್ರಮುಖ್ ಸುಜಿತ್ ಕೋಟೆಕಾರ್, ಬೀರಿ ಗಣೇಶ ಮಂದಿರದ ಅಧ್ಯಕ್ಷರಾದ ರಾಮನಾಥ್ ಕೋಟೆಕಾರ್, ಕಾರ್ಯದರ್ಶಿ ಮಿಥುನ್, ಸದಸ್ಯರಾದ ವಿಘ್ನೇಶ್,, ಪ್ರವೀಣ್ ಬಸ್ತಿ, ಸುರೇಶ್ ಸಂಕೋಲಿಗೆ, ಆಶಿಕ್ ಮಾಡೂರು, ಯುವಬ್ರಿಗೇಡ್ ಸದಸ್ಯರಾದ ಸುಕೇಶ್ ಉಚ್ಚಿಲ, ಚೇತನ್ ಉಚ್ಚಿಲ, ಸಚಿನ್ ಸೋಮೇಶ್ವರ, ಸಂದೀಪ್ ತಲಪಾಡಿ, ವಿನೋದ್ ಮೊದಲಾದವರು ಉಪಸ್ಥಿತರಿದ್ದರು.


